- Home
- Karnataka Districts
- ರಾಯಚೂರು: ಅಡುಗೆ ಮಾಡೋಕೆ ಬರಲ್ಲ ಅಂದಿದ್ದೇ ತಪ್ಪಾ? ತವರುಮನೆಯವರನ್ನ ಕರೆಸಿ ಗಂಡನ ಮೇಲೆ ಹಲ್ಲೆ; ಬೀಗರ ದಾಳಿಗೆ ಮಾವ ಗಂಭೀರ ಗಾಯ!
ರಾಯಚೂರು: ಅಡುಗೆ ಮಾಡೋಕೆ ಬರಲ್ಲ ಅಂದಿದ್ದೇ ತಪ್ಪಾ? ತವರುಮನೆಯವರನ್ನ ಕರೆಸಿ ಗಂಡನ ಮೇಲೆ ಹಲ್ಲೆ; ಬೀಗರ ದಾಳಿಗೆ ಮಾವ ಗಂಭೀರ ಗಾಯ!
ಯಾವುದಕ್ಕೂ ಕೊರತೆ ಇಲ್ಲದ ಅದೊಂದು ಸುಂದರ ಸಂಸಾರ. ಗಂಡ ಬ್ಯಾಂಕ್ ಉದ್ಯೋಗಿ, ಹೆಂಡತಿ ಕೃಷಿ ಇಲಾಖೆಯಲ್ಲಿ ಅಧಿಕಾರಿ. ಇಬ್ಬರೂ ಸುಶಿಕ್ಷಿತರೇ.. ಆದರೆ, ಅಡುಗೆ ಮನೆಯಲ್ಲಿ ಶುರುವಾದ ಒಂದು ಸಣ್ಣ 'ಉಪ್ಪು-ಖಾರ'ದ ಜಗಳ, ಇಂದು ಭಯಂಕರ ಹೊಡೆದಾಡಿಕೊಂಡು ರಕ್ತಪಾತಕ್ಕೆ ಬಂದು ನಿಂತಿದೆ..

ರಾಯಚೂರು: ಬೀಗರಿಂದ ಬೀಗರ ಮೇಲೆಯೇ ಮಾರಣಾಂತಿಕ ಹಲ್ಲೆ!
ಯಾವುದಕ್ಕೂ ಕೊರತೆ ಇಲ್ಲದ ಅದೊಂದು ಸುಂದರ ಸಂಸಾರ. ಗಂಡ ಬ್ಯಾಂಕ್ ಉದ್ಯೋಗಿ, ಹೆಂಡತಿ ಕೃಷಿ ಇಲಾಖೆಯಲ್ಲಿ ಅಧಿಕಾರಿ. ಇಬ್ಬರೂ ಸುಶಿಕ್ಷಿತರೇ.. ಆದರೆ, ಅಡುಗೆ ಮನೆಯಲ್ಲಿ ಶುರುವಾದ ಒಂದು ಸಣ್ಣ 'ಉಪ್ಪು-ಖಾರ'ದ ಜಗಳ, ಇಂದು ಭಯಂಕರ ಹೊಡೆದಾಡಿಕೊಂಡು ರಕ್ತಪಾತಕ್ಕೆ ಬಂದು ನಿಂತಿದೆ.. ರಾಯಚೂರಿನ ಹೊಸೂರು ರಸ್ತೆಯಲ್ಲಿ ನಡೆದ ಈ ಘಟನೆ ಈಗ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
ರಾಯಚೂರು: ಗಂಡ-ಹೆಂಡತಿ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ
ಬ್ಯಾಂಕ್ ಉದ್ಯೋಗಿ ಶಿವರಾಜ್ ಹಾಗೂ ಕೃಷಿ ಇಲಾಖೆಯ ಶೋಭಾ ದಂಪತಿಗಳ ನಡುವೆ ಕ್ಷಲ್ಲಕ ಕಾರಣಕ್ಕೆ ಆಗಾಗ ಮನಸ್ತಾಪವಾಗುತ್ತಿತ್ತು. 'ನೀನು ಅಡುಗೆ ಸರಿಯಾಗಿ ಮಾಡುವುದಿಲ್ಲ' ಎಂದು ಪತಿ ಶಿವರಾಜ್ ಕಿರಿಕ್ ತೆಗೆದಿದ್ದೇ ಈ ದೊಡ್ಡ ರಂಪಾಟಕ್ಕೆ ಕಾರಣವಾಗಿದೆ.. ಮಾತಿಗೆ ಮಾತು ಬೆಳೆದು, ಇಡೀ ಮನೆ ರಣರಂಗವಾಗಿ ಮಾರ್ಪಟ್ಟಿದೆ.
ಪತಿಯ ಮಾತಿನಿಂದ ಕೆರಳಿದ ಪತ್ನಿ ಶೋಭಾ, ತಕ್ಷಣವೇ ತನ್ನ ತವರು ಮನೆಯವರಿಗೆ ಫೋನ್ ಮಾಡಿದ್ದಾರೆ. ಮಗಳ ಕರೆಯನ್ನು ಕೇಳಿ ಆವೇಶದಿಂದ ಬಂದ ಶೋಭಾ ಮನೆಯವರು, ಶಿವರಾಜ್ ಅವರ ಮನೆಗೆ ನುಗ್ಗಿ ರೇಗಾಡಿದ್ದಾರೆ. ನೋಡನೋಡುತ್ತಿದ್ದಂತೆಯೇ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಮಾರಾಮಾರಿಯೇ ನಡೆದುಹೋಗಿದೆ.

ರಾಯಚೂರು: ಉಪ್ಪು-ಖಾರದ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿಸಿತು!
ಬಂದವರು ಸುಮ್ಮನೆ ಇರಲಿಲ್ಲ. ಪತಿ ಶಿವರಾಜ್ ಮಾತ್ರವಲ್ಲದೆ, ಅವರ ವಯಸ್ಸಾದ ತಂದೆ ದೇವಿಂದ್ರಪ್ಪ, ತಾಯಿ ಲಕ್ಷ್ಮಿ ಮತ್ತು ಸಹೋದರ ವೆಂಕಟೇಶ್ ಮೇಲೆಯೂ ಭೀಕರವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೀಗರಿಂದಲೇ ಬೀಗರ ಮೇಲೆ ನಡೆದ ಈ ದಾಳಿಯಿಂದ ಇಡೀ ಕುಟುಂಬ ಕಂಗಾಲಾಗಿದೆ.
ಈ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡ ಶಿವರಾಜ್ ತಂದೆ ದೇವಿಂದ್ರಪ್ಪ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಾಯಚೂರಿನಿಂದ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪತ್ನಿ ಶೋಭಾ ಸೇರಿದಂತೆ ಐವರ ವಿರುದ್ಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶೋಭಾ, ರಂಜಿತ್ ಕುಮಾರ್, ತಾಯಣ್ಣಗೌಡ, ಅಕ್ಷಯ್ ಕುಮಾರ್ ಹಾಗೂ ಈರಣ್ಣಗೌಡ ಎಂಬುವವರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಒಂದು ಹೊತ್ತಿನ ಅಡುಗೆಯ ಜಗಳ, ಇಂದು ನ್ಯಾಯಾಲಯ, ಪೊಲೀಸ್ ಮೆಟ್ಟಿಲೇರುವಂತೆ ಮಾಡಿದೆ ಎಂಥಾ ಕರ್ಮ!