- Home
- News
- State
- ಗ್ರೇಟರ್ ಬೆಂಗಳೂರು ಜನರೇ ನಿಮ್ಮ ನಗರಪಾಲಿಕೆ, ವಿಧಾನಸಭಾ ಕ್ಷೇತ್ರ, ವಾರ್ಡ್ ಯಾವುದೆಂದು ಈಗಲೇ ಚೆಕ್ ಮಾಡಿ!
ಗ್ರೇಟರ್ ಬೆಂಗಳೂರು ಜನರೇ ನಿಮ್ಮ ನಗರಪಾಲಿಕೆ, ವಿಧಾನಸಭಾ ಕ್ಷೇತ್ರ, ವಾರ್ಡ್ ಯಾವುದೆಂದು ಈಗಲೇ ಚೆಕ್ ಮಾಡಿ!
ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಆಗಿ ಪರಿವರ್ತಿಸಿ, ಪ್ರದೇಶಗಳನ್ನು ಮರುವಿಂಗಡಿಸಲಾಗಿದೆ. ನಿಮ್ಮ ವಾರ್ಡ್, ನಿಮ್ಮ ವಿಧಾನಸಭಾ ಕ್ಷೇತ್ರ ಮತ್ತು ನಗರ ಪಾಲಿಕೆಯನ್ನು ತಿಳಿದುಕೊಳ್ಳಿ. ಆಯುಕ್ತರು ಮತ್ತು ಕಚೇರಿಗಳ ವಿಳಾಸವೂ ಇಲ್ಲಿದೆ ನೋಡಿ..

ಬೆಂಗಳೂರು (ಸೆ.03): ಸಿಲಿಕಾನ್ ಸಿಟಿ ಬೆಂಗಳೂರನ್ನು ಎಲ್ಲ ಆಯಾಮಗಳಲ್ಲಿಯೂ ಅಭಿವೃದ್ಧಿ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಬಿಬಿಎಂಪಿಯನ್ನು ಇದೀಗ ಗ್ರೇಟರ್ ಬೆಂಗಳೂರು ಆಗಿ ಬದಲಾವಣೆ ಮಾಡಿದೆ. ಆದರೆ, ಇದೀಗ ಬೆಂಗಳೂರಿನ ಪ್ರದೇಶಗಳನ್ನು ಹರಿದು ಹಂಚಿಕೆ ಮಾಡಲಾಗಿದ್ದು, ಯಾವ ವಿಧಾನಸಭಾ ಕ್ಷೇತ್ರದ ಜನರು ಯಾವ ನಗರ ಪಾಲಿಕೆ, ಯಾವ ವಾರ್ಡ್‌ಗೆ ಬರಲಿದ್ದಾರೆ ಎಂಬ ಮಾಹಿತಿ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಒಮ್ಮೆ ನೀವಿರುವ ಪ್ರದೇಶ ಯಾವ ನಗರ ಪಾಲಿಕೆಗೆ ಬರುತ್ತದೆ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ಬೆಂಗಳೂರು ಕೇಂದ್ರ ನಗರ ಪಾಲಿಕೆ
ವಲಯ 1ರ ಕಚೇರಿ, ವ್ಯಾಪ್ತಿ: ಪೂರ್ವ ವಲಯ ಕಚೇರಿ, ಶಾಂತಿನಗರ, ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರ
ವಲಯ 2ರ ಕಚೇರಿ, ವ್ಯಾಪ್ತಿ: ಎನ್.ಆರ್.ಚೌಕದಲ್ಲಿರುವ ಅನೆಕ್ಸ್-3 ಕಟ್ಟಡ; ಶಿವಾಜಿನಗರ, ಗಾಂಧಿನಗರ, ಚಿಕ್ಕಪೇಟೆ, ಚಾಮರಾಜಪೇಟೆ
ಆಯುಕ್ತರು : ಪಿ. ರಾಜೇಂದ್ರ ಚೋಳನ್
ಹೆಚ್ಚುವರಿ ಆಯುಕ್ತರು (ಅಭಿವೃದ್ಧಿ) : ರಾಹುಲ್ ಶರಣಪ್ಪ ಸಂಕನೂರ
ವಿಧಾನಸಭಾ ಕ್ಷೇತ್ರ ಮತ್ತು ವಾರ್ಡ್‌ಗಳು: ಸಿ.ವಿ.ರಾಮನ್‌ನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಶಾಂತಿನಗರ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್‌ಗಳು. ಜೊತೆಗೆ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕುಶಾಲನಗರ ವಾರ್ಡ್ ಮಾತ್ರ ಕೇಂದ್ರಕ್ಕೆ ಸೇರ್ಪಡೆ.
ಬೆಂಗಳೂರು ಪೂರ್ವ ನಗರ ಪಾಲಿಕೆ
ವಲಯ 1ರ ಕಚೇರಿ, ವ್ಯಾಪ್ತಿ: ಮಹದೇವಪುರ ವಲಯ ಕಚೇರಿ, ಮಹದೇವಪುರ ವಿಧಾನಸಭಾ ಕ್ಷೇತ್ರ
ವಲಯ 2ರ ಕಚೇರಿ, ವ್ಯಾಪ್ತಿ: ಕೆ.ಆರ್.ಪುರ ಮುಖ್ಯ ಎಂಜಿನಿಯರ್ ಕಚೇರಿ; ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ
ಆಯುಕ್ತರು : ಡಿ.ಎಸ್. ರಮೇಶ್
ಹೆಚ್ಚುವರಿ ಆಯುಕ್ತರು (ಅಭಿವೃದ್ಧಿ) : ಲೋಖಂಡೆ ಸ್ನೇಹಲ್ ಸುಧಾಕರ್
ವಿಧಾನಸಭಾ ಕ್ಷೇತ್ರ ಮತ್ತು ವಾರ್ಡ್‌ಗಳು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್‌ಗಳು ಹಾಗೂ ಬೆಳ್ಳಂದೂರು ವಾರ್ಡ್‌ನ ಕೆಲವು ಪ್ರದೇಶವನ್ನು ಹೊರತುಪಡಿಸಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್‌ಗಳು
ಬೆಂಗಳೂರು ಪಶ್ಚಿಮ ನಗರ ಪಾಲಿಕೆ
ವಲಯ 1ರ ಕಚೇರಿ, ವ್ಯಾಪ್ತಿ: ಆರ್.ಆರ್.ನಗರ ವಲಯ ಕಚೇರಿ: ಯಶವಂತಪುರ (ಭಾಗಶಃ), ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ
ವಲಯ 2ರ ಕಚೇರಿ, ವ್ಯಾಪ್ತಿ: ಐಪಿಪಿ, ಮಲ್ಲೇಶ್ವರ, ಮಲ್ಲೇಶ್ವರ, ರಾಜಾಜಿನಗರ, ಗೋವಿಂದರಾಜನಗರ, ಬಸವನಗುಡಿ, ಪದ್ಮನಾಭನಗರ (ಭಾಗಶಃ) ವಿಧಾನಸಭಾ ಕ್ಷೇತ್ರ
ಆಯುಕ್ತರು: ಕೆ.ವಿ. ರಾಜೇಂದ್ರ
ಹೆಚ್ಚುವರಿ ಆಯುಕ್ತರು (ಅಭಿವೃದ್ಧಿ) : ದಿಗ್ವಿಜಯ್ ಬೋಡ್ಕ
ವಿಧಾನಸಭಾ ಕ್ಷೇತ್ರ ಮತ್ತು ವಾರ್ಡ್‌ಗಳು:
- ಬಸವನಗುಡಿ, ಗೋವಿಂದರಾಜನಗರ, ವಿಜಯನಗರ ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್ ಗಳು.
- ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚೊಕ್ಕಸಂದ್ರ, ರಾಜಗೋಪಾಲನಗರ, ಹೆಗ್ಗನಹಳ್ಳಿ ವಾರ್ಡ್,
- ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಹೊಸಕೆರೆಹಳ್ಳಿ, ಗಣೇಶಮಂದಿರ, ಕರಿಸಂದ್ರ, ಯಡಿಯೂರು ವಾರ್ಡ್,
- ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಎಚ್‌ಎಂಟಿ, ಲಕ್ಷ್ಮಿದೇವಿನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ ವಾರ್ಡ್, ರಾಜರಾಜೇಶ್ವರಿ ನಗರ ವಾರ್ಡ್ ಕೆಲವು ಭಾಗ,
- ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ಕೆಲವು ಭಾಗ ಹೊರತುಪಡಿಸಿ ಎಲ್ಲ ವಾರ್ಡ್.
ಬೆಂಗಳೂರು ಉತ್ತರ ನಗರ ಪಾಲಿಕೆ
ವಲಯ 1ರ ಕಚೇರಿ, ವ್ಯಾಪ್ತಿ: ಯಲಹಂಕ ವಲಯ ಕಚೇರಿ; ಬ್ಯಾಟರಾಯನಪುರ, ಪುಲಕೇಶಿನಗರ, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ವಲಯ 2ರ ಕಚೇರಿ, ವ್ಯಾಪ್ತಿ: ದಾಸರಹಳ್ಳಿ ವಲಯ ಕಚೇರಿ; ದಾಸರಹಳ್ಳಿ (ಭಾಗಶಃ), ರಾಜರಾಜೇಶ್ವರಿ ನಗರ (ಭಾಗಶಃ), ಹೆಬ್ಬಾಳ, ಯಲಹಂಕ ವಿಧಾನಸಭಾ ಕ್ಷೇತ್ರ
ಆಯುಕ್ತರು : ಪೊಮ್ಮಲ ಸುನೀಲ್‌ಕುಮಾರ್
ಹೆಚ್ಚುವರಿ ಆಯುಕ್ತರು (ಅಭಿವೃದ್ಧಿ): ಆರ್. ಲತಾ
ವಿಧಾನಸಭಾ ಕ್ಷೇತ್ರ ಮತ್ತು ವಾರ್ಡ್‌ಗಳು:
- ಬ್ಯಾಟರಾಯನಪುರ, ಹೆಬ್ಬಾಳ, ಸರ್ವಜ್ಞನಗರ, ಯಲಹಂಕ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್‌ಗಳು.
- ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಕುಂಟೆ, ಟಿ.ದಾಸರಹಳ್ಳಿ.
- ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿ, ಜೆ.ಪಿ. ಪಾರ್ಕ್.
- ಯಶವಂತಪುರದ ಕೆಲವು ವಾರ್ಡ್‌ಗಳು.
- ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕುಶಾಲನಗರ ವಾರ್ಡ್ ಹೊರತುಪಡಿಸಿ ಎಲ್ಲ ವಾರ್ಡ್‌ಗಳು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ
ವಲಯ 1ರ ಕಚೇರಿ, ವ್ಯಾಪ್ತಿ: ದಕ್ಷಿಣ ವಲಯ ಕಚೇರಿ, ಪದ್ಮನಾಭನಗರ (ಭಾಗಶಃ), ರಾಜರಾಜೇಶ್ವರಿ ನಗರ (ಭಾಗಶಃ), ಯಶವಂತಪುರ (ಭಾಗಶಃ), ಜಯನಗರ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ
ವಲಯ 2ರ ಕಚೇರಿ, ವ್ಯಾಪ್ತಿ: ಬೊಮ್ಮನಹಳ್ಳಿ ವಲಯ ಕಚೇರಿ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಮಹದೇವಪುರ (ಭಾಗಶಃ), ಆನೇಕಲ್ (ಭಾಗಶಃ) ವಿಧಾನಸಭಾ ಕ್ಷೇತ್ರ
ಆಯುಕ್ತರು : ಕೆ.ಎನ್. ರಮೇಶ್
ಹೆಚ್ಚುವರಿ ಆಯುಕ್ತರು (ಅಭಿವೃದ್ಧಿ) : ಪದ್ದೆ ರಾಹುಲ್ ತುಕಾರಾಮ್
ವಿಧಾನಸಭಾ ಕ್ಷೇತ್ರ ಮತ್ತು ವಾರ್ಡ್‌ಗಳು:
- ಬಿಟಿಎಂ ಲೇಔಟ್, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್‌ಗಳು.
- ಮಹದೇವಪುರ ವಿಧಾನಸಭಾ ಕ್ಷೇತ್ರದ ಬೆಳ್ಳಂದೂರಿನ ಕೆಲವು ಭಾಗ.
- ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬನಶಂಕರಿ ದೇವಸ್ಥಾನ, ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಚಿಕ್ಕಲಸಂದ್ರ ವಾರ್ಡ್.
- ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ರಾಜರಾಜೇಶ್ವರಿ ವಾರ್ಡ್ ಕೆಲವು ಭಾಗ.
- ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ಕೆಲವು ಭಾಗ.
- ಅನೇಕಲ್ ವಿಧಾನಸಭಾ ಕ್ಷೇತ್ರದ ಸಿಂಗಸಂದ್ರ (ಕೂಡ್ಲು) ವಾರ್ಡ್
ಬಿಬಿಎಂಪಿಯನ್ನು ಅಧಿಕೃತವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ನಾಮಫಲಕ ಸಮೇತವಾಗಿ ಬದಲಾವಣೆ ಮಾಡಲಾಗುದೆ. ಬೆಂಗಳೂರು ಕೇಂದ್ರ ನಗರ, ಬೆಂಗಳೂರು ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ನಗರಗಳೆಂದು ಒಟ್ಟು 5 ನಗರ ಪಾಲಿಕೆಗಳಾಗಿ ವಿಂಗಡಿಸಿ ಅದಕ್ಕೆ ಆಯುಕ್ತರನ್ನೂ ನಿಯೋಜನೆ ಮಾಡಲಾಗಿದೆ. ಪ್ರತಿಯೊಂದು ನಗರ ಪಾಲಿಕೆಗಳಿಗೆ ಒಬ್ಬ ಹೆಚ್ಚುವರಿ ಆಯುಕ್ತರನ್ನು (ಐಎಎಸ್) ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರಿನ ಕಾರ್ಪೋರೇಷನ್ ಸರ್ಕಲ್‌ನಲ್ಲಿದ್ದ ಬಿಬಿಎಂಪಿ ಕೇಂದ್ರ ಕಚೇರಿ ಮೇಲಿದ್ದ ಫಲಕವನ್ನು ತೆರವುಗೊಳಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂಬ ಫಲಕವನ್ನು ಅಳವಡಿಕೆ ಮಾಡಲಾಗಿದೆ. ಇದನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು.