Pradeep Eshwar Questions BJP over CJ Roy's Death & IT Harassment ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ಹಣಕ್ಕಾಗಿ ಕಿರುಕುಳ ನೀಡಿದೆ ಎಂದು ಆರೋಪಿಸಿ ಎಸ್‌ಐಟಿ ತನಿಖೆಗೆ ಆಗ್ರಹಿಸಿದ್ದಾರೆ.
ಬೆಂಗಳೂರು (ಜ.31): ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅನುಮಾನ ವ್ಯಕ್ತಪಡಿಸಿದ್ದಾರೆ. ಸಿ.ಜೆ.ರಾಯ್ ಅವರೇ ಗುಂಡು ಹೊಡೆದುಕೊಂಡ್ರಾ.? ಅಥವಾ ಯಾರಾದ್ರು ಗುಂಡು ಹೊಡೆದ್ರಾ.? ಅಲ್ಲಿ ಸಿಸಿಟಿವಿ ಇಲ್ಲ, ಇದ್ದವರು ಐಟಿಯವರು ಮಾತ್ರ. ಒಳಗಡೆ ಏನಾಗಿದ್ಯೋ ಏನೋ ಗೊತ್ತಿಲ್ಲ. ನನಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಬಿಜೆಪಿಯವರು ಚುನಾವಣೆಗೆ ನೂರಾರು ಕೋಟಿ ಹಣ ಕೇಳಿದ್ದಾರ.ೆ ಅವರ ಹಣ ಕೊಡದಿದ್ದಕ್ಕೆ ಅವರನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇಂತಹ ಭ್ರಷ್ಟ ಬಿಜೆಪಿಯಿಂದ ನಮ್ಮ ದೇಶ ಅಭಿವೃದ್ಧಿ ಆಗಲ್ಲ. ಅಶೋಕಣ್ಣ, ಸುನೀಲಣ್ಣ, ಯತ್ನಾಳ್ ಅವ್ರು, ಮೈಸೂರಿನ ಒಂದು ಕೋತಿ ಎಲ್ಲದಕ್ಕೂ ಬಾಯಿ ಬಡಿದುಕೊಳ್ತಾರೆ. ಇದರ ಬಗ್ಗೆ ಯಾಕೆ ಯಾರೂ ಬಾಯಿ ಬಿಡ್ತಿಲ್ಲ. ಒಬ್ಬ ಕಾಮನ್ ಮ್ಯಾನ್ ಹಣ ಸಂಪಾದನೆ ಮಾಡೋಕೆ ಬಿಜೆಪಿ ಬಿಡ್ತಿಲ್ಲ. ಅವರಿಗೆ ಸಾಲ ಇಲ್ಲ, ಯಾವುದೇ ಸಮಸ್ಯೆ ಇಲ್ಲ ಕಳೆದ ಒಂದು ತಿಂಗಳಿನಿಂದ ಐಟಿ ಅವರಿಗೆ ಕಿರುಕುಳ ನೀಡಿದೆ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಇದ್ರೆ ಇದೇ ಕಿರುಕುಳ ಮುಂದುವರೆಯುತ್ತೆ. ಈ ಬಗ್ಗೆ ಎಸ್ಐಟಿ ತನಿಖೆ ಆಗಲಿ. ಇದನ್ನ ಸಿಬಿಐಗೆ ಕೊಟ್ರೆ ಅದೂ ಅವರ ಕೈಯಲ್ಲೇ ಇದೆ, ನ್ಯಾಯ ಸಿಗಲ್ಲ. ಹಾಗಾಗಿ ಎಸ್ಐಟಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಕನಕೋತ್ಸವಕ್ಕೆ ಆಗಮಿಸಿದ್ದ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಮನೆ, ಹೆಂಡ್ತಿ ಬಿಟ್ಟು ಶಿಡ್ಲಘಟ್ಟದಲ್ಲಿ ರಾಜೀವ್ ಗೌಡ ಪಕ್ಷ ಬೆಳೆಸಿದ್ದಾರೆ
ಕಾಂಗ್ರೆಸ್ ನಿಂದ ರಾಜೀವ್ ಗೌಡ ಅಮಾನತು ವಿಚಾರದ ಬಗ್ಗೆ ಮಾತನಾಡಿದ ಅವರು, 'ಹೆಣ್ಣುಮಕ್ಕಳ ಬಗ್ಗೆ ಅವರು ಮಾತನಾಡಿದ್ದು ತಪ್ಪು. ಅದಕ್ಕೆ ಎಫ್ಐಆರ್ ಆಗಿದೆ, ಅರೆಸ್ಟ್ ಕೂಡಾ ಆಗಿ ಬೇಲ್ ಮೇಲೆ ಆಚೆ ಬಂದಿದ್ದಾರೆ. ಆದರೆ ಅದರ ಇನ್ನೊಂದು ಆ್ಯಂಗಲ್ ಕೂಡಾ ನೋಡಬೇಕು. ಶಿಢ್ಲಘಟ್ಟದಲ್ಲಿ ರಾಜೀವ್ ಗೌಡ ಪಕ್ಷ ಕಟ್ಟಿದ್ದಾರೆ. ಐದಾರು ವರ್ಷ ಹೆಂಡ್ತಿ, ಮಕ್ಕಳು ಬಿಟ್ಟು ಕೆಲಸ ಮಾಡಿದ್ದಾರೆ. ಏಕಾಏಕಿ ಒಬ್ಬನ ಪೊಲಿಟಿಕಲ್ ಕೆರಿಯರ್ ನ ಎಂಡ್ ಮಾಡಿಬಿಟ್ರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.
ಹಾಗಂತ ರಾಜೀವ್ ಗೌಡನನ್ನ ನಾನು ಸಮರ್ಥನೆ ಮಾಡಿಕೊಳ್ತಿಲ್ಲ. ಅವರ ಅಮಾನತ್ತನ್ನ ಪಕ್ಷ ವಾಪಸ್ ತೆಗೆದುಕೊಳ್ಳುವ ಭರವಸೆ ಇದೆ. ರಾಜೀವ್ ಗೌಡನೇ ಶಿಢ್ಲಘಟ್ಟದ ಮುಂದಿನ ಅಭ್ಯರ್ಥಿ ಆಗಬೇಕು. ರಾಜೀವ್ ಗೌಡರನ್ನ ಯಾರೋ ಸ್ಥಳೀಯವಾಗಿ ಟಾರ್ಗೆಟ್ ಮಾಡಿದ್ದಾರೆ. ಒಂದೇ ಒಂದು ತಪ್ಪಿಗೆ ಅವರ ಕೆರಿಯರ್ ಅಂತ್ಯ ಮಾಡಬಾರದು ಎಂದು ಹೇಳಿದ್ದಾರೆ.


