08:49 PM (IST) May 05

Karnataka News Live 5 May 2026Leo to Master - 'ದಳಪತಿ' ವಿಜಯ್ ದರ್ಬಾರ್ - 'ಲಿಯೋ' ಇಂದ 'ಮಾಸ್ಟರ್'ವರೆಗೆ ಸೃಷ್ಟಿಯಾದ ದಾಖಲೆಗಳು ಇವು!

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಇಂದು 'ದಳಪತಿ' ವಿಜಯ್ ಎಂದರೆ ಕೇವಲ ಒಬ್ಬ ನಟನಲ್ಲ, ಅವರೊಬ್ಬ ಅಖಂಡ ಸಾಮ್ರಾಜ್ಯದ ಬ್ರ್ಯಾಂಡ್! ಕೇವಲ ತಮಿಳುನಾಡಷ್ಟೇ ಅಲ್ಲದೆ, ಇಡೀ ಭಾರತದಾದ್ಯಂತ ಮತ್ತು ವಿದೇಶಗಳಲ್ಲೂ ತಮ್ಮದೇ ಆದ ಬೃಹತ್ ಅಭಿಮಾನಿ ಬಳಗವನ್ನು ಹೊಂದಿರುವ ವಿಜಯ್, ಇಂದು 'ಜನನಾಯಕನ್' ಆಗಿ ಮಿಂಚುತ್ತಿದ್ದಾರೆ.

Read Full Story
07:31 PM (IST) May 05

Karnataka News Live 5 May 2026ಭವಿಷ್ಯದ ಪೀಳಿಗೆಗೆ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ಆಗಲಿ - ನಿಖಿಲ್ ಕುಮಾರಸ್ವಾಮಿ

ದೇಶ ವೈಜ್ಞಾನಿಕವಾಗಿ ಮುಂದುವರೆಯುತ್ತಿದೆ. ಇದರ ಜೊತೆಗೆ ಭವಿಷ್ಯದ ಪೀಳಿಗೆಗೆ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿರುವುದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

Read Full Story
07:15 PM (IST) May 05

Karnataka News Live 5 May 2026ವಿಮಾನ ನಿಲ್ದಾಣಗಳಿಗೆ ಮಹನೀಯರ ನಾಮಕರಣ ಒಳ್ಳೆಯ ಕಾರ್ಯ - ಸಚಿವ ಆರ್.ಬಿ.ತಿಮ್ಮಾಪುರ

ನಾಡಿಗಾಗಿ ಶ್ರಮಿಸಿದ, ಪ್ರಾಣ ತ್ಯಾಗ ಮಾಡಿದ ಮಹನೀಯರ ಹೆಸರನ್ನು ರಾಜ್ಯದ ಐದು ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡಲು ಹೋರಾಟ ಮಾಡುತ್ತಿರುವುದು ಒಳ್ಳೆಯ ಕಾರ್ಯ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

Read Full Story
05:07 PM (IST) May 05

Karnataka News Live 5 May 2026BJP Double Victory - ದೆಹಲಿಯಲ್ಲಿ ಕೇಜ್ರಿವಾಲರನ್ನ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯನ್ನ ಅಧಿಕಾರದಿಂದ ಕೆಳಗಿಳಿಸಿದ್ದೇಗೆ ಬಿಜೆಪಿ?

2026ರ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮೂಲಕ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಬಿಜೆಪಿ ಅಧಿಕಾರಕ್ಕೇರಿದೆ.

Read Full Story
04:38 PM (IST) May 05

Karnataka News Live 5 May 2026OTT Movie Release - ಅಬ್ಬಬ್ಬಾ.. ಒಟಿಟಿಗೆ ಬಂತು, ಕೊನೇವರೆಗೂ ಕುತೂಹಲ ನೀಡುವ ಸಿನಿಮಾ, ವೆಬ್‌ಸಿರೀಸ್‌ಗಳು!

New OTT movies: ಮೇ 5 ರಿಂದ 10ರ ನಡುವೆ, ಓಟಿಟಿಯಲ್ಲಿ ಹಲವು ಅದ್ಭುತ ಸಿನಿಮಾ ಮತ್ತು ವೆಬ್ ಸೀರೀಸ್‌ಗಳು ಬಿಡುಗಡೆಗೆ ಸಿದ್ಧವಾಗಿವೆ. ಇದರಲ್ಲಿ ಕ್ರೈಂ ಥ್ರಿಲ್ಲರ್, ಸಸ್ಪೆನ್ಸ್ ಜೊತೆಗೆ ರೊಮ್ಯಾಂಟಿಕ್ ಮತ್ತು ಆಕ್ಷನ್ ಚಿತ್ರಗಳನ್ನು ನೋಡಬಹುದು. 

Read Full Story
04:35 PM (IST) May 05

Karnataka News Live 5 May 2026ಬಾಗಲಕೋಟೆ ಬಿಜೆಪಿ ಸೋಲಿಗೆ 'ಕೈ' ಅಲ್ಲ, ಈ ಮೂವರು ನಾಯಕರ 'ನಾಲಗೆ'ಗಳೇ ಕಾರಣ; ಆ ಫೋನ್ ಕರೆಯಲ್ಲಿ ಹೇಳಿದ್ದೇನು?

ಬಾಗಲಕೋಟೆಯಲ್ಲಿ ಬಿಜೆಪಿಯ ಸೋಲಿಗೆ ವಿರೋಧ ಪಕ್ಷಕ್ಕಿಂತ ಸ್ವಪಕ್ಷದ ನಾಯಕರ ವಿವಾದಾತ್ಮಕ ಹೇಳಿಕೆಗಳೇ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಪ್ರಚಾರದ ವೇಳೆ ಸಿ.ಸಿ. ಪಾಟೀಲ್, ಪ್ರತಾಪ್ ಸಿಂಹ, ಮತ್ತು ಯತ್ನಾಳ್ ಅವರ ಮಾತುಗಳು ಕುರುಬ, ಅಲ್ಪಸಂಖ್ಯಾತ ಹಾಗೂ ಲಿಂಗಾಯತ ಸಮುದಾಯಗಳ ಮತಗಳು ಕೈತಪ್ಪಲು ಕಾರಣವಾದವ?

Read Full Story
03:46 PM (IST) May 05

Karnataka News Live 5 May 2026Yapaladinni minor girl kidnapping - ರಾಯಚೂರಲ್ಲಿ ಇಡೀ ರಾಜ್ಯವೇ ಬೆಚ್ಚಿಬೀಳಿಸುವ ಕೃತ್ಯ, ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಅಪಹರಣ, ತಡೆಯಲು ಬಂದವನ ಭೀಕರ ಹ*ತ್ಯೆ!

ರಾಯಚೂರು ಜಿಲ್ಲೆಯ ಯಾಪಲದಿನ್ನಿ ಗ್ರಾಮದಲ್ಲಿ, ಅಪ್ರಾಪ್ತ ಬಾಲಕಿಯನ್ನು ಕರೆದೊಯ್ಯುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಈಶಪ್ಪ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ.

Read Full Story
02:57 PM (IST) May 05

Karnataka News Live 5 May 2026Sringeri recount controversy - ನಿಮ್ಮದೇ ಸರ್ಕಾರದಲ್ಲಿ ಬಿಜೆಪಿ ಜೀವರಾಜ್ ಗೆದ್ರಲ್ಲ.. ಹಾಗಾದ್ರೆ ವೋಟ್ ಚೋರ್ ಮಾಡಿದ್ದು ಯಾರು? ಸಿಎಂಗೆ ಸಿಟಿ ರವಿ ಪ್ರಶ್ನೆ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಮರುಎಣಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮಾಡಿದ 'ವೋಟ್ ಚೋರಿ' ಆರೋಪಕ್ಕೆ ಮಾಜಿ ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ. ತಮ್ಮದೇ ಸರ್ಕಾರವಿದ್ದಾಗ ಅಕ್ರಮ ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ತನಿಖೆ ನಡೆಸುವಂತೆ ಸಿಎಂಗೆ ಸವಾಲು ಹಾಕಿದ್ದಾರೆ. 

Read Full Story
01:34 PM (IST) May 05

Karnataka News Live 5 May 2026ಕೊಪ್ಪಳ, ಬಲ್ಡೋಟಾ ಕಾರ್ಖಾನೆಗೆ ಜಾನುವಾರು ನುಗ್ಗಿಸಿ ರೈತರ ಮುತ್ತಿಗೆ, ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಹಸಿರು ಪಡೆ ಗರ್ಜನೆ!

ಕೊಪ್ಪಳ ಜಿಲ್ಲೆಯ ಬಸಾಪೂರ ಬಳಿ ಇರುವ ಬಲ್ಡೋಟಾ ಕಾರ್ಖಾನೆ ವಿರುದ್ಧ ರೈತರ ಹೋರಾಟ ತೀವ್ರಗೊಂಡಿದೆ. ಇಂದು ಬಲ್ಡೋಟಾ(BALDOTA) ವಿರುದ್ಧ ಶಾಸಕ ದರ್ಶನ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

Read Full Story
01:22 PM (IST) May 05

Karnataka News Live 5 May 2026Sirsi Haveri Road - ಸಾವಿಗೆ ದಾರಿಯಾದ ರಸ್ತೆ; ಹೇಳಿ ಹೇಳಿ ಸಾಕಾಗಿ, ತಕ್ಕ ಪಾಠ ಕಲಿಸಲು ರೆಡಿಯಾದ ಜನತೆ

Sirsi Haveri Road: ಶಿರಸಿ ಹಾವೇರಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಶುರುವಾಗಿ ಐದು ವರ್ಷಗಳ ಮೇಲಾಯ್ತು. ಹೀಗಾಗಿ ಈ ಭಾಗದ ಜನರು ಒಟ್ಟಿಗೆ ಸೇರಿ ರಸ್ತೆಗೋಸ್ಕರ ಪ್ರತಿಭಟನೆ ಮಾಡಿದ್ದಾರೆ. ಓಡಾಡಲು ಸಾಧ್ಯವಾಗದ ರೀತಿಯಲ್ಲಿ ರಸ್ತೆ ಇದ್ದರೂ ಕೂಡ ಜನಪ್ರತಿನಿಧಿಗಳು ಸುಮ್ಮನೆ ಇದ್ದಾರೆ.

Read Full Story
01:11 PM (IST) May 05

Karnataka News Live 5 May 2026ಕೊನೆಗೂ ಬೀದಿಪಾಲಾದ ಅಮೃತಧಾರೆಯ ಕೆಡಿ; ಆದ್ರೂ ಜೈದೇವ್‌ಗೆ ಅಭಿಮಾನಿಗಳಿಂದ ಬಹುಪರಾಕ್

ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್ ಪಾತ್ರವು ಬೀದಿಗೆ ಬಂದು ತಿರುಕನಂತಾಗಿದೆ. ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಅವನ ಸ್ಥಿತಿ ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇತ್ತ ಗೌತಮ್ ತನ್ನ ಕುಟುಂಬದೊಂದಿಗೆ ದಿವಾನ್ ಮನೆಗೆ ಮರಳಲು ಸಿದ್ಧತೆ ನಡೆಸುತ್ತಿದ್ದಾನೆ.
Read Full Story
12:54 PM (IST) May 05

Karnataka News Live 5 May 2026'ಅಣ್ಣಾವ್ರ ಬಗ್ಗೆ ಮಾತನಾಡಲು ನಿನಗೆಷ್ಟು ಧೈರ್ಯ?' ನಟ ಚೇತನ್ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ!

ನಟ ಚೇತನ್ ಅಹಿಂಸಾ ಅವರು ಡಾ. ರಾಜ್‌ಕುಮಾರ್ ಅವರ ಸಮಾಧಿ ಕುರಿತು ನೀಡಿದ ಹೇಳಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಖಂಡಿಸಿ, ಸಾ.ರಾ.ಗೋವಿಂದು ನೇತೃತ್ವದಲ್ಲಿ ರಾಜ್ ಅಭಿಮಾನಿಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಚೇತನ್ ಅವರನ್ನು ಗಡಿಪಾರಿಗೆ ಒತ್ತಾಯ.

Read Full Story
12:08 PM (IST) May 05

Karnataka News Live 5 May 2026ರಾಯಚೂರು - ಅಡುಗೆ ಮಾಡೋಕೆ ಬರಲ್ಲ ಅಂದಿದ್ದೇ ತಪ್ಪಾ? ತವರುಮನೆಯವರನ್ನ ಕರೆಸಿ ಗಂಡನ ಮೇಲೆ ಹಲ್ಲೆ; ಬೀಗರ ದಾಳಿಗೆ ಮಾವ ಗಂಭೀರ ಗಾಯ!

ಯಾವುದಕ್ಕೂ ಕೊರತೆ ಇಲ್ಲದ ಅದೊಂದು ಸುಂದರ ಸಂಸಾರ. ಗಂಡ ಬ್ಯಾಂಕ್ ಉದ್ಯೋಗಿ, ಹೆಂಡತಿ ಕೃಷಿ ಇಲಾಖೆಯಲ್ಲಿ ಅಧಿಕಾರಿ. ಇಬ್ಬರೂ ಸುಶಿಕ್ಷಿತರೇ.. ಆದರೆ, ಅಡುಗೆ ಮನೆಯಲ್ಲಿ ಶುರುವಾದ ಒಂದು ಸಣ್ಣ 'ಉಪ್ಪು-ಖಾರ'ದ ಜಗಳ, ಇಂದು ಭಯಂಕರ ಹೊಡೆದಾಡಿಕೊಂಡು ರಕ್ತಪಾತಕ್ಕೆ ಬಂದು ನಿಂತಿದೆ.. 

Read Full Story
11:31 AM (IST) May 05

Karnataka News Live 5 May 2026ರಾಜ್ಯದಲ್ಲಿ ಮದ್ಯದ ಹೊಳೆ - 13 ವರ್ಷದ ದಾಖಲೆ ಉಡೀಸ್‌ ಮಾಡಿದ ಏಪ್ರಿಲ್; ಎಷ್ಟು ಆದಾಯ?

ಏಪ್ರಿಲ್ ತಿಂಗಳಲ್ಲಿ ಕರ್ನಾಟಕವು 13 ವರ್ಷಗಳಲ್ಲೇ ಐತಿಹಾಸಿಕ ಮದ್ಯ ಮಾರಾಟಕ್ಕೆ ಸಾಕ್ಷಿಯಾಗಿದೆ. ಒಟ್ಟು 118.56 ಲಕ್ಷ ಬಾಕ್ಸ್‌ ಮದ್ಯ ಮಾರಾಟದಿಂದ ₹3688 ಕೋಟಿ ರಾಜಸ್ವ ಸಂಗ್ರಹವಾಗಿದ್ದು, ನೆರೆಯ ರಾಜ್ಯಗಳ ಚುನಾವಣೆಗಳು ಮತ್ತು ಉಪಚುನಾವಣೆಗಳು ಈ ಹೆಚ್ಚಳಕ್ಕೆ ಕಾರಣವೆಂದು ವಿಶ್ಲೇಷಿಸಲಾಗಿದೆ.
Read Full Story
10:13 AM (IST) May 05

Karnataka News Live 5 May 2026ಹೋರಾಟಕ್ಕೆ ಮತ್ತೊಂದು ಹೆಸರೇ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ರಾಜಕೀಯ ಪಯಣ, ರೈತರು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅವರು ಜಾರಿಗೆ ತಂದ ಯೋಜನೆಗಳು ಹಾಗೂ ಅವರ ಹೋರಾಟದ ಬದುಕಿನ ಕುರಿತು ಈ ಲೇಖನ ಬೆಳಕು ಚೆಲ್ಲುತ್ತದೆ. ಜನಸಂಘದ ಕಾಲದಿಂದ ಪಕ್ಷವನ್ನು ಕಟ್ಟಿ, ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಬಾಗಿಲು ತೆರೆದ ಅವರ ನಾಯಕತ್ವವನ್ನು ಇದರಲ್ಲಿ ವಿವರಿಸಲಾಗಿದೆ.
Read Full Story
09:49 AM (IST) May 05

Karnataka News Live 5 May 2026Karwar - ತಲೆಮರೆಸಿಕೊಂಡಿದ್ದ ಆರೋಪಿಗೆ 33 ವರ್ಷಗಳ ಬಳಿಕ 5 ವರ್ಷ ಜೈಲು ಶಿಕ್ಷೆ, ದಂಡ

1993ರಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ ಪ್ರಕರಣದಲ್ಲಿ, ತಲೆಮರೆಸಿಕೊಂಡಿದ್ದ ಆರೋಪಿಯನ್ನು 2021ರಲ್ಲಿ ಬಂಧಿಸಲಾಗಿತ್ತು. ಇದೀಗ ಕಾರವಾರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
Read Full Story
09:37 AM (IST) May 05

Karnataka News Live 5 May 2026Belagavi - ವಿಡಿಯೋ ಕಾಲ್‌ನಲ್ಲಿ ಮಗುವಿನ ಮುಖ ತೋರಿಸದ ಅತ್ತೆಗೆ ಚಾಕು ಇರಿದ ಪಾಪಿ ಅಳಿಯ

ವಿಡಿಯೋ ಕಾಲ್‌ನಲ್ಲಿ ಮಗುವಿನ ಮುಖ ತೋರಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಅಳಿಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯ ನಂತರ ಆರೋಪಿ ಅರವಿಂದ್ ಗವಳಿಯನ್ನು ಪೊಲೀಸರು ಬಂಧಿಸಿದ್ದು, ಗಾಯಾಳು ಮಹಾದೇವಿ ಕರಿಗಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read Full Story
08:47 AM (IST) May 05

Karnataka News Live 5 May 2026ಸಂಪಾದಕೀಯ - ಬದಲಾವಣೆ, ಅಭಿವೃದ್ಧಿ ಪರ ಬೀಸಿದ ಫಲಿತಾಂಶದ ಗಾಳಿ

ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವು ಜನಪರ ಆಡಳಿತಕ್ಕೆ ಸಂದ ಜಯವನ್ನು ಮತ್ತು ಜನವಿರೋಧಿ ನೀತಿಗಳಿಗೆ ಸಿಕ್ಕ ಪರಾಭವವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅಸ್ಸಾಂ ಮತ್ತು ಪುದುಚೇರಿಯಲ್ಲಿ ಆಡಳಿತಾರೂಢ ಪಕ್ಷಗಳು ಮರಳಿ ಅಧಿಕಾರ ಹಿಡಿದರೆ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ಜನತೆ ಬದಲಾವಣೆಗೆ ಮತ ನೀಡಿದ್ದಾರೆ. ಈ ಫಲಿತಾಂಶವು ರಾಜಕಾರಣಿಗಳಿಗೆ ಜನಪಯೋಗಿ ಕೆಲಸಗಳ ಮಹತ್ವವನ್ನು ಸಾರುತ್ತದೆ.
Read Full Story
08:30 AM (IST) May 05

Karnataka News Live 5 May 2026ನೋಡ ನೋಡ್ತಿದ್ದಂತೆ ಹೊತ್ತಿ ಉರಿದ ಬೆಂಗಳೂರಿನಿಂದ ಗದಗಕ್ಕೆ ಹೊರಟಿದ್ದ ಪಲ್ಲಕ್ಕಿ ಬಸ್

ಬೆಂಗಳೂರಿನಿಂದ ಗದಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಪಲ್ಲಕ್ಕಿ ಬಸ್ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಬಳಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ ಎಲ್ಲಾ 17 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Full Story
07:58 AM (IST) May 05

Karnataka News Live 5 May 2026Dharwad - ಮುಂಡಗೋಡ ಮೂಲದ ಬೌದ್ಧ ಸನ್ಯಾಸಿ ಕೊಲೆ ರಹಸ್ಯ - ಒಂದೇ ಸುಳಿವು ಬಿಚ್ಚಿಟ್ಟ ಸತ್ಯ!

ಮುಂಡಗೋಡ ಮೂಲದ ಬೌದ್ಧ ಸನ್ಯಾಸಿ ತಾಶಿ ಧೊಂದೂಪ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಕೊಲ್ಲಾಪುರ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಏ. 28ರಂದು ಗ್ರಾಮೀಣ ಠಾಣೆ ವ್ಯಾಪ್ತಿಯ ಇಲ್ಲಿಯ ಬೈಪಾಸ್‌ನ ಹಳಿಯಾಳ ರಸ್ತೆ ಸೇತುವೆ ಕೆಳಗೆ ಶವ ಪತ್ತೆಯಾಗಿತ್ತು

Read Full Story