- Home
- News
- State
- Karnataka News Live: CJ Roy Case - ಸಾಲ, ಬೆದರಿಕೆ, ಒತ್ತಡ - ಸೋದರನ ಸಾವಿನ ಕಾರಣ ಬಿಚ್ಚಿಟ್ರಾ ಬಾಬು ರಾಯ್?
Karnataka News Live: CJ Roy Case - ಸಾಲ, ಬೆದರಿಕೆ, ಒತ್ತಡ - ಸೋದರನ ಸಾವಿನ ಕಾರಣ ಬಿಚ್ಚಿಟ್ರಾ ಬಾಬು ರಾಯ್?

ಬೆಂಗಳೂರು: ಐಟಿ ಇಲಾಖೆ ಅಧಿಕಾರಿಗಳು ಪರಿಶೀಲನೆ ವೇಳೆ ಅನೇಕ ಪ್ರಶ್ನೆಗಳನ್ನ ಕೇಳುವಾಗ 5 ನಿಮಿಷ ಸಮಯಕೊಡಿ ಅಂತ ಕೇಳಿ ಒಳಗಡೆ ಹೋದ ಉದ್ಯಮಿ ಸಿ.ಜೆ.ರಾಯ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಮ್ಮ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಜನರಿಗೆ ಸತ್ಯಾಂಶ ತಿಳಿಸುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉದ್ಯಮಿ ಸಿ.ಜೆ.ರಾಯ್ ಒಬ್ಬ ಒಳ್ಳೆಯ ಉದ್ಯಮಿ. ಹೀಗೆ ಆಗಬಾರದಿತ್ತು. ಐಟಿ ತಂಡ ಕೇರಳದಿಂದ ಬಂದಿತ್ತು ಎಂಬ ಮಾಹಿತಿ ಇದೆ. ಈ ಘಟನೆ ಕುರಿತು ನಮಗೆ ದೆಹಲಿಯಿಂದ ಕೂಡ ವರದಿ ಕೇಳಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಿ, ಜನರಿಗೆ ಸತ್ಯಾಂಶ ತಿಳಿಸುವ ಕೆಲಸವನ್ನ ನಮ್ಮ ಸರ್ಕಾರ ಮಾಡುತ್ತದೆ. ಐಟಿ ಬಗ್ಗೆ ನಾನು ಮಾತನಾಡಿದರೆ ರಾಜಕೀಯ ಆಗುತ್ತದೆ. ಈ ಕಿರುಕುಳವನ್ನ ನಾನು ಖಂಡಿಸುತ್ತೇನೆ. ಇದು ಸರಿಯಲ್ಲ ಎಂದಿದ್ದಾ
Karnataka News Live 31 January 2026CJ Roy Case - ಸಾಲ, ಬೆದರಿಕೆ, ಒತ್ತಡ - ಸೋದರನ ಸಾವಿನ ಕಾರಣ ಬಿಚ್ಚಿಟ್ರಾ ಬಾಬು ರಾಯ್?
Karnataka News Live 31 January 2026ಭ್ರಷ್ಟಾಚಾರಕ್ಕೆ ಸಾಕ್ಷ್ಯ ಕೊಟ್ರೆ ರಾಜೀನಾಮೆ ಕೊಡ್ತೇನೆ - ಸಚಿವರ ಸವಾಲ್
ನನ್ನ ಮೇಲೆ ಬಂದಿರುವ ಎಲ್ಲಾ ಆರೋಪಗಳು ಆಧಾರ ರಹಿತ. ಯಾರೋ ಅಧಿಕಾರಿ ಹೇಳಿದ್ದಾನೆಂಬ ಆರೋಪ ಹೊರಿಸಿ ರಾಜೀನಾಮೆ ಕೇಳುವುದು ಸರಿಯಲ್ಲ. ನಾನು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೇನೆ ಎನ್ನುವುದಕ್ಕೆ ಸಾಕ್ಷ್ಯಾಧಾರ ಕೊಟ್ಟರೆ ಈ ಕ್ಷಣದಲ್ಲಿ ರಾಜೀನಾಮೆ ಕೊಡುತ್ತೇನೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
Karnataka News Live 31 January 2026ಸಂಗಾತಿ ಅರಸಿಕೊಂಡು ಬಂದಿದ್ದ 12 ಅಡಿ ಉದ್ದದ, 42 ಕೆಜಿ ತೂಕದ ಬೃಹತ್ ಹೆಣ್ಣು ಹೆಬ್ಬಾವು ರಕ್ಷಣೆ
ಸೋಲಾರ್ ಪ್ಲಾಂಟ್‌ನಲ್ಲಿ ಕಾಣಿಸಿಕೊಂಡಿದ್ದ 12 ಅಡಿ ಉದ್ದದ, 42 ಕೆಜಿ ತೂಕದ ಬೃಹತ್ ಹೆಣ್ಣು ಹೆಬ್ಬಾವನ್ನು ಉರಗ ತಜ್ಞ ಬಾಣಸಂದ್ರ ರವೀಶ್ ಅವರು ರಕ್ಷಿಸಿದ್ದಾರೆ. ಸಂತಾನೋತ್ಪತ್ತಿ ಕಾಲವಾದ್ದರಿಂದ ಸಂಗಾತಿಯನ್ನು ಅರಸಿ ಬಂದಿರುವ ಸಾಧ್ಯತೆಗಳಿವೆ.
Karnataka News Live 31 January 2026ಕೇರಳ ಟು ದುಬೈವರೆಗೆ ರಾಯ್ ಕಟ್ಟಿದ್ದ ಕಾನ್ಫಿಡೆಂಟ್ ಸಾಮ್ರಾಜ್ಯ! ಸೇಲ್ಸ್ ಮ್ಯಾನ್ ಬೈದಿಕ್ಕೆ ಶಪಥ ಮಾಡಿದ್ದ ರಾಯ್
ಯಶಸ್ವಿ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ.ರಾಯ್, ಜನರ ಕನಸಿನ ಮೇಲೆ ಸಾಲ ಮಾಡದೆ ಸ್ವಂತ ಬಂಡವಾಳದಿಂದ 'ಕಾನ್ಫಿಡೆಂಟ್' ಸಾಮ್ರಾಜ್ಯವನ್ನು ಕಟ್ಟಿದರು. ಆದರೆ, ಐ.ಟಿ. ಅಧಿಕಾರಿಗಳ ಕಿರುಕುಳದಿಂದಾಗಿ ಅವರ ಬದುಕು ದುರಂತ ಅಂತ್ಯ ಕಂಡಿದೆ ಎಂದು ಅವರ ಸಹೋದರ ಆರೋಪಿಸಿದ್ದಾರೆ.
Karnataka News Live 31 January 2026ಹಿರಿಯ ರಂಗಕರ್ಮಿ ಬಿ. ಜಯಶ್ರೀ ಅವರನ್ನು ಅಲೆದಾಡಿಸಿದ ಭೂ ಮಾಪನ ಇಲಾಖೆ
ಹಿರಿಯ ರಂಗಕರ್ಮಿ ಮಾಜಿ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಅವರನ್ನು ಸರ್ಕಾರಿ ಅಧಿಕಾರಿಗಳು ಕಚೇರಿಗೆ ಮೂರನೇ ಬಾರಿ ಅಲೆದಾಡಿಸಿದ ಘಟನೆ ಗುಬ್ಬಿ ತಾಲೂಕಿನ ಭೂಮಾಪನ ಕಚೇರಿಯಲ್ಲಿ ನಡೆದಿದೆ.
Karnataka News Live 31 January 2026ಭಾರತದ ತೈಲೋದ್ಯಮ ಸಾಹಸ ಜಗತ್ತಿನೆದುರು ಅನಾವರಣ
ಅಮೆರಿಕದ ಅನೂಹ್ಯ ಅಪಾಯಕಾರಿ ನಿರ್ಧಾರಗಳು, ನಿಲ್ಲದ ರಷ್ಯಾ-ಉಕ್ರೇನ್ ಸಮರ, ಮಧ್ಯಪ್ರಾಚ್ಯ ಬಿಕ್ಕಟ್ಟುಗಳಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯು ಪ್ರಕ್ಷುಬ್ಧ ಸಾಗರದಂತಾಗಿದ್ದರೂ ಅದರಲ್ಲಿ ಧೈರ್ಯವಾಗಿ ಈಜಬಲ್ಲೆ ಎಂಬ ಸಂದೇಶವನ್ನು ''ಇಂಡಿಯಾ ಎನರ್ಜಿ ವೀಕ್'' ಮೂಲಕ ಭಾರತ ಜಗತ್ತಿಗೆ ಸಾರುವಲ್ಲಿ ಸಫಲವಾಯಿತು.
Karnataka News Live 31 January 2026ಹೋಂ ವರ್ಕ್ ಮಾಡದ್ದಕ್ಕೆ ಬಾಲಕನಿಗೆ ಭಯಾನಕ ಶಿಕ್ಷೆ! ಬಲವಂತದಿಂದ ಶಾಲೆಗೆ ಕಳಿಸಿದರೆ ಸಾಯುವೆ ಎಂದ ವಿದ್ಯಾರ್ಥಿ
ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಹೋಂ ವರ್ಕ್ ಮಾಡಿಲ್ಲವೆಂಬ ಕಾರಣಕ್ಕೆ 4ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಬಾಸುಂಡೆ ಬರುವಂತೆ ಥಳಿಸಿದ್ದಾರೆ. ಈ ಸಂಬಂಧ ವಿದ್ಯಾರ್ಥಿಯ ತಾಯಿ ಶಿಕ್ಷಕಿ ಹಾಗೂ ಶಾಲಾ ಆಡಳಿತದ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ.
Karnataka News Live 31 January 2026ಖ್ಯಾತ ನಟಿ, ಮಾಡೆಲ್ & ರೆಸಾರ್ಟ್ - ಇದೆಲ್ಲವೂ ಆಗರ್ಭ ಶ್ರೀಮಂತರ ತೆವಲುಗಳು ಎಂದ ಚಂದ್ರಚೂಡ
Karnataka News Live 31 January 2026ಶಬರಿಮಲೆ ಚಿನ್ನಕ್ಕೆ ಕನ್ನ ಕೇಸು - ‘ಕಾಂತಾರ’ ನಟನ ವಿಚಾರಣೆ
ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಕವಚದ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕನ್ನಡದ ‘ಕಾಂತಾರ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟ ಜಯರಾಮ್‌ರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಿದ್ದಾರೆ.
Karnataka News Live 31 January 2026ಅಜಿತ್ ಪವಾರ್ ಪತ್ನಿ ಮಹಾ ಡಿಸಿಎಂ - ಇಂದು ಪ್ರಮಾಣ?
ಬುಧವಾರ ಬಾರಾಮತಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ನಿಧನರಾದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್, ಶನಿವಾರ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Karnataka News Live 31 January 202612 ಅಡಿ ಆಳಕ್ಕೆ ಅಗೆತ; ಪುರಾತತ್ವ ಇಲಾಖೆಯ ಉತ್ಖನನಕ್ಕೆ ಲಕ್ಕುಂಡಿ ಜನರಿಂದ ದಿಢೀರ್ ವಿರೋಧ
Karnataka News Live 31 January 2026ಹಾದಿ ಬದಲಾಗಿದೆ - ಬೆಳ್ಳಿ ದರ ₹ 15 ಸಾವಿರ, ಚಿನ್ನ₹ 9650 ಇಳಿಕೆ
ಕೆಲದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ಅಮೂಲ್ಯ ಲೋಹಗಳ ಹಾದಿ ಬದಲಾಗಿದ್ದು, ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೆ.ಜಿ.ಗೆ 15,000 ರು. ಕಡಿಮೆಯಾಗಿದ್ದು, 3,95,000 ರು. ಆಗಿದೆ.