MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Car News
  • ಲವ್ ಮಾಕ್ಟೇಲ್-3 ಸೂಪರ್ ಸಕ್ಸಸ್ ಬೆನ್ನಲ್ಲೇ ಹೊಸ ಕಾರು ಖರೀದಿಸಿದ ಕೃಷ್ಣ-ಮಿಲನಾ: ‘XEV 9e ಸಿನೆಲಕ್ಸ್’ ಸೆಲೆಕ್ಟ್‌ ಮಾಡಲು ಇದೇ ಕಾರಣ

ಲವ್ ಮಾಕ್ಟೇಲ್-3 ಸೂಪರ್ ಸಕ್ಸಸ್ ಬೆನ್ನಲ್ಲೇ ಹೊಸ ಕಾರು ಖರೀದಿಸಿದ ಕೃಷ್ಣ-ಮಿಲನಾ: ‘XEV 9e ಸಿನೆಲಕ್ಸ್’ ಸೆಲೆಕ್ಟ್‌ ಮಾಡಲು ಇದೇ ಕಾರಣ

ಲವ್‌ ಮಾಕ್ಟೇಲ್‌-3 ಯಶಸ್ಸಿನ ನಂತರ, ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿ ಮಹೀಂದ್ರಾದ ವಿಶೇಷ ಆವೃತ್ತಿಯ XEV 9e Cineluxe ಕಾರನ್ನು ಖರೀದಿಸಿದ್ದಾರೆ. ಈ ಕಾರು 500+ ಕಿ.ಮೀ ರೇಂಜ್, ಹೋಮ್ ಥಿಯೇಟರ್ ಅನುಭವ ನೀಡುವ ಡಿಸ್ಪ್ಲೇ ಇದರಲ್ಲಿದೆ.

2 Min read
Author : Santosh Naik
Published : Jun 05 2026, 07:53 PM IST
Share this Photo Gallery
  • FB
  • TW
  • Linkdin
  • Whatsapp
16
ಡಾರ್ಲಿಂಗ್‌ ಕೃಷ್ಣ ಮಿಲನಾ ದಂಪತಿಯ ಹೊಸ ಕಾರ್‌
Image Credit : Instagram

ಡಾರ್ಲಿಂಗ್‌ ಕೃಷ್ಣ-ಮಿಲನಾ ದಂಪತಿಯ ಹೊಸ ಕಾರ್‌

ಲವ್‌ ಮಾಕ್ಟೇಲ್‌-3 ಸಿನಿಮಾದ ಯಶಸ್ಸಿನ ಬಳಿಕ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಮಹೀಂದ್ರಾ & ಮಹೀಂದ್ರಾ ಕಂಪನಿಯ ಸ್ಪೆಷಲ್‌ ಎಡಿಷನ್‌ ಕಾರು ಖರೀದಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ XEV 9e Cineluxe ಕಾರ್‌ಅನ್ನು ಅವರು ಮನೆಗೆ ತಂದಿದ್ದಾರೆ. ಇದನ್ನು ಸ್ವತಃ ಮಹೀಂದ್ರಾ ತನ್ನ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದೆ. 29.35 ಲಕ್ಷ ಎಕ್ಸ್‌ಶೋರೂಮ್‌ ಬೆಲೆ ಹೊಂದಿರುವ ಈ ಕಾರ್‌ಅನ್ನೇ ಡಾರ್ಲಿಂಗ್‌ ಕೃಷ್ಣ ಆಯ್ಕೆ ಮಾಡಿದ್ದೇಕೆ ಅನ್ನೋದರ ವಿವರ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆಕರ್ಷಕ ಲುಕ್ ಮತ್ತು ಪ್ರೀಮಿಯಂ ಇಂಟೀರಿಯರ್
Image Credit : Instagram

ಆಕರ್ಷಕ ಲುಕ್ ಮತ್ತು ಪ್ರೀಮಿಯಂ ಇಂಟೀರಿಯರ್

ಈ ಹೊಸ ಎಡಿಷನ್‌ನಲ್ಲಿ ಗ್ರಾಹಕರಿಗೆ ವಿಶಿಷ್ಟವಾದ 'ಸ್ಯಾಟಿನ್ ಬ್ಲಾಕ್' ಅಥವಾ 'ಸ್ಯಾಟಿನ್ ವೈಟ್' ಎಂಬ ಹೊಚ್ಚಹೊಸ ಎಕ್ಸ್‌ಟೀರಿಯರ್ ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ. ಇದರೊಂದಿಗೆ ಕಾರಿನ ಒಳಗಡೆ ಪ್ರೀಮಿಯಂ ಲುಕ್ ನೀಡಲು 'ಚೆಸ್ಟ್‌ನಟ್ ಬ್ರೌನ್' ಮತ್ತು 'ನಾಕ್ಟರ್ನ್ ಬ್ಲಾಕ್' ಸಂಯೋಜನೆಯ ಸ್ಮೂತ್-ಗ್ರೇನ್ ಲೆದರೆಟ್ ಇಂಟೀರಿಯರ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಕಾರಿನ ಕ್ಯಾಬಿನ್ ಅನ್ನು ಒಂದು ಪ್ರೈವೇಟ್ ಲಾಂಜ್‌ನಂತೆ ಕಾಣಿಸುವಂತೆ ಮಾಡಲಾಗಿದೆ.

Related Articles

Related image1
ಸ್ಕಾರ್ಪಿಯೋ, ಥಾರ್ ಅಬ್ಬರಕ್ಕೆ ನಡುಗಿದ ಆಟೋ ಮಾರುಕಟ್ಟೆ: ಖುಷಿಯಿಂದ ಹಿಗ್ಗಿದ ಆನಂದ್‌ ಮಹೀಂದ್ರಾ
Related image2
ಥಾರ್ ಪ್ರೇಮಿಗಳಿಗೊಂದು ಗುಡ್ ನ್ಯೂಸ್: ಕೇವಲ 4 ಲಕ್ಷ ರೂ. ಕೊಟ್ಟು ಜಬರ್ದಸ್ತ್ ಮಹೀಂದ್ರಾ ಥಾರ್ ಮನೆಗೆ ತನ್ನಿ!
36
ಹೋಮ್ ಥಿಯೇಟರ್ ಫೀಲ್ ಕೊಡುವ ಸಿನಿಮಾಟಿಕ್ ಎಕ್ಸ್‌ಪೀರಿಯನ್ಸ್
Image Credit : Instagram

ಹೋಮ್ ಥಿಯೇಟರ್ ಫೀಲ್ ಕೊಡುವ ಸಿನಿಮಾಟಿಕ್ ಎಕ್ಸ್‌ಪೀರಿಯನ್ಸ್

ಕಾರಿನ ಒಳಗೆ ಪ್ರಯಾಣಿಕರಿಗೆ ಅದ್ಭುತ ಸಿನಿಮಾಟಿಕ್ ಅನುಭವ ನೀಡಲು ಇಡೀ ಡ್ಯಾಶ್‌ಬೋರ್ಡ್ ವ್ಯಾಪಿಸಿರುವ 'ಕೋಸ್ಟ್-ಟು-ಕೋಸ್ಟ್' ಟ್ರಿಪಲ್ ಹೆಚ್‌ಡಿ ಡಿಸ್ಪ್ಲೇ ಒದಗಿಸಲಾಗಿದೆ. ಇದರೊಂದಿಗೆ ಡಾಲ್ಬಿ ಅಟ್ಮಾಸ್ ತಂತ್ರಜ್ಞಾನ ಹೊಂದಿರುವ 16 ಸ್ಪೀಕರ್‌ಗಳ ಹರ್ಮನ್ ಕಾರ್ಡನ್ ಆಡಿಯೋ ಸಿಸ್ಟಮ್ ಸ್ಟುಡಿಯೋ ಗುಣಮಟ್ಟದ ಸೌಂಡ್ ನೀಡುತ್ತದೆ. ಕಾರಿನಲ್ಲಿರುವ ಇನ್ಫಿನಿಟಿ ರೂಫ್ (Infinity Roof) ಮತ್ತು 16 ಮಿಲಿಯನ್‌ಗಿಂತಲೂ ಹೆಚ್ಚು ಬಣ್ಣಗಳ ಆಯ್ಕೆಯಿರುವ ಆಂಬಿಯೆಂಟ್ ಲೈಟಿಂಗ್ ಪ್ರಯಾಣದ ಮೂಡ್ ಅನ್ನೇ ಬದಲಾಯಿಸುತ್ತದೆ.

46
ಶಕ್ತಿಶಾಲಿ ಬ್ಯಾಟರಿ ಮತ್ತು 500+ ಕಿಮೀ ರೇಂಜ್
Image Credit : Instagram

ಶಕ್ತಿಶಾಲಿ ಬ್ಯಾಟರಿ ಮತ್ತು 500+ ಕಿಮೀ ರೇಂಜ್

ಮಹೀಂದ್ರಾ XEV 9e ಸಿನೆಲಕ್ಸ್ ಎಡಿಷನ್ ಅನ್ನು ಅದರ ಟಾಪ್-ಎಂಡ್ 'ಪ್ಯಾಕ್ ಥ್ರೀ' (Pack Three) ವೆರಿಯೆಂಟ್ ಆಧಾರದ ಮೇಲೆ ನಿರ್ಮಿಸಲಾಗಿದೆ. ಇದು ಬಲಿಷ್ಠವಾದ 79 kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ಗಿಂತಲೂ ಹೆಚ್ಚಿನ ರಿಯಲ್-ವರ್ಲ್ಡ್ ರೇಂಜ್ (Real-world range) ನೀಡುತ್ತದೆ. ಇದು ಸುದೀರ್ಘ ಹೈವೇ ಪ್ರಯಾಣವನ್ನು ಅತ್ಯಂತ ನಿರಾಳವಾಗಿಸುತ್ತದೆ.

56
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಎಐ ಫೀಚರ್ಸ್
Image Credit : Instagram

ಅತ್ಯಾಧುನಿಕ ತಂತ್ರಜ್ಞಾನ ಮತ್ತು ಎಐ ಫೀಚರ್ಸ್

ಈ ಕಾರಿನಲ್ಲಿ ‘ವಿಷನ್ಎಕ್ಸ್ ಎಆರ್ ಹೆಡ್ಸ್-ಅಪ್ ಡಿಸ್ಪ್ಲೇ’ (AR heads-up display), ಚಾಲಕ ಮತ್ತು ಪ್ರಯಾಣಿಕರ ನಿಗಾ ವಹಿಸುವ ‘ಐಡೆಂಟಿಟಿ ಮಾನಿಟರಿಂಗ್’ (EyeDentity Monitoring), ಆಟೋ ಪಾರ್ಕ್ ಅಸಿಸ್ಟ್ (HandsFree Park), ಸೆಕ್ಯೂರ್360 ಪ್ರೊ ಮತ್ತು ಡಿಜಿಟಲ್ ಕೀ ನಂತಹ ಅತ್ಯಾಧುನಿಕ ಫೀಚರ್‌ಗಳನ್ನು ನೀಡಲಾಗಿದೆ. ಇವೆಲ್ಲವೂ ಸುರಕ್ಷತೆ ಮತ್ತು ಚಾಲನೆಯನ್ನು ಸುಲಭವಾಗಿಸುತ್ತವೆ.

66
ಪ್ರೊಫೈಲ್ ಆಧಾರಿತ ಹೆಚ್‌ವಿಎಸಿ ಮೋಡ್‌ಗಳು
Image Credit : Instagram

ಪ್ರೊಫೈಲ್ ಆಧಾರಿತ ಹೆಚ್‌ವಿಎಸಿ ಮೋಡ್‌ಗಳು

ವಿಶೇಷವಾಗಿ ಈ ಕಾರಿನಲ್ಲಿ ಕ್ಯಾಂಪ್ (Camp), ಕೀಪ್ (Keep) ಮತ್ತು ಸಾಕುಪ್ರಾಣಿಗಳಿಗೆ ಅನುಕೂಲವಾಗುವ 'ಪಾ ಪಾಲ್' (PawPal) ನಂತಹ ಅತ್ಯಾಧುನಿಕ ಹೆಚ್‌ವಿಎಸಿ (HVAC) ಮೋಡ್‌ಗಳನ್ನು ನೀಡಲಾಗಿದೆ. ಇದರೊಂದಿಗೆ ಕಸ್ಟಮ್ ಡ್ರೈವ್ ಮೋಡ್ಸ್ ಹಾಗೂ ಪರ್ಸನಲೈಸ್ಡ್ ಯೂಸರ್ ಪ್ರೊಫೈಲ್‌ಗಳಿದ್ದು, ಕಾರಿನ ಐಷಾರಾಮಿ ಸೌಕರ್ಯಗಳು ನಿಮ್ಮ ಲೈಫ್‌ಸ್ಟೈಲ್‌ಗೆ ತಕ್ಕಂತೆ ಹೊಂದಿಕೊಳ್ಳುತ್ತವೆ. ಮಾರ್ಚ್‌ 2 ರಿಂದ ಈ ಕಾರ್‌ಗಳ ಬುಕ್ಕಿಂಗ್‌ ಆರಂಭವಾಗಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಡಾರ್ಲಿಂಗ್ ಕೃಷ್ಣ
ಮಿಲನಾ ನಾಗರಾಜ್
ಕಾರುಗಳು
ಆಟೋಮೊಬೈಲ್
ಸುದ್ದಿ
Latest Videos
Recommended Stories
Recommended image1
ಕೇವಲ 300 ರೂ.ಗೆ ಈ ಕಾರ್ ಆಕ್ಸೆಸರಿಗಳು!
Recommended image2
ಇವಿ ಮಾರುಕಟ್ಟೆಗೆ ಬರಲಿದೆ ಟಾಟಾದ ಮತ್ತೆರಡು ಹೊಸ ಕಾರ್‌; ಸಿಂಗಲ್‌ ಚಾರ್ಜ್‌ನಲ್ಲಿ 500 ಕಿಮೀಗಿಂತಲೂ ಹೆಚ್ಚು ಮೈಲೇಜ್
Recommended image3
ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!
Related Stories
Recommended image1
ಸ್ಕಾರ್ಪಿಯೋ, ಥಾರ್ ಅಬ್ಬರಕ್ಕೆ ನಡುಗಿದ ಆಟೋ ಮಾರುಕಟ್ಟೆ: ಖುಷಿಯಿಂದ ಹಿಗ್ಗಿದ ಆನಂದ್‌ ಮಹೀಂದ್ರಾ
Recommended image2
ಥಾರ್ ಪ್ರೇಮಿಗಳಿಗೊಂದು ಗುಡ್ ನ್ಯೂಸ್: ಕೇವಲ 4 ಲಕ್ಷ ರೂ. ಕೊಟ್ಟು ಜಬರ್ದಸ್ತ್ ಮಹೀಂದ್ರಾ ಥಾರ್ ಮನೆಗೆ ತನ್ನಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved