Pavithra Gowda Birthday: Daughter Khushi Shares Emotional Post from Jail ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಮಗಳು ಖುಷಿ ಗೌಡ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. 

ಬೆಂಗಳೂರು (ಜ.7): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ1 ಆರೋಪಿಯಾಗಿರುವ ದರ್ಶನ್‌ ಪ್ರೇಯಸಿ ಪವಿತ್ರಾ ಗೌಡಗೆ ಇಂದು ಜನ್ಮದಿನದ ಸಂಭ್ರಮ. ಕಳೆದ ವರ್ಷ ಜೈಲಿನಿಂದ ಜಾಮೀನಿನ ಮೇಲೆ ರಿಲೀಸ್‌ ಆಗಿ ಮಗಳೊಂದಿಗೆ ಜನ್ಮದಿನ ಆಚರಿಸಿದ್ದ ಪವಿತ್ರಾ ಗೌಡ ಈ ಬಾರಿ ಪರಪ್ಪನ ಅಗ್ರಹಾರ ಜೈಲಲಲ್ಲಿ ನಾಲ್ಕು ಗೋಡೆಗಳ ನಡುವೆ ಏಕಾಂಗಿಯಾಗಿ ಜನ್ಮದಿನ ಆಚರಿಸಬೇಕಾಗಿದೆ. ಆದರೆ, ಮಗಳು ಖುಷಿ ಗೌಡ ಮಾತ್ರ ಅಮ್ಮನನ್ನು ನೆನಪಿಸಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಇರುವ ಖುಷಿ ಗೌಡ, ಇತ್ತೀಚೆಗೆ ಪ್ರಕರಣದ ವಿಚಾರಣೆಯ ವೇಳೆ ತಮ್ಮ ಅಜ್ಜಿಯ ಜೊತೆ ಕೋರ್ಟ್‌ಗೂ ಹಾಜರಾಗಿದ್ದರು. ಅಮ್ಮನ ಜನ್ಮದಿನದ ವೇಳೆ ಪವಿತ್ರಾ ಗೌಡ ಅವರ ಚಂದದ ಫೋಟೋವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಸ್ಟೋರಿಯಲ್ಲಿ ಪೋಸ್ಟ್‌ ಮಾಡುವ ಮೂಲಕ ಶುಭ ಕೋರಿದಿದ್ದಾರೆ.

ನನ್ನ ಫಾರೆವರ್‌ ಕ್ಯೂಟಿಗೆ ಹ್ಯಾಪಿ ಬರ್ತ್‌ಡೇ. ಎಷ್ಟು ಬೇಗನೆ ಸಮಯ ಹೋಗುತ್ತಿದೆ ಅನ್ನುವುದನ್ನು ನಂಬೋಕೆ ಸಾಧ್ಯವಾಗುತ್ತಿಲ್ಲ. ದಿನ ಕಳೆದಂತೆ ನಾನು ನಿನ್ನೊಂದಿಗೆ ಕಳೆಯುವ ಸಮಯ ಕಡಿಮೆಯಾಗುತ್ತಲೇ ಇದೆ ಎಂದು ಖುಷಿ ಗೌಡ ಬರೆದುಕೊಂಡಿದ್ದಾರೆ.

ಹೊರಗೆ ಬಿಂದಾಸ್‌ ಜೀವನ ನಡೆಸ್ತಿದ್ದ ಪವಿತ್ರಾ ಗೌಡ ಜೀವನ ಜೈಲಲ್ಲಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ವರ್ಷವರ್ಷವೂ ಮನೆಯವರೆಯೊಂದಿಗೆ ಹಾಗೂ ಗೆಳೆಯ ದರ್ಶನ್‌ ಜೊತೆ ಅದ್ದೂರಿಯಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ಪವಿತ್ರಾ ಗೌಡಗೆ ಈಗ ಜೈಲಿನ ಸಹಕೈದಿಗಳೇ ಸಂಗಾತಿಗಳಾಗಿದ್ದಾರೆ. ಯಾರೊಂದಿಗೂ ಜೈಲಲ್ಲಿ ಹೆಚ್ಚಾಗಿ ಮಾತನಾಡದ ಪವಿತ್ರಾ ಗೌಡ ಅವರಿಗೆ ಜೈಲಿನ ಅಧಿಕಾರಿಗಳೇ ದೊಡ್ಡ ಶಾಕ್‌ ನೀಡಿದ್ದಾರೆ.

ಮನೆಯೂಟ ಕೊಡೋದಿಲ್ಲ ಎಂದ ಜೈಲಿನ ಅಧಿಕಾರಿಗಳು

ಪರಪ್ಪನ ಅಗ್ರಹಾರ ಜೈಲು ಸಾಕಷ್ಟು ಕಾರಣಗಳಿಗಾಗಿ ಸುದ್ದಿಯಾಗಿತ್ತಿದೆ. ಇದರ ನಡುವೆ ಪವಿತ್ರಾ ಗೌಡ ಹಾಗೂ ದರ್ಶನ್‌ ತಮಗೆ ಮನೆಯೂಟವೇ ಬೇಕು ಎಂದು ಕೋರ್ಟ್‌ನಲ್ಲಿ ಪಟ್ಟುಹಿಡಿದಿದ್ದರು. ಕೋರ್ಟ್‌ ಕೂಡ ಇವರ ಮನವಿ ಪುರಸ್ಕರಿಸಿತ್ತು. ಆದರೆ, ಜೈಲಿನ ಅಧಿಕಾರಿಗಳು ದರ್ಶನ್‌ ಹಾಗೂ ಪವಿತ್ರಾ ಗೌಡ ಅವರ ಮನವಿ ಪುರಸ್ಕರಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಅದಕ್ಕೆ ಕಾರಣ ಜೈಲಿನಲ್ಲಿ ಸಿಬ್ಬಂದಿಗಳ ಕೊರತೆ. ಮನೆಯೂಟ ತಂದುಕೊಡುವಾಗ ಸಾಕಷ್ಟು ಪರಿಶೀಲನೆ ಅಗತ್ಯವಿರುತ್ತದೆ. ಸದ್ಯ ಜೈಲಿನಲ್ಲಿರುವ ಅಧಿಕಾರಿಗಳು ಜೈಲಿನ ಕಾರ್ಯವಿಧಾನಗಳಿಗೆ ಸಾಲುತ್ತಿಲ್ಲ. ಹೀಗಿರುವಾಗ ಮನೆಯೂಟವನ್ನು ಪರಿಶೀಲನೆ ಮಾಡಿ ಕಳಿಸಿಕೊಡಲು ಸಿಬ್ಬಂದಿ ಬೇಕಾಗುತ್ತದೆ ಎಂದಿದ್ದಾರೆ. ಹಾಗಾಗಿ ಜೈಲಧಿಕಾರಿಗಳು ಮನೆಯೂಟ ಕೊಡಲು ಸಾಧ್ಯವಾಗದಂತೆ ಮೇಲ್ಮನವಿ ಸಲ್ಲಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ.