09:12 PM (IST) Jun 05

Karnataka News Live 5 June 2026ತುಮಕೂರಿನಲ್ಲಿ ಹೃದಯವಿದ್ರಾವಕ ಘಟನೆ - ಆಟವಾಡುತ್ತಿದ್ದ 9 ವರ್ಷದ ವಿದ್ಯಾರ್ಥಿ ನೀರಿನ ಹೊಂಡಕ್ಕೆ ಬಿದ್ದು ಸಾವು!

ಆಟವಾಡುತ್ತಿದ್ದ ವೇಳೆ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 9 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದುರ್ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಸೈಯದ್ ಸಾಬ್ ಪಾಳ್ಯದಲ್ಲಿ ನಡೆದಿದೆ.

Read Full Story
08:54 PM (IST) Jun 05

Karnataka News Live 5 June 2026ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂದೆ ನಿಜಕ್ಕೂ ಏನಾಗಿದೆ? ಶಾಸಕ ಪೊನ್ನಣ್ಣ ಹೇಳಿದ್ದೇನು?

ಸರ್ಕಾರ ಬದಲಾವಣೆ ಆದಾಗ ಸಹಜವಾಗಿ ಇವೆಲ್ಲಾ ನಡೆಯುತ್ತವೆ, ಅಂತಹ ಸಂದರ್ಭದಲ್ಲಿ ಮನಸ್ತಾಪಗಳು ಇದ್ದೇ ಇರುತ್ತವೆ ಎಂದು ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ನೀಡಿರುವ ವಿಚಾರಕ್ಕೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಪ್ರತಿಕ್ರಿಯಿಸಿದ್ದಾರೆ.

Read Full Story
08:25 PM (IST) Jun 05

Karnataka News Live 5 June 2026Kodagu - 9 ವರ್ಷಗಳ ಬಳಿಕ ಸಿಕ್ಕ ಸ್ವಂತ ಸೂರು - 43 ಆದಿವಾಸಿ ಕುಟುಂಬಗಳ ಕಣ್ಣಲ್ಲಿ ಸಂತಸದ ಕಣ್ಣೀರು!

ಅವರೆಲ್ಲ ಸ್ವಂತ ಸೂರಿಲ್ಲದೆ ಲೈನ್ ಮನೆಗಳಲ್ಲಿ ಬದುಕು ದೂಡುತ್ತಿದ್ದವರು. 9 ವರ್ಷಗಳ ಹಿಂದೆ ಬಂದು ಇಂಚಿಂಚು ಜಾಗಕ್ಕೆ ಹೋರಾಟ ನಡೆಸಿದ್ದರು. ಸ್ವಂತ ಸೂರಿನ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ.

Read Full Story
07:53 PM (IST) Jun 05

Karnataka News Live 5 June 2026ಲವ್ ಮಾಕ್ಟೇಲ್-3 ಸೂಪರ್ ಸಕ್ಸಸ್ ಬೆನ್ನಲ್ಲೇ ಹೊಸ ಕಾರು ಖರೀದಿಸಿದ ಕೃಷ್ಣ-ಮಿಲನಾ - ‘XEV 9e ಸಿನೆಲಕ್ಸ್’ ಸೆಲೆಕ್ಟ್‌ ಮಾಡಲು ಇದೇ ಕಾರಣ

ಲವ್‌ ಮಾಕ್ಟೇಲ್‌-3 ಯಶಸ್ಸಿನ ನಂತರ, ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿ ಮಹೀಂದ್ರಾದ ವಿಶೇಷ ಆವೃತ್ತಿಯ XEV 9e Cineluxe ಕಾರನ್ನು ಖರೀದಿಸಿದ್ದಾರೆ. ಈ ಕಾರು 500+ ಕಿ.ಮೀ ರೇಂಜ್, ಹೋಮ್ ಥಿಯೇಟರ್ ಅನುಭವ ನೀಡುವ ಡಿಸ್ಪ್ಲೇ ಇದರಲ್ಲಿದೆ.

Read Full Story
07:49 PM (IST) Jun 05

Karnataka News Live 5 June 2026Bathroom Doors - ಬಾತ್‌ರೂಂ ಬಾಗಿಲಿಗೆ ಈ 4 ಡಿಸೈನ್‌ ಬೆಸ್ಟ್ - ನೀರು, ತೇವಾಂಶಕ್ಕೆ ನೋ ಟೆನ್ಷನ್!

ಬಾತ್‌ರೂಂಗೆ ಯಾವ ಬಾಗಿಲು ಹಾಕಿಸೋದು ಬೆಸ್ಟ್? ನೀರು ಬಿದ್ದು ಹಾಳಾಗದ ಡೋರ್ ಯಾವುದು? WPC ಮತ್ತು uPVC ಬಾಗಿಲುಗಳು ತೇವಾಂಶಕ್ಕೆ ಹಾಳಾಗುವುದಿಲ್ಲವೇ? ಮರದ ಬಾಗಿಲುಗಳನ್ನು ಯಾಕೆ ಬಾತ್‌ರೂಂಗೆ ಬಳಸಬಾರದು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Read Full Story
07:27 PM (IST) Jun 05

Karnataka News Live 5 June 2026ಡಿ.ಕೆ.ಶಿವಕುಮಾರ್ ಸರ್ಕಾರದ ಮುಂದೆ ದೊಡ್ಡ ಸವಾಲುಗಳಿವೆ - ಸಿ.ಟಿ.ರವಿ ಹೇಳಿದ್ದೇನು?

ಕಾಂಗ್ರೆಸ್‌ ಸರ್ಕಾರದಿಂದ ಯಾವುದೇ ಒಳ್ಳೆಯ ಕೆಲಸ ಆಗಿಲ್ಲ. ಮುಂದಿನ ಎರಡು ವರ್ಷವಾದರೂ ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡಲಿ ಎಂಬ ನಿರೀಕ್ಷೆ ಹೊಂದಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

Read Full Story
07:23 PM (IST) Jun 05

Karnataka News Live 5 June 2026ಬೆಂಗಳೂರು - ಹಲಸಿನ ಹಣ್ಣಿನ ಆಸೆಗಾಗಿ ಮರ ಹತ್ತಿದ ಪ್ರಶಸ್ತಿ ವಿಜೇತ ಬಳ್ಳಾರಿ ಮೂಲದ ಜಿಕೆವಿಕೆ ಕೃಷಿ ವಿದ್ಯಾರ್ಥಿ ಸಾವು!

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ಆವರಣದಲ್ಲಿ ಹಲಸಿನ ಹಣ್ಣು ಕೀಳಲು ಮರ ಹತ್ತಿದ್ದ ಎಂ.ಎಸ್ಸಿ ವಿದ್ಯಾರ್ಥಿ ಆಕಾಶ್, ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ. ರಾಷ್ಟ್ರಪತಿ ಪ್ರಶಸ್ತಿ ವಿಜೇತ, ಪ್ರತಿಭಾವಂತನಾಗಿದ್ದ ಈ ಯುವಕನ ಅಕಾಲಿಕ ಮರಣವು ಎಲ್ಲೆಡೆ ಶೋಕವನ್ನುಂಟುಮಾಡಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story
07:07 PM (IST) Jun 05

Karnataka News Live 5 June 2026ಕಾಲದ ಚಕ್ರದಲ್ಲಿ ಮೌನವಾದ ಸಿಗಂದೂರು ಲಾಂಚ್‌ - ಸೇತುವೆ ಉದ್ಘಾಟನೆ ಬಳಿಕ ಇದನ್ನ ಕೇಳುವವರೇ ಇಲ್ಲ

ದಶಕಗಳ ಕಾಲ ಶರಾವತಿ ಹಿನ್ನೀರಿನಲ್ಲಿ ಸಿಗಂದೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಲಾಂಚ್, ಸೇತುವೆ ನಿರ್ಮಾಣದ ನಂತರ ತನ್ನ ಸೇವೆ ನಿಲ್ಲಿಸಿದೆ. ಜನರ ಬದುಕಿನ ಭಾಗವಾಗಿದ್ದ ಈ ಲಾಂಚ್, ಈಗ ನದಿಯ ತೀರದಲ್ಲಿ ನಿಂತು ಕೇವಲ ನೆನಪಾಗಿ ಉಳಿದಿದೆ.
Read Full Story
06:57 PM (IST) Jun 05

Karnataka News Live 5 June 2026ಜಾಗತಿಕ ಹೂಡಿಕೆದಾರರ ಹಾಟ್‌ಸ್ಪಾಟ್ ಕರ್ನಾಟಕಕ್ಕೆ 2ನೇ ಸ್ಥಾನ, ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ.18 ಏರಿಕೆ!

ಕೇಂದ್ರ ಸರ್ಕಾರದ ವರದಿ ಪ್ರಕಾರ, ಭಾರತದ ವಿದೇಶಿ ನೇರ ಬಂಡವಾಳ ಹೂಡಿಕೆಯು (FDI) ಶೇ.18ರಷ್ಟು ಏರಿಕೆ ಕಂಡಿದೆ. ಈ ಪೈಕಿ, ಕರ್ನಾಟಕವು ₹1.22 ಲಕ್ಷ ಕೋಟಿ ಎಫ್‌ಡಿಐ ಸ್ವೀಕರಿಸಿ ದೇಶದಲ್ಲೇ ಎರಡನೇ ಅತಿದೊಡ್ಡ ಹೂಡಿಕೆದಾರ ರಾಜ್ಯವಾಗಿ ಹೊರಹೊಮ್ಮಿದೆ.
Read Full Story
06:24 PM (IST) Jun 05

Karnataka News Live 5 June 2026ಡಿಕೆಶಿ ಕೇವಲ ಕೀಲುಗೊಂಬೆ, ಹೈಕಮಾಂಡ್ ಹೇಳಿದಂತೆ ನಡೆಯುತ್ತಿದ್ದಾರೆ - ಆರ್.ಅಶೋಕ್ ವ್ಯಂಗ್ಯ

ಹೈಕಮಾಂಡ್ ಬೆಂಬಲಿಗರು ಮಾತ್ರ ಆಗಿದ್ದು ಡಿಕೆಶಿ ಕೇವಲ ಕೀಲುಗೊಂಬೆಯಾಗಿದ್ದು ಸಿದ್ಧರಾಮಯ್ಯ ಮತ್ತು ಹೈಕಮಾಂಡ್ ಹೇಳಿದಂತೆ ನಡೆಯಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.

Read Full Story
05:31 PM (IST) Jun 05

Karnataka News Live 5 June 2026ಸಿಮ್ ಸ್ವಾಪ್ ವಂಚನೆ, ಬಿಎಸ್‌ಎನ್‌ಎಲ್‌ಗೆ ₹55.5 ಲಕ್ಷ ದಂಡ - ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು!

ನಕಲಿ ಸಿಮ್ ನೀಡಿ 'ಸಿಮ್ ಸ್ವಾಪ್' ವಂಚನೆಗೆ ದಾರಿ ಮಾಡಿಕೊಟ್ಟರೆ, ಅದರಿಂದ ಗ್ರಾಹಕರಿಗೆ ಉಂಟಾಗುವ ಹಣಕಾಸಿನ ನಷ್ಟಕ್ಕೆ ಟೆಲಿಕಾಂ ಕಂಪನಿಗಳೇ ಹೊಣೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ನಿರ್ಲಕ್ಷ್ಯ ವಹಿಸಿದ ಬಿಎಸ್‌ಎನ್‌ಎಲ್‌ಗೆ ಸಹಕಾರಿ ಬ್ಯಾಂಕ್‌ಗೆ ₹55.5 ಲಕ್ಷ ದಂಡ ಪಾವತಿಸಲು ಆದೇಶಿಸಿದೆ.

Read Full Story
04:38 PM (IST) Jun 05

Karnataka News Live 5 June 2026Peddi - ರಾಮ್‌ ಚರಣ್‌-ಶಿವಣ್ಣ ಶ್ರಮ ಪಾಪ ನೀರಲ್ಲಿ ಹೋಮ - ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ಗೆ ಮತ್ತೊಂದು ಮೊಳೆ!

ಪೆದ್ದಿ ಬಿಡುಗಡೆಗೆ ಮುನ್ನ ನಟ ರಾಮ್‌ ಚರಣ್‌ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ ಈ ಸಿನಿಮಾ ಕುರಿತು ಕೊಂಚ ಅತಿಯೇ ಅನ್ನಿಸುವಷ್ಟು ಬಿಲ್ಡಪ್ ಕೊಟ್ಟಿದ್ದರು. ಸಿನಿಮಾ ರಂಗದಲ್ಲೇ ಇದೊಂದು ಹೊಸ ಇತಿಹಾಸ ಸೃಷ್ಟಿಸಲಿದೆ.

Read Full Story
04:30 PM (IST) Jun 05

Karnataka News Live 5 June 2026ಕುದುರೆಮುಖ ವನ್ಯಜೀವಿ ವಿಭಾಗದ ಕಾಡಿನಲ್ಲಿ ಗುಡ್ಡ ಕುಸಿತ, 2019ರ ದುರ್ಘಟನೆ ಮತ್ತೆ ನೆನಪು

ಬೆಳ್ತಂಗಡಿಯ ಬಂಡಾಜೆ ಕಾಡಿನಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದ್ದು, ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಜೂನ್ 1 ರಿಂದ ಚಾರಣಕ್ಕೆ ಅಧಿಕೃತವಾಗಿ ಅವಕಾಶ ನೀಡಲಾಗಿದ್ದು, ಸುರಕ್ಷತಾ ಕ್ರಮಗಳೊಂದಿಗೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯಗೊಳಿಸಲಾಗಿದೆ.
Read Full Story
04:29 PM (IST) Jun 05

Karnataka News Live 5 June 2026ಕೊಡಗಿನಲ್ಲಿ ಭೀಕರ ದುರಂತ - ಕಾಡಾನೆ ದಾಳಿಗೆ ಕೇಂದ್ರ ಸರ್ಕಾರದ RAW ಐಜಿ ಸುನಿಲ್ ಅಚ್ಚಯ್ಯ ಪತ್ನಿ ದಾರುಣ ಸಾವು

ಕೊಡಗು ಜಿಲ್ಲೆಯ ಪೊನ್ನಂಪೇಟೆ ಬಳಿಯ ತೋಟವೊಂದರಲ್ಲಿ ನಡೆದ ಕಾಡಾನೆ ದಾಳಿಯಲ್ಲಿ ಕೇಂದ್ರ ಸರ್ಕಾರದ RAW ಐಜಿ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಅಚ್ಚಯ್ಯ ಮೃತಪಟ್ಟಿದ್ದಾರೆ. ಸಂಬಂಧಿಕರ ಮನೆಯ ಕಾರ್ಯಕ್ರಮ ಮುಗಿಸಿ ತೋಟಕ್ಕೆ ಭೇಟಿ ನೀಡಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
Read Full Story
04:21 PM (IST) Jun 05

Karnataka News Live 5 June 2026Exclusive Interview - ನಮ್ಮನೆ ಮಗುವಿಗೆ ನಿಮ್ಮೆಲ್ಲರ ಪ್ರೀತಿ ಸಿಗಲಿ - ಪ್ರಿಯಾ ಸುದೀಪ್

ಪಾತ್ರ ಚಿತ್ರಣ. ಸಾಮಾನ್ಯವಾಗಿ ಒಬ್ಬ ನಾಯಕ ನಟನನ್ನು ಪರಿಚಯಿಸುವಾಗ ದೊಡ್ಡ ಪ್ರಮಾಣದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ. ಪಾತ್ರದ ಶೇಡ್ಸ್‌ ಅದ್ಭುತವಾಗಿತ್ತು ಎಂದು ಪ್ರಿಯಾ ಸುದೀಪ್ ಸಂದರ್ಶನದಲ್ಲಿ ಹೇಳಿದರು.

Read Full Story
03:10 PM (IST) Jun 05

Karnataka News Live 5 June 2026ಬಿಜೆಪಿ ಮುಖಂಡ ದೇವರಾಜೇಗೌಡ ಲೈಂಗಿಕ ದೌರ್ಜನ್ಯ ಕೇಸ್ - ದೋಷಾರೋಪ ಪಟ್ಟಿ ಸಲ್ಲಿಸಲು ಪೊಲೀಸರಿಗೆ ಹೈಕೋರ್ಟ್ ಸೂಚನೆ!

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಜಿ. ದೇವರಾಜೇಗೌಡ ಅವರಿಗೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿದ ನ್ಯಾಯಾಲಯ, ಪೊಲೀಸರಿಗೆ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡಿದೆ. ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
Read Full Story
02:34 PM (IST) Jun 05

Karnataka News Live 5 June 2026ಬಂಡೀಪುರ ಕಾಡಿನೊಳಗೆ ರೌಡಿಶೀಟರ್ ಬಿಂದಾಸ್ ಗುಂಡು ತುಂಡು ಪಾರ್ಟಿ, ಇಲಾಖೆಯ ಸಿಬ್ಬಂದಿಯೇ ಶಾಮೀಲು?

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಳ್ಳಬೇಟೆ ತಡೆ ಶಿಬಿರದಲ್ಲಿ ಕುಖ್ಯಾತ ರೌಡಿಶೀಟರ್ ಸತೀಶ್ ಮತ್ತು ಆತನ ಗ್ಯಾಂಗ್ ಅಕ್ರಮವಾಗಿ ಮದ್ಯ ಹಾಗೂ ಮಾಂಸದ ಪಾರ್ಟಿ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಘಟನೆಯು ಅರಣ್ಯ ಇಲಾಖೆಯ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದ್ದು, ಅಧಿಕಾರಿಗಳ ಶಾಮೀಲಾತಿಯ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸಾರ್ವಜನಿಕರು ಮತ್ತು ಪರಿಸರವಾದಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Read Full Story
01:58 PM (IST) Jun 05

Karnataka News Live 5 June 2026ಮಂಗಳೂರು ಹೈಕೋರ್ಟ್ ಪೀಠಕ್ಕೆ ಉತ್ತರ ಕನ್ನಡ ಸೇರ್ಪಡೆಗೆ ವಿರೋಧ - ಹೊನ್ನಾವರದಲ್ಲೇ ಹೊಸ ಪೀಠ ಸ್ಥಾಪನೆಗೆ ವಕೀಲರ ಪಟ್ಟು!

ಪ್ರಸ್ತಾವಿತ ಮಂಗಳೂರು ಹೈಕೋರ್ಟ್ ಪೀಠಕ್ಕೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರಿಸುವುದನ್ನು ಕಾರವಾರ ವಕೀಲರ ಸಂಘ ತೀವ್ರವಾಗಿ ವಿರೋಧಿಸಿದೆ. ಭೌಗೋಳಿಕವಾಗಿ ಧಾರವಾಡವೇ ಹತ್ತಿರವಾಗಿದ್ದು, ಇಲ್ಲವಾದರೆ ಜಿಲ್ಲೆಯ ಮಧ್ಯಭಾಗವಾದ ಹೊನ್ನಾವರದಲ್ಲಿ ಹೊಸ ಪೀಠ ಸ್ಥಾಪಿಸಬೇಕೆಂದು ಆಗ್ರಹಿಸಿದೆ. ಬೇಡಿಕೆ ಈಡೇರದಿದ್ದರೆ ತೀವ್ರ ಹೋರಾಟದ ಎಚ್ಚರಿಕೆಯನ್ನೂ ಸಂಘ ನೀಡಿದೆ.
Read Full Story
01:41 PM (IST) Jun 05

Karnataka News Live 5 June 2026ಸಚಿವ ರಾಮಲಿಂಗಾ ರೆಡ್ಡಿ, ಮುನಿಯಪ್ಪ ಬಳಿಕ ಮತ್ತೊಬ್ಬ ಸಚಿವ ಅಸಮಾಧಾನ!

ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಆರಂಭದಲ್ಲೇ ಸಂಕಷ್ಟಗಳು ಎದುರಾಗುತ್ತಿವೆ. ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡು ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಕೆಎಚ್ ಮುನಿಯಪ್ಪ ಕೂಡ ಡಿಕೆಶಿ ನಡೆಗೆ ಅಸಮಾಧಾನ ಹೊರಹಾಕಿದ ಬೆನ್ನಲ್ಲೆ ಇದೀಗ ಕೆಜೆ ಜಾರ್ಜ್ ಕೂಡ ಅಸಮಾಧಾನ.

Read Full Story
12:42 PM (IST) Jun 05

Karnataka News Live 5 June 2026ಡಿಕೆ ಸರ್ಕಾರದಲ್ಲಿ ಚುರುಕಾದ ಇಕ್ಬಾಲ್ ಹುಸೇನ್; ಮಂಚನಬೆಲೆ ಜಲಾಶಯದ ಬಲ ದಂಡೆ ವೀಕ್ಷಿಸಿದ ಶಾಸಕ

ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಮಂಚನಬೆಲೆ ಜಲಾಶಯದ ಬಲದಂಡೆ ನಾಲೆಯ ದುಸ್ಥಿತಿಯನ್ನು ವೀಕ್ಷಿಸಿದರು. ಮುರಿದು ಬಿದ್ದ ಸ್ಲ್ಯಾಬ್‌ಗಳಿಂದಾಗಿ ನೀರು ಹರಿಯಲು ಉಂಟಾಗಿರುವ ತಡೆಯನ್ನು ನಿವಾರಿಸಿ, ರೈತರಿಗೆ ಅನುಕೂಲವಾಗುವಂತೆ ಕೂಡಲೇ ನಾಲೆ ದುರಸ್ಥಿಪಡಿಸಲು ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.
Read Full Story