Teachers beat students Chamarajanagar:ಚಾಮರಾಜನಗರದ ಹೊಂಡರಬಾಳು ನವೋದಯ ಶಾಲೆಯಲ್ಲಿ, ಸ್ಮಾರ್ಟ್ ಬೋರ್ಡ್‌ನಲ್ಲಿ ಪಾಠ ಪುನರಾವರ್ತಿಸಿದ್ದಕ್ಕೆ ನಾಲ್ವರು ವಿದ್ಯಾರ್ಥಿಗಳ ಮೇಲೆ ಶಿಕ್ಷಕರು, ಪ್ರಾಂಶುಪಾಲರು ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಾಮರಾಜನಗರ(ನ.27) : ಸ್ಮಾರ್ಟ್ ಬೋರ್ಡ್ ನಲ್ಲಿ ನವೋದಯ ಶಾಲೆಯ ಮಕ್ಕಳಿಂದ ಪಾಠ ವೀಕ್ಷಣೆ ಮಾಡುವ ವೇಳೆ ರಿಮೋಟ್ ಪಡೆದು ಟಿವಿ ಆಫ್ ಮಾಡಿ ಆನ್ ಮಾಡಿದ್ದಕ್ಕೆ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಹೊಂಡರಬಾಳು ಗ್ರಾಮದಲ್ಲಿರುವ ನವೋದಯ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಆರೋಪವೇನು?
ವಿದ್ಯಾರ್ಥಿಗಳು ಪಾಠ ಅರ್ಥವಾಗಿಲ್ಲ ಅಂತಾ ಮತ್ತೊಂದು ಬಾರಿ ಅದೇ ಪಾಠವನ್ನು ಪುನರಾವರ್ತನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಮತ್ತೊಮ್ಮೆ ರಿಪೀಟ್ ಮಾಡಿದ್ದಕ್ಕೆ ಆಕ್ರೋಶಗೊಂಡ ಶಿಕ್ಷಕರು ಹಾಗೂ ಪ್ರಾಂಶುಪಾಲರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ನಾಲ್ವರು ವಿದ್ಯಾರ್ಥಿಗಳು ಆರೋಪ ಮಾಡ್ತಿದ್ದಾರೆ.
ನಾಲ್ವರು ವಿದ್ಯಾರ್ಥಿಗಳಿಗೆ ಕಪಾಳ, ಬೆನ್ನಿನ ಮೇಲೆ ಹೊಡೆದಿರುವ ಆರೋಪ ಕೇಳಿಬಂದಿದ್ದು ನಾಲ್ವರು ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಿದ್ದೀವಿ, ಕರೆದುಕೊಂಡು ಹೋಗಿ ಅಂತಾ ಪೋಷಕರಿಗೆ ನವೋದಯ ಶಾಲ ಸಿಬ್ಬಂದಿ ತಿಳಿಸಿದ್ದಾರೆ. 9 ನೇ ತರಗತಿ ವಿಧ್ಯಾರ್ಥಿಗಳಾದ ರವಿ ಪ್ರಕಾಶ್ ಸೇರಿ ಮೂವರು ಸ್ನೇಹಿತರ ಮೇಲೆ ಹಲ್ಲೆ ಮಾಡಿರುವ ಶಿಕ್ಷಕರಾದ ಕಂಪ್ಯೂಟರ್ ಶಿಕ್ಷಕ ಪುಟ್ಟರಾಜು, ಜಿತೇಂದ್ರ ಯಾದವ್ ಎಂಬ ಗಣಿತ ಶಿಕ್ಷಕ ಸೇರಿ ಪ್ರಿನ್ಸಿಪಾಲ್ ರಿಂದ ಹಲ್ಲೆ ನಡೆಸಿ ನಂತರ ವಿದ್ಯಾರ್ಥಿಗಳನ್ನು ನಗರಕ್ಕೆ ಕರೆತಂದು ಶಿಕ್ಷಕರು ಬಿಟ್ಟು ಹೋಗಿದ್ದಾರೆ.
ಟಿವಿ ಹಾಳಾಗಿದ್ದ ದಂಡ ಪಾವತಿಸಿ ಇಲ್ಲ ಟೀಸಿ ತಗೊಂಡು ಹೋಗಿ!
ಟಿವಿ ಹಾಳಾಗಿದೆ 10 ಸಾವಿರ ದಂಡ ಪಾವತಿಸಿ, ಇಲ್ಲದಿದ್ರೆ ಟಿಸಿ ಪಡೆಯುವಂತೆ ನೋಟೀಸ್ ಕೊಟ್ಟಿದ್ದಾರೆ. 18 ಲಕ್ಷ ರೂಪಾಯಿ ಬೆಲೆ ಬಾಳುವ ಸ್ಮಾರ್ಟ್ ಬೋರ್ಡ್ ಹಾಳಾಗಿರುವ ಬಗ್ಗೆ ನೋಟಿಸ್ ನಲ್ಲಿ ಉಲ್ಲೇಖ ಮಾಡಿರುವ ನವೋದಯ ಶಾಲೆಯ ಪ್ರಿನ್ಸಿಪಾಲ್ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ತಪ್ಪು ಮಾಡಿದ್ರೆ ಪೋಷಕರನ್ನು ಶಾಲೆಗೆ ಕರೆಸಿ ವಿಚಾರಣೆ ನಡೆಸಿಬೇಕಿತ್ತು ಹೀಗೆ ಏಕಾಎಕಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ. ಹಲ್ಲೆ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಗೆ ಪೋಷಕರು ದೂರು ಕೊಟ್ಟಿದ್ದಾರೆ..


