MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Koppal Baldota protest: ಕೊಪ್ಪಳ, ಬಲ್ಡೋಟಾ ಕಾರ್ಖಾನೆಗೆ ಜಾನುವಾರು ನುಗ್ಗಿಸಿ ರೈತರ ಮುತ್ತಿಗೆ!

Koppal Baldota protest: ಕೊಪ್ಪಳ, ಬಲ್ಡೋಟಾ ಕಾರ್ಖಾನೆಗೆ ಜಾನುವಾರು ನುಗ್ಗಿಸಿ ರೈತರ ಮುತ್ತಿಗೆ!

ಕೊಪ್ಪಳ ಜಿಲ್ಲೆಯ ಬಸಾಪೂರ ಬಳಿ ಇರುವ ಬಲ್ಡೋಟಾ ಕಾರ್ಖಾನೆ ವಿರುದ್ಧ ರೈತರ ಹೋರಾಟ ತೀವ್ರಗೊಂಡಿದೆ. ಇಂದು ಬಲ್ಡೋಟಾ(BALDOTA) ವಿರುದ್ಧ ಶಾಸಕ ದರ್ಶನ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

1 Min read
Author : Ravi Janekal
Published : May 05 2026, 01:34 PM IST
Share this Photo Gallery
  • FB
  • TW
  • Linkdin
  • Whatsapp
14
ಕೊಪ್ಪಳ: BALDOTA ಕಾರ್ಖಾನೆ ವಿರುದ್ಧ ಜಾನುವಾರುಗಳೊಂದಿಗೆ ರೈತರ ಬೃಹತ್ ಪ್ರತಿಭಟನೆ
Image Credit : Asianet News

ಕೊಪ್ಪಳ: BALDOTA ಕಾರ್ಖಾನೆ ವಿರುದ್ಧ ಜಾನುವಾರುಗಳೊಂದಿಗೆ ರೈತರ ಬೃಹತ್ ಪ್ರತಿಭಟನೆ

ಕೊಪ್ಪಳ ಜಿಲ್ಲೆಯ ಬಸಾಪೂರ ಬಳಿ ಇರುವ ಬಲ್ಡೋಟಾ ಕಾರ್ಖಾನೆ ವಿರುದ್ಧ ರೈತರ ಹೋರಾಟ ತೀವ್ರಗೊಂಡಿದೆ. ಇಂದು ಬಲ್ಡೋಟಾ(BALDOTA) ವಿರುದ್ಧ ತಿರುಗಿಬಿದ್ದಿರುವ ರೈತರು ಕಾರ್ಖಾನೆ ಮುಂಭಾಗ ಭಾರೀ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಕೇವಲ ರೈತರಷ್ಟೇ ಅಲ್ಲದೇ ನೂರಾರು ಕುರಿಗಳು ಮತ್ತು ಜಾನುವಾರುಗಳು ಕಾರ್ಖಾನೆಯ ಬೃಹತ್ ಗೇಟಿನ ಮುಂದೆ ಸಾಲುಗಟ್ಟಿ ನಿಂತು ಪ್ರತಿಭಟನೆಗೆ ಸಾಕ್ಷಿಯಾಗಿವೆ.

24
ಬಲ್ಡೋಟಾ ಕಾರ್ಖಾನೆ ವಿರುದ್ಧ ರೈತರ ಹೋರಾಟಕ್ಕೆ ಕಾರಣವೇನು?
Image Credit : Asianet News

ಬಲ್ಡೋಟಾ ಕಾರ್ಖಾನೆ ವಿರುದ್ಧ ರೈತರ ಹೋರಾಟಕ್ಕೆ ಕಾರಣವೇನು?

ಬಲ್ಡೋಟಾ ಕಾರ್ಖಾನೆಯ ಆವರಣದಲ್ಲಿರುವ 44 ಎಕರೆ ವಿಸ್ತೀರ್ಣದ ಕೆರೆ ಈಗ ರೈತರ ಪಾಲಿಗೆ ದಕ್ಕದಂತಾಗಿದೆ. 'ನಮ್ಮ ಕೆರೆಯನ್ನು ಜಾನುವಾರುಗಳಿಗೆ ಮುಕ್ತ ಮಾಡಿ, ರೈತರಿಗೆ ಸೇರಬೇಕಾದ ಭೂಮಿಯನ್ನು ಮರಳಿ ನೀಡಿ' ಎಂದು ಆಗ್ರಹಿಸಿ ರೈತ ಸಂಘ ಸಮರ ಸಾರಿದೆ.

ಈ ಬೃಹತ್ ಹೋರಾಟದ ಮುಂದಾಳತ್ವವನ್ನು ಮೇಲುಕೋಟೆ ಶಾಸಕ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ವಹಿಸಿಕೊಂಡಿದ್ದಾರೆ. ನೂರಾರು ಬೈಕ್‌ಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಸಿರು ಶಾಲು ಹೊದ್ದು ಆಗಮಿಸಿದ ರೈತರು, ಬಲ್ಡೋಟಾ ಕಾರ್ಖಾನೆಯ ಅಹಂಕಾರದ ವಿರುದ್ಧ ಗುಡುಗಿದ್ದಾರೆ.

Related Articles

Related image1
Now Playing
ಕೊಪ್ಪಳದಲ್ಲಿ ಬಲ್ಡೋಟ ಕಾರ್ಖಾನೆ ಕೆಲಸ ಸ್ಥಗಿತ
Related image2
ಕೊಪ್ಪಳದಲ್ಲಿ ಯೂರಿಯಾ ಗೊಬ್ಬರ ಕೊರತೆ: ತಡವಾಗಿ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ, ನಾಗಪಂಚಮಿ ಮರೆತ ರೈತರು!
34
ಜಾನುವಾರುಗಳಿಗೆ ಕುಡಿಯಲು ನೀರು ಬೇಕು..!
Image Credit : Asianet News

ಜಾನುವಾರುಗಳಿಗೆ ಕುಡಿಯಲು ನೀರು ಬೇಕು..!

ಪ್ರತಿಭಟನೆ ಕೇವಲ ಘೋಷಣೆಗಳಿಗೆ ಸೀಮಿತವಾಗಲಿಲ್ಲ. ರೈತರು ಮತ್ತು ಕುರಿಗಾರರು ತಮ್ಮ ನೂರಾರು ಕುರಿಗಳನ್ನು ಕಾರ್ಖಾನೆಯ ಒಳಕ್ಕೆ ನುಗ್ಗಿಸಲು ಯತ್ನಿಸಿದರು. 'ನಮ್ಮ ಕುರಿಗಳಿಗೆ, ಜಾನುವಾರುಗಳಿಗೆ ನೀರು ಕುಡಿಯಲು ಕೆರೆ ಬೇಕು ಎನ್ನುತ್ತಾ ಗೇಟಿನತ್ತ ನುಗ್ಗಿದ ದೃಶ್ಯಗಳು ಎಲ್ಲರ ಗಮನ ಸೆಳೆದವು.

44
ರೈತರ ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಹರಸಾಹಸ
Image Credit : Asianet News

ರೈತರ ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಹರಸಾಹಸ

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರ್ಖಾನೆಯ ಮುಂಭಾಗದಲ್ಲಿಯೇ ರೈತರನ್ನು ತಡೆದರು. ಕುರಿಗಳು ಒಳ ಹೋಗದಂತೆ ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇದರಿಂದ ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ-ನೂಕಾಟ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಸದ್ಯ ಬಲ್ಡೋಟಾ ಕಾರ್ಖಾನೆ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ತಮ್ಮ ಹಕ್ಕಿನ ಕೆರೆಗಾಗಿ ಜಾನುವಾರುಗಳ ಸಮೇತ ಧರಣಿ ಕುಳಿತಿರುವ ರೈತರು, ನ್ಯಾಯ ಸಿಗುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಕೊಪ್ಪಳ
ರೈತರು
ಪ್ರತಿಭಟನೆ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
Sirsi Haveri Road: ಸಾವಿಗೆ ದಾರಿಯಾದ ರಸ್ತೆ; ಹೇಳಿ ಹೇಳಿ ಸಾಕಾಗಿ, ತಕ್ಕ ಪಾಠ ಕಲಿಸಲು ರೆಡಿಯಾದ ಜನತೆ
Recommended image2
ಬಗಲ್‌ ಮೇ ಹೈ ದುಷ್ಮನ್! ಸಚಿವ ಜಮೀರ್ ಅಹಮದ್ ಮನೆಯಲ್ಲಿ 1.2 ಕೆಜಿ ಚಿನ್ನ ಕಳ್ಳತನ ಮಾಡಿದ ಸಂಬಂಧಿಕರು!
Recommended image3
ಶೃಂಗೇರಿ ಮರು ಮತ ಎಣಿಕೆ: 'ಬಿಜೆಪಿಯಿಂದ ವೋಟ್ ಚೋರಿ, ಪ್ರಜಾಪ್ರಭುತ್ವಕ್ಕೆ ದ್ರೋಹ' - ಸಿಎಂ ಸಿದ್ದರಾಮಯ್ಯ ಆರೋಪ
Related Stories
Recommended image1
Now Playing
ಕೊಪ್ಪಳದಲ್ಲಿ ಬಲ್ಡೋಟ ಕಾರ್ಖಾನೆ ಕೆಲಸ ಸ್ಥಗಿತ
Recommended image2
ಕೊಪ್ಪಳದಲ್ಲಿ ಯೂರಿಯಾ ಗೊಬ್ಬರ ಕೊರತೆ: ತಡವಾಗಿ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ, ನಾಗಪಂಚಮಿ ಮರೆತ ರೈತರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved