MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Karnataka Districts
  • Belagavi: ವಿಡಿಯೋ ಕಾಲ್‌ನಲ್ಲಿ ಮಗುವಿನ ಮುಖ ತೋರಿಸದ ಅತ್ತೆಗೆ ಚಾಕು ಇರಿದ ಪಾಪಿ ಅಳಿಯ

Belagavi: ವಿಡಿಯೋ ಕಾಲ್‌ನಲ್ಲಿ ಮಗುವಿನ ಮುಖ ತೋರಿಸದ ಅತ್ತೆಗೆ ಚಾಕು ಇರಿದ ಪಾಪಿ ಅಳಿಯ

ವಿಡಿಯೋ ಕಾಲ್‌ನಲ್ಲಿ ಮಗುವಿನ ಮುಖ ತೋರಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಅಳಿಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯ ನಂತರ ಆರೋಪಿ ಅರವಿಂದ್ ಗವಳಿಯನ್ನು ಪೊಲೀಸರು ಬಂಧಿಸಿದ್ದು, ಗಾಯಾಳು ಮಹಾದೇವಿ ಕರಿಗಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

1 Min read
Author : Mahmad Rafik
Published : May 05 2026, 09:37 AM IST
Share this Photo Gallery
  • FB
  • TW
  • Linkdin
  • Whatsapp
15
ಅತ್ತೆಗೆ ಚಾಕು ಇರಿದ ಅಳಿಯ
Image Credit : Asianet News

ಅತ್ತೆಗೆ ಚಾಕು ಇರಿದ ಅಳಿಯ

ವಿಡಿಯೋ ಕಾಲ್‌ನಲ್ಲಿ ಮಗುವಿನ ಮುಖ ತೋರಿಸಿಲ್ಲ ಎಂಬ ಕಾರಣಕ್ಕೆ ಅತ್ತೆಗೆ ಅಳಿಯ ಚಾಕು ಇರಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ಚಾಕು ಇರಿದ ಅಳಿಯನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಆಸ್ಪತ್ರೆಯಲ್ಲಿ ಚಿಕಿತ್ಸೆ
Image Credit : Asianet News

ಆಸ್ಪತ್ರೆಯಲ್ಲಿ ಚಿಕಿತ್ಸೆ

ಅರವಿಂದ್ ಗವಳಿ(26) ಎಂಬಾತನೇ ಅತ್ತೆಗೆ ಚಾಕು ಇರಿದ ಅಳಿಯ. ಚಾಕು ಇರಿತಕ್ಕೊಳಗಾದ ಅತ್ತೆ ಮಹಾದೇವಿ ಕರಿಗಾರ (45) ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ತವರಿನಲ್ಲಿದ್ದ ಪತ್ನಿಗೆ ಅರವಿಂದ್ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

Related Articles

Related image1
ಆಟಿಕೆ ಯಂತ್ರ ಮುರಿದು ಬಿದ್ದು 22 ಜನರಿಗೆ ಗಾಯ; ತೋಂಟದಾರ್ಯ ಜಾತ್ರಾ ಕಮಿಟಿ ಮೇಲೆ ಕ್ರಿಮಿನಲ್ ಕೇಸ್‌
Related image2
ಹಾಸನದಲ್ಲಿ ಘೋರ ಕೃತ್ಯ: ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಖಾಸಗಿ ಭಾಗಕ್ಕೆ ಒದ್ದು ಹತ್ಯೆ
35
ಒಂದೂವರೆ ವರ್ಷದ ಹಿಂದೆ ಮದುವೆ
Image Credit : Asianet News

ಒಂದೂವರೆ ವರ್ಷದ ಹಿಂದೆ ಮದುವೆ

ಒಂದೂವರೆ ವರ್ಷದ ಹಿಂದೆ ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದ ಅರವಿಂದ್ ಎಂಬಾತನೊಂದಿಗೆ ಮಹಾದೇವಿ ಮಗಳ ಮದುವೆ ಮಾಡಿಸಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಮಗಳಿಗೆ ಹೆರಿಗೆಯಾಗಿತ್ತು. ಹೀಗಾಗಿ ಅರವಿಂದ್ ಪತ್ನಿ ತವರಿನಲ್ಲಿದ್ದರು. ಪತ್ನಿ ತವರಿನಲ್ಲಿದ್ರೂ ಅರವಿಂದ್ ಪದೇ ಪದೇ ವಿಡಿಯೋ ಕಾಲ್ ಮಾಡಿ ಹೆಂಡ್ತಿ ಮತ್ತು ಮಗುವಿನ ಮುಖ ತೋರಿಸುವಂತೆ ಕಿರುಕುಳ ನೀಡ್ತಿದ್ದನಂತೆ.

45
ಅಳಿಯನಿಗೆ ಗದರಿದ್ದ ಅತ್ತೆ
Image Credit : Asianet News

ಅಳಿಯನಿಗೆ ಗದರಿದ್ದ ಅತ್ತೆ

ಅಳಿಯನ ಪದೇ ಪದೇ ವಿಡಿಯೋ ಕಾಲ್‌ಗೆ ಬೇಸತ್ತ ಅತ್ತೆ ಮಹಾದೇವಿ, ಕೆಲಸ ಬಿಟ್ಟು ಮೊಬೈಲ್ ಹಿಡಿದುಕೊಂಡು ಕುಳಿತುಕೊಳ್ಳಲು ಆಗಲ್ಲ. ದಿನಕ್ಕೆ ಒಂದು ಬಾರಿ ಮಾತ್ರ ವಿಡಿಯೋ ಕಾಲ್ ಮಾಡುವಂತೆ ಹೇಳಿದ್ದರು. ಈ ವೇಳೆ ಕೋಪಗೊಂಡ ಅರವಿಂದ್, ಅತ್ತೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ನಮ್ಮೂರಿಗೆ ಬಂದ್ರೆ ನಿನ್ನನ್ನು ಸುಮ್ಮನೇ ಬಿಡಲ್ಲ ಎಂದು ಮಹಾದೇವಿ ಗದರಿದ್ದರು.

ಇದನ್ನೂ ಓದಿ: Dharwad: ಮುಂಡಗೋಡ ಮೂಲದ ಬೌದ್ಧ ಸನ್ಯಾಸಿ ಕೊಲೆ ರಹಸ್ಯ: ಒಂದೇ ಸುಳಿವು ಬಿಚ್ಚಿಟ್ಟ ಸತ್ಯ!

55
ವಾಟ್ಸಪ್ ಸ್ಟೇಟಸ್
Image Credit : Asianet News

ವಾಟ್ಸಪ್ ಸ್ಟೇಟಸ್

ಈ ಜಗಳದಿಂದ ಕೆರಳಿದ ಅರವಿಂದ್ ಗ್ರಾಮಕ್ಕೆ ಬಂದು ಅತ್ತೆಗೆ ಚಾಕು ಇರಿದು ಪರಾರಿಯಾಗಿ, ಇಂದು ಜೈಲು, ನಾಳೆ ಬೆಲ್ ನಿನ್ನ ಬಿಡಲ್ಲ ಎಂದು ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದನು. ಇನ್ನು ಚಾಕು ಇರಿತಕ್ಕೊಳಗಾಗಿದ್ದ ಮಹಾದೇವಿ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಗು ಮಾರಾಟ ಮಾಡಿ ಪತ್ನಿ ಕಾಣೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್; ಗಂಡನ ಅಸಲಿ ಕೃತ್ಯ ಬಯಲು

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಳಗಾವಿ
ಕ್ರೈಮ್ ನ್ಯೂಸ್

Latest Videos
Recommended Stories
Recommended image1
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಮತ್ತೆ ಜೋರು ಮಳೆ ಸುರಿಯುವ ನಿರೀಕ್ಷೆ!
Recommended image2
ಮಂಡ್ಯದಲ್ಲಿ ಬೆಲ್ಲ ಕ್ವಿಂಟಾಲ್‌ಗೆ ₹6740ಗೆ ಹರಾಜು: ಐತಿಹಾಸಿಕ ದಾಖಲೆ, ದರ ಏರಿಕೆಗೆ ಕಾರಣ ಏನು?
Recommended image3
'ಬೆಂಗಳೂರಿಗೆ 'ಗಾರ್ಡನ್ ಸಿಟಿ' ಹೆಸರು ಸುಮ್ನೆ ಬಂದಿಲ್ಲ..' ಪಾರ್ಕ್‌ನ 5% ಜಾಗ ಇತರೆ ಉದ್ದೇಶಗಳಿಗೆ ಬಳಕೆಗೆ ಸಂಸದ ಗರಂ
Related Stories
Recommended image1
ಆಟಿಕೆ ಯಂತ್ರ ಮುರಿದು ಬಿದ್ದು 22 ಜನರಿಗೆ ಗಾಯ; ತೋಂಟದಾರ್ಯ ಜಾತ್ರಾ ಕಮಿಟಿ ಮೇಲೆ ಕ್ರಿಮಿನಲ್ ಕೇಸ್‌
Recommended image2
ಹಾಸನದಲ್ಲಿ ಘೋರ ಕೃತ್ಯ: ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಖಾಸಗಿ ಭಾಗಕ್ಕೆ ಒದ್ದು ಹತ್ಯೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved