Wife Swapping:ಇತ್ತೀಚೆಗೆ ಎಷ್ಟೋ ಜೋಡಿಗಳ ದಾಂಪತ್ಯ ಅಥವಾ ಸಂಸಾರ ಎನ್ನೋದು ಒಂದು ದಿನ ಕೂಡ ಬಾಳಿಕೆ ಬರುತ್ತಿಲ್ಲ. ಯಾವುದೋ ಕಾರಣಕ್ಕೆ ಡಿವೋರ್ಸ್‌ ಪಡೆಯುತ್ತಾರೆ, ಅಕ್ರಮ ಸಂಬಂಧ ಕೂಡ ಹೆಚ್ಚಾಗುತ್ತಿದೆ. ಇದರ ಮಧ್ಯೆ ಈಗ ಭಾರತದಲ್ಲಿ 'ವೈಫ್ ಸ್ವಾಪಿಂಗ್' ಅಥವಾ ಹೆಂಡತಿ ವಿನಿಮಯ ಹೆಚ್ಚಾಗ್ತಿದೆ. ಕಾರಣ ಏನು? 

ಇಷ್ಟು ವರ್ಷಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತಿದ್ದ 'ವೈಫ್ ಸ್ವಾಪಿಂಗ್' ಅಥವಾ ಹೆಂಡತಿ ವಿನಿಮಯ ಅಥವಾ ಎಂಬುದು ಈ ಭಾರತಕ್ಕೂ ಲಗ್ಗೆ ಇಟ್ಟಿದೆ. ಇದರಿಂದಲೇ ಒಂದಿಷ್ಟು ಡಿವೋರ್ಸ್‌ ಕೂಡ ಆಗಿವೆ. ನಟಿ ಕರೀಷ್ಮಾ ಕಪೂರ್‌ ಕೂಡ ಇದರಿಂದ ಬೇಸತ್ತು ಡಿವೋರ್ಸ್‌ ಪಡೆದಿದ್ದರು. ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ವಿವಾಹಿತ ದಂಪತಿಗಳು ಪರಸ್ಪರ ಒಪ್ಪಿಗೆಯಿಂದ ತಮ್ಮ ಸಂಗಾತಿಗಳನ್ನು ತಾತ್ಕಾಲಿಕವಾಗಿ ಲೈಂ*ಗಿಕ ಬಯಕೆಗೋಸ್ಕರ ಬದಲಿಸಿಕೊಳ್ಳುವ ಒಂದು ಕ್ರಿಯೆಯಾಗಿದೆ. ಇದನ್ನು ವಿದೇಶಗಳಲ್ಲಿ 'ಸ್ವಿಂಗಿಂಗ್' ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಇದು ಇಂದಿಗೂ ಒಂದು ನಿಷೇಧಿತ (Taboo) ಮತ್ತು ಅನೈತಿಕ ವಿಷಯವಾಗಿದೆ.

ಇದು ಹೇಗೆ ನಡೆಯುತ್ತದೆ?

ಸಾಮಾನ್ಯವಾಗಿ ಸಮಾನ ಮನಸ್ಕ ದಂಪತಿಗಳು ಪಾರ್ಟಿ ಮಾಡುತ್ತಾರೆ ಅಥವಾ ಆನ್‌ಲೈನ್ ಕ್ಲಬ್‌ನಲ್ಲಿ ಭೇಟಿಯಾಗುತ್ತಾರೆ. ಈ ದಂಪತಿ 'ಪರಸ್ಪರ ಒಪ್ಪಿಗೆ' ಸೂಚಿಸಬೇಕು. ಇಬ್ಬರೂ ಸಂಗಾತಿಗಳ ಪೂರ್ಣ ಸಮ್ಮತಿ ಇದ್ದಾಗ ಮಾತ್ರ ಇವೆಲ್ಲ ನಡೆಯುತ್ತವೆ. ಪಾರ್ಟಿಯಲ್ಲಿ ಕಾರ್‌ ಕೀಗಳನ್ನು ಒಂದು ಬುಟ್ಟಿಗೆ ಹಾಕುವುದು, ಕಣ್ಣು ಮುಚ್ಚಿಕೊಂಡು ಕಾರ್‌ ಕೀ ಪಡೆಯಬೇಕು. ಯಾವ ಪುರುಷನ ಕಾರ್‌ ಕೀ, ಇನ್ಯಾರಿಗೋ ಸಿಕ್ಕಿರುತ್ತದೆ. ಆಗ ಆ ಪುರುಷನ ಹೆಂಡತಿ ಕಾರ್‌ ಕೀ ಸಿಕ್ಕಿದವನ ಬಳಿಗೆ ಹೋಗಬೇಕು. ಇವು ಯಾವುದೇ ಎಮೋಶನಲ್‌ ಭಾವನೆಗಳನ್ನು ಹೊಂದಿರೋದಿಲ್ಲ, ಒಂದು ನೈಟ್‌ಗೋಸ್ಕರ ನಡೆಯುವಂಥದ್ದು.

ಕಾರಣಗಳು:

ದಾಂಪತ್ಯ ಜೀವನದಲ್ಲಿ ಅಥವಾ ಸಂಸಾರದಲ್ಲಿ ಉಂಟಾಗುವ ಬೇಸರವನ್ನು ಹೋಗಲಾಡಿಸಲು, ಹೊಸ ರೀತಿಯ ಲೈಂಗಿಕ ಅನುಭವ ಪಡೆಯಲು ಈ ರೀತಿ ಹಾದಿಯನ್ನು ಹಿಡಿಯುತ್ತಾರೆ. ಆದರೆ, ಇದು ಎಲ್ಲರಿಗೂ ಅನ್ವಯಿಸುವುದಿಲ್ಲ.

ಭಾರತೀಯ ಕಾನೂನು ಏನು ಹೇಳುತ್ತದೆ?

ವ್ಯಭಿಚಾರ (Adultery): 2018 ರಲ್ಲಿ ಸುಪ್ರೀಂ ಕೋರ್ಟ್ ಐಪಿಸಿ ಸೆಕ್ಷನ್ 497 ಅನ್ನು ರದ್ದುಗೊಳಿಸಿತು. ಈಗ ಭಾರತದಲ್ಲಿ ವ್ಯಭಿಚಾರವು ಕ್ರಿಮಿನಲ್ ಅಪರಾಧವಲ್ಲ.

ವಿಚ್ಛೇದನಕ್ಕೆ ಆಧಾರ: ವ್ಯಭಿಚಾರವು ಅಪರಾಧವಲ್ಲ, ಆದರೆ ಸಂಗಾತಿಯು ತನ್ನ ಒಪ್ಪಿಗೆಯಿಲ್ಲದೆ ಹೀಗೆಲ್ಲ ನಡೆದುಕೊಂಡರೆ, ಅದನ್ನು ವಿಚ್ಛೇದನಕ್ಕೆ ಬಲವಾದ ಕಾರಣ ಎಂದು ಪರಿಗಣಿಸಬಹುದು.

ಬಲವಂತದ ವಿನಿಮಯ: ಒಂದು ವೇಳೆ ಪತಿಯು ಪತ್ನಿಯನ್ನು ಅವಳ ಇಷ್ಟಕ್ಕೆ ವಿರುದ್ಧವಾಗಿ ಈ ರೀತಿ ಹೆಂಡತಿ ವಿನಿಮಯಕ್ಕೆ ಬಲವಂತ ಮಾಡಿದರೆ, ಅದು 'ಕ್ರೌರ್ಯ' ಮತ್ತು 'ಅತ್ಯಾ*ಚಾರ'ದ ವ್ಯಾಪ್ತಿಗೆ ಬರುವುದು.

ಸಾಮಾಜಿಕ ಮತ್ತು ನೈತಿಕ ಪರಿಣಾಮಗಳು:

  • ಭಾರತೀಯ ಸಂಸ್ಕೃತಿಯಲ್ಲಿ ವಿವಾಹವು ಅತ್ಯಂತ ಪವಿತ್ರವಾದ ಬಂಧ. ಹೆಂಡತಿಯ ವಿನಿಮಯ ಮಾಡಿಕೊಳ್ಳುವುದು ಈ ಮದುವೆ ಎಂಬ ಪವಿತ್ರತೆಗೆ ಧಕ್ಕೆ ತರುತ್ತದೆ. ಆರಂಭದಲ್ಲಿ ಈ ಲೈ*ಂಗಿಕ ಚಟುವಟಿಕೆಗೆ ಒಪ್ಪಿಗೆ ನೀಡಿದರೂ, ನಂತರದ ದಿನಗಳಲ್ಲಿ ಸಂಗಾತಿಗಳ ನಡುವೆ ಅಸೂಯೆ, ಅಪನಂಬಿಕೆ ಬರುವುದು.
  • ಇದರಿಂದ ದೀರ್ಘಕಾಲದ ಮಾನಸಿಕ ಒತ್ತಡ, ಖಿನ್ನತೆ ಆಗಬಹುದು
  • ಸಮಾಜಕ್ಕೆ ಇಂತಹ ವಿಷಯಗಳು ಗೊತ್ತಾದರೆ, ಕುಟುಂಬದ ಗೌರವ ಹಾಳಾಗುವುದು
  • ಲೈಂಗಿಕವಾಗಿ ಹರಡುವ ರೋಗಗಳು ಬರುತ್ತವೆ.
  • ದಾಂಪತ್ಯ ಎನ್ನುವುದು ನಂಬಿಕೆ, ಪ್ರೀ, ಪರಸ್ಪರ ಗೌರವದ ಮೇಲೆ ನಿಂತಿದೆ. ಲೈಂಗಿಕ ಆಸಕ್ತಿಗೋಸ್ಕರ ಸಂಬಂಧವನ್ನು ಹಾಳು ಮಾಡೋದು ಸರಿ ಅಲ್ಲ.