ಚೆನ್ನೈ ಅಪೋಲೋ ಆಸ್ಪತ್ರೆ ದಾಖಲಾದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಕಣ್ಣಿನ ಚಿಕಿತ್ಸೆ ನೀಡಲಾಗುತ್ತದೆ. ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆ ದಾಖಲಾಗಿದ್ದಾರೆ. ಕುಮಾರಸ್ವಾಮಿ ಹೆಲ್ತ್ ಅಪ್‌ಡೇಟ್ ಇಲ್ಲಿದೆ.
- Home
- News
- State
- Karnataka News Live: ಚೆನ್ನೈ ಅಪೋಲೋ ಆಸ್ಪತ್ರೆ ದಾಖಲಾದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಕಣ್ಣಿನ ಚಿಕಿತ್ಸೆ
Karnataka News Live: ಚೆನ್ನೈ ಅಪೋಲೋ ಆಸ್ಪತ್ರೆ ದಾಖಲಾದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಕಣ್ಣಿನ ಚಿಕಿತ್ಸೆ

ಬೆಂಗಳೂರು: 'ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಬೇಕು. ಒಂದು ವೇಳೆ ಅನಿ ವಾರ್ಯತೆ ಸೃಷ್ಟಿಯಾದರೆ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ಮುಖ್ಯಮಂತ್ರಿಯಾಗಬೇಕು" ಎನ್ನುವ ಮೂಲಕ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ಸಿಎಂ ಆಗಬಾರದೆಂದು ಆಶಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ನಲ್ಲಿ ಕುರ್ಚಿ ಕದನ ತಾರಕಕ್ಕೇರಿರುವ ಈ ಹಂತದಲ್ಲಿ ಪರಿಸ್ಥಿತಿ ಬಿಗಡಾಯಿಸದಂತೆ ತಡೆಯಲು ವರಿಷ್ಠ ರಾಹುಲ್ ಗಾಂಧಿ ಗುರುವಾರ ನೇರ ಪ್ರವೇಶ ಮಾಡುವ ಸಾಧ್ಯತೆಯಿದ್ದು, ಅವರ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಯಲಿದೆ.
Karnataka News Live 27 November 2025ಚೆನ್ನೈ ಅಪೋಲೋ ಆಸ್ಪತ್ರೆ ದಾಖಲಾದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಕಣ್ಣಿನ ಚಿಕಿತ್ಸೆ
Karnataka News Live 27 November 2025ಚಾಮರಾಜನಗರ ಬಾಲಕೀಯರ ಹಾಸ್ಟೆಲ್‌ಗೆ ಉಪ ಲೋಕಾಯುಕ್ತರು ದಿಢೀರ್ ಭೇಟಿ, ಅವ್ಯವಸ್ಥೆ ಕಂಡು ಸಿಬ್ಬಂದಿಗೆ ಕ್ಲಾಸ್!
ಚಾಮರಾಜನಗರದ ಬಾಲಕಿಯರ ಹಾಸ್ಟೆಲ್‌ಗೆ ಉಪ ಲೋಕಾಯುಕ್ತ ಫಣೀಂದ್ರ ಅವರು ದಿಢೀರ್ ಭೇಟಿ ನೀಡಿ, ಅಲ್ಲಿನ ಕಳಪೆ ನಿರ್ವಹಣೆ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
Karnataka News Live 27 November 2025ಸರ್ಕಾರಿ ಅಧಿಕಾರಿಗೆ 'ಕಟ್ಟಿಹಾಕಿ ಒದೀತಿನಿ' ಎಂದಿದ್ದ ಸಚಿವ ಬೋಸರಾಜು ವಿರುದ್ಧ ರಾಜ್ಯಪಾಲರಿಗೆ ದೂರು!
ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು ಅವರು ರಾಯಚೂರಿನಲ್ಲಿ ರಸ್ತೆ ಕಾಮಗಾರಿ ವಿಳಂಬದ ಕಾರಣಕ್ಕೆ ಕೆಆರ್ಐಡಿಎಲ್ ಅಧಿಕಾರಿಗೆ 'ಕಟ್ಟಿ ಹಾಕಿ ಒದೀತಿನಿ' ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿಯಿಂದ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು
Karnataka News Live 27 November 2025AI ಯಾವುದೇ ಸಮಯದಲ್ಲಿ ಸಿಡಿಯುವ ಗುಳ್ಳೆಯೇ? ಗೂಗಲ್ ಸಿಇಒ ಸೇರಿ ಪ್ರಮುಖರ ಎಚ್ಚರಿಕೆ ಏನು?
ಕೃತಕ ಬುದ್ಧಿಮತ್ತೆ (AI) ಸುತ್ತಲಿನ ಅತಿಯಾದ ಉತ್ಸಾಹ ಮತ್ತು ಹೂಡಿಕೆಯು 'ಗುಳ್ಳೆ'ಯನ್ನು ಸೃಷ್ಟಿಸಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ ತಂತ್ರಜ್ಞಾನ ದಿಗ್ಗಜರು ಎಚ್ಚರಿಸಿದ್ದಾರೆ. ಈ ಎಐ ಗುಳ್ಳೆ ಒಡೆದರೆ, ಜಾಗತಿಕ ಷೇರು ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂಬ ಆತಂಕ
Karnataka News Live 27 November 2025ಬಿಗ್ ಬಾಸ್ ಸ್ಪರ್ಧಿ ರಂಜಿತ್ ಮತ್ತೊಂದು ಎಡವಟ್ಟು, ಶಾಸಕರ ಪಾಸ್ ಹಾಕಿ ಕಾರು ಚಾಲನೆ ವಿವಾದ
ಬಿಗ್ ಬಾಸ್ ಸ್ಪರ್ಧಿ ರಂಜಿತ್ ಮತ್ತೊಂದು ಎಡವಟ್ಟು, ಶಾಸಕರ ಪಾಸ್ ಹಾಕಿ ಕಾರು ಚಾಲನೆ, ಇತ್ತೀಚೆಗಷ್ಟೇ ಆಸ್ತಿ ವಿಚಾರವಾಗಿ ಕುಟುಂಬ ರಂಪಾಟದ ವಿಡಿಯೋ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ರಂಜಿತ್ ಶಾಸಕರ ಸ್ಟಿಕ್ಕರ್ ಹಾಕಿ ಕಾರು ಚಾಲನೆ ಮಾಡಿರುವ ಆರೋಪ ಕೇಳಿಬಂದಿದೆ.
Karnataka News Live 27 November 2025ಕನ್ನಡ ಮರೆತ ಸಿಎಂ-ಡಿಸಿಎಂ - ಡಿಕೆಶಿ 'ವರ್ಡ್ ಪವರ್' ಗೆ ಸಿಎಂ ಸಿದ್ದರಾಮಯ್ಯ 'ಇಸ್ ನಾಟ್ ಎ ಪವರ್' ಎಂದು ಟಾಂಗ್!
Karnataka News Live 27 November 2025Bigg Boss ಗಿಲ್ಲಿ ನಟನ ಮದುವೆ ಯಾವಾಗ? ಓಪನ್ ಆಗಿಯೇ ಎಲ್ಲವನ್ನೂ ರಿವೀಲ್ ಮಾಡಿದ ಗಿಲ್ಲಿ
ಬಿಗ್ಬಾಸ್ ಮೂಲಕ ಜನಪ್ರಿಯರಾಗಿರುವ ಗಿಲ್ಲಿ ನಟನ ಮದುವೆ ಬಗ್ಗೆ ಚರ್ಚೆ ಜೋರಾಗಿದೆ. ಹಳೆಯ ಸಂದರ್ಶನವೊಂದರಲ್ಲಿ, ತಾವು ಸದ್ಯಕ್ಕೆ ಮದುವೆಯಾಗುವುದಿಲ್ಲ, ಆರ್ಥಿಕವಾಗಿ ಸಬಲರಾಗಿ ಜವಾಬ್ದಾರಿ ಹೊರಲು ಸಿದ್ಧರಾದ ನಂತರವೇ ಮದುವೆ ಎಂದು ಸ್ಪಷ್ಟಪಡಿಸಿದ್ದಾರೆ.
Karnataka News Live 27 November 2025ಗರ್ಲ್ಸ್ ಹಾಸ್ಟೆಲ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ 16 ವರ್ಷದ ಬಾಲಕಿ; 6 ಜನರ ವಿರುದ್ಧ ಪೋಕ್ಸೋ ಕೇಸ್!
ಕೊಪ್ಪಳ ಜಿಲ್ಲೆಯ ಕುಕನೂರು ವಸತಿ ನಿಲಯದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಅತ್ಯಾ*ಚಾರ ಆರೋಪಿ ಸೇರಿದಂತೆ ನಿರ್ಲಕ್ಷ್ಯ ತೋರಿದ ವಸತಿ ನಿಲಯದ ಸಿಬ್ಬಂದಿ ಸೇರಿ ಒಟ್ಟು 6 ಜನರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.
Karnataka News Live 27 November 2025ಚಾಮರಾಜನಗರ - ರಿಮೋಟ್‌ನಿಂದ ಟಿವಿ ಆಫ್ ಮಾಡಿದ್ದ ಮಕ್ಕಳ ಮೇಲೆ ಶಿಕ್ಷಕರಿಂದ ಹಲ್ಲೆ, ದೂರು ದಾಖಲು
Teachers beat students Chamarajanagar:ಚಾಮರಾಜನಗರದ ಹೊಂಡರಬಾಳು ನವೋದಯ ಶಾಲೆಯಲ್ಲಿ, ಸ್ಮಾರ್ಟ್ ಬೋರ್ಡ್‌ನಲ್ಲಿ ಪಾಠ ಪುನರಾವರ್ತಿಸಿದ್ದಕ್ಕೆ ನಾಲ್ವರು ವಿದ್ಯಾರ್ಥಿಗಳ ಮೇಲೆ ಶಿಕ್ಷಕರು, ಪ್ರಾಂಶುಪಾಲರು ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Karnataka News Live 27 November 2025'ನೀವು ಯಾಕ್ರಯ್ಯಾ ಬಡೆದುಕೊಳ್ತೀರಾ..' ಸಿಎಂ ಬದಲಾವಣೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಮಧು ಬಂಗಾರಪ್ಪ ಗರಂ
Karnataka News Live 27 November 2025Karna Serial ಯಾರೂ ಊಹಿಸದ ಟ್ವಿಸ್ಟ್ - ನಿತ್ಯಾಗೆ ಸತ್ಯ ತಿಳಿಯುವಷ್ಟರಲ್ಲಿ ಕರ್ಣನಿಂದ ದೂರ ಹೋಗೇ ಬಿಟ್ಟಳು ನಿಧಿ!
Karnataka News Live 27 November 2025ಕಿಚ್ಚನ ಜೊತೆ ಸೇರಿದ 'ದಾಸ'ನ ಬಳಗ; ಸುದೀಪ್ ಜೊತೆ ದರ್ಶನ್ ಗೆಳತಿ ದೋಸ್ತಿ! ಮುಂದೇನು ಕಥೆ?
ಈಗ ನೋಡಿದ್ರೆ ಉಮಾಪತಿ, ಸುದೀಪ್ ಜೊತೆಗೆ ಪಾರ್ಟಿ ಮಾಡಿದ್ದಾರೆ. ರಕ್ಷಿತಾ ಸೋದರನ ಪಬ್ನಲ್ಲಿ ಕಿಚ್ಚನ ಜೊತೆ ಕುಳಿತು ಖುಷಿ ಖುಷಿಯಾಗಿ ಮಾತನಾಡಿದ್ದಾರೆ. ಒಟ್ನಲ್ಲಿ ದಾಸನ ಬಳಗ , ಕಿಚ್ಚನ ಗ್ಯಾಂಗ್ನಲ್ಲಿ ಮಿಂಚ್ತಾ ಇದೆ. ಇದೆನ್ನೆಲ್ಲಾ ನೋಡ್ತಾ ಕಾಲಾಯ ತಸ್ಮೈನಮಃ ಅಂತಿದ್ದಾರೆ ಗಾಂಧಿನಗರ ಮಂದಿ..! ಮುಂದೇನು?
Karnataka News Live 27 November 2025'ಎಲ್ಲರಿಗೂ ಕೂಲಿ ಸಿಗೋಲ್ಲ..' ಡಿಕೆಶಿ ಪಕ್ಷ ನಿಷ್ಠೆ ಪೋಸ್ಟ್‌ಗೆ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಡಿಕೆ ಶಿವಕುಮಾರ ಹೆಳಿಕೆ ಕುರಿತು ಸಚಿವ ಸತೀಶ್ ಜಾರಕಿಹೊಳಿ, 'ಕೂಲಿ ಸಿಗದವರು' ಬಹಳ ಮಂದಿ ಇದ್ದಾರೆ ಎನ್ನುವ ಮೂಲಕ ಪಕ್ಷದಲ್ಲಿನ ಅಸಮಾಧಾನ ಪರೋಕ್ಷ ವ್ಯಕ್ತಪಡಿಸಿದ್ದಾರೆ. ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಫರ್ ಬಂದಿಲ್ಲ. ತಮ್ಮ ಸಿಎಂ ಆಗುವ ಆಸೆ 2028ಕ್ಕೆ ಮೀಸಲು ಎಂದಿದ್ದಾರೆ.
Karnataka News Live 27 November 2025ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ ಸೋಲಿಗೆ ಇದೇ ನಿಜವಾದ ಕಾರಣ!
ಭಾರತ: ಗುವಾಹಟಿ ಟೆಸ್ಟ್‌ನಲ್ಲಿ ಭಾರತ 408 ರನ್‌ಗಳ ಹೀನಾಯ ಸೋಲು ಕಂಡಿದೆ. ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಕುಸಿತ, ಬೌಲಿಂಗ್ ದೋಷಗಳು ಮತ್ತು ಎರಡನೇ ಇನ್ನಿಂಗ್ಸ್ ವೈಫಲ್ಯ ಹೀಗೆ ಭಾರತ ತಂಡದ ಸೋಲಿಗೆ ಹಲವು ಕಾರಣಗಳಿವೆ. ಆ ವಿವರಗಳನ್ನು ಇಲ್ಲಿ ತಿಳಿಯೋಣ.
Karnataka News Live 27 November 2025ಕೊನೆ ಕ್ಷಣದಲ್ಲಿ ಧರ್ಮೇಂದ್ರರನ್ನು ಭೇಟಿಯಾಗಲು ಹೋದ ನಟಿ ಮುಮ್ತಾಜ್‌ಗೆ ಅನುಮತಿ ಸಿಗಲಿಲ್ಲ, ಯಾಕೆ?
ಹಿರಿಯ ನಟಿ ಮುಮ್ತಾಜ್, ಆಸ್ಪತ್ರೆಯಲ್ಲಿದ್ದ ಧರ್ಮೇಂದ್ರ ಅವರ ಆರೋಗ್ಯ ಗಂಭೀರವಾಗಿದ್ದಾಗ ಭೇಟಿಯಾಗಲು ಹೋಗಿದ್ದೆ ಎಂದು ಹೇಳಿದ್ದಾರೆ. ಆದರೆ, ಅರ್ಧ ಗಂಟೆ ಕಾದರೂ ಅವರಿಗೆ ಅನುಮತಿ ಸಿಗಲಿಲ್ಲ. 2021ರಲ್ಲಿ ಕೊನೆಯ ಬಾರಿಗೆ ಈ ನಟಿ ನಟ ಧಮೇಂದ್ರರನ್ನು ಭೇಟಿಯಾಗಿದ್ದರು. ಈ ಸ್ಟೋರಿ ನೋಡಿ..
Karnataka News Live 27 November 2025ಲಂಚ ಪಡೆದ ಮಾಹಿತಿ ಮುಚ್ಚಿಡಲು ಸಿಸಿಟಿವಿ ನಿರಾಕರಿಸಿದ ಪೊಲೀಸ್ ಕಮಿಷನರ್ ಕಚೇರಿಯ ಮಹಿಳಾ ಅಧಿಕಾರಿಗೆ ಶಾಕ್!
Karnataka News Live 27 November 2025ಕ್ಯಾಮರಾ ಸೆಳೆತ, ಬಂಗಾರದಂಥ ಅವಕಾಶ ಬಿಟ್ಟು ಚಿತ್ರರಂಗಕ್ಕೆ ಬಂದ್ರು; ಯಾರಿಗೂ ತಿಳಿಯದ Bigg Boss ಸ್ಪರ್ಧಿಗಳ ಸೀಕ್ರೆಟ್
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಭಾಗವಹಿಸಿರುವ ಸೆಲೆಬ್ರಿಟಿಗಳು ಈ ಹಿಂದೆ ಚಿತ್ರರಂಗಕ್ಕೆ ಬರುವ ಮುನ್ನ ಬೇರೆ ಬೇರೆ ಕ್ಷೇತ್ರಗಳಲ್ಲಿ ಬ್ಯುಸಿ ಆಗಿದ್ದರು. ನಟನೆ ಮೇಲಿನ ಒಲವಿನಿಂದ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಸುವರ್ಣಾವಕಾಶವನ್ನು ಕೂಡ ಬೇಡ ಎಂದಿದ್ದರು.
Karnataka News Live 27 November 2025ಕೊಟ್ಟ ಮಾತಿನಂತೆ ನಡೆದುಕೊಳ್ಳಿ - ಡಿ.ಕೆ. ಶಿವಕುಮಾರ್‌ಗೆ ಸಿಎಂ ಪಟ್ಟ ನೀಡಲು ನಂಜಾವಧೂತ ಸ್ವಾಮೀಜಿ ಆಗ್ರಹ!
ಕರ್ನಾಟಕ ಸಿಎಂ ಕುರ್ಚಿ ಗೊಂದಲದ ಕುರಿತು ಆದಿಚುಂಚನಗಿರಿ ಮಠದ ನಂಜಾವಧೂತ ಸ್ವಾಮೀಜಿಗಳು ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ. ಕೊಟ್ಟ ಮಾತಿನಂತೆ ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಮತ್ತು ಒಕ್ಕಲಿಗ ಸಮುದಾಯವನ್ನು ಲಘುವಾಗಿ ಪರಿಗಣಿಸಬಾರದು ಎಂದು ಆಗ್ರಹಿಸಿದ್ದಾರೆ.
Karnataka News Live 27 November 2025BBK 12 - ಕೊನೆಗೂ ಮದುವೆ ಆಗೋ ಹುಡುಗನ ಬಗ್ಗೆ ಫಿಲ್ಟರ್ ಇಲ್ದೆ ಹೇಳೇಬಿಟ್ರು ರಕ್ಷಿತಾ ಶೆಟ್ಟಿ!
BBK 12 Updates: ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರ ಮದುವೆ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಇತ್ತೀಚೆಗೆ ತ್ರಿವಿಕ್ರಮ್ ಅವರು ರಕ್ಷಿತಾ ಬಳಿ, ಮದುವೆ ಆಗ್ತೀಯಾ ಎಂದು ಕೇಳಿದ್ದರು. ಈಗ ಅವರು ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ್ದಾರೆ.
Karnataka News Live 27 November 2025ಖರ್ಗೆ ಕರೆದ್ರೆ ಹೋಗ್ತೇನೆ ಹೋಗ್ತೇನೆ ಹೋಗ್ತೇನೆ - ಒತ್ತಿ ಒತ್ತಿ ಹೇಳಿದ ಸಿಎಂ ಸಿದ್ದರಾಮಯ್ಯ
ರಾಜ್ಯ ರಾಜಕೀಯದಲ್ಲಿ ನಾಯಕತ್ವದ ಚರ್ಚೆ ತೀವ್ರಗೊಂಡಿದ್ದು, ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮಧ್ಯೆ, ಅಹಿಂದ ಸಚಿವರು ಸಿಎಂ ಜೊತೆ ದಿಢೀರ್ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟುಕೊಡಬಾರದು ಎಂದು ಸಲಹೆ ನೀಡಿದ್ದಾರೆ.