- Home
- Entertainment
- TV Talk
- BBK 12: ಕೊನೆಗೂ ಮದುವೆ ಆಗೋ ಹುಡುಗನ ಬಗ್ಗೆ ಫಿಲ್ಟರ್ ಇಲ್ದೆ ಹೇಳೇಬಿಟ್ರು ರಕ್ಷಿತಾ ಶೆಟ್ಟಿ!
BBK 12: ಕೊನೆಗೂ ಮದುವೆ ಆಗೋ ಹುಡುಗನ ಬಗ್ಗೆ ಫಿಲ್ಟರ್ ಇಲ್ದೆ ಹೇಳೇಬಿಟ್ರು ರಕ್ಷಿತಾ ಶೆಟ್ಟಿ!
BBK 12 Updates: ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರ ಮದುವೆ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಇತ್ತೀಚೆಗೆ ತ್ರಿವಿಕ್ರಮ್ ಅವರು ರಕ್ಷಿತಾ ಬಳಿ, ಮದುವೆ ಆಗ್ತೀಯಾ ಎಂದು ಕೇಳಿದ್ದರು. ಈಗ ಅವರು ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ್ದಾರೆ.

ರಕ್ಷಿತಾ ತುಂಬ ಸೆನ್ಸಿಬಲ್
ಬಿಗ್ ಬಾಸ್ ಮನೆಯಲ್ಲಿ ಅರ್ದಂಬರ್ಧ ಕನ್ನಡ, ಇಂಗ್ಲಿಷ್, ತುಳು, ಹಿಂದಿ ಭಾಷೆಯ ಪದಗಳನ್ನು ಬಳಸಿ ಮಾತನಾಡುತ್ತಿರುವ ರಕ್ಷಿತಾ ಅವರು ಕೆಲವೊಮ್ಮೆ ಟಾಸ್ಕ್‌ಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ತಾರೆ, ತಪ್ಪಿದ್ದಲ್ಲಿ ತಪ್ಪು ಎಂದು ಹೇಳ್ತಾರೆ. ಇದು ಅನೇಕರಿಗೆ ಇಷ್ಟ ಆಗಿದೆ. ಬಡತನದಿಂದ ಬೆಳೆದು ಬಂದಿದ್ದು, ತುಂಬ ಸೆನ್ಸಿಬಲ್ ಎಂದು ವೀಕ್ಷಕರು ಇಷ್ಟಪಟ್ಟಿದ್ದಾರೆ.
ಮದುವೆ ಆಫರ್ ಕೊಟ್ಟಿದ್ದ ತ್ರಿವಿಕ್ರಮ್
ಬಿಗ್ ಬಾಸ್ ಮನೆಗೆ ಸೀಸನ್ 11 ಸ್ಪರ್ಧಿಗಳು ಬಂದಿದ್ದಾರೆ. ಆ ವೇಳೆ ತ್ರಿವಿಕ್ರಮ್ ಅವರು ತಮಾಷೆಗೆ ರಕ್ಷಿತಾ ಶೆಟ್ಟಿ ಬಳಿ, “ರಕ್ಷಿತಾ ನನ್ನ ಮದುವೆ ಆಗ್ತೀಯಾ?” ಎಂದು ಪ್ರಶ್ನೆ ಮಾಡಿದ್ದರು. ಆಗ ರಕ್ಷಿತಾ ಅವರಿಗೆ ಸರಿಯಾಗಿ ಕೇಳಿಸಿರಲಿಲ್ಲ. ಹೀಗಾಗಿ ಅವರು, “ನಿಮ್ಮ ಮದುವೆಗೆ ಬರೋಕೆ ಟ್ರೈ ಮಾಡ್ತೀನಿ, ನೀವು ನನ್ನ ಮದುವೆಗೆ ಬನ್ನಿ” ಎಂದು ಹೇಳಿದ್ದರು.
ನನ್ನ ಹುಡುಗ ಹೀಗೆ ಇರಬೇಕು
ನನ್ನ ಹಾಗೆ ನನಗೆ ಯಾವ ಹುಡುಗ ಸಿಕ್ಕಿಲ್ಲ. ನಾನು ಮದುವೆ ಆಗುವ ಹುಡುಗ ರೈತ ಆಗಿರಬೇಕು, ಜಮೀನು ಇರಬೇಕು, ಹಳ್ಳಿಯವನಾಗಿರಬೇಕು. ನನ್ನ ಹುಡುಗ ಕೆಲಸ ಮಾಡುವಾಗ ನಾನು vlog ಮಾಡುತ್ತಲಿರಬೇಕು. ನನ್ನ ಕುಟುಂಬದಲ್ಲಿ ಯಾರೂ ಸೋಶಿಯಲ್ ಮೀಡಿಯಾದಲ್ಲಿ ಇಲ್ಲ, ನನ್ನ ತಂದೆ-ತಾಯಿಗೆ ಸೋಶಿಯಲ್ ಮೀಡಿಯಾ ಗೊತ್ತಿಲ್ಲ. ನಾನು ಮೊದಲ ಬಾರಿಗೆ ಇನ್‌ಫ್ಲುಯೆನ್ಸರ್ ಆಗಿದ್ದೀನಿ ಎಂದಿದ್ದಾರೆ ರಕ್ಷಿತಾ ಶೆಟ್ಟಿ.
ಮದುವೆಯಾದ್ಮೇಲೆ vlog ಬೇಡ ಅಂದ್ರೆ?
ಮದುವೆ ಆದಬಳಿಕ vlog ಮಾಡೋಕೆ ಇಷ್ಟ ಇದೆ. ಬೆಳಗ್ಗೆಯಿಂದ ನನ್ನ ಜೀವನ ಹೀಗೆ ಸಾಗಬೇಕು. ದಿನಪೂರ್ತಿ ನಡೆಯೋದನ್ನು ನಾನು vlog ಮಾಡಬೇಕು. ಮದುವೆ ಆದ್ಮೇಲೆ ನನಗೆ ಈ ಲೈಫ್ ಬೇಕು. ಇದಕ್ಕೆ ಬೆಂಬಲ ಕೊಡುವ ಹುಡುಗ ಬೇಕು. ಮದುವೆ ಆದ್ಮೇಲೆ ಹುಡುಗನಿಗೆ vlog ಇಷ್ಟ ಇಲ್ಲ ಅಂದರೆ ಅವನು ಹೋಗಲಿ, ಇರೋದು ಬೇಡ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.
ರಕ್ಷಿತಾ ಶೆಟ್ಟಿ ವಯಸ್ಸೆಷ್ಟು?
ಅಂದಹಾಗೆ ರಕ್ಷಿತಾ ಶೆಟ್ಟಿಗೆ ಈಗ 24 ವರ್ಷ. ರಕ್ಷಿತಾ ತಾಯಿ ಉಡುಪಿಯವರು. ರಕ್ಷಿತಾ ತಂದೆ-ತಾಯಿ ಮುಂಬೈನಲ್ಲಿ ನೆಲೆಸಿದ್ದಾರೆ. ಹೀಗಾಗಿ ಅವರು ಮುಂಬೈನಲ್ಲಿ ಹುಟ್ಟಿ ಬೆಳೆದರು. ಕೊರೊನಾ ಟೈಮ್‌ನಲ್ಲಿ ಉಡುಪಿಗೆ ಬಂದು ನೆಲೆಸಿದ್ದು, ಅಲ್ಲಿಯೇ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಲು ಆರಂಭಿಸಿದರು. ಇವರ ಅರ್ಧಂಬರ್ಧ ಕನ್ನಡವೇ ಟ್ರೋಲ್ ಆಗಿ ವೈರಲ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

