MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • 'ಕನ್ಯೆ ಸಿಗೋ ಹಾಗೆ ಮಾಡಪ್ಪೋ ಮೈಲಾರ ಲಿಂಗ': ಮದುವೆಗಾಗಿ ಮಂಟಪ ಕಟ್ಟಿ, ಮನೆಗಾಗಿ ಕಲ್ಲು ಜೋಡಿಸಿ ಯುವಕರ ಮೊರೆ!

'ಕನ್ಯೆ ಸಿಗೋ ಹಾಗೆ ಮಾಡಪ್ಪೋ ಮೈಲಾರ ಲಿಂಗ': ಮದುವೆಗಾಗಿ ಮಂಟಪ ಕಟ್ಟಿ, ಮನೆಗಾಗಿ ಕಲ್ಲು ಜೋಡಿಸಿ ಯುವಕರ ಮೊರೆ!

ಹೂವಿನ ಹಡಗಲಿಯ ಪ್ರಸಿದ್ಧ ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ, ಕನ್ಯೆ ಸಿಗದೆ ಕಂಗಾಲಾದ ನೂರಾರು ಅವಿವಾಹಿತ ಯುವಕರು ವಿಶಿಷ್ಟ ಹರಕೆ ಸಲ್ಲಿಸಿದರು. ಕಾರ್ಣೀಕ ನಡೆಯುವ ಸ್ಥಳದಲ್ಲಿ ಸಾಂಕೇತಿಕವಾಗಿ 'ಮದುವೆ ಮಂಟಪ'ಗಳನ್ನು ನಿರ್ಮಿಸಿ, ತಮಗೆ ಶೀಘ್ರ ಕಂಕಣ ಭಾಗ್ಯ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸಿಕೊಂಡರು.

2 Min read
Author : Sathish Kumar KH
Published : Feb 05 2026, 06:44 PM IST
Share this Photo Gallery
  • FB
  • TW
  • Linkdin
  • Whatsapp
15
ಕಾರ್ಣೀಕದ ಕಣದಲ್ಲಿ ಕಂಕಣ ಭಾಗ್ಯದ ಪ್ರಾರ್ಥನೆ
Image Credit : Asianet News

ಕಾರ್ಣೀಕದ ಕಣದಲ್ಲಿ ಕಂಕಣ ಭಾಗ್ಯದ ಪ್ರಾರ್ಥನೆ

ವಿಜಯನಗರ/ಹೂವಿನ ಹಡಗಲಿ (ಫೆ.05): ಉತ್ತರ ಕರ್ನಾಟಕದ ಸುಪ್ರಸಿದ್ಧ ಐತಿಹಾಸಿಕ ಜಾತ್ರೆಗಳಲ್ಲಿ ಒಂದಾದ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಲಿಂಗೇಶ್ವರನ ಜಾತ್ರೆಗೆ ಎಲ್ಲಿಲ್ಲದ ಮಹತ್ವವಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿ ಸೇರುತ್ತಾರೆ. ಬುಧವಾರ ನಡೆದ ವಿಶಿಷ್ಟ 'ಕಾರ್ಣೀಕೋತ್ಸವ' (ಭವಿಷ್ಯವಾಣಿ) ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿತ್ತು. ಆದರೆ, ಈ ಸಂಭ್ರಮದ ನಡುವೆ ಗಮನ ಸೆಳೆದಿದ್ದು ಮಾತ್ರ ನೂರಾರು ಅವಿವಾಹಿತ ಯುವಕರು ತಮ್ಮ ಕಲ್ಯಾಣಕ್ಕಾಗಿ ದೇವರ ಮೊರೆ ಹೋದ ಪ್ರಸಂಗ.

25
ಕನ್ಯೆ ಸಿಗದೆ ಕಂಗಾಲಾಗಿರುವ ನೂರಾರು ಯುವಕರು
Image Credit : Asianet News

ಕನ್ಯೆ ಸಿಗದೆ ಕಂಗಾಲಾಗಿರುವ ನೂರಾರು ಯುವಕರು

ಮೈಲಾರದ ಡೆಂಕನಮರಡಿಯಲ್ಲಿ ನಡೆಯುವ ಕಾರ್ಣೀಕೋತ್ಸವದ ವೇಳೆ ಗೊರವಪ್ಪ ನುಡಿಯುವ ದೈವವಾಣಿಗೆ ಎಷ್ಟು ಶಕ್ತಿ ಇದೆಯೋ, ಅದೇ ಸ್ಥಳದಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ. ಇದನ್ನೇ ನಂಬಿ, ಮದುವೆ ವಯಸ್ಸು ಮೀರಿದರೂ ಕನ್ಯೆ ಸಿಗದೆ ಕಂಗಾಲಾಗಿದ್ದ ನೂರಾರು ಯುವಕರು ಮೈಲಾರ ಲಿಂಗೇಶ್ವರನ ಸನ್ನಿಧಿಯಲ್ಲಿ ವಿಶಿಷ್ಟ ಹರಕೆ ಸಲ್ಲಿಸಿದರು.

Related Articles

Related image1
ಮದುವೆ ಹಣ ಉಳಿಸಿ ಮನೆ ಖರೀದಿಸಿದ ದಂಪತಿ, ಹೊಸ ಮನೆಯಲ್ಲಿ ನಡೀತು ಸಿಂಪಲ್ ಮ್ಯಾರೇಜ್
Related image2
12 ವರ್ಷ ಹುಡುಕಿದ್ರೂ ಕನ್ಯೆ ಸಿಗದ್ದಕ್ಕೆ ನೊಂದು ಯುವಕ ನೇಣಿಗೆ ಶರಣು!
35
ಮದುವೆ ಮಂಟಪ ನಿರ್ಮಾಣ
Image Credit : Asianet News

ಮದುವೆ ಮಂಟಪ ನಿರ್ಮಾಣ

ಸಾಮಾನ್ಯವಾಗಿ ಇಲ್ಲಿ ಭಕ್ತರು ತಮ್ಮ ಸ್ವಂತ ಮನೆ ನಿರ್ಮಾಣದ ಕನಸು ಹೊತ್ತು ಬರುತ್ತಾರೆ. ಕಾರ್ಣೀಕ ನಡೆಯುವ ಸ್ಥಳದಲ್ಲಿ ಸಿಗುವ ಸಣ್ಣ ಸಣ್ಣ ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸಿ, ಚಿಕ್ಕದಾದ ಮನೆಯ ಆಕೃತಿ ನಿರ್ಮಿಸುತ್ತಾರೆ. ಹೀಗೆ ಮಾಡಿದರೆ ಶೀಘ್ರದಲ್ಲೇ ಸ್ವಂತ ಮನೆ ಕಟ್ಟುವ ಯೋಗ ಕೂಡಿಬರುತ್ತದೆ ಎಂಬುದು ಪ್ರತೀತಿ. ಆದರೆ, ಈ ಬಾರಿ ಮನೆಗಿಂತಲೂ ಮದುವೆಗಾಗಿ ಬೇಡಿಕೊಂಡವರ ಸಂಖ್ಯೆಯೇ ಹೆಚ್ಚಾಗಿತ್ತು. 

ಯುವಕರು ಅಲ್ಲೇ ಸಿಗುವ ಸಣ್ಣ ಗಿಡಗಳ ದಂಟು, ಕಡ್ಡಿಗಳು ಮತ್ತು ಕಲ್ಲುಗಳನ್ನು ಬಳಸಿಕೊಂಡು ಸಾಂಕೇತಿಕವಾಗಿ 'ಮದುವೆ ಮಂಟಪ'ವನ್ನು (Wedding Canopy) ನಿರ್ಮಿಸಿದರು. 'ನಮಗೆ ಆದಷ್ಟು ಬೇಗ ಕಂಕಣ ಭಾಗ್ಯ ಕೂಡಿ ಬರಲಿ, ಕನ್ಯೆ ಸಿಗುವಂತೆ ಮಾಡು ತಂದೆ' ಎಂದು ಮೈಲಾರ ಲಿಂಗನಿಗೆ ಭಕ್ತಿಯಿಂದ ನಮಸ್ಕರಿಸಿದರು.

45
ರೈತ ಯುವಕರಿಗೆ ಕನ್ಯೆ ಸಿಗದಿರುವ ಆತಂಕ:
Image Credit : Asianet News

ರೈತ ಯುವಕರಿಗೆ ಕನ್ಯೆ ಸಿಗದಿರುವ ಆತಂಕ:

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿಯನ್ನೇ ನಂಬಿಕೊಂಡಿರುವ ಯುವಕರಿಗೆ ಹೆಣ್ಣು ಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಎಷ್ಟೇ ಜಮೀನು, ಆಸ್ತಿ ಇದ್ದರೂ ಸರ್ಕಾರಿ ಕೆಲಸ ಅಥವಾ ಪಟ್ಟಣದಲ್ಲಿ ಉದ್ಯೋಗವಿಲ್ಲದಿದ್ದರೆ ರೈತ ಯುವಕರಿಗೆ ಮದುವೆ ಫಿಕ್ಸ್ ಆಗುತ್ತಿಲ್ಲ. ಇದರಿಂದಾಗಿ ಹೂವಿನ ಹಡಗಲಿ ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಸಾವಿರಾರು ಯುವಕರು ಮದುವೆಯಾಗದೆ ಉಳಿದಿದ್ದಾರೆ. ಸಮಾಜದ ಈ ವಾಸ್ತವ ಸ್ಥಿತಿಯಿಂದ ನೊಂದಿರುವ ಬ್ಯಾಚುಲರ್ಸ್‌ಗಳು, ಮನುಷ್ಯರ ಪ್ರಯತ್ನ ಮೀರಿ ಈಗ ದೈವದ ಮೊರೆ ಹೋಗಿದ್ದಾರೆ.

55
ಸಾಲು ಸಾಲು ಚಿಕ್ಕ ಮಂಟಪಗಳು
Image Credit : Asianet News

ಸಾಲು ಸಾಲು ಚಿಕ್ಕ ಮಂಟಪಗಳು

ಡೆಂಕನಮರಡಿಯಲ್ಲಿ ಯುವಕರು ನಿರ್ಮಿಸಿದ ಸಾಲು ಸಾಲು ಚಿಕ್ಕ ಮಂಟಪಗಳು ಅವರ ಮನದಾಳದ ನೋವು ಮತ್ತು ಭಕ್ತಿಯನ್ನು ಪ್ರತಿಬಿಂಬಿಸುವಂತಿತ್ತು. ಮೈಲಾರ ಲಿಂಗೇಶ್ವರನು ಇವರ ಪ್ರಾರ್ಥನೆಯನ್ನು ಮನ್ನಿಸಿ, ಮುಂದಿನ ವರ್ಷದ ಜಾತ್ರೆಯೊತ್ತಿಗೆ ಇವರೆಲ್ಲರಿಗೂ ಕಂಕಣ ಭಾಗ್ಯ ಕರುಣಿಸಲಿ ಎಂಬುದೇ ನೆರೆದಿದ್ದವರ ಹಾರೈಕೆಯಾಗಿತ್ತು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಮದುವೆ
ವಿಜಯನಗರ
ಮದುಮಗಳು
ದೇವಸ್ಥಾನ

Latest Videos
Recommended Stories
Recommended image1
ಸುಚಿತ್ರಾಗೆ ಐಷಾರಾಮಿ ಬದುಕು, ರೀಲ್ಸ್ ಶೋಕಿ, ಸ್ವಂತ ಕಂಪೆನಿ-ದುಬಾರಿ ಕಾರು-ಬೆಲೆಬಾಳು ಗಿಫ್ಟ್ ಕೊಟ್ಟಿದ್ದ ಕಮಲಾಕರ ಭಟ್
Recommended image2
ಧಾರವಾಡ ಕವಿವಿ ಆವರಣ: ಮಂಗಗಳ ದಾಳಿಗೆ ಹೆದರಿ ಕಟ್ಟಡದ ಮೇಲಿಂದ ಹಾರಿದ ಸಂಶೋಧನಾ ವಿದ್ಯಾರ್ಥಿನಿ!
Recommended image3
ಗಂಗಾವತಿ ಮುಸ್ಲಿಂ ಯುವತಿ ಜೊತೆಗಿದ್ದ ಹಿಂದೂ ಯುವಕನ ಮೇಲೆ ಹಲ್ಲೆ: ಯುವತಿ ತಾಯಿ ಕೊಟ್ರು ಬಿಗ್ ಟ್ವಿಸ್ಟ್!
Related Stories
Recommended image1
ಮದುವೆ ಹಣ ಉಳಿಸಿ ಮನೆ ಖರೀದಿಸಿದ ದಂಪತಿ, ಹೊಸ ಮನೆಯಲ್ಲಿ ನಡೀತು ಸಿಂಪಲ್ ಮ್ಯಾರೇಜ್
Recommended image2
12 ವರ್ಷ ಹುಡುಕಿದ್ರೂ ಕನ್ಯೆ ಸಿಗದ್ದಕ್ಕೆ ನೊಂದು ಯುವಕ ನೇಣಿಗೆ ಶರಣು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved