ಮಕ್ಕಳು ಎಷ್ಟೇ ದೊಡ್ಡವರಾದ್ರೂ ಪಾಲಕರಿಗೆ ಮಕ್ಕಳೇ. ಆದ್ರೆ ಪಾಲಕರು ಮಾಡುವ ಕೆಲ್ಸ ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿರುತ್ತೆ. ಮಕ್ಕಳ ಭವಿಷ್ಯ ಚೆನ್ನಾಗಿರ್ಬೇಕೆಂದ್ರೆ ಸಣ್ಣಪುಟ್ಟ ವಿಷ್ಯ ಕೂಡ ಪಾಲಕರಿಗೆ ಗೊತ್ತಿರಬೇಕು.

ಚಿಕ್ಕ ಮಕ್ಕಳ (children) ಮೇಲೆ ಒಂದು ರೀತಿ ತಾತ್ಸಾರ ಸಾಮಾನ್ಯ. ಅವರಿಗೆ ಏನೂ ತಿಳಿಯೋದಿಲ್ಲ ಎನ್ನುವ ಅಭಿಪ್ರಾಯ ಬಹುತೇಕ ಎಲ್ಲ ಪಾಲಕರಿಗಿರುತ್ತೆ. ಚಿಕ್ಕ ಮಕ್ಕಳು ಮನೆಯಲ್ಲಿ ಆಟವಾಡ್ತಾ, ಗಲಾಟೆ ಮಾಡ್ತಿದ್ದರೆ ಪಾಲಕರು ತಮ್ಮದೇ ಕೆಲಸದಲ್ಲಿ, ಗಲಾಟೆಯಲ್ಲಿ ಮಗ್ನರಾಗಿರ್ತಾರೆ. ಮನೆಯೇ ಮೊದಲ ಪಾಠ ಶಾಲೆ ಎನ್ನುವ ಮಾತಿದೆ. ಪೇರೆಂಟ್ಸ್ ಮಾಡಿದ ಕೆಲ್ಸ, ಮಾತು, ನಡವಳಿಕೆ ಮಕ್ಕಳ ಮೇಲೆ ಬೇಗ ಪರಿಣಾಮ ಬೀರುತ್ತೆ. ಪಾಲಕರು ಹೇಳಿದ ಕೆಟ್ಟ ಶಬ್ದ ಇರಲಿ ಇಲ್ಲ ಒಳ್ಳೆ ಮಾತಿರಲಿ ಅದು ಮಕ್ಕಳ ಮನಸ್ಸು ನಾಟಿರುತ್ತದೆ. ಮರುದಿನ ಮಕ್ಕಳು ಅದೇ ಶಬ್ಧವನ್ನು ರಿಪಿಟ್ ಮಾಡ್ತಾರೆ. ಮಕ್ಕಳ ಮುಂದೆ ಪೇರೆಂಟ್ಸ್ ಮಾಡುವ ಇನ್ನೊಂದು ಕೆಲ್ಸ ಅಂದ್ರೆ ಬಟ್ಟೆ ಬದಲಿಸುವುದು ಹಾಗೂ ಸ್ನಾನ ಮಾಡುವುದು. ಮಕ್ಕಳ ಮುಂದೆ ಈ ಎರಡು ಕೆಲ್ಸ ಮಾಡ್ಬೇಕಾ? ಮಾಡೋದಾದ್ರೆ ಅದಕ್ಕೆ ವಯಸ್ಸಿನ ಮಿತಿ ಇದ್ಯಾ?

ಮಕ್ಕಳ ಮುಂದೆ ಬಟ್ಟೆ (clothes) ಬದಲಿಸ್ಬಹುದಾ?

ಪೋಷಕರು ತಮ್ಮ ಮಕ್ಕಳ ಮುಂದೆ ಬಟ್ಟೆ ಬದಲಾಯಿಸಲು ಮತ್ತು ಸ್ನಾನ ಮಾಡಲು ಹಿಂಜರಿಯೋದಿಲ್ಲ. ಮಗುವಿಗೆ ತಿಳಿಯೋದಿಲ್ಲ ಎಂಬ ಭಾವನೆಯಲ್ಲಿಯೇ ಆರು ವರ್ಷಕ್ಕಿಂತ ಚಿಕ್ಕ ಮಕ್ಕಳ ಮುಂದೆ ಪಾಲಕರು ಯಾವುದೇ ನಾಚಿಕೆ ಇಲ್ಲದೆ ಬಟ್ಟೆ ಬದಲಿಸ್ತಾರೆ, ಸ್ನಾನ ಮಾಡ್ತಾರೆ. ಮಕ್ಕಳ ಮುಂದೆ ಈ ಎರಡೂ ಕೆಲ್ಸ ಮಾಡೋದು ತಪ್ಪು ಎನ್ನುತ್ತಾರೆ ತಜ್ಞರು. ನೀವು ಮಾಡುವ ಈ ಕೆಲ್ಸ ಮಗುವಿನ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

Chanakya Niti: ಗಂಡ-ಹೆಂಡ್ತಿ ನಡುವೆ ಜಗಳ ಬರೋಕೆ ನಿಜವಾದ ಕಾರಣಗಳು ಇವೇ ನೋಡಿ!

ಸಾಮಾನ್ಯವಾಗಿ 6 ವರ್ಷದೊಳಗಿನ ಮಕ್ಕಳು ತಮ್ಮ ದೇಹ, ಗೌಪ್ಯತೆ ಮತ್ತು ದೈಹಿಕ ಮಿತಿಗಳ ಬಗ್ಗೆ ಕಲಿಯುತ್ತಿರುತ್ತಾರೆ. ಈ ವಯಸ್ಸಿನಲ್ಲಿ ಅವರು ನೋಡುವ ಎಲ್ಲವೂ ಅವರಿಗೆ ಸಾಮಾನ್ಯವಾಗುತ್ತದೆ. ಒಂದು ಮಗು ಪದೇ ಪದೇ ತಮ್ಮ ಪೋಷಕರು ಬಟ್ಟೆ ಬದಲಾಯಿಸುವುದನ್ನು ನೋಡಿದಾಗ ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಗೌಪ್ಯತೆ ಇಲ್ಲ, ಎಲ್ಲಿ ಬೇಕಾದ್ರೂ ಬಟ್ಟೆ ಬದಲಿಸಬಹುದು ಎನ್ನುವ ಭಾವನೆ ಮೂಡುತ್ತದೆ. ಇದು ಮಕ್ಕಳಲ್ಲಿ ಗೊಂದಲ ಉಂಟುಮಾಡಬಹುದು. ಬೇರೆಯವರನ್ನು ಸ್ಪರ್ಶಿಸುವ ಅಧಿಕಾರ ಯಾವಾಗಿದೆ, ಯಾವಾಗಿಲ್ಲ ಎಂಬುದು ಅವರಿಗೆ ಅರ್ಥವಾಗೋದಿಲ್ಲ. ಇದು ಅವರ ವೈಯಕ್ತಿಕ ಗಡಿಗಳನ್ನು ದುರ್ಬಲಗೊಳಿಸಬಹುದು. ಭವಿಷ್ಯದಲ್ಲಿ ಇದರಿಂದ ಅವರಿಗೆ ತೊಂದ್ರೆ ಆಗ್ಬಹುದು.

ಪಾಲಕರು ಏನು ಮಾಡ್ಬೇಕು? 

1.ಮಗು ಚಿಕ್ಕದು ಅಂತ ಅವರ ಮುಂದೆ ಎಂದೂ ಬಟ್ಟೆ ಬದಲಿಸಬೇಡಿ. ಮಗು ಹುಟ್ಟಿದಾಗಿನಿಂದಲೂ ಈ ರೂಢಿ ಬೆಳೆಸಿಕೊಳ್ಳಿ. ಹಾಗೆಯೇ ಮಕ್ಕಳ ಮುಂದೆ ಸ್ನಾನ ಮಾಡಬೇಡಿ.

 2.ಮಕ್ಕಳ ಮುಂದೆ ಪಾಲಕರು ಪ್ರೀತಿ, ರೋಮ್ಯಾನ್ಸ್ ತಪ್ಪಿಸಿ.

ಮನೆಗೆ ಗೆಸ್ಟ್ ಬರ್ತಾರೆ ಅಂದ್ರೆ ಸಾಕು ಟೆನ್ಶನ್ ಆಗುತ್ತಾ? ಇದರ ಹಿಂದೆ ಇದೆ ದೊಡ್ಡ ಸೈಕಾಲಜಿ!

 3. ದೇಹದ ಕೆಲವು ಭಾಗಗಳು ಖಾಸಗಿ ಎಂದು ಮಕ್ಕಳಿಗೆ ಕಲಿಸಿ. ಮಕ್ಕಳಿಗೆ ನಾಚಿಕೆ ಕಲಿಸಬೇಕು ಎಂದಲ್ಲ. ಮಗು ಆಗಿರಲಿ ಇಲ್ಲ ವಯಸ್ಕರಾಗಿರಲಿ, ಎಲ್ಲರೂ ಗೌಪ್ಯತೆಗೆ ಅರ್ಹರು ಎಂದು ಮಕ್ಕಳಿಗೆ ತಿಳಿಸಿ. 

4.ಮಗುವಿನೊಂದಿಗೆ ಮುಕ್ತ ಸಂಭಾಷಣೆ ಮಾಡಿ. ಪೋಷಕರು ತಮ್ಮ ಮಕ್ಕಳೊಂದಿಗೆ ದೈಹಿಕ ಸುರಕ್ಷತೆಯ ಬಗ್ಗೆ ಚರ್ಚಿಸಿ.

 5.ಬ್ಯಾಡ್ ಟಚ್ ಹಾಗೂ ಗುಡ್ ಟಚ್ ಬಗ್ಗೆ ಮಕ್ಕಳಿಗೆ ಸರಳ ಭಾಷೆಯಲ್ಲಿ ತಿಳಿಸಿ.

 6.ಮಕ್ಕಳಿಗೆ ಮಾತನಾಡಲು ಬಿಡಿ. ಅವರ ಮಾತನ್ನು ತಾಳ್ಮೆಯಿಂದ ಕೇಳಿ. ಮಕ್ಕಳಿಗೆ ಆಗಿರುವ ಅನಾನುಕೂಲತೆಯನ್ನು ಕೇಳಿ ತಿಳಿದುಕೊಳ್ಳಿ.