- Home
- Entertainment
- TV Talk
- ಅಬ್ಬಬ್ಬಾ! Bigg Boss ಗಿಲ್ಲಿ ಮೇಲೆ ಇದೆಂಥ ಆರೋಪ? ಇದೆಂಥ ಸಾಕ್ಷಿ? ಬಡವ ಎಂದು ಈ ಪರಿ ಹಣ ಸುರೀತಿರೋದು ನಿಜನಾ?
ಅಬ್ಬಬ್ಬಾ! Bigg Boss ಗಿಲ್ಲಿ ಮೇಲೆ ಇದೆಂಥ ಆರೋಪ? ಇದೆಂಥ ಸಾಕ್ಷಿ? ಬಡವ ಎಂದು ಈ ಪರಿ ಹಣ ಸುರೀತಿರೋದು ನಿಜನಾ?
ಬಿಗ್ಬಾಸ್ 12ರ ಫೈನಲಿಸ್ಟ್ ಗಿಲ್ಲಿ ನಟನೇ ವಿನ್ನರ್ ಎನ್ನುವ ಮಾತುಗಳು ಕೇಳಿಬರುತ್ತಿರುವಾಗಲೇ, ಅವರು ದುಬಾರಿ ಪಿಆರ್ ಏಜೆನ್ಸಿಯನ್ನು ನೇಮಿಸಿಕೊಂಡಿದ್ದಾರೆ ಎಂಬ ಪೋಸ್ಟ್ ವೈರಲ್ ಆಗಿದೆ. ತಮ್ಮನ್ನು ಬಡವ ಎಂದು ಬಿಂಬಿಸಿಕೊಂಡಿದ್ದ ನಟನ ಈ ನಡೆಯ ಬಗ್ಗೆ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.ಇದು ನಿಜನಾ?

ಬಿಗ್ಬಾಸ್ ಮುಗಿಯಲು ದಿನಗಣನೆ...
ಇನ್ನೇನು ಬಿಗ್ಬಾಸ್ 12 (Bigg Boss 12) ಮುಗಿಯಲು ಹತ್ತೇ ದಿನ ಬಾಕಿ ಇದೆ. ಇರುವ ಸ್ಪರ್ಧಿಗಳ ನಡುವೆ ಪೈಪೋಟಿ ಜಾಸ್ತಿಯಾಗಿದೆ. ಇದಾಗಲೇ ಮುಕ್ಕಾಲು ಭಾಗ ಬಿಗ್ಬಾಸ್ ವೀಕ್ಷಕರ ಬಾಯಲ್ಲಿ ಇರೋದು ಗಿಲ್ಲಿ ನಟನೇ ವಿನ್ನರ್ (Gilli Nata winner) ಎನ್ನುವುದು.
ವಿನ್ನರ್ ಯಾರು?
ನನಗೆ ಇಷ್ಟ ಇದ್ಯೋ, ಇಲ್ಲವೋ ಅವನೇ ಗೆಲ್ಲೋದು ಎಂದು ಹೇಳಿದ ಬಿಗ್ಬಾಸ್ ಸ್ಪರ್ಧಿಗಳೂ ಇದ್ದಾರೆ. ಆದರೆ ಬಿಗ್ಬಾಸ್ಗೆ ಹೋದಾಗ ಸಾಮಾನ್ಯವಾಗಿ ತಮ್ಮ ಪರವಾಗಿ ಪ್ರಚಾರ ಮಾಡಲು ಬಹುತೇಕ ಎಲ್ಲ ಸ್ಪರ್ಧಿಗಳು ಪಿಆರ್ ಗಳನ್ನು ನೇಮಕ ಮಾಡಿಕೊಳ್ಳುತ್ತಾರೆ. ಅವರಿಗೆ ಇಂತಿಷ್ಟು ಹಣವನ್ನು ನೀಡಲಾಗಿರುತ್ತದೆ. ಇದು ಮಾಮೂಲು ಪ್ರಕ್ರಿಯೆ. ಬಹುತೇಕ ಎಲ್ಲರೂ ಇದನ್ನು ಮಾಡುತ್ತಾರೆ.
ಬನಿಯನ್ ಮೇಲಿರೋ ಗಿಲ್ಲಿ...
ಆದರೆ, ಗಿಲ್ಲಿ ನಟನ ಬಗ್ಗೆ ಇದೀಗ ಈ ಅಂತಿಮ ಕ್ಷಣದಲ್ಲಿ ಶಾಕಿಂಗ್ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಅದೇನೆಂದರೆ, ಬಿಗ್ಬಾಸ್ ವೀಕ್ಷಕರಿಗೆ ತಿಳಿದಿರುವಂತೆ ಗಿಲ್ಲಿ ನಟ ಬಿಗ್ಬಾಸ್ ಮನೆಯಲ್ಲಿ ಬಹುತೇಕ ಭಾಗ ಬನಿಯನ್ ಮೇಲೆ ಇದ್ದವರು. ಇವರ ಫ್ಯಾಮಿಲಿ ನೋಡಿದರೂ ಇವರು ಮಿಡ್ಲ್ಕ್ಲಾಸ್ ಫ್ಯಾಮಿಲಿ ಎನ್ನುವುದು ತಿಳಿಯುತ್ತದೆ. ಇವರು ತಮ್ಮನ್ನು ತಾವು ಬಡವರ ಮಗ ಎಂದೂ ಹೇಳಿಕೊಂಡಿದ್ದಾರೆ. ಅದಕ್ಕಾಗಿ ಬೆಲೆ ಬಾಳುವ ಡ್ರೆಸ್ ಎಲ್ಲಾ ಹಾಕುವುದಿಲ್ಲ ಎಂದಿದ್ದಾರೆ.
ದುಬಾರಿ ಹಣ
ಆದರೆ, ಇದೀಗ ತಮ್ಮ ಪರವಾಗಿ ಗಿಲ್ಲಿ ನಟ ಪ್ರಚಾರ ಮಾಡಲು ಬಲು ದುಬಾರಿ ಹಣ ಕೊಟ್ಟು ಪಿಆರ್ ಇಟ್ಟುಕೊಂಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಸಾಕ್ಷಿಯನ್ನೂ ಅವರು ಕೊಟ್ಟಿದ್ದಾರೆ. ಬಡವ ಎಂದು ಬಿಂಬಿಸಿ ಕೊಳ್ಳುತ್ತಿರುವ ಗಿಲ್ಲಿ ನಟ ಅತ್ಯಂತ ದುಬಾರಿ ಪಿಆರ್ ಗೆ ತನ್ನ ಫೇಸ್ಬುಕ್ ಖಾತೆ ಹಾಗು ಇನ್ಸ್ಟಾಗ್ರಾಂ ಖಾತೆಗಳನ್ನು ಹ್ಯಾಂಡಲ್ ಮಾಡೋಕೆ ಕೊಟ್ಟಿರುವುದಲ್ಲದೆ.. ತನ್ನ ಸಹ ಸ್ಪರ್ಧಿಗಳನ್ನು ಕೆಟ್ಟದಾಗಿ ಟ್ರೊಲ್ ಮಾಡುವುದಕ್ಕೂ ಸಹ ಸಾಕಷ್ಟು ಹಣ ಕರ್ಚು ಮಾಡುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ಶೀರ್ಷಿಕೆ ಕೊಟ್ಟು ನಿತಿಶ್ ಮನು ಗೌಡ ಎನ್ನುವವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪೋಸ್ಟ್ ವೈರಲ್
ಇದರಲ್ಲಿ ಗಿಲ್ಲಿ ನಟನ ಜಾಲತಾಣವನ್ನು rerlentkreationz ಮ್ಯಾನೇಜ್ ಮಾಡುತ್ತಿದ್ದಾರೆ ಎಂದು ನೋಡಬಹುದು. ಇದಾಗಲೇ ಬಿಗ್ಬಾಸ್ನ ಹಾಲಿ ಮಾಜಿ ಸ್ಪರ್ಧಿಗಳು ಗಿಲ್ಲಿ ನಟನ ಬಗ್ಗೆ ಪ್ರಚಾರ ಮಾಡುವುದಷ್ಟೇ ಅಲ್ಲ, ಬೇರೆ ಸ್ಪರ್ಧಿಗಳ ಬಗ್ಗೆ ಅಪಪ್ರಚಾರವನ್ನು ಮಾಡುವುದಕ್ಕಾಗಿಯೂ ದುಡ್ಡು ಸುರಿಯಲಾಗುತ್ತಿದೆ ಎಂದು ಆರೋಪಿಸಿದ್ದು ಉಂಟು. ಅದರ ಬೆನ್ನಲ್ಲೇ ಇನ್ನೇನು ಕೆಲವೇ ದಿನಗಳು ಇರುವಾಗ ಈ ಪೋಸ್ಟ್ ವೈರಲ್ ಆಗಿದೆ.
ವಿನಯ್ ಗೌಡ ಹೇಳಿದ್ದೇ ಬೇರೆ..
ಬಿಗ್ಬಾಸ್ 10ರ ವಿಜೇತ ವಿನಯ್ ಗೌಡ ಅವರು ಹೇಳಿದ್ದೇ ಬೇರೆ. ಗಿಲ್ಲಿ ನಟನ ವಿರುದ್ಧವಾಗಿ ಪ್ರಚಾರ ಮಾಡಲು ಕೆಲವು ಪಿಆರ್ ಏಜೆನ್ಸಿಗಳು ದುಡ್ಡು ಪಡೆದು ಕೆಲಸ ಮಾಡುತ್ತಿವೆ ಎಂದಿದ್ದರು. ಗಿಲ್ಲಿ ನಟ ಪಿಆರ್ ಇಟ್ಟುಕೊಂಡಂತೆ ಇಲ್ಲ. ಅವರು ತಮ್ಮ ನಡತೆ, ಹಾಸ್ಯದಿಂದಲೇ ಅಭಿಮಾನಿಗಳನ್ನು ಗೆದ್ದಿದ್ದಾರೆ ಎಂದಿದ್ದರು. ಆದರೆ ಇಲ್ಲಿ ಪ್ರಚಾರ ಆಗ್ತಿರೋದೇ ಬೇರೆ.
ಯಾರು ಏನೇ ಅಂದರೂ...
ಆದರೆ, ಏನೇ ಪೋಸ್ಟ್ ವೈರಲ್ ಆದರೂ, ಯಾರು ಏನೇ ಎಂದರೂ, ಈ ಹಂತದಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡುವುದಂತೂ ಅವರ ಅಭಿಮಾನಿಗಳು ಬಿಡಲ್ಲ. ಅದೇ ವೇಳೆ, ಬಹುತೇಕ ಎಲ್ಲರೂ ಗಿಲ್ಲಿ ನಟನೇ ವಿನ್ನರ್ ಎಂದು ಘೋಷಿಸಿದ್ದರೂ ಜ್ಯೋತಿಷಿಯೊಬ್ಬರು ನುಡಿದಿರುವ ಭವಿಷ್ಯದ ಪ್ರಕಾರ, ಮಹಿಳೆಯೊಬ್ಬಳು ಈ ಬಾರಿ ವಿನ್ನರ್ ಎನ್ನುವುದು. ಇನ್ನೇನು 10-11 ದಿನಗಳಲ್ಲಿ ಎಲ್ಲವೂ ನಿರ್ಧಾರ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

