- Home
- News
- State
- Karnataka News Live: ಜಗತ್ತಿಗೆ ಬೆದರಿಕೆ ಹಾಕಿದ ಅಮೆರಿಕ ಆರ್ಥಿಕತೆಯೇ ಪ್ರಪಾತಕ್ಕೆ ಅಂಚಿನಲ್ಲಿ, ಮೂಡೀಸ್ ವರದಿಯಲ್ಲಿ ಟ್ರಂಪ್ ಟೊಳ್ಳು ನೀತಿ ಬಯಲು!
Karnataka News Live: ಜಗತ್ತಿಗೆ ಬೆದರಿಕೆ ಹಾಕಿದ ಅಮೆರಿಕ ಆರ್ಥಿಕತೆಯೇ ಪ್ರಪಾತಕ್ಕೆ ಅಂಚಿನಲ್ಲಿ, ಮೂಡೀಸ್ ವರದಿಯಲ್ಲಿ ಟ್ರಂಪ್ ಟೊಳ್ಳು ನೀತಿ ಬಯಲು!

ಮಂಡ್ಯ: ಕಲ್ಲಕ ಕಾರಣಕ್ಕೆ ಪತಿ, ಪತ್ನಿ ಜಗಳವಾಡಿದ್ದಕ್ಕೆ ಊರಿನ ಮುಖಂಡರು ದಂಪತಿಯ ತಲೆ ಬೋಳಿಸಿ, 5000 ರ. ದಂಡ ವಿಧಿಸಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿಯ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ನಾಡ ಬಾಂಬ್ ಸ್ಫೋಟಿಸಿ ಹಸುವಿನ ದವಡೆ ಛಿದ್ರ
ನಾಡಬಾಂಬ್ ಸ್ಪೋಟಗೊಂಡು ಹಸುವಿನ ದವಡೆ ಛಿದ್ರಗೊಂಡ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡದ ಹೊಸ್ಮನೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಾಡು ಪ್ರಾಣಿಗಳನ್ನು ಕೊಲ್ಲಲು ಅಪರಿಚಿತರು ನಾಡ ಬಾಂಬ್ ಇಟ್ಟಿದ್ದರು. ಮಂಗಳವಾರ ಬೆಳಗ್ಗೆ ಹಸು ಹುಲ್ಲು ಮೇಯಲು ಹೋಗಿ ನಾಡ ಬಾಂಬನ್ನು ಬಾಯಲ್ಲಿ ಕಚ್ಚಿದಾಗ ಗಾಯವಾಗಿದೆ.
Karnataka News Live 3rd September 2025ಜಗತ್ತಿಗೆ ಬೆದರಿಕೆ ಹಾಕಿದ ಅಮೆರಿಕ ಆರ್ಥಿಕತೆಯೇ ಪ್ರಪಾತಕ್ಕೆ ಅಂಚಿನಲ್ಲಿ, ಮೂಡೀಸ್ ವರದಿಯಲ್ಲಿ ಟ್ರಂಪ್ ಟೊಳ್ಳು ನೀತಿ ಬಯಲು!
Karnataka News Live 3rd September 2025ಬಾತ್ರೂಮ್‌ನಲ್ಲಿ ಮಹಿಳೆ ಅಸಹ್ಯಕರ ಕೃತ್ಯ; ಪ್ರಸಿದ್ಧ ಟಿವಿ ನಟ ಬಂಧನ! ಏನಿದು ಘಟನೆ?
ಟಿವಿ ನಟ ಆಶೀಷ್ ಕಪೂರ್‌ರನ್ನ ಪುಣೆಯಲ್ಲಿ ಅತ್ಯಾ1ಚಾರ ಆರೋಪದ ಮೇಲೆ ಬಂಧಿಸಲಾಗಿದೆ. ದೆಹಲಿಯಲ್ಲಿ ನಡೆದ ಪಾರ್ಟಿಯಲ್ಲಿ ಕೃತ್ಯವೆಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
Karnataka News Live 3rd September 2025ಎಸ್‌ಪಿ ಉಮಾ ಪ್ರಶಾಂತ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪ; ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ವಿರುದ್ಧ ಎಫ್‌ಐಆರ್
Karnataka News Live 3rd September 2025'ತಾಯಿ ಭುವನೇಶ್ವರಿಗೆ ಬುರ್ಖಾ ಹಾಕೋದಕ್ಕೆ ಆಗುತ್ತೇನ್ರೀ?..' ಸಿಂಧನೂರು ಹಿಂದೂ ಗಣಪತಿ ಉತ್ಸವದಲ್ಲಿ ಕಾಂಗ್ರೆಸ್ ವಿರುದ್ಧ ಸಿಟಿ ರವಿ ವಾಗ್ದಾಳಿ
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಹಿಂದೂ ಮಹಾ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಎಂಎಲ್‌ಸಿ ಸಿಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Karnataka News Live 3rd September 2025ಖ್ಯಾತ ಟಿವಿ ನಟ ಆಶೀಶ್ ಕಪೂರ್ ಬಂಧನ, ಅತ್ಯಾ*ರ ಆರೋಪದಡಿ ಜೈಲು ಪಾಲು
ಖ್ಯಾತ ಟಿವಿ ನಟ ಆಶೀಶ್ ಕಪೂರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಪೊಲೀಸರು ಅಶೀಶ್ ಕಪೂರ್ ಅರೆಸ್ಟ್ ಮಾಡಿದ್ದಾರೆ.
Karnataka News Live 3rd September 2025ಎಸ್ಸಿ ಒಳಮೀಸಲಾತಿ ಬಳಿಕ, ಶಿಕ್ಷಣ & ಉದ್ಯೋಗ ನೇಮಕಾತಿಗೆ ರೋಸ್ಟರ್ ಬಿಂದು ಹಂಚಿಕೆ ಮಾಡಿ ಆದೇಶ!
ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಹಂಚಿಕೆ ಮಾಡಿದ್ದು, ಎಡಗೈ, ಬಲಗೈ ಮತ್ತು ಇತರೆ ಎಸ್ಸಿ ಸಮುದಾಯಗಳಿಗೆ ಮೀಸಲಾತಿ ನೀಡಿದೆ. ಇದೀಗ ಎಸ್ಸಿ, ಎಸ್‌ಟಿ, ಒಬಿಸಿ, ಜನರಲ್ ಕೆಟಗರಿ ಮೀಸಲಾತಿ ಹಂಚಿಕೆ ಪಟ್ಟಿ ಬಿಡುಗಡೆ ಮಾಡಿದ್ದು, ಶಿಕ್ಷಣ ಮತ್ತು ಉದ್ಯೋಗಗಳಿಗೆ ಇದೇ ಮೀಸಲಾತಿ ಅನ್ವಯವಾಗಲಿದೆ
Karnataka News Live 3rd September 2025ಚೀನಾ, ಉತ್ತರ ಕೊರಿಯಾ ಜೊತೆ ಸೇರಿ ಅಮೆರಿಕ ವಿರುದ್ಧ ರಷ್ಯಾ ಪಿತೂರಿಗೆ ಟ್ರಂಪ್ ಶಾಂತಿ ಮಂತ್ರ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ, ರಷ್ಯಾ ಮತ್ತು ಉತ್ತರ ಕೊರಿಯಾದ ನಾಯಕರು ಅಮೆರಿಕ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪವು ಜಾಗತಿಕ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
Karnataka News Live 3rd September 2025ಜಿಯೋಗೆ 10 ವರ್ಷದ ಸಂಭ್ರಮ, ಅನ್‌ಲಿಮಿಟೆಡ್ ಡೇಟಾ ಸೇರಿ ಮೆಘಾ ಆಫರ್ ಘೋಷಣೆ
ರಿಲಯನ್ಸ್ ಜಿಯೋ 10ನೇ ವರ್ಷದ ಸಂಭ್ರಮದಲ್ಲಿ ಭರ್ಜರಿ ಆಫರ್ ಘೋಷಿಸಿದೆ.ತಿಂಗಳ ಉಚಿತ ಸೇವೆ, 3,000 ರೂಪಾಯಿ ವೋಚರ್ ಗಿಫ್ಟ್ ಸೇರಿದಂತೆ ಹಲವು ಭರ್ಜರಿ ಆಫರ್ ಘೋಷಿಸಲಾಗಿದೆ.
Karnataka News Live 3rd September 2025ಇಫ್ತಾರ್ ಕೂಟಕ್ಕೆ ಸಿಎಂ ಟೋಪಿ ಧರಿಸಿ ಹೋಗುವುದಿಲ್ಲವೇ? ಬಾನು ಮುಷ್ತಾಕ್ ಕುಂಕುಮ ಹಚ್ಚಬಾರದೇಕೆ? ಪ್ರಹ್ಲಾದ್ ಜೋಶಿ!
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಕುಂಕುಮ ಧರಿಸಬೇಕಿಲ್ಲ ಎಂದ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ. ಇಫ್ತಾರ್ ಕೂಟಗಳಲ್ಲಿ ಮುಸ್ಲಿಂ ಉಡುಗೆ ತೊಡುವ ಸಿಎಂ, ಹಿಂದೂ ಹಬ್ಬದಲ್ಲಿ ಕುಂಕುಮಕ್ಕೆ ಆಕ್ಷೇಪಿಸುವುದು ಹಾಸ್ಯಾಸ್ಪದ ಎಂದ ಜೋಶಿ ಪ್ರಶ್ನಿಸಿದ್ದಾರೆ.
Karnataka News Live 3rd September 2025ಗ್ರೇಟರ್ ಬೆಂಗಳೂರು ಜನರೇ ನಿಮ್ಮ ನಗರಪಾಲಿಕೆ, ವಿಧಾನಸಭಾ ಕ್ಷೇತ್ರ, ವಾರ್ಡ್ ಯಾವುದೆಂದು ಈಗಲೇ ಚೆಕ್ ಮಾಡಿ!
ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಆಗಿ ಪರಿವರ್ತಿಸಿ, ಪ್ರದೇಶಗಳನ್ನು ಮರುವಿಂಗಡಿಸಲಾಗಿದೆ. ನಿಮ್ಮ ವಾರ್ಡ್, ನಿಮ್ಮ ವಿಧಾನಸಭಾ ಕ್ಷೇತ್ರ ಮತ್ತು ನಗರ ಪಾಲಿಕೆಯನ್ನು ತಿಳಿದುಕೊಳ್ಳಿ. ಆಯುಕ್ತರು ಮತ್ತು ಕಚೇರಿಗಳ ವಿಳಾಸವೂ ಇಲ್ಲಿದೆ ನೋಡಿ..
Karnataka News Live 3rd September 2025ಪಾಕ್ ಕದನ ವಿರಾಮಕ್ಕೆ ಅಂಗಲಾಚಿದ್ದೇಕೆ? ಸಿಂದೂರ್ ವಿಡಿಯೋ ಬಿಡುಗಡೆ ಮಾಡಿದ ಭಾರತೀಯ ಸೇನೆ
ಪೆಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಕಾರ್ಯಾಚರಣೆ ಆರಂಭಿಸದ ಕೆಲವೇ ದಿನದಲ್ಲಿ ಪಾಕಿಸ್ತಾನ ಕದನ ವಿರಾಮಕ್ಕೆ ಅಂಗಲಾಚಿತ್ತು. ಇದಕ್ಕೆ ಕಾರಣವೇನು? ಭಾರತೀಯ ಸೇನೆ ವಿಡಿಯೋ ಬಿಡುಗಡೆ ಮಾಡಿದೆ.
Karnataka News Live 3rd September 2025ವರ್ಷಕ್ಕೆ 7 ದಿನ ಮಾತ್ರ ದರ್ಶನ ನೀಡುವ ಸಾತೇರಿ ದೇವಿ ಜಾತ್ರಾ ಸಂಭ್ರಮ!
Karnataka News Live 3rd September 2025ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ, ಮನೆಯಲ್ಲಿದ್ದ ಒಂದೂವರೆ ವರ್ಷದ ಮಗು ಸಾವು!
Karnataka News Live 3rd September 2025ಮಲೆನಾಡ ಜನರಿಗೆ ಬಿಗ್ ನ್ಯೂಸ್, ಶಿವಮೊಗ್ಗದಿಂದ ಮತ್ತೊಂದು ವಿಶೇಷ ರೈಲು!
Karnataka News Live 3rd September 2025ಗ್ರೇಟರ್ ಬೆಂಗಳೂರು 5 ಹೊಸ ನಗರ ಪಾಲಿಕೆಗಳಿಗೆ ₹300 ಕೋಟಿ ಅನುದಾನ, 500 ವಾರ್ಡ್‌ಗಳ ರಚನೆ!
ಗ್ರೇಟರ್ ಬೆಂಗಳೂರಿನ 5 ಹೊಸ ನಗರ ಪಾಲಿಕೆಗಳಿಗೆ ₹300 ಕೋಟಿ ಅನುದಾನ ಕೊಲಾಗುತ್ತದೆ. ಬಿಬಿಎಂಪಿಯಲ್ಲಿದ್ದ 198 ವಾರ್ಡ್‌ಗಳನ್ನು 500ಕ್ಕೆ ಹೆಚ್ಚಿಸಲಾಗುತ್ತದೆ. ಎಲ್ಲ 5 ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವವರೆಗೆ ಗ್ರೇಟರ್ ಬೆಂಗಳೂರಿಗೆ ಮಹೇಶ್ವರ ರಾವ್ ಮುಖ್ಯ ಆಯುಕ್ತರು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
Karnataka News Live 3rd September 2025ಭಾರಿ ಮಳೆ ಪ್ರವಾಹಕ್ಕೆ ತತ್ತರ, ಸೆ.7ರ ವರೆಗೆ ಎರಡು ರಾಜ್ಯಗಳ ಶಾಲಾ ಕಾಲೇಜಿಗೆ ರಜೆ
ದೇಶದ ಹಲವು ಭಾಗದಲ್ಲಿ ಭಾರಿ ಮಳೆ, ಮೇಘಸ್ಫೋಟ, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದರ ಪರಿಣಾಮ ಎರಡು ರಾಜ್ಯಗಳ ಶಾಲಾ ಕಾಲೇಜಿಗೆ ಸೆಪ್ಟೆಂಬರ್ 7ರ ವರೆಗೆ ರಜೆ ಘೋಷಿಸಲಾಗಿದೆ.
Karnataka News Live 3rd September 2025ವಿಮಾನದಲ್ಲಿ ಬಂದ ತನ್ನ ಪೋಷಕರಿಗೆ ಪೈಲಟ್ ಮಗಳ ಭಾವುಕ ಸ್ವಾಗತ - ಹೆಮ್ಮೆಯಿಂದ ಎದೆಯುಬ್ಬಿಸಿದ ಅಪ್ಪ..!
ಮಕ್ಕಳ ಸಾಧನೆ ಪೋಷಕರಿಗೆ ದೊಡ್ಡ ವಿಚಾರ ಹಾಗೆಯೇ ಇಲ್ಲೊಬ್ಬರು ಅಪ್ಪಅಮ್ಮ ಪೈಲಟ್ ಮಗಳ ಸಾಧನೆ ನೋಡಿ ಹೆಮ್ಮೆಯಿಂದ ಎದೆಯುಬ್ಬಿಸಿದ್ದಾರೆ. ಅವರ ವೀಡಿಯೋ ವೈರಲ್ ಆಗಿದೆ.
Karnataka News Live 3rd September 2025ಬೆಂಗಳೂರು ಟೆಕ್ಕಿ ಮಗನ ಗಾಯದ ಪೋಸ್ಟ್‌ಗೆ ಹೃದಯಸ್ಪರ್ಶಿ ಪ್ರತಿಕ್ರಿಯೆ ಕೊಟ್ಟ ಗೂಗಲ್ ಸಿಇಒ ಪಿಚೈ
ಬೆಂಗಳೂರು ಟೆಕ್ಕಿಯ ಮಗನ ಮಹಡಿಯಿಂದ ಬಿದ್ದು ಆಸ್ಪತ್ರೆ ದಾಖಲಾಗಿದ್ದ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಬಾಲಕನ ಕುರಿತು ಟೆಕ್ಕಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಗೂಗಲ್ ಸಿಇಒ ಸುಂದರ್ ಪಿಚೈ ಹೃದಯಸ್ಪರ್ಶಿ ಪ್ರತಿಕ್ರಿಯೆ ನೀಡಿದ್ದಾರೆ.
Karnataka News Live 3rd September 2025ಜೈಲಲ್ಲಿ ಭಾರೀ ಶೀತ, ದರ್ಶನ್‌ಗೆ ಕೈ ಅಲ್ಲಾಡಿಸಲು ಸಾಧ್ಯವಾಗ್ತಿಲ್ಲ - ನಟನ ನೋವು ಬಿಚ್ಚಿಟ್ಟ ವಕೀಲ
Karnataka News Live 3rd September 2025ಕೆನಡಾದಲ್ಲಿ ಗುಜರಾತಿಗಳ ಕಾರುಬಾರು - ಕೆನಡಿಯನ್ ಮಹಿಳೆಗೆ ಫ್ಲಾಟ್ ಕೊಡಲು ನಿರಾಕರಣೆ
ಕೆನಡಾದಲ್ಲಿ ಗುಜರಾತಿ ಮೂಲದ ಮನೆ ಮಾಲೀಕರು ಸ್ಥಳೀಯ ನಿವಾಸಿಗಳಿಗೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದ್ದಾರೆ ಎಂದು ಕೆನಡಿಯನ್ ಮಹಿಳೆ ಆರೋಪಿಸಿದ್ದಾರೆ. ವಸತಿ ಬಿಕ್ಕಟ್ಟಿಗೆ ಭಾರತೀಯ ವಲಸಿಗರೇ ಕಾರಣ ಎಂದು ಆಕೆ ದೂರಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.