ಇನ್‌ಸ್ಟಾದಲ್ಲಿ 2K ಫಾಲೋವರ್ಸ್, ಬೆಂಗಳೂರು ಮಹಿಳಾ ಉದ್ಯೋಗಿಗೆ ಅಚ್ಚರಿ ಪಾರ್ಟಿ ಆಯೋಜಿಸಿದ ಬಾಸ್, ಬಾಸ್ ಕಿರಿಕಿರಿ ಕುರಿತು ಸದಾ ಸುದ್ದಿಯಾಗುತ್ತದೆ. ಆದರೆ ಇಲ್ಲೊಬ್ಬ ಬಾಸ್ ಎಲ್ಲಾ ಉದ್ಯೋಗಿಳ ಮೋಟಿವೇಟರ್.

ಬೆಂಗಳೂರು (ಜ.06) ಕಾರ್ಪೋರೇಟ್ ಕಂಪನಿಯಲ್ಲಿ ಮ್ಯಾನೇಜರ್, ಬಾಸ್ ಕಿರಿಕಿರಿ, ಒತ್ತಡ, ಹೆಚ್ಚುವರಿ ಕೆಲಸ, ತುರ್ತು ಸಂದರ್ಭದಲ್ಲಿ ರಜೆ ಕೊಡದ ಆರೋಪಗಳೇ ಕೇಳಿಬರುತ್ತದೆ. ಈ ಪೈಕಿ ಬೆಂಗಳೂರಿನಲ್ಲಿ ಬಾಸ್ ಹಾಗೂ ಉದ್ಯೋಗಿಗಳ ನಡುವಿನ ಕಿತ್ತಾಟ, ದಿಢೀರ್ ರಾಜೀನಾಮೆಗಳ ಹಲವರು ಬಾರಿ ಚರ್ಚೆಯಾಗಿದೆ. ಇದರ ನಡುವೆ ಇದೇ ಬೆಂಗಳೂರಿನ ಕಾರ್ಪೋರೇಟ್ ಜಗತ್ತಿನಲ್ಲಿ ವಿಶೇಷ ಘಟನೆ ಬೆಳಕಿಗೆ ಬಂದಿದೆ. ಕಾರ್ಪೋರೇಟ್ ಕಂಪನಿ ಮ್ಯಾನೇಜರ್ ಮಹಿಳಾ ಉದ್ಯೋಗಿಗೆ ಅಚ್ಚರಿ ಪಾರ್ಟಿ ಆಯೋಜಸಿದ್ದಾರೆ. ಕೇಕ್ ಕತ್ತರಿಸಿ ಎಲ್ಲಾ ಉದ್ಯೋಗಿಗಳ ಜೊತೆ ಸಂಭ್ರಮಿಸಿದ್ದಾರೆ. ಈ ಸಂಭ್ರಮಾಚರಣೆಗೆ ಕಂಪನಿಗೆ ಸಂಬಂಧಿಸಿದ ಸಾಧನೆಯೂ ಅಲ್ಲ, ವಿಷಯವೂ ಅಲ್ಲ. ಕಾರಣ ಇಷ್ಟೇ ಮಹಿಳಾ ಉದ್ಯೋಗಿಯ ವೈಯುಕ್ತಿ ಇನ್‌ಸ್ಟಾಗ್ರಾಂ ಖಾತೆ 2,000 ಫಾಲೋವರ್ಸ್ ತಲುಪಿತ್ತು ಅಷ್ಟೆ.

ಬೆಂಗಳೂರಿನ ಮಹಿಳಾ ಉದ್ಯೋಗಿ ಐಶ್ವರ್ಯ ಹಂಚಿಕೊಂಡ ಸಂತಸ ಕ್ಷಣ

ಬೆಂಗಳೂರಿನ ಕಾರ್ಪೋರೇಟ ಕಂಪನಿಯಲ್ಲಿ ಕೆಲಸ ಮಾಡುತ್ತಿರು ಐಶ್ವರ್ಯ, ದಂತ ವೈದ್ಯೆಯಾಗಿ ಪದವಿ ಪೂರೈಸಿದ್ದಾರೆ. ಆದರೆ ಕೆಲಸ ಮಾಡುತ್ತಿರುವುದು ಕಾರ್ಪೋರೇಟ್ ಕಂಪನಿಯಲ್ಲಿ. ಐಶ್ವರ್ಯ ಈ ಸಂಭ್ರಮದ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಆರಂಭದಲ್ಲಿ ಉದ್ಯೋಗಿ ಐಶ್ವರ್ಯಳನ್ನು ಸಹೋದ್ಯೋಗಿಗಳು ಬಾಸ್ ಕರೆಯುತ್ತಿದ್ದಾರೆ ಎಂದಿದ್ದಾರೆ. ಈ ವೇಳೆ ಬೋರ್ಡ್ ರೂಂಗೆ ಲ್ಯಾಪ್‌ಟಾಪ್ ಹಿಡಿದು ಐಶ್ವರ್ಯ ಆಗಮಿಸಿದ್ದಾರೆ.

ಕೆಲಸದ ಪ್ರಗತಿ, ರಿಪೋರ್ಟ್ ಹಂಚಿಕೊಳ್ಳಲು ಬಂದ ಐಶ್ವರ್ಯ

ಬಾಸ್ ಕೊಟ್ಟಿರುವ ಕೆಲಸಗಳು ಕುರಿತು ರಿಪೋರ್ಟ್ ಕೇಳುತ್ತಿದ್ದಾರೆ ಎಂದು ಐಶ್ವರ್ಯ ಲ್ಯಾಪ್ ಹಿಡಿದು ನೇರವಾಗಿ ಬಾಸ್ ಕೊಠಡಿಗೆ ತೆರಳಿದ್ದಾಳೆ. ಆದರೆ ಪ್ರತಿ ದಿನದಂತೆ ಇರಲಿಲ್ಲ. ಕಾರಣ ಸಹೋದ್ಯೋಗಿ ಬೋರ್ಡ್ ರೂಂ ಬಾಗಿಲು ತೆರೆದುಕೊಟ್ಟಿದ್ದಾರೆ. ಸಾಮಾನ್ಯವಾಗಿ ತಾವೇ ತೆರೆದು ಒಳಹೋಗುತ್ತಿದ್ದರು. ಬಾಸ್ ಇರುವ ಬೋರ್ಡ್ ರೂಂ ಪ್ರವೇಶಿಸಿದ ಬೆನ್ನಲ್ಲೇ ಮತ್ತೆ ಅಚ್ಚರಿ ಕಾರಣ, ಇತರ ಸಹೋದ್ಯೋಗಿಗಳು ಕುಳಿತಿದ್ದಾರೆ. ಜೊತೆಗೆ ಬಾಸ್ ಮುಗುಳು ನಗೆಯೊಂದಿಗೆ ಕುಳಿತಿದ್ದಾರೆ. ಮತ್ತೊಬ್ಬರು ಮೊಬೈಲ್ ಮೂಲಕ ವಿಡಿಯೋ ಮಾಡುತ್ತಿದ್ದಾರೆ. ಇದೆಲ್ಲಾ ನೋಡಿದಾಗ ಇಲ್ಲಿ ಏನಾಗುತ್ತಿದೆ ಅನ್ನೋ ಕುತೂಹಲ ಐಶ್ವರ್ಯ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಬೋರ್ಡ್ ರೂಂನ ಬೋರ್ಡ್ ನೋಡಿದ ಬೆನ್ನಲ್ಲೇ ನಸು ನಕ್ಕ ಐಶ್ವರ್ಯ

ಬಾಸ್ ಕುಳಿತಿರುವ ಬೋರ್ಡ್ ರೂಂನಲ್ಲಿನ ಬೋರ್ಡ್ ನೋಡಿದಾಗ ಐಶ್ವರ್ಯಗೆ ನಗು ತಡೆಯಲು ಸಾಧ್ಯವಾಗಲಿಲ್ಲ. ಕಾರಣ ಬೋರ್ಡ್ ಮೇಲೆ ಹ್ಯಾಪಿ 2ಕೆ ಫಾಲೋವರ್ಸ್ ಆನ್ ಇನ್‌‌ಸ್ಟಾಗ್ರಾಂ ಐಶು ಎಂದು ಬರೆಯಲಾಗಿತ್ತು. ಬಾಸ್ ಸೇರಿದಂತೆ ಎಲ್ಲಾ ಸಹೋದ್ಯೋಗಿಗಳು ಶುಭಾಶಯ ತಿಳಿಸಿದ್ದಾರೆ. ಬಳಿಕ ಕೇಕ್ ಕತ್ತರಿಸಿ ಎಲ್ಲರಿಗೂ ಹಂಚಲಾಗಿದೆ.

ನಿಮ್ಮ ಬಾಸ್ ಮೋಟಿವೇಟರ್ ಆದಾಗ

ಕಚೇರಿಯಲ್ಲಿ ನಿಮ್ಮ ಬಾಸ್ ಮೋಟಿವೇಟರ್ ಆದಾಗ ಈ ರೀತಿ ಇರುತ್ತದೆ ಎಂದು ಐಶ್ವರ್ಯ ಬರೆದುಕೊಂಡಿದ್ದಾರೆ. ನಾನು ಈ ಕಾರ್ಪೋರೇಟ್ ಕಂಪನಿಯಲ್ಲಿರುವುದು ಲಕ್ಕಿ. ಉತ್ತಮ ವಾತಾವರಣ, ಪ್ರತಿ ದಿನ ಹುರಿದುಂಬಿಸುವ ಬಾಸ್, ಹೊಸತನ ಕಲಿಯಲು ಪ್ರೋತ್ಸಾಹಿಸುತ್ತಾರೆ. ಈ ಸಹಕಾರ, ಪ್ರೋತ್ಸಾಹದಿಂದ ನನಗೆ ಕಲಿಯುಲು ಸಾಧ್ಯವಾಗುತ್ತಿದೆ. ಅತೀ ಖುಷಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದು ಐಶ್ವರ್ಯ ಹೇಳಿಕೊಂಡಿದ್ದಾರೆ.

ಐಶ್ವರ್ಯ ಪೋಸ್ಟ್‌ಗೆ ಭರ್ಜರಿ ಕಮೆಂಟ್ಸ್

ಕಾರ್ಪೋರೇಟ್ ಕಂಪನಿಗಳಲ್ಲಿ ನಗು ಇರುವುದಿಲ್ಲ, ಎಲ್ಲವೂ ಯಾಂತ್ರಿಕವಾಗಿರುತ್ತದೆ. ಆದರೆ ಇಲ್ಲಿ ಬಾಸ್ ನೀಡುತ್ತಿರುವ ಸಹಕಾರ,ಸಂಭ್ರಮಿಸಲು, ಕೇಕ್ ಕತ್ತರಿಸಲು ಹುಡುಕಿರುವ ಕಾರಣ ಸಣ್ಣದಾಗಿ ಕಂಡರೂ ಉದ್ಯೋಗಿ ಮನದಲ್ಲಿ, ಕೆಲಸ ಮಾಡುವ ವಾತಾವರಣದಲ್ಲಿ ಮಾಡುವ ಬದಲಾವಣೆ ದೊಡ್ಡದು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಕಂಪನಿಯಲ್ಲಿನ ಉತ್ತಮ ವಾತಾವರಣವೇ ಕಂಪನಿಯ ಬೆಳವಣಿಗೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. 

View post on Instagram