MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ರಾಜ್ಯದಲ್ಲಿ ಮದ್ಯದ ಹೊಳೆ: 13 ವರ್ಷದ ದಾಖಲೆ ಉಡೀಸ್‌ ಮಾಡಿದ ಏಪ್ರಿಲ್; ಎಷ್ಟು ಆದಾಯ?

ರಾಜ್ಯದಲ್ಲಿ ಮದ್ಯದ ಹೊಳೆ: 13 ವರ್ಷದ ದಾಖಲೆ ಉಡೀಸ್‌ ಮಾಡಿದ ಏಪ್ರಿಲ್; ಎಷ್ಟು ಆದಾಯ?

ಏಪ್ರಿಲ್ ತಿಂಗಳಲ್ಲಿ ಕರ್ನಾಟಕವು 13 ವರ್ಷಗಳಲ್ಲೇ ಐತಿಹಾಸಿಕ ಮದ್ಯ ಮಾರಾಟಕ್ಕೆ ಸಾಕ್ಷಿಯಾಗಿದೆ. ಒಟ್ಟು 118.56 ಲಕ್ಷ ಬಾಕ್ಸ್‌ ಮದ್ಯ ಮಾರಾಟದಿಂದ ₹3688 ಕೋಟಿ ರಾಜಸ್ವ ಸಂಗ್ರಹವಾಗಿದ್ದು, ನೆರೆಯ ರಾಜ್ಯಗಳ ಚುನಾವಣೆಗಳು ಮತ್ತು ಉಪಚುನಾವಣೆಗಳು ಈ ಹೆಚ್ಚಳಕ್ಕೆ ಕಾರಣವೆಂದು ವಿಶ್ಲೇಷಿಸಲಾಗಿದೆ.

1 Min read
Author : Kannadaprabha News
Published : May 05 2026, 11:31 AM IST
Share this Photo Gallery
  • FB
  • TW
  • Linkdin
  • Whatsapp
15
ವರದಿ: ಸಿದ್ದು ಚಿಕ್ಕಬಳ್ಳೇಕೆರೆ
Image Credit : Gemini AI

ವರದಿ: ಸಿದ್ದು ಚಿಕ್ಕಬಳ್ಳೇಕೆರೆ

ಏಪ್ರಿಲ್‌ ತಿಂಗಳು ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆಯ ಕಳೆದ 13 ವರ್ಷದ ಇತಿಹಾಸದಲ್ಲೇ ತಿಂಗಳೊಂದರಲ್ಲಿ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟ ಆಗಿರುವುದು ಐತಿಹಾಸಿಕ ದಾಖಲೆಯಾಗಿದೆ.

25
ವಿಸ್ಕಿ, ಬ್ರಾಂಡಿ, ರಮ್‌, ಜಿನ್‌
Image Credit : Asianet News

ವಿಸ್ಕಿ, ಬ್ರಾಂಡಿ, ರಮ್‌, ಜಿನ್‌

ವಿಸ್ಕಿ, ಬ್ರಾಂಡಿ, ರಮ್‌, ಜಿನ್‌ ಸೇರಿದಂತೆ 68.17 ಲಕ್ಷ ಬಾಕ್ಸ್‌ (ಒಂದು ಬಾಕ್ಸ್‌ಗೆ 8.64 ಲೀಟರ್‌) ದಾಖಲೆಯ ಐಎಂಎಲ್‌ ಮದ್ಯ ಮಾರಾಟವಾಗಿದೆ. ಮತ್ತೊಂದೆಡೆ, 50.39 ಲಕ್ಷ ಬಾಕ್ಸ್‌ (ಒಂದು ಬಾಕ್ಸ್‌ಗೆ 7.80 ಲೀಟರ್‌) ಬಿಯರ್‌ ಮಾರಾಟವಾಗಿದೆ. ಒಟ್ಟಾರೆ 118.56 ಲಕ್ಷ ಬಾಕ್ಸ್‌ ಮದ್ಯ ಮಾರಾಟವಾಗಿದ್ದು 2013ರಿಂದ ಈಚೆಗೆ ಕಳೆದ 13 ವರ್ಷದಲ್ಲಿ ಯಾವ ತಿಂಗಳಿನಲ್ಲೂ ಈ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿಲ್ಲ ಎಂಬುದು ವಿಶೇಷವಾಗಿದೆ.

Related Articles

Related image1
ಯಾವ ನಗರಕ್ಕಿದೆ ವಿಶ್ವದ ವಿಸ್ಕಿ ರಾಜಧಾನಿ ಬಿರುದು? ನಿಮ್ಮ ಊಹೆಗೂ ನಿಲುಕದ ಸಿಟಿ
Related image2
ಒಟಿ, ಒರಿಜಿನಲ್‌ ಚಾಯ್ಸ್‌, ಹಯ್ವಾರ್ಡ್ಸ್, ರಾಜಾ ವಿಸ್ಕಿ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದ ರಾಜ್ಯ ಸರ್ಕಾರ
35
ಮದ್ಯ ಮಾರಾಟ
Image Credit : Gemini AI

ಮದ್ಯ ಮಾರಾಟ

2025 ಏಪ್ರಿಲ್‌ನಲ್ಲಿ 57.44 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ ಮಾರಾಟವಾಗಿದ್ದು ಪ್ರಸಕ್ತ ಸಾಲಿನ ಏಪ್ರಿಲ್‌ನಲ್ಲಿ 68.17 ಲಕ್ಷ ಬಾಕ್ಸ್‌ ಮಾರಾಟವಾಗಿ ಶೇ.18.68 ರಷ್ಟು ಬೆಳವಣಿಗೆಯಾಗಿದೆ. ಇನ್ನು ಬಿಯರ್‌ ವಿಷಯಕ್ಕೆ ಬರುವುದಾದರೆ, 2025 ಏಪ್ರಿಲ್‌ನಲ್ಲಿ 41.60 ಲಕ್ಷ ಬಾಕ್ಸ್‌ ಮಾರಾಟವಾಗಿತ್ತು. ಪ್ರಸಕ್ತ ಏಪ್ರಿಲ್‌ನಲ್ಲಿ 50.39 ಲಕ್ಷ ಬಾಕ್ಸ್‌ ಮಾರಾಟವಾಗಿ ಶೇ.21.13 ಬೆಳವಣಿಗೆಯಾಗಿದೆ.

45
₹3688 ಕೋಟಿ ರಾಜಸ್ವ ಸಂಗ್ರಹ
Image Credit : Getty

₹3688 ಕೋಟಿ ರಾಜಸ್ವ ಸಂಗ್ರಹ

2023 ಜುಲೈನಲ್ಲಿ 66.22 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ ಮಾರಾಟವಾಗಿದ್ದೇ ಕಳೆದ 13 ವರ್ಷಗಳಲ್ಲಿನ ದಾಖಲೆಯಾಗಿತ್ತು. ಈ ದಾಖಲೆಯನ್ನು ಏಪ್ರಿಲ್‌ನ ಮದ್ಯ ಮಾರಾಟ ಹಿಂದಿಕ್ಕಿದೆ. 2025 ಏಪ್ರಿಲ್‌ನಲ್ಲಿ ಮದ್ಯ ಮರಾಟದಿಂದ ಒಟ್ಟಾರೆ ₹2904 ಕೋಟಿ ರಾಜಸ್ವ ಸಂಗ್ರಹವಾಗಿತ್ತು. ಪ್ರಸಕ್ತ ಏಪ್ರಿಲ್‌ನಲ್ಲಿ ₹3688 ಕೋಟಿ ರಾಜಸ್ವ ಸಂಗ್ರಹವಾಗಿ ಶೇ.27 ರಷ್ಟು ಬೆಳವಣಿಗೆಯಾಗಿದೆ.

55
ಎಲೆಕ್ಷನ್‌ ಎಫೆಕ್ಟ್‌
Image Credit : Getty

ಎಲೆಕ್ಷನ್‌ ಎಫೆಕ್ಟ್‌

ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೇರಳ ಮತ್ತು ತಮಿಳುನಾಡು ವಿಧಾನ ಸಭೆಗೆ ಏಪ್ರಿಲ್‌ನಲ್ಲಿ ನಡೆದ ಚುವಾವಣೆಯು ರಾಜ್ಯದಲ್ಲಿ ಮದ್ಯ ಮಾರಾಟ ಹೆಚ್ಚಳವಾಗಲು ‘ಕಾಣಿಕೆ’ ನೀಡಿರಬಹುದು. ಮತದಾನಕ್ಕೂ ಮುನ್ನ ಈ ರಾಜ್ಯಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಆದ್ದರಿಂದ ಕೇರಳ, ತಮಿಳುನಾಡಿಗೆ ಹೊಂದಿಕೊಂಡ ರಾಜ್ಯದ ಗಡಿ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಅಷ್ಟೇ ಅಲ್ಲ, ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯೂ ಮದ್ಯ ಮಾರಾಟ ಹೆಚ್ಚಳವಾಗಲು ಕಾರಣವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಮದ್ಯ
ವ್ಯವಹಾರ

Latest Videos
Recommended Stories
Recommended image1
ತಮಿಳುನಾಡಿನ ಕಿಂಗ್‌ ಆಗ್ತಿರೋ ವಿಜಯ್‌ ಚುನಾವಣೆಯಲ್ಲಿ ಖರ್ಚು ಮಾಡಿದ್ದೆಷ್ಟು?
Recommended image2
ತಮಿಳುನಾಡು ರಾಜಕೀಯದಲ್ಲಿ ಐತಿಹಾಸಿಕ ಬದಲಾವಣೆ, ಸನ್ ಟಿವಿ ಷೇರುಗಳು ದಿಢೀರ್ ಕುಸಿತ, ಕಾರಣವಾಗಿದ್ದು ಈ ಪಕ್ಷ!
Recommended image3
ರಾಜ್ಯದ ಗ್ರಾಮೀಣ ಮಹಿಳೆಯರು ತಯಾರಿಸಿದ ತೆಂಗಿನ ನಾರಿನ ಉತ್ಪನ್ನಗಳು ಜೈಪುರಕ್ಕೆ ರವಾನೆ
Related Stories
Recommended image1
ಯಾವ ನಗರಕ್ಕಿದೆ ವಿಶ್ವದ ವಿಸ್ಕಿ ರಾಜಧಾನಿ ಬಿರುದು? ನಿಮ್ಮ ಊಹೆಗೂ ನಿಲುಕದ ಸಿಟಿ
Recommended image2
ಒಟಿ, ಒರಿಜಿನಲ್‌ ಚಾಯ್ಸ್‌, ಹಯ್ವಾರ್ಡ್ಸ್, ರಾಜಾ ವಿಸ್ಕಿ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದ ರಾಜ್ಯ ಸರ್ಕಾರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved