- Home
- Entertainment
- TV Talk
- ಲವ್ ಮಾಡೋದೆಲ್ಲಾ ಸ್ಕ್ರಿಪ್ಟೆಡ್: ರಿಯಾಲಿಟಿ ಷೋಗಳ ಬಗ್ಗೆ ಅರಿವಿಲ್ಲದೇ Bigg Boss ಕಾವ್ಯಾ ಶೈವ ರಿವೀಲ್ ಮಾಡಿದ್ದೇನು?
ಲವ್ ಮಾಡೋದೆಲ್ಲಾ ಸ್ಕ್ರಿಪ್ಟೆಡ್: ರಿಯಾಲಿಟಿ ಷೋಗಳ ಬಗ್ಗೆ ಅರಿವಿಲ್ಲದೇ Bigg Boss ಕಾವ್ಯಾ ಶೈವ ರಿವೀಲ್ ಮಾಡಿದ್ದೇನು?
ಬಿಗ್ಬಾಸ್ ಸೀಸನ್ 12ರ ಸ್ಪರ್ಧಿಗಳಾದ ಕಾವ್ಯಾ ಶೈವ ಮತ್ತು ಗಿಲ್ಲಿ ನಟರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳಿದ್ದವು. ಇತ್ತೀಚಿನ ಸಂದರ್ಶನವೊಂದರಲ್ಲಿ, ಕಾವ್ಯಾ ತಮ್ಮ ಮತ್ತು ಗಿಲ್ಲಿಯ ಸ್ನೇಹ ಬಗ್ಗೆ ಹೇಳುತ್ತಲೇ ಅರಿವಿಲ್ಲದೇ ರಿಯಾಲಿಟಿ ಷೋಗಳ ಸತ್ಯವನ್ನೂ ಅನಾವರಣಗೊಳಿಸಿದ್ದಾರೆ.

ಕಾವು ಕಾವು
ಬಿಗ್ಬಾಸ್ ಸೀಸನ್ 12 (Bigg Boss Season 12) ನಲ್ಲಿ ಸಾಕಷ್ಟು ಸುದ್ದಿ ಮಾಡಿದ್ದು ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜೋಡಿ. ಇವರಿಬ್ಬರೂ ತುಂಬಾ ಕ್ಲೋಸ್ ಆಗಿದ್ದರು. ಜೊತೆಗೆ ಗಿಲ್ಲಿ ನಟ ಕಾವು ಕಾವು ಎಂದು ತಮಾಷೆ ಮಾಡುತ್ತಿದ್ದರಿಂದ ಇವರಿಬ್ಬರ ನಡುವೆ ಲವ್ ಆಗಿದೆ ಎಂದೇ ವೀಕ್ಷಕರು ಇಬ್ಬರನ್ನೂ ಜೋಡಿ ಮಾಡಿದ್ದರು.
ಕಾವ್ಯಾ ಮತ್ತು ಗಿಲ್ಲಿ ನಟ
ಈ ಬಗ್ಗೆ ಈಗಲೂ ಕಾವ್ಯಾ ಮತ್ತು ಗಿಲ್ಲಿ ನಟ ಅವರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಷ್ಟಕ್ಕೂ ಬಹುತೇಕ ಎಲ್ಲಾ ರಿಯಾಲಿಟಿ ಷೋಗಳು ಅಂದರೆ ಅದರಲ್ಲಿ ಎಷ್ಟರ ಮಟ್ಟಿಗೆ ರಿಯಾಲಿಟಿ ಇರುತ್ತದೆ ಎನ್ನುವುದು ವೀಕ್ಷಕರಿಗೆ ತಿಳಿದಿರುವುದಿಲ್ಲ. ಅಲ್ಲಿ ನಡೆಯುವ ಬಹುತೇಕ ಎಲ್ಲವೂ ಸ್ಕ್ರಿಪ್ಟೆಡ್ಡೇ ಆಗಿರುತ್ತದೆ ಎನ್ನುವ ಮಾತಿದೆ.
ರಿಯಾಲಿಟಿ ಷೋಗಳ ರಿಯಾಲಿಟಿ?
ಮಕ್ಕಳು ಕೆಲವೊಮ್ಮೆ ಏನೇನೋ ಮಾತನಾಡಿದಾಗ ಆ ಸಂದರ್ಭದಲ್ಲಿ ಅವರು ಮಾತನಾಡಿದರು ಎಂದು ವೀಕ್ಷಕರು ಭಲೆ ಭಲೆ ಎನ್ನುವುದು ಉಂಟು. ಆದರೆ ಆ ಮಕ್ಕಳಿಗೂ ಏನು ಮಾತನಾಡಬೇಕು ಎಂದು ಮೊದಲೇ ಹೇಳಿರಲಾಗುತ್ತದೆ. ಅಲ್ಲಿ ಬರುವ ಡೈಲಾಗ್ಗಳು, ಕೆಲವೊಮ್ಮೆ ಇದೇ ಮೊದಲ ಬಾರಿಗೆ ನೋಡಿದಂತೆ ತೀರ್ಪುಗಾರರು ಕೊಡುವ ಎಕ್ಸ್ಪ್ರೆಷನ್ಗಳು, ಅಳುವುದು, ನಗುವುದು ಎಲ್ಲವೂ ಬಹುತೇಕ ಮೊದಲೇ ನಿಗದಿಯಾಗಿರುತ್ತದೆ ಎನ್ನುವುದಾಗಿ ಇದಾಗಲೇ ಹಲವರು ಹೇಳಿದ್ದುಂಟು. ಆದರೂ, ಅವೆಲ್ಲವೂ ಆ ಕ್ಷಣದಲ್ಲಿ ನಡೆದಂತೆ ನಮಗೆ ಕಾಣಿಸುತ್ತಾರೆ ಅಷ್ಟೇ. ಏನೇ ಆಗಲಿ, ಜನರು ಅದನ್ನು ಖುಷಿಪಟ್ಟು ನಿಜ ಎಂದು ತಿಳಿದುಕೊಂಡರೆ ಸಾಕು, ಅಲ್ಲಿ ನಿಜವಾಗಿ ನಡೆಯುವುದು ಏನು ಎಂದು ಕಟ್ಟಿಕೊಂಡು ಏನು ಆಗಬೇಕಿದೆ ಅಲ್ಲವೆ?
ಬಿಗ್ಬಾಸ್ ಬಗ್ಗೆ ಏನಿದೆ ಅನಿಸಿಕೆ?
ಅದೇ ರೀತಿ ಬಿಗ್ಬಾಸ್ ಮನೆಯಲ್ಲಿ ಕೂಡ ನಡೆಯುವುದು ಸ್ಕ್ರಿಪ್ಟೆಡ್, ಇಲ್ಲಿ ನಡೆಯುವ ಜಗಳ, ಕೆಲವು ಭಾಷೆಗಳಲ್ಲಿ ಅತಿ ಎನ್ನಿಸುವಷ್ಟು ಅಸಭ್ಯ, ಅಶ್ಲೀಲ ನಡವಳಿಕೆ, ಲವ್ ದೃಶ್ಯಗಳು, ಮಂಚದ ದೃಶ್ಯಗಳು ಎಲ್ಲವನ್ನೂ ಮೊದಲೇ ಹೇಳಲಾಗಿರುತ್ತದೆ, ಎಲ್ಲದಕ್ಕೂ ಸಿದ್ಧ ಆಗಿರುವವರನ್ನೇ ಆಯ್ಕೆ ಮಾಡಲಾಗುತ್ತದೆ ಎಂಬೆಲ್ಲಾ ಮಾತುಗಳು ಮೊದಲಿನಿಂದಲೂ ಇವೆ. ಆದರೆ ಇದನ್ನು ಬಿಗ್ಬಾಸ್ಗೆ ಹೋಗಿ ಬಂದಿರುವ ಸ್ಪರ್ಧಿಗಳಲ್ಲಿ ಬಹುತೇಕರು ಅಲ್ಲಗಳೆಯುತ್ತಲೇ ಬಂದಿದ್ದಾರೆ. ಅಂಥ ವಾತಾವರಣ ನಿರ್ಮಾಣ ಮಾಡಲಾಗುತ್ತದೆಯೇ ವಿನಾ ಸ್ಕ್ರಿಪ್ಟ್ ಕೊಟ್ಟಿರುವುದಿಲ್ಲ ಎಂದು ಹಲವರು ಹೇಳಿದ್ದಾರೆ.
ಅರಿವಿಲ್ಲದೇ ಅನಾವರಣ
ಆದರೆ, ಇದೀಗ ಕಾವ್ಯಾ ಶೈವ (Kavya Shaiva) ಅವರು ಸಂದರ್ಶನವೊಂದರಲ್ಲಿ ಗಿಲ್ಲಿ ನಟನ ಬಗ್ಗೆ ಹೇಳುವಾಗ ತಮಗೆ ಅರಿವಿಲ್ಲದೇ ರಿಯಾಲಿಟಿ ಷೋಗಳ ಸತ್ಯವನ್ನು ಅನಾವರಣಗೊಳಿಸಿದ್ದಾರೆ. ಗಿಲ್ಲಿ ನಟ ಹೋದಲ್ಲೆಲ್ಲಾ ಒಬ್ಬ ಹುಡುಗಿಯನ್ನು ಲಪಟಾಯಿಸುತ್ತಾನೆ ಎಂದು ಬಿಗ್ಬಾಸ್ ಸ್ಪರ್ಧಿ ಹೇಳಿದ್ದುಂಟು. ಈ ಬಗ್ಗೆ ಪ್ರಶ್ನೆ ಕೇಳಿದಾಗ ಕಾವ್ಯಾ ಗೌಡ ಕೊಟ್ಟ ಉತ್ತರ ಇದೀಗ ವೈರಲ್ ಆಗಿದೆ.
ಬೇರೆ ಷೋಗಳಂತೆ ಅಲ್ಲ!
ಅದೇನೆಂದರೆ, ಬಿಗ್ಬಾಸ್ ಮನೆಯಲ್ಲಿ ನಡೆಯುವುದು ಬೇರೆ ಷೋಗಳಂತೆ ಸ್ಕ್ರಿಪ್ಟೆಡ್ ಅಲ್ಲ. ಬೇರೆ ಷೋಗಳಲ್ಲಿ ಹೀಗೆ ಮಾಡಬೇಕು ಎಂದು ಹೇಳಿರುತ್ತಾರೆ. ಅಲ್ಲಿ ಆ ರೀತಿ ನಡೆದುಕೊಳ್ಳಬೇಕಾಗುತ್ತದೆ. ಆದರೆ ಬಿಗ್ಬಾಸ್ನಲ್ಲಿ ನನ್ನ ಮತ್ತು ಗಿಲ್ಲಿಯ ನಡುವಿನ ಫ್ರೆಂಡ್ಷಿಪ್ ಆರ್ಗಾನಿಕ್ ಆಗಿ ನಡೆದಿರುವಂಥದ್ದು. ಬೇರೆ ಷೋಗಳಂತೆ ಇಲ್ಲಿ ಸ್ಕ್ರಿಪ್ಟೆಡ್ ಇರಲಿಲ್ಲ ಎಂದಿದ್ದಾರೆ. ಆ ಮೂಲಕ ರಿಯಾಲಿಟಿ ಷೋಗಳಲ್ಲಿ, ಸ್ಕ್ರಿಪ್ಟೆಡ್ ಯಾವ ರೀತಿ ವರ್ಕ್ ಆಗುತ್ತದೆ ಎಂದು ಪರೋಕ್ಷವಾಗಿ ನುಡಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

