ಪೆಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಕಾರ್ಯಾಚರಣೆ ಆರಂಭಿಸದ ಕೆಲವೇ ದಿನದಲ್ಲಿ ಪಾಕಿಸ್ತಾನ ಕದನ ವಿರಾಮಕ್ಕೆ ಅಂಗಲಾಚಿತ್ತು. ಇದಕ್ಕೆ ಕಾರಣವೇನು? ಭಾರತೀಯ ಸೇನೆ ವಿಡಿಯೋ ಬಿಡುಗಡೆ ಮಾಡಿದೆ.
ನವದೆಹಲಿ (ಸೆ.03) ಪೆಹಲ್ಗಾಂ ಉಗ್ರ ದಾಳಿಗೆ ಭಾರತ ಮರುಗಿತ್ತು. ಆಕ್ರೋಶ ಮಡುಗಟ್ಟಿತ್ತು. ಅಮಾಯಕ 26 ಮಂದಿಯ ಆತ್ಮಕ್ಕೆ ಶಾಂತಿ ಸಿಗಲು ಭಾರತ ಪ್ರತಿದಾಳಿ ನಡೆಸಬೇಕು, ಪಾಕಿಸ್ತಾನ ಇನ್ನೆಂದು ಉಗ್ರರನ್ನು ಭಾರತಕ್ಕೆ ಕಳುಹಿಸಬಾರದು ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಇದಕ್ಕೆ ತಕ್ಕಂತೆ ಭಾರತೀಯ ಸೇನೆ ಆಪರೇಶನ್ ಸಿಂದೂರ್ ಕಾರ್ಯಾಚರಣೆ ಆರಂಭಿಸಿತ್ತು. ಕೆಲವೇ ದಿನದಲ್ಲಿ ಪಾಕಿಸ್ತಾನ ಕದನ ವಿರಾಮಕ್ಕೆ ಭಾರತೀಯ ಸೇನೆ ಬಳಿ ಬೇಡಿಕೊಂಡಿತ್ತು. ಇದರಂತೆ ಕದನ ವಿರಾಮ ಘೋಷಣೆಯಾಗಿತ್ತು. ಹೀಗೆ ಪಾಕಿಸ್ತಾನ ಕದನ ವಿರಾಮ ಅಂಗಲಾಚಲು ಕಾರಣವೇನು ಅನ್ನೋದರ ಆಪರೇಶನ್ ಸಿಂದೂರ್ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.
ಆಪರೇಶನ್ ಸಿಂದೂರ್ ವಿಡಿಯೋ ರಿಲೀಸ್
ಭಾರತೀಯ ಸೇನೆಯ ನಾರ್ದನ್ ಕಮಾಂಡ್ ಆಪರೇಶನ್ ಸಿಂದೂರ್ ವಿಡಿಯೋ ಬಿಡುಗಡೆ ಮಾಡಿದೆ. ಪೆಹಲ್ಗಾಂ ಉಗ್ರ ದಾಳಿಯಿಂದ ಹಿಡಿದು ಆಪರೇಶನ್ ಸಿಂದೂರ್, ಪಾಕಿಸ್ತಾನ ಪ್ರತಿದಾಳಿಯ ಯತ್ನಗಳು ಹಾಗೂ ಭಾರತ, ಪಾಕಿಸ್ತಾನಕ್ಕೆ ನುಗ್ಗಿ ನಡೆಸಿದ ದಾಳಿಯ ದೃಶ್ಯಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಭಾರತ ಟಾರ್ಗೆಟ್ ಮೇಲೆ ದಾಳಿ ಮಾಡಿದೆ. ಪಾಕಿಸ್ತಾನದ ಉಗ್ರ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿದೆ. ಪಾಕಿಸ್ತಾನ ಯತ್ನಗಳನ್ನು ವಿಫಲಗೊಳಿಸಿ ಭಾರತದ ದಾಳಿ ಹಾಗೂ ಕದನ ವಿರಾಮದ ಸಂದರ್ಭ ಸಂಪೂರ್ಣ ಚಿತ್ರಣ ಈ ವಿಡಿಯೋದಲ್ಲಿದೆ.
9 ಉಗ್ರ ನೆಲೆ ಧ್ವಂಸದ ವಿಡಿಯೋ
ಭಾರತೀಯ ಸೇನೆ ಬಿಡುಗಡೆ ಮಾಡಿದ ವಿಡಿಯೋ ಪೆಹಲ್ಗಾಂನಲ್ಲಿರುವ ಬೈಸರನ್ ಕಣಿವೆಯ ಸುಂದರ ತಾಣದಿಂದ ಆರಂಭಗೊಳ್ಳುತ್ತದೆ. ಆದರೆ ಇದೇ ಕಣಿವೆಯ ಪೆಹಲ್ಗಾಂನಲ್ಲಿ ಉಗ್ರರು ಭೀಕರ ದಾಳಿ ನಡೆಸಿದ್ದರು. ಎಪ್ರಿಲ್ 22ರಂದು ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಈ ಕುರಿತು ಕೆಲ ವಿಡಿಯೋ ತುಣುಕುಗಳನ್ನು ಭಾರತೀಯ ಸೇನೆ ಬಳಸಿಕೊಂಡಿದೆ. ದಾಳಿ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕರೆದ ಉನ್ನತ ಮಟ್ಟದ ಸಭೆ, ಬಳಿಕ ನಡೆದ ಪ್ಲಾನಿಂಗ್ ಸೇರಿದಂತೆ ಎಲ್ಲಾ ವಿಡಿಯೋಗಳನ್ನು ಭಾರತೀಯ ಸೇನೆ ಬಳಸಿಕೊಂಡಿದೆ. ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆ ಮೂರು ಸೇನೆಯಯ ಸಮನ್ವಯದಲ್ಲಿ ಪ್ಲಾನಿಂಗ್ ನಡೆಸಲಾಗಿತ್ತು. ಬಳಿಕ ಆಪರೇಶನ್ ಸಿಂದೂರ್ ಕಾರ್ಯಾಚರಣೆ ಮೂಲಕ ಭಾರತ, ಪಾಕಿಸ್ತಾನ ಗಡಿ ದಾಡಿ ಹೊಡೆದಿತ್ತು. 9 ಉಗ್ರರ ನೆಲೆಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿತ್ತು. ಈ ಕುರಿತು ಸಂಪೂರ್ಣ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.
ಪ್ರವಾಸಿಗರು ಹೆಚ್ಚಿದ್ದ ಕಾರಣ ಬೈಸರಣ್ ಆಯ್ಕೆ ಮಾಡಿದ್ದಉಗ್ರರು : ಎನ್‌ಐಎ
ಪಾಕಿಸ್ತಾನದಿಂದ ಕದನ ವಿರಾಮಕ್ಕೆ ಮನವಿ
ಇದೇ ವೇಳೆ ಪಾಕಿಸ್ತಾನ ಪ್ರತಿದಾಳಿಗೆ ಯತ್ನಿಸಿದೆ. ಆರಂಭದಲ್ಲಿ ಭಾರತದ ನಾಗರೀಕರ ಟಾರ್ಗೆಟ್ ಮಾಡಿ ದಾಳಿ ಮಾಡಿತ್ತು. ಇದು ಭಾರತವನ್ನು ಮತ್ತಷ್ಟು ಕೆರಳಿಸಿತ್ತು. ಆಪರೇಶನ್ ಸಿಂದೂರ್ ತೀವ್ರಗೊಂಡಿತ್ತು. ಅಘೋಷಿತ ಯುದ್ಧವೇ ಆರಂಭಗೊಂಡಿತ್ತು. ಪಾಕಿಸ್ತಾನದ ದಾಳಿಯನ್ನು ಭಾರತದ ಏರ್‌ಡೋಮ್ ಸಿಸ್ಟಮ್ ತಡೆದಿತ್ತು. ಆದರೆ ಭಾರತದ ನಿಖರವಾಗಿ ಪಾಕಿಸ್ತಾನ ಮೇಲೆ ದಾಳಿ ನಡೆಸಿತ್ತು. ಪಾಕಿಸ್ತಾನದ ಸೇನಾ ನೆಲೆ ಟಾರ್ಗೆಟ್ ಮಾಡಿ ಸತತ ದಾಳಿ ಮಾಡಿತ್ತು. ಪಾಕಿಸ್ತಾನದ ಯುದ್ಧ ವಿಮಾನ ಹಾರಾಟ ಅಸಾಧ್ಯವಾಯಿತು. ಭಾರತದ ಕ್ಷಿಪಣಿ ದಾಳಿ ಪಾಕಿಸ್ತಾನವನ್ನು ಬೆಚ್ಚಿ ಬೀಳಿಸಿತ್ತು. ಕರಾಚಿ ಮೇಲೂ ಭಾರತ ದಾಳಿ ನಡೆಸಿತ್ತು. ಈ ದಾಳಿ ಪಾಕಿಸ್ತಾನವನ್ನು ಕದನವಿರಾಮಕ್ಕೆ ಅಂಗಲಾಚುವಂತೆ ಮಾಡಿತ್ತು.
