ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿದೆ. 204 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ ರೋಚಕ ಜಯ ಸಾಧಿಸಿದೆ.
- Home
- News
- State
- State News Live: WPL 2026 - ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಮತ್ತೊಮ್ಮೆ ಚಾಂಪಿಯನ್; ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಲ್ಕನೇ ಬಾರಿ ಹಾರ್ಟ್ ಬ್ರೇಕ್!
State News Live: WPL 2026 - ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಮತ್ತೊಮ್ಮೆ ಚಾಂಪಿಯನ್; ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಲ್ಕನೇ ಬಾರಿ ಹಾರ್ಟ್ ಬ್ರೇಕ್!

ಬೆಂಗಳೂರು (ಫೆ.5): ನವದೆಹಲಿ: ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಗಿದ್ದ ಚೆನ್ನೈ-ಬೆಂಗಳೂರು, ಹೈದರಾಬಾದ್- ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ ಜತೆಗೆ ಪುಣೆ- ಬೆಂಗಳೂರು ರೈಲು ಕಾರಿಡಾರ್ ಕೂಡ ಅನುಷ್ಠಾನವಾಗುವ ಸೂಚನೆ ಸಿಕ್ಕಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೈಸ್ಪೀಡ್ ರೈಲು ಕಾರಿಡಾರ್ ಮಾರ್ಗಕ್ಕೆ ಪುಣೆ- ಬೆಂಗಳೂರು ಸೇರಿಸುವಂತೆ ಮನವಿ ಮಾಡಿದರು. ಇದಕ್ಕೆ ವೈಷ್ಣವ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಚೆನ್ನೈ, ಹೈದ್ರಾಬಾದ್ ಬದಲಿಗೆ ಪುಣೆ-ಬೆಂಗಳೂರು ಮಾರ್ಗದಲ್ಲಿ ಹೈಸ್ಪೀಡ್ ರೈಲು ಓಡಿಸಿದರೆ ಬೆಳಗಾವಿ, ಹುಬ್ಬ ಳ್ಳಿ, ಹಾವೇರಿ, ದಾವಣಗೆರೆ, ತುಮಕೂರಿಗೆ ಅನುಕೂಲವಾಗಲಿದೆ ಎಂದು ಬಜೆಟ್ ಬಳಿಕ ಸಿಎಂ ಸಿದ್ದರಾಮಯ್ಯ ಸೇರಿ ರಾಜ್ಯ ಸರ್ಕಾರದ ಸಚಿವರು ಆಗ್ರಹಿಸಿದ್ದರು.ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 5th February: WPL 2026 - ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಮತ್ತೊಮ್ಮೆ ಚಾಂಪಿಯನ್; ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಲ್ಕನೇ ಬಾರಿ ಹಾರ್ಟ್ ಬ್ರೇಕ್!
Karnataka News Live 5th February: ಭಾರತೀಯ ವಾಯುಪಡೆ ಅಚ್ಚರಿ ಮಾಹಿತಿ ನೀಡಿದ ಏರ್ ಮಾರ್ಷಲ್ ಇಂದರ್‌ಪಾಲ್ ಸಿಂಗ್ ವಾಲಿಯಾ
ಈಸ್ಟರ್ನ್ ಏರ್ ಕಮಾಂಡ್‌ನ ಮುಖ್ಯಸ್ಥರಾದ ಏರ್ ಮಾರ್ಷಲ್ ಇಂದರ್‌ಪಾಲ್ ಸಿಂಗ್ ವಾಲಿಯಾ ಅವರು ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಪೂರ್ವ ವಲಯದಲ್ಲಿ ಭಾರತೀಯ ವಾಯುಪಡೆಯ ವ್ಯೂಹಾತ್ಮಕ ಪಾತ್ರ, ಕಾರ್ಯಾಚರಣೆಯ ಸನ್ನದ್ಧತೆ, ಎದುರಿಸುತ್ತಿರುವ ಸವಾಲುಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.
Karnataka News Live 5th February: ಜೈಲಲ್ಲಿದ್ದ ಶಾಸಕ ಸತೀಶ್ ಸೈಲ್ ಗಂಭೀರ ಅನಾರೋಗ್ಯ - ವೈದ್ಯಕೀಯ ಜಾಮೀನು ಕೊಟ್ಟ ಹೈಕೋರ್ಟ್!
Karnataka News Live 5th February: ಫೆಬ್ರವರಿ ಉತ್ತರಾರ್ಧದಲ್ಲಿ ಪಂಚಕ್ರಗಿ ಯೋಗದಿಂದ ಇಡೀ ತಿಂಗಳು ಒಂದು ರಾಶಿಗೆ ಮಾತ್ರ ಜಾಕ್‌ಪಾಟ್
ಫೆಬ್ರವರಿ ಉತ್ತರಾರ್ಧದಲ್ಲಿ ರೂಪುಗೊಳ್ಳುವ 'ಪಂಚಕ್ರಗಿ ರಾಜಯೋಗ'ದಿಂದ ಧನು ರಾಶಿಯವರಿಗೆ ವೃತ್ತಿ, ವ್ಯಾಪಾರ ಮತ್ತು ಪ್ರೇಮ ಜೀವನದಲ್ಲಿ ಉತ್ತಮ ಫಲಗಳಿವೆ. ಮೇಲಧಿಕಾರಿಗಳ ಬೆಂಬಲ, ವ್ಯವಹಾರದಲ್ಲಿ ದುಪ್ಪಟ್ಟು ಲಾಭ ಮತ್ತು ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿಯೂ ಸ್ಥಿರವಾಗಿರುತ್ತದೆ.
Karnataka News Live 5th February: ನಾದಬ್ರಹ್ಮ ಹಂಸಲೇಖ ಅವರಿಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 'ಜೀವಮಾನ ಸಾಧನೆ' ಪ್ರಶಸ್ತಿ
Karnataka News Live 5th February: ನೀನು ದನ ಕಾಯ್ತಿದ್ದವನು, ನಿರ್ಮಾಪಕರ ರಕ್ತ ಹೀರಿ ಕೋಟಿ ಒಡೆಯನಾದೆ - ಜೋಗಿ ಪ್ರೇಮ್ ವಿರುದ್ಧ ಸಿಡಿದ ಕನಕಪುರ ಶ್ರೀನಿವಾಸ್!
'ಕಾಟನ್‌ಪೇಟೆ' ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್, ನಿರ್ದೇಶಕ ಪ್ರೇಮ್ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪ್ರೇಮ್ ನಿರ್ಮಾಪಕರನ್ನು ಹಾಳುಮಾಡಿದ್ದಾರೆ ಎಂದ ಅವರು, ನಟ ಧ್ರುವ ಸರ್ಜಾ ಹಾಗೂ ಇಂದಿನ ನಟರ ವರ್ತನೆ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Karnataka News Live 5th February: ಕುಶಾಲನಗರದ ತೋಟದಲ್ಲಿ ನಟಿ ಸನ್ನಿ ಲಿಯೋನ್ 'ಪ್ರತ್ಯಕ್ಷ'; ರೈತನ ಶ್ರೀಮಂತಿಕೆ ಕಂಡು ನೆಟ್ಟಿಗರು ಫಿದಾ, ವಿಡಿಯೋ ವೈರಲ್!
ಮೈಸೂರು-ಕೊಡಗು ಗಡಿಭಾಗದಲ್ಲಿ ಅಂದರೆ ಬೆಟ್ಟದಪುರದಿಂದ ಕುಶಾಲನಗರಕ್ಕೆ ತೆರಳುವ ರಸ್ತೆಯ ಬದಿಯ ತೋಟವೊಂದರಲ್ಲಿ ಸನ್ನಿ ಲಿಯೋನ್ ಕಂಡುಬಂದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Karnataka News Live 5th February: ಪೊಲೀಸ್ ಅಧಿಕಾರಿಗಳೇ ಸಂಚರಿಸಿದ ಸರ್ಕಾರಿ ವಾಹನಕ್ಕೆ ನಂಬರ್ ಪ್ಲೇಟ್ ಇಲ್ಲ! ನಿಜವಾಗಿ ಕಾನೂನು ಯಾರಿಗೆ?
ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಗಳು ಸಂಚರಿಸುತ್ತಿದ್ದ ಸರ್ಕಾರಿ ವಾಹನವೊಂದರ ಹಿಂಬದಿಯ ನಂಬರ್ ಪ್ಲೇಟ್ ನಾಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
Karnataka News Live 5th February: ಡಿಕೆಶಿಗೆ ಜಾವಾ ಬೈಕ್‌ಗೆ ಪೆಟ್ರೋಲ್ ಹಾಕಿಸಲು ಕಾಸಿರಲಿಲ್ಲ, ನಾನೇ ಕೊಟ್ಟಿದ್ದೆ; ನಾನೇ 'ಕನಕಪುರ ಬಂಡೆ' ಶ್ರೀನಿವಾಸ್!
ಚಲನಚಿತ್ರ ನಿರ್ಮಾಪಕ ಕನಕಪುರ ಶ್ರೀನಿವಾಸ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಾವೇ ಮೂಲ 'ಕನಕಪುರ ಬಂಡೆ' ಎಂದಿರುವ ಅವರು, ಹಿಂದೆ ಡಿಕೆಶಿಗೆ ಪೆಟ್ರೋಲ್‌ಗೂ ಹಣವಿರಲಿಲ್ಲ, ನಾನೇ ಕೊಡುತ್ತಿದ್ದೆ ಎಂದು ಹೇಳಿದ್ದಾರೆ.
Karnataka News Live 5th February: ವನ್ಯಜೀವಿ ವಲಯದಲ್ಲಿ ಅಕ್ರಮ ವಸತಿ ಬಡಾವಣೆ ನಿರ್ಮಾಣ - ಆನೆಗಳ ಲಗ್ಗೆ, ಪರಿಸರವಾದಿಗಳ ಆತಂಕ
ಮಂಡ್ಯದ ಮಳವಳ್ಳಿ ತಾಲೂಕಿನ ಕಾವೇರಿ ವನ್ಯಜೀವಿ ವಲಯದ ಗುಂಡಾಪುರ ಗ್ರಾಮದಲ್ಲಿ ನಿಯಮ ಉಲ್ಲಂಘಿಸಿ ಅಕ್ರಮ ವಸತಿ ಬಡಾವಣೆ ನಿರ್ಮಿಸಲಾಗುತ್ತಿದೆ. ಪರಿಸರ ಸೂಕ್ಷ್ಮ ವಲಯದಲ್ಲಿ ಭೂ ಪರಿವರ್ತನೆ ಮಾಡಿ, ತಡೆಯಾಜ್ಞೆ ಇದ್ದರೂ ಕಾಮಗಾರಿ ಮುಂದುವರಿಸಲಾಗಿದೆ.
Karnataka News Live 5th February: ಮಂಡ್ಯ-ಹಾಸನ ಮೈತ್ರಿಗೆ ಷರತ್ತು ಹಾಕಿದ ಮಾಜಿ ಶಾಸಕ ಪ್ರೀತಂಗೌಡ! ದೆಹಲಿಯಲ್ಲೇ ಅಂತಿಮ ತೀರ್ಮಾನ
ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸುವಷ್ಟು ಶಕ್ತಿಶಾಲಿಯಾಗಿದೆ . ಒಂದು ವೇಳೆ ಜೆಡಿಎಸ್ ಜೊತೆ ಮೈತ್ರಿ ಮುಂದುವರೆದಲ್ಲಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.50ರಷ್ಟು ಸ್ಥಾನಗಳನ್ನು ತಮಗೆ ಬಿಟ್ಟುಕೊಡಬೇಕೆಂದು ಬಿಜೆಪಿ ಮುಖಂಡ ಪ್ರೀತಂ ಗೌಡ ಬೇಡಿಕೆ ಇಟ್ಟಿದ್ದಾರೆ.
Karnataka News Live 5th February: ಈ ಮೂರು ರಾಶಿಯವರು ಅಪ್ಪಿ-ತಪ್ಪಿಯೂ ಬೆಳ್ಳಿ ಧರಿಸಲೇಬೇಡಿ - ದಟ್ಟ ದರಿದ್ರ ಹೆಗಲೇರೋದು ಗ್ಯಾರಂಟಿ!
ಜ್ಯೋತಿಷ್ಯದ ಪ್ರಕಾರ, ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದ ಬೆಳ್ಳಿಯು ಎಲ್ಲ ರಾಶಿಗಳಿಗೂ ಶುಭ ತರುವುದಿಲ್ಲ. ಕರ್ಕಾಟಕ, ವೃಶ್ಚಿಕ, ಮತ್ತು ಮೀನ ರಾಶಿಯವರಿಗೆ ಇದು ಅದೃಷ್ಟ ತರುತ್ತದೆ. ಆದರೆ, ಈ ಮೂರು ರಾಶಿಯವರು ಬೆಳ್ಳಿ ಧರಿಸಿದರೆ ದಟ್ಟ ದರಿದ್ರವು ಹಿಂಬಾಲಿಸಿಕೊಂಡು ಬರುತ್ತದೆ.
Karnataka News Live 5th February: ಕಂಪ್ಲಿ–ಗಂಗಾವತಿ ಸೇತುವೆ ನಿರ್ಮಾಣಕ್ಕೆ ಮಣ್ಣು ಪರೀಕ್ಷೆ
ಕಂಪ್ಲಿ ಮತ್ತು ಗಂಗಾವತಿ ಸಂಪರ್ಕಿಸುವ ತುಂಗಭದ್ರಾ ನದಿಗೆ ಅಡ್ಡಲಾಗಿ ನೂತನ ಸೇತುವೆ ನಿರ್ಮಾಣಕ್ಕಾಗಿ ಮಣ್ಣು ಪರೀಕ್ಷೆ ಕಾರ್ಯ ಆರಂಭವಾಗಿದೆ. ಲೋಕೋಪಯೋಗಿ ಇಲಾಖೆಯು ನದಿ ದಂಡೆಯ ಎರಡೂ ಬದಿಗಳಲ್ಲಿ ಮಣ್ಣಿನ ಸಾಮರ್ಥ್ಯವನ್ನು ಪರಿಶೀಲಿಸುತ್ತಿದ್ದು, ಇದರ ಆಧಾರದ ಮೇಲೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಿದೆ.
Karnataka News Live 5th February: ಲವ್ ಮಾಡೋದೆಲ್ಲಾ ಸ್ಕ್ರಿಪ್ಟೆಡ್ - ರಿಯಾಲಿಟಿ ಷೋಗಳ ಬಗ್ಗೆ ಅರಿವಿಲ್ಲದೇ Bigg Boss ಕಾವ್ಯಾ ಶೈವ ರಿವೀಲ್ ಮಾಡಿದ್ದೇನು?
ಬಿಗ್ಬಾಸ್ ಸೀಸನ್ 12ರ ಸ್ಪರ್ಧಿಗಳಾದ ಕಾವ್ಯಾ ಶೈವ ಮತ್ತು ಗಿಲ್ಲಿ ನಟರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳಿದ್ದವು. ಇತ್ತೀಚಿನ ಸಂದರ್ಶನವೊಂದರಲ್ಲಿ, ಕಾವ್ಯಾ ತಮ್ಮ ಮತ್ತು ಗಿಲ್ಲಿಯ ಸ್ನೇಹ ಬಗ್ಗೆ ಹೇಳುತ್ತಲೇ ಅರಿವಿಲ್ಲದೇ ರಿಯಾಲಿಟಿ ಷೋಗಳ ಸತ್ಯವನ್ನೂ ಅನಾವರಣಗೊಳಿಸಿದ್ದಾರೆ.
Karnataka News Live 5th February: ಇಸ್ಪೀಟ್ ಜೂಜು ಆಡಬೇಕೆ? ಕನಕಗಿರಿಗೆ ಬನ್ನಿ!
Karnataka News Live 5th February: U19 World Cup - ಟಾಪ್ 07 ರನ್ ಸರದಾರರಲ್ಲಿ ಭಾರತದ ಏಕೈಕ ಆಟಗಾರ! ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?
ಅಂಡರ್ 19 ವಿಶ್ವಕಪ್‌ನಲ್ಲಿ ಫೈನಲ್ ಪಂದ್ಯ ಮಾತ್ರ ಬಾಕಿ ಇದೆ. ಟೂರ್ನಿಯ ಟಾಪ್ 10 ರನ್ ಗಳಿಸಿದವರ ಪಟ್ಟಿಯಲ್ಲಿ ಕೇವಲ ಒಬ್ಬನೇ ಭಾರತೀಯ ಆಟಗಾರನಿದ್ದಾನೆ, ಅದು ವೈಭವ್ ಸೂರ್ಯವಂಶಿ. ಅಫ್ಘಾನಿಸ್ತಾನದ ಶಿನೋಜಾದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ...
Karnataka News Live 5th February: 'ಕನ್ಯೆ ಸಿಗೋ ಹಾಗೆ ಮಾಡಪ್ಪೋ ಮೈಲಾರ ಲಿಂಗ' - ಮದುವೆಗಾಗಿ ಮಂಟಪ ಕಟ್ಟಿ, ಮನೆಗಾಗಿ ಕಲ್ಲು ಜೋಡಿಸಿ ಯುವಕರ ಮೊರೆ!
Karnataka News Live 5th February: ಸುಚಿತ್ರಾಗೆ ಐಷಾರಾಮಿ ಬದುಕು, ರೀಲ್ಸ್ ಶೋಕಿ, ಸ್ವಂತ ಕಂಪೆನಿ-ದುಬಾರಿ ಕಾರು-ಬೆಲೆಬಾಳು ಗಿಫ್ಟ್ ಕೊಟ್ಟಿದ್ದ ಕಮಲಾಕರ ಭಟ್
ಶಿವಮೊಗ್ಗದ ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣದಲ್ಲಿ, ಸುಚಿತ್ರಾ ಜೊತೆಗಿನ ಆತನ ಸಂಬಂಧ ಮತ್ತು ಐಷಾರಾಮಿ ಜೀವನಶೈಲಿ ಬೆಳಕಿಗೆ ಬಂದಿದೆ. ಕಮಲಾಕರ್ ಭಟ್, ಸುಚಿತ್ರಾಳಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದಲ್ಲದೆ, ತನ್ನ 'ಕನಸು ಎಂಟರ್‌ಪ್ರೈಸಸ್' ಸಂಸ್ಥೆಯ ಜವಾಬ್ದಾರಿಯನ್ನೂ ವಹಿಸಿದ್ದನು.
Karnataka News Live 5th February: ಮದುವೆಯಾದ ಬಳಿಕ ಗಂಡ ಹೆಂಡತಿ ನಡುವೆ ಜಗಳ, ಬರೋಬ್ಬರಿ 20 ವರ್ಷ ಮಾತೇ ಇಲ್ಲ, ಆದ್ರೂ ಮೂವರು ಮಕ್ಕಳು!
Karnataka News Live 5th February: ಧಾರವಾಡ ಕವಿವಿ ಆವರಣದಲ್ಲಿ ಮಂಗಗಳ ದಾಳಿಗೆ ಹೆದರಿ ಕಟ್ಟಡದ ಮೇಲಿಂದ ಬಿದ್ದು ಸಂಶೋಧನಾ ವಿದ್ಯಾರ್ಥಿನಿ!
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಗಳ ಹಿಂಡಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ವಸತಿ ನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ಮಂಗಗಳ ಹಾವಳಿ ನಿಯಂತ್ರಿಸಲು ಆಡಳಿತ ಮಂಡಳಿ ವಿಫಲವಾಗಿದೆ.