- Home
- Entertainment
- Sandalwood
- ಎಲ್ಲಾ ಸ್ಟಾರ್ ನಟರಿಗೂ ಕೈಕೊಟ್ಟ Rukmini Vasanth ಯಶ್ಗಾಗಿ ಕಾಯ್ತಿದ್ದಾರಾ? ಏನಿದು ಗುಸುಗುಸು ಸುದ್ದಿ?
ಎಲ್ಲಾ ಸ್ಟಾರ್ ನಟರಿಗೂ ಕೈಕೊಟ್ಟ Rukmini Vasanth ಯಶ್ಗಾಗಿ ಕಾಯ್ತಿದ್ದಾರಾ? ಏನಿದು ಗುಸುಗುಸು ಸುದ್ದಿ?
'ಕಾಂತಾರ' ಯಶಸ್ಸಿನ ನಂತರ ನಟಿ ರುಕ್ಮಿಣಿ ವಸಂತ್ ಅವರ ಬೇಡಿಕೆ ಹೆಚ್ಚಾಗಿದೆ. ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿರುವ ಇವರು, ತಮ್ಮ ಹಿಂದಿನ ಸಿನಿಮಾಗಳಲ್ಲಿ ನಾಯಕರಿಗೆ ದಕ್ಕದ ಕಾರಣ, 'ಟಾಕ್ಸಿಕ್' ಚಿತ್ರದಲ್ಲಾದರೂ ಯಶ್‌ಗೆ ಸಿಗುತ್ತಾರೆಯೇ ಎಂಬ ಚರ್ಚೆ ಅಭಿಮಾನಿಗಳಲ್ಲಿ ಶುರುವಾಗಿದೆ.

ಕಾಂತಾರದ ಬೆಡಗಿಗೆ ಇನ್ನಿಲ್ಲದ ಡಿಮಾಂಡ್
ಕಾಂತಾರದ ಕನಕವತಿ ರುಕ್ಮಿಣಿ ವಸಂತ್ (Rukmini Vasanth) ಯಶಸ್ಸು ಈಗ ಒಂದು ಹಂತ ಮೇಲಕ್ಕೆ ಹೋಗಿದೆ. ಕಾಂತಾರಾ ಚಾಪ್ಟರ್ 1 ಭರ್ಜರಿ ಯಶಸ್ಸಿನ ಬಳಿಕ ರುಕ್ಮಿಣಿ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ ಇವರು.
ಟಾಕ್ಸಿಕ್ನಲ್ಲಿ ಮೆಲ್ಲಿಸಾ
ಕಾಂತಾರದ ಯಶಸ್ಸಿನ ಬೆನ್ನಲ್ಲೇ ಯಶ್ ಅವರ ಟಾಕ್ಸಿಕ್ (Yash's Toxic) ಸಿನಿಮಾದಲ್ಲಿ ಮೆಲ್ಲಿಸಾ ಆಗಿ ಕಾಣಿಸಿಕೊಳ್ಳಲಿರೋ ರುಕ್ಮಿಣಿ ಅವರ ಬಗ್ಗೆ ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಯಶ್ ಅಭಿನಯದ ಬಹುನಿರೀಕ್ಷ Toxic ಬಿಡುಗಡೆಗೆ ಸಜ್ಜಾಗಿದೆ.
ರುಕ್ಮಿಣಿ ಲುಕ್ಗೆ ಫಿದಾ
ಸಿನಿಮಾದ ಫೇರಿ ಟೇಲ್ ಪೋಸ್ಟರ್ ಒಂದರ ಹಿಂದೆ ಒಂದರಂತೆ ಬಿಡುಗಡೆಯಾಗುತ್ತಿದೆ. ಫೇರಿ ಟೇಲ್ ಪೋಸ್ಟರ್ ಭಾಗವಾಗಿ ಇತ್ತೀಚೆಗೆ ಟಾಕ್ಸಿಕ್ ಸಿನಿಮಾ ತಂಡ ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಪೋಸ್ಟಕ್ ಬಿಡುಗಡೆ ಮಾಡಿತ್ತು. ಇದೀಗ ಕಾಂತಾರ ಖ್ಯಾತಿಯ ಕನಕವತಿ ಪೋಸ್ಟರ್ ಬಿಡುಗಡೆಯಾಗಿದ್ದು ರುಕ್ಮಿಣಿ ಅವರನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಯಾರಿಗೂ ದಕ್ಕದ ನಟಿ!
ಆದರೆ ಇದರ ನಡುವೆಯೇ ಇನ್ನೊಂದು ಕುತೂಹಲದ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿದೆ. ಅದೇನೆಂದರೆ, ಇದುವರೆಗೆ ರುಕ್ಮಿಣಿ ವಸಂತ್ ಯಾವ ಸ್ಟಾರ್ ನಟರಿಗೂ ದಕ್ಕಲಿಲ್ಲ. ಹಾಗಿದ್ರೆ ಯಶ್ ಅವರಿಗೆ ಕಾಯ್ತಿದ್ದಾರಾ? ಅವರಿಗೆ ಸಿಕ್ತಾರಾ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ.
ಇದೇನು ಸುದ್ದಿ?
ಇದೇನು ಸುದ್ದಿ ಅಂತೀರಾ? ಮತ್ತೇನಿಲ್ಲ. ರುಕ್ಮಿಣಿ ವಸಂತ್ ಅವರು, ಸಪ್ತಾಸಾಗರ ದಾಚೆ ಎಲ್ಲೋ ಸಿನಿಮಾದಲ್ಲಿ ನಾಯಕ ರಕ್ಷಿತ್ ಶೆಟ್ಟಿಗೆ ಸಿಗಲ್ಲ, ಬಘೀರ ಚಿತ್ರದಲ್ಲಿ ನಾಯಕ ಶ್ರೀಮುರಳಿ ಅವರಿಗೆ ದಕ್ಕಲಿಲ್ಲ. ಬಾನದಾರಿ ಫಿಲ್ಮ್ನಲ್ಲಿ ಗಣೇಶ್ ಕೈಗೆ ಸಿಗಲಿಲ್ಲ. ಹೋಗ್ಲಿ ಅಂದ್ರೆ... ಭೈರತಿ ರಣಗಲ್ ಚಿತ್ರದಲ್ಲಿ ಶಿವರಾಜ್ ಕುಮಾರ್ಗೂ ಸಿಗಲಿಲ್ಲ. ಅವೆಲ್ಲಾ ಬಿಡೋಣ ಅಂದ್ರೆ ಕಾಂತಾರದಲ್ಲಿ ರಿಷಬ್ ಶೆಟ್ಟಿಗೂ ಸಿಗದೇ ನುಣುಚಿಕೊಂಡಿದ್ದಾರೆ ಈ ಬೆಡಗಿ!
ಟಾಕ್ಸಿಕ್ ಗತಿ?
ಹಾಗಿದ್ರೆ ಟಾಕ್ಸಿಕ್ನಲ್ಲಿ ಯಶ್‌ಗೆ ಸಿಕ್ತಾರೊ ಇಲ್ಲವೋ ಎನ್ನುವುದು ಅಭಿಮಾನಿಗಳಿಗೆ ಸಂಕಟವಾಗಿದೆ. ಅಥವಾ ಈ ಚಿತ್ರದಲ್ಲಿ ಯಶ್ ಅವರಿಗೆ ಸಿಗುವುದಕ್ಕಾಗಿಯೇ ಬೇರೆ ನಟರಿಗೆ ಇವರು ಸಿಕ್ಕಿಲ್ಲವೇ ಎನ್ನುವ ಚರ್ಚೆಯೂ ಶುರುವಾಗಿದೆ. ಕೆಲವರು ಇದನ್ನು ತಮಾಷೆಯ ರೂಪದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

