45 ಚಿತ್ರದ ಅದ್ದೂರಿ ಪ್ರೀ ರಿಲೀಸ್ ಇವೆಂಟ್‌ಗೆ ಮುಖ್ಯ ಅತಿಥಿಯಾಗಿ ಬೆಂಗಳೂರು ಕಮಿಷನರ್ ಸೀಮಂತ ಕುಮಾರ್ ಆಗಮಿಸಲಿದ್ದಾರೆ. ಇದೇ ತಿಂಗಳ 25ಕ್ಕೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 45 ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಶಿವರಾಜ್ ಕುಮಾರ್,ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯಿಸಿದ್ದಾರೆ.
45 ಸಿನಿಮಾದ ಪ್ರೀ ರಿಲೀಸ್ ಈವೆಂಟ್
'ದಿ ಡೆವಿಲ್' ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಇದೀಗ '45' ಕನ್ನಡ ಸಿನಿಮಾದ (45 Kannada Movie) ಹವಾ ಶುರುವಾಗಿದೆ. ಶುರುವಾಗಿದೆ ಎನ್ನೋದಕ್ಕಿಂತ ಬಹಳಷ್ಟು ಜೋರಾಗಿದೆ ಎನ್ನಬಹುದು. ಇದೇ ತಿಂಗಳು 25ಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊಟ್ಟಮೊಲದ ನಿರ್ದೇಶನದ '45' ಸಿನಿಮಾ ಭಾರತ ಹಾಗೂ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ. ಇದೀಗ ಬಹು ನಿರೀಕ್ಷೀತ 45 ಸಿನಿಮಾದ ಫ್ರೀ ರಿಲೀಸ್ 'ಟ್ರೈಲರ್ ಲಾಂಚ್' ಈವೆಂಟ್ ಆಗಲಿದೆ.
ಶಂಕರ್ ನಾಗ್ ಸರ್ಕಲ್
ಹೌದು, ಡಿಸೆಂಬರ್ 15 ಕ್ಕೆ ನಡೆಯುವ ಫ್ರೀ ರಿಲೀಸ್ ಇವೆಂಟ್ ಶಂಕರ್ ನಾಗ್ ಸರ್ಕಲ್ ನಲ್ಲಿ ನಡೆಯಲಿದೆ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ 'ತ್ರಿವೇಣಿ ಸಂಗಮ' ಸಿನಿಮಾ 45 ಟ್ರೈಲರ್ ಲಾಂಚ್ ಸಾಕಷ್ಟು ಗ್ರಾಂಡ್ ಆಗಿ ನಡೆಯಲಿದೆ. ಈ ಗ್ರಾಂಡ್ ಈವೆಂಟ್‌ಗೆ ಸಾಕ್ಷಿಯಾಗಲಿದ್ದಾರೆ ಬೆಂಗಳೂರು ಕಮಿಷನರ್ ಸೀಮಂತ್ ಕುಮಾರ್.
ಬೆಂಗಳೂರು ಕಮಿಷನರ್ ಸೀಮಂತ ಕುಮಾರ್ ಸಿಂಗ್
ಯೆಸ್, ಶಂಕರ್ ನಾಗ್ ಸರ್ಕಲ್ ಬಳಿಯ ಗ್ರೌಂಡ್ ನಲ್ಲಿ 45 ಚಿತ್ರದ ಅದ್ದೂರಿ ಫ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬೆಂಗಳೂರು ಕಮಿಷನರ್ ಸೀಮಂತ ಕುಮಾರ್ ಸಿಂಗ್ ಆಗಮಿಸಲಿದ್ದಾರೆ. ಇದೇ ತಿಂಗಳ 25ಕ್ಕೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 45 ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಶಿವರಾಜ್ ಕುಮಾರ್,ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ಬಹುನಿರೀಕ್ಷಿತ 45ಗೆ ಈಗ ಕ್ಷಣಗಣನೆ ಶುರುವಾಗಿದೆ. ಮ್ಯೂಸಿಕ್ ಮಾಂತ್ರಿಕ ಎಂದೇ ಖ್ಯಾತರಾಗಿರುವ, ಕನ್ನಡದ ಮ್ಯೂಸಿಕ್ ಮ್ಯಾಜಿಕ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾ ಸೆನ್ಸಾರ್‌ನಲ್ಲಿ UA ಸರ್ಟಿಫಿಕೇಟ್ ಪಡೆದುಕೊಂಡಿದೆ.
ಶಿವರಾಜ್ ಕುಮಾರ್,ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ 45
ಹೌದು, ನಾಳೆ ಕನ್ನಡದ ಮೂರು ಸ್ಟಾರ್‌ನಟರು, ಶಿವರಾಜ್ ಕುಮಾರ್,ಉಪೇಂದ್ರ, ರಾಜ್ ಬಿ ಶೆಟ್ಟಿ ಒಂದಾಗಿ ನಟಿಸಿರುವ '45' ಸಿನಿಮಾದ ಟ್ರೈಲರ್ ಈವೆಂಟ್ ಬಹಳಷ್ಟು ಗ್ರಾಂಡ್ ಆಗಿ ನಡೆಯಲಿದೆ. ನಾಳೆ, ಕನ್ನಡ ಸಿನಿಮಾರಂಗದಲ್ಲಿ ಮಿಂಚಿನ ಸಂಚಾರಕ್ಕೆ ಸೂಚನೆ ಸಿಗೋದು ಖಂಡಿತ ಎನ್ನಲಾಗುತ್ತಿದೆ. 45 ಸಿನಿಮಾಗೆ ವಿಶ್ವದಾದ್ಯಂತ ಸಾಕಷ್ಟು ನಿರೀಕ್ಷೆ ಸೃಷ್ಟಿಯಾಗಿದೆ. ಇನ್ನೇನು 10 ದಿನ ಕಾದರೆ ಸಾಕು, ನಿಮ್ಮ ಮುಂದೆ '45' ಸಿನಿಮಾ 'ದರ್ಶನ' ನೀಡಲಿದೆ.


