12:17 AM (IST) Jan 07

Karnataka News Live 6 January 2026ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ - ಭಕ್ತರ ನಿಯಂತ್ರಣಕ್ಕೆ ಖುದ್ದು ಫೀಲ್ಡ್‌ಗಿಳಿದ ಎಸ್ಪಿ; ಚೇರ್ ಮೇಲೆಯೇ ಸಾಗಿತು ಕಚೇರಿ ಕೆಲಸ!

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯ ದಾಸೋಹದಲ್ಲಿ ಭಾರಿ ಜನಸಂದಣಿಯಿಂದ ನೂಕುನುಗ್ಗಲು ಉಂಟಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಕುರ್ಚಿಯ ಮೇಲೆ ನಿಂತು ಜನರನ್ನು ನಿಯಂತ್ರಿಸಿದರು. ಅಲ್ಲೇ ಕಚೇರಿ ಕಡತಗಳಿಗೆ ಸಹಿ ಹಾಕಿ ಕರ್ತವ್ಯನಿಷ್ಠೆ ಮೆರೆದರು.

Read Full Story
11:06 PM (IST) Jan 06

Karnataka News Live 6 January 2026ಧಾರವಾಡದಲ್ಲಿ ಶಾರ್ಟ್ ಸರ್ಕ್ಯೂಟ್ ಅನಾಹುತ; 20 ಎಕರೆ ಕಬ್ಬು ಬೆಳೆ ಭಸ್ಮ!

ಧಾರವಾಡ ಜಿಲ್ಲೆಯ ರಾಮಾಪುರ-ವೀರಾಪುರ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ 20 ಎಕರೆ ಕಬ್ಬಿನ ಹೊಲಕ್ಕೆ ಬೆಂಕಿ ತಗುಲಿದೆ. ಈ ಘಟನೆಯಲ್ಲಿ ರೈತ ಬಸಪ್ಪ ಜಿರಿಗವಾಡ ಅವರಿಗೆ ಸೇರಿದ ಅಂದಾಜು 30 ಲಕ್ಷ ರೂಪಾಯಿ ಮೌಲ್ಯದ ಬೆಳೆ ಸಂಪೂರ್ಣ ನಾಶವಾಗಿದೆ. 

Read Full Story
10:49 PM (IST) Jan 06

Karnataka News Live 6 January 2026ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ - ನಾಲ್ವರು ಕಾರ್ಮಿಕರ ದುರಂತ ಸಾವು!

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಬಳಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬುಲೆರೋ ವಾಹನ ಮರಕ್ಕೆ ಡಿಕ್ಕಿಯಾಗಿ ನಾಲ್ವರು ದಾರುಣವಾಗಿ ಮೃತಪಟ್ಟಿದ್ದಾರೆ. ಈ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story
09:56 PM (IST) Jan 06

Karnataka News Live 6 January 2026ಉತ್ತರಕನ್ನಡ - ಪ್ರೇಮ ವೈಫಲ್ಯಕ್ಕೆ ಬಲಿಯಾದ ಯುವ ಅರ್ಚಕ - ಪ್ರೀತಿಸಿ ಮದುವೆಗೆ ಒಲ್ಲೆ ಎಂದಳಾ ಪ್ರೇಯಸಿ?

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ, ಪ್ರೇಮ ವೈಫಲ್ಯದಿಂದ ಮನನೊಂದು 24 ವರ್ಷದ ಪವನ್ ಭಟ್ ಎಂಬ ಯುವ ಅರ್ಚಕ ನೇಣಿಗೆ ಶರಣಾಗಿದ್ದಾನೆ. ತಾನು ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story
09:22 PM (IST) Jan 06

Karnataka News Live 6 January 2026ಇನ್ಮುಂದೆ ಬೆಂಗಳೂರಿನ ಈ ರಸ್ತೆಗಳಲ್ಲಿ ಫ್ರೀಯಾಗಿ ಬೈಕ್‌-ಕಾರ್‌ ಪಾರ್ಕ್‌ ಮಾಡೋವಂತಿಲ್ಲ, ಬರಲಿದೆ ಪೇ & ಪಾರ್ಕ್‌ ವ್ಯವಸ್ಥೆ!

Bangalore Pay & Park: Fees Set for 35 Major Roads Including CBD ಬೆಂಗಳೂರು ನಗರ ಕೇಂದ್ರ ನಿಗಮವು ಈ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕವನ್ನು ಪಡೆಯಲು ಮೂರು ವರ್ಷಗಳ ಅವಧಿಗೆ ಖಾಸಗಿ ನಿರ್ವಾಹಕರನ್ನು ತೊಡಗಿಸಿಕೊಳ್ಳಲು ಪ್ರಸ್ತಾಪಿಸಿದೆ, ಇದನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಬಹುದು.

Read Full Story
08:31 PM (IST) Jan 06

Karnataka News Live 6 January 2026Tumakuru Tragedy - ಆ ಪುಟ್ಟ ಮಕ್ಕಳ ತಪ್ಪೇನಿತ್ತು? ಮಾನಸಿಕ ಖಿನ್ನತೆಗೆ ಬಲಿಯಾಯ್ತಾ ಸುಂದರ ಸಂಸಾರ?

ತುಮಕೂರು ಸಮೀಪದ ಸಿಂಗನಹಳ್ಳಿ ಕಾಲೋನಿಯಲ್ಲಿ ತಾಯಿಯೊಬ್ಬಳು ತನ್ನ ಐದು ವರ್ಷದ ಅವಳಿ ಮಕ್ಕಳೊಂದಿಗೆ ನೀರಿನ ಸಂಪ್‌ಗೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಯಿಂದ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read Full Story
08:12 PM (IST) Jan 06

Karnataka News Live 6 January 2026ಎಷ್ಟು ವರ್ಷದ ಮಕ್ಕಳ ಮುಂದೆ ಬಟ್ಟೆ ಬದಲಿಸ್ಬಹುದು, ಸ್ನಾನ ಮಾಡ್ಬಹುದು? ಪಾಲಕರು ತಿಳಿಯಬೇಕು ಈ ಸತ್ಯ

ಮಕ್ಕಳು ಎಷ್ಟೇ ದೊಡ್ಡವರಾದ್ರೂ ಪಾಲಕರಿಗೆ ಮಕ್ಕಳೇ. ಆದ್ರೆ ಪಾಲಕರು ಮಾಡುವ ಕೆಲ್ಸ ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿರುತ್ತೆ. ಮಕ್ಕಳ ಭವಿಷ್ಯ ಚೆನ್ನಾಗಿರ್ಬೇಕೆಂದ್ರೆ ಸಣ್ಣಪುಟ್ಟ ವಿಷ್ಯ ಕೂಡ ಪಾಲಕರಿಗೆ ಗೊತ್ತಿರಬೇಕು.

Read Full Story
08:01 PM (IST) Jan 06

Karnataka News Live 6 January 2026ಹೂಳಲು ತೆಗೆದಿದ್ದ ಗುಂಡಿ ಮುಚ್ಚಿ, ಮೃತದೇಹ ಸುಟ್ಟಿದ್ದೇಕೆ? ಸಾಕ್ಷಿ ನಾಶದ ಆರೋಪಕ್ಕೆ ಸಿಕ್ಕಿತು ಬಿಗ್ ಟ್ವಿಸ್ಟ್!

ಬಳ್ಳಾರಿ ಗಲಾಟೆ ಪ್ರಕರಣ ಮೃತಪಟ್ಟ ರಾಜಶೇಖರ್ ಮೃತದೇಹ ಸಾಕ್ಷಿ ನಾಶಪಡಿಸಲು ಸಂಪ್ರದಾಯ ಮೀರಿ ದಹನ ಮಾಡಲಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದ್ದಾರೆ. ಮೃತದೇಹದಲ್ಲಿ ಬುಲೆಟ್‌ಗಳಿದ್ದು, ಎಎಸ್‌ಪಿ ರವಿಕುಮಾರ್ ನೇತೃತ್ವದಲ್ಲಿ ಈ ಕೃತ್ಯ ನಡೆದಿದೆ ಎಂದು ದೂರಿದ್ದು, ಪ್ರಕರಣದ ಸಿಬಿಐ ತನಿಖೆಗೆ ಆಗ್ರಹ.

Read Full Story
07:46 PM (IST) Jan 06

Karnataka News Live 6 January 2026ರಾಜಕೀಯಕ್ಕೆ ಸುಮಲತಾ ರೀ-ಎಂಟ್ರಿ, ಮತ್ತೆ ಸ್ವತಂತ್ರವಾಗಿ ಸ್ಫರ್ಧೆ, ದೇವೇಗೌಡ ನಮ್ಮ ತ್ಯಾಗ ಮರೆತಿದ್ದಾರೆ, ಮಾಜಿ ಸಚಿವ ನಾರಾಯಣ ಕಿಡಿ

ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರು ಮುಂದಿನ ಚುನಾವಣೆಯಲ್ಲಿ ಸಕ್ರಿಯ ರಾಜಕೀಯಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದು, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಇದೇ ವೇಳೆ, ಜೆಡಿಎಸ್ ವಿರುದ್ಧ ಅಸಮಾಧಾನ ಹೊರಹಾಕಿದ ನಾರಾಯಣ ಗೌಡರು ಮಂಡ್ಯದಲ್ಲಿ ಬಿಜೆಪಿ ಬಲವರ್ಧನೆಗೆ ಶಪಥಗೈದಿದ್ದಾರೆ.

Read Full Story
07:24 PM (IST) Jan 06

Karnataka News Live 6 January 2026ಎಲ್ಲಾ ಸ್ಟಾರ್​ ನಟರಿಗೂ ಕೈಕೊಟ್ಟ Rukmini Vasanth ಯಶ್​ಗಾಗಿ ಕಾಯ್ತಿದ್ದಾರಾ? ಏನಿದು ಗುಸುಗುಸು ಸುದ್ದಿ?

'ಕಾಂತಾರ' ಯಶಸ್ಸಿನ ನಂತರ ನಟಿ ರುಕ್ಮಿಣಿ ವಸಂತ್ ಅವರ ಬೇಡಿಕೆ ಹೆಚ್ಚಾಗಿದೆ. ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿರುವ ಇವರು, ತಮ್ಮ ಹಿಂದಿನ ಸಿನಿಮಾಗಳಲ್ಲಿ ನಾಯಕರಿಗೆ ದಕ್ಕದ ಕಾರಣ, 'ಟಾಕ್ಸಿಕ್' ಚಿತ್ರದಲ್ಲಾದರೂ ಯಶ್‌ಗೆ ಸಿಗುತ್ತಾರೆಯೇ ಎಂಬ ಚರ್ಚೆ ಅಭಿಮಾನಿಗಳಲ್ಲಿ ಶುರುವಾಗಿದೆ.
Read Full Story
07:10 PM (IST) Jan 06

Karnataka News Live 6 January 2026ಸೋಡಾ ಬಾಟಲಿಯಲ್ಲಿ ಪೆಟ್ರೋಲ್, ಗನ್ ಮ್ಯಾನ್ ಪೈರಿಂಗ್" - ಬಳ್ಳಾರಿಯಲ್ಲಿ ನಡೆದಿದ್ದು ಪಕ್ಕಾ ಫಿಲ್ಮ್ ಸ್ಟೈಲ್‌ನಲ್ಲಿ ರೆಡ್ಡಿ ಮರ್ಡರ್ ಪ್ಲಾನ್?

ಬಳ್ಳಾರಿಯ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಶ್ರೀರಾಮುಲು ಮತ್ತು ಶಾಸಕ ಜನಾರ್ದನ ರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಶಾಸಕ ಭರತ್ ರೆಡ್ಡಿ ಅವರು ಜನಾರ್ದನ ರೆಡ್ಡಿ ಅವರನ್ನು ಮುಗಿಸಲು ಪೂರ್ವನಿಯೋಜಿತ ಸಂಚು ರೂಪಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ

Read Full Story
07:06 PM (IST) Jan 06

Karnataka News Live 6 January 2026ಬಳ್ಳಾರಿ ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಿದ್ದಕ್ಕೆ ಸಚಿವ ಜಮೀರ್ ವಿರುದ್ಧ ದೂರು

ಬಳ್ಳಾರಿಯ ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ ರೆಡ್ಡಿ ಕುಟುಂಬಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ₹25 ಲಕ್ಷ ನಗದು ಪರಿಹಾರ ನೀಡಿದ್ದರು. ಈ ದೊಡ್ಡ ಮೊತ್ತದ ನಗದು ವ್ಯವಹಾರವು ಆರ್‌ಬಿಐ ನಿಯಮಗಳ ಉಲ್ಲಂಘನೆ ಎಂದು ಆರೋಪಿಸಿ, ಸಚಿವರ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ದಾಖಲಾಗಿದೆ.
Read Full Story
06:53 PM (IST) Jan 06

Karnataka News Live 6 January 2026ಕೃಷ್ಣಾ ನದಿ ಹಿಪ್ಪರಗಿ ಬ್ಯಾರೇಜ್ ಗೇಟ್ ಕಟ್ - ಸ್ಥಳಕ್ಕೆ ಆರ್.ಬಿ. ತಿಮ್ಮಾಪುರ ಭೇಟಿ, ನದಿಪಾತ್ರದಲ್ಲಿ ಆತಂಕ!

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಬಳಿಯ ಹಿಪ್ಪರಗಿ ಬ್ಯಾರೇಜ್‌ನ 22ನೇ ಗೇಟ್ ನೀರಿನ ಒತ್ತಡಕ್ಕೆ ಮುರಿದುಬಿದ್ದಿದೆ. ಈ ಘಟನೆಯಿಂದಾಗಿ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಪೋಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯಕ್ಕೆ ಸೂಚನೆ ನೀಡಿದ್ದಾರೆ.
Read Full Story
06:23 PM (IST) Jan 06

Karnataka News Live 6 January 2026ಹಾಸನ ಯುವತಿ ದುರಂತ ಅಂತ್ಯ; ಪ್ರಿಯಕರನ ಮನೆಗೆ ಬಂದ 6ನೇ ದಿನವೇ ಜೀವಬಿಟ್ಟ ಇನ್‌ಸ್ಟಾಗ್ರಾಮ್ ಪ್ರೇಯಸಿ!

ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ 6 ವರ್ಷಗಳ ಕಾಲ ಪ್ರೀತಿಸಿದರೂ, ಇಬ್ಬರೂ ಒಟ್ಟಾಗಿ 6 ದಿನವೂ ಇರಲು ಸಾಧ್ಯವಾಗಲಿಲ್ಲ. ಬೆಂಗಳೂರಿನಲ್ಲಿದ್ದ ಪ್ರೇಮಿ ರಾಘವೇಂದ್ರನ ಮನೆಗೆ ಹಾಸನದಿಂದ ಬಂದಿದ್ದ ಯುವತಿ ನಿಖಿತಾ, ಪ್ರೇಮಿಯ ಮನೆಯಲ್ಲಿಯೇ ಉಸಿರು ಚೆಲ್ಲಿದ್ದಾಳೆ.

Read Full Story
06:18 PM (IST) Jan 06

Karnataka News Live 6 January 2026ಬಾಂಬ್ ಬೆದರಿಕೆ ಇ-ಮೇಲ್ ಬಂದು 15 ದಿನವಾಗಿತ್ತು! ಈಗ ಎಚ್ಚೆತ್ತುಕೊಂಡರೇ ಅಧಿಕಾರಿಗಳು?

ಕಲಬುರಗಿ ಜಿಲ್ಲೆಯ ಸೇಡಂ ತಹಶೀಲ್ದಾರ್ ಕಚೇರಿಗೆ ಅನಾಮಧೇಯ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ. ಆತಂಕ ಸೃಷ್ಟಿಯಾಗಿತ್ತು. ತಕ್ಷಣ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಭೇಟಿ ನೀಡಿ ತಪಾಸಣೆ ನಡೆಸಿದಾಗ, ಇದು ಹುಸಿ ಬೆದರಿಕೆ ಎಂಬುದು ದೃಢಪಟ್ಟಿದೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Read Full Story
06:16 PM (IST) Jan 06

Karnataka News Live 6 January 2026WFH ನಿಯಮ ಬದಲಿಸಿದ ವಿಪ್ರೋ, ಕನಿಷ್ಠ 6 ಗಂಟೆ ಕಚೇರಿಯಲ್ಲಿ ಕೆಲಸ ಮಾಡುವಂತೆ ಟೆಕ್ಕಿಗಳಿಗೆ ಸೂಚನೆ!

ಐಟಿ ದೈತ್ಯ ವಿಪ್ರೋ ತನ್ನ ಹೈಬ್ರಿಡ್ ಕೆಲಸದ ನೀತಿಯನ್ನು ಕಠಿಣಗೊಳಿಸಿದೆ. ಹೊಸ ನಿಯಮದ ಪ್ರಕಾರ, ಉದ್ಯೋಗಿಗಳು ವಾರದಲ್ಲಿ ಮೂರು ದಿನ ಕಚೇರಿಗೆ ಹಾಜರಾಗಬೇಕು ಮತ್ತು ಆ ದಿನಗಳಲ್ಲಿ ಕನಿಷ್ಠ ಆರು ಗಂಟೆಗಳ ಕಾಲ ಕಚೇರಿಯಲ್ಲಿಯೇ ಇರಬೇಕು. 

Read Full Story
06:13 PM (IST) Jan 06

Karnataka News Live 6 January 2026ಸಿಎಂ ಸಿದ್ದರಾಮಯ್ಯ ದಾಖಲೆಗೆ ಮೈಸೂರು ಸಂಸದ ಕಿಡಿ, ಕಾಗೆ ಮೇಲೆ ಕಪ್ಪು ಚುಕ್ಕೆ ಲೆಕ್ಕ ಹಾಕಲು ಆಗುತ್ತಾ? ಯದುವೀರ್ ಪ್ರಶ್ನೆ

ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ, ಮೈಸೂರು ವಿಮಾನ ನಿಲ್ದಾಣ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದ್ದಾರೆ.

Read Full Story
05:35 PM (IST) Jan 06

Karnataka News Live 6 January 2026Wife Swapping - ಒಂದೇ ಒಂದು ರಾತ್ರಿಗೆ ಹೆಂಡತಿ ವಿನಿಮಯ ಮಾಡಿಕೊಳ್ತಿರೋ ದಂಪತಿಗಳು! ಕಾರಣವೇನು?

Wife Swapping:ಇತ್ತೀಚೆಗೆ ಎಷ್ಟೋ ಜೋಡಿಗಳ ದಾಂಪತ್ಯ ಅಥವಾ ಸಂಸಾರ ಎನ್ನೋದು ಒಂದು ದಿನ ಕೂಡ ಬಾಳಿಕೆ ಬರುತ್ತಿಲ್ಲ. ಯಾವುದೋ ಕಾರಣಕ್ಕೆ ಡಿವೋರ್ಸ್‌ ಪಡೆಯುತ್ತಾರೆ, ಅಕ್ರಮ ಸಂಬಂಧ ಕೂಡ ಹೆಚ್ಚಾಗುತ್ತಿದೆ. ಇದರ ಮಧ್ಯೆ ಈಗ ಭಾರತದಲ್ಲಿ 'ವೈಫ್ ಸ್ವಾಪಿಂಗ್' ಅಥವಾ ಹೆಂಡತಿ ವಿನಿಮಯ ಹೆಚ್ಚಾಗ್ತಿದೆ. ಕಾರಣ ಏನು?

Read Full Story
05:19 PM (IST) Jan 06

Karnataka News Live 6 January 2026ಶ್ರೀರಾಮುಲು ಬರದಿದ್ರೆ ರೆಡ್ಡಿ ಕಥೆ ಅಂದೇ ಮುಗಿಯುತ್ತಿತ್ತು! - ಬಳ್ಳಾರಿ ಗಲಾಟೆಗೆ ರೇಣುಕಾಚಾರ್ಯ ಬಿಗ್ ಟ್ವಿಸ್ಟ್!

ಬಳ್ಳಾರಿ ಗಲಾಟೆ ವಿಚಾರವಾಗಿ ಮಾತನಾಡಿದ ಎಂಪಿ ರೇಣುಕಾಚಾರ್ಯ, ಇದು ಜನಾರ್ದನ ರೆಡ್ಡಿ ಅವರನ್ನು ಹತ್ಯೆ ಮಾಡಲು ಕಾಂಗ್ರೆಸ್ ಸರ್ಕಾರ ರೂಪಿಸಿದ ಸಂಚು ಎಂದು ಆರೋಪಿಸಿದ್ದಾರೆ. ಶಾಸಕ ಭರತ್ ರೆಡ್ಡಿ ಅವರೇ ಈ ಗಲಾಟೆಗೆ ಮತ್ತು ರಾಜಶೇಖರ್ ಸಾವಿಗೆ ನೇರ ಕಾರಣ ಎಂದು ವಾಗ್ದಾಳಿ ನಡೆಸಿದರು.

Read Full Story
05:17 PM (IST) Jan 06

Karnataka News Live 6 January 2026ಇನ್‌ಸ್ಟಾದಲ್ಲಿ 2K ಫಾಲೋವರ್ಸ್, ಬೆಂಗಳೂರು ಉದ್ಯೋಗಿಗೆ ಅಚ್ಚರಿ ಪಾರ್ಟಿ ಆಯೋಜಿಸಿದ ಬಾಸ್

ಇನ್‌ಸ್ಟಾದಲ್ಲಿ 2K ಫಾಲೋವರ್ಸ್, ಬೆಂಗಳೂರು ಮಹಿಳಾ ಉದ್ಯೋಗಿಗೆ ಅಚ್ಚರಿ ಪಾರ್ಟಿ ಆಯೋಜಿಸಿದ ಬಾಸ್, ಬಾಸ್ ಕಿರಿಕಿರಿ ಕುರಿತು ಸದಾ ಸುದ್ದಿಯಾಗುತ್ತದೆ. ಆದರೆ ಇಲ್ಲೊಬ್ಬ ಬಾಸ್ ಎಲ್ಲಾ ಉದ್ಯೋಗಿಳ ಮೋಟಿವೇಟರ್.

Read Full Story