ಬೆಂಗಳೂರಿನ ಪ್ರಸ್ತಾವಿತ ಸುರಂಗ ರಸ್ತೆ ಯೋಜನೆಗೆ ಅದಾನಿ ಎಂಟರ್‌ಪ್ರೈಸಸ್ ಸಲ್ಲಿಸಿರುವ ಬಿಡ್ ಮೊತ್ತವು ಮೂಲ ಅಂದಾಜಿಗಿಂತ ಶೇ. 96ರಷ್ಟು ಹೆಚ್ಚಾಗಿದೆ ಎಂಬುದು ಬಹಿರಂಗವಾಗಿದೆ. ಈ ಭಾರೀ ವೆಚ್ಚದಿಂದಾಗಿ ಸಾರ್ವಜನಿಕರ ಮೇಲೆ 40 ವರ್ಷಗಳ ಕಾಲ ಟೋಲ್ ಹೊರೆ ಬೀಳುವ ಸಾಧ್ಯತೆಯಿದೆ.
- Home
- News
- State
- Karnataka News Live: ಬೆಂಗಳೂರು ಸುರಂಗ ಮಾರ್ಗ ಯೋಜನೆಗೆ ಅದಾನಿ ಕಂಪನಿಯಿಂದ ‘ಮಹಾ’ ಬಿಡ್!; ಮೂಲ ಅಂದಾಜು ದರಕ್ಕಿಂತ ಶೇ. 96 ರಷ್ಟು ದುಬಾರಿ!
Karnataka News Live: ಬೆಂಗಳೂರು ಸುರಂಗ ಮಾರ್ಗ ಯೋಜನೆಗೆ ಅದಾನಿ ಕಂಪನಿಯಿಂದ ‘ಮಹಾ’ ಬಿಡ್!; ಮೂಲ ಅಂದಾಜು ದರಕ್ಕಿಂತ ಶೇ. 96 ರಷ್ಟು ದುಬಾರಿ!

ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಇಂದು ನಡೆಯಲಿದೆ. ಕ್ರಸ್ಟ್ಗೇಟ್ ನಿರ್ಮಾಣದ ಹಿನ್ನೆಲೆ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ 12 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು ಸಿಗಲಿದೆ. ಕರ್ನಾಟಕ, ಅಂಧ್ರಪ್ರದೇಶ ಮತ್ತು ತೆಲಂಗಾಣ ಸಿಎಂ ಅವರಿಂದ ಲೋಕಾರ್ಪಣೆ ಮಾಡಲಾಗುತ್ತದೆ. 57.8 ಕೋಟಿ ವೆಚ್ಚದಲ್ಲಿ 33 ಕ್ರಸ್ಟ್ಗೇಟ್ ಗಳನ್ನು ಆಧುನೀಕರಿಸಲಾಗಿದೆ. ಕ್ರಸ್ಟ್ ಗೇಟ್ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್, ಆಂಧ್ರಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ತು ಮತ್ತು ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಅವರು ಒಂದೇ ವೇದಿಕೆಯಲ್ಲಿ ಸೇರುತ್ತಿದ್ದಾರೆ. ಕರ್ನಾಟಕ ರಾಜ್ಯ ರಾಜಕೀಯ ಸೇರಿದಂತೆ ಇಂದಿನ ಕ್ಷಣ ಕ್ಷಣದ ಸುದ್ದಿ ಅಪ್ಡೇಟ್ ಇಲ್ಲಿದೆ.
Karnataka News Live 25 June 2026 ಬೆಂಗಳೂರು ಸುರಂಗ ಮಾರ್ಗ ಯೋಜನೆಗೆ ಅದಾನಿ ಕಂಪನಿಯಿಂದ ‘ಮಹಾ’ ಬಿಡ್!; ಮೂಲ ಅಂದಾಜು ದರಕ್ಕಿಂತ ಶೇ. 96 ರಷ್ಟು ದುಬಾರಿ!
Karnataka News Live 25 June 2026 ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿಗೆ ಡೀಮ್ಡ್ ವಿಶ್ವವಿದ್ಯಾಲಯ ಸ್ಥಾನಮಾನ!; ಪ್ರತಿಷ್ಠಿತ ಸಂಸ್ಥೆಗೆ ಒಲಿದ ದೊಡ್ಡ ಗೌರವ!
Karnataka News Live 25 June 2026 Vaishak Death- Krishi Thapanda - ವೈಶಾಕ್ ಸಾವಿನ ಹಿನ್ನೆಲೆಯಲ್ಲಿ ಸುದ್ದಿಯಾಗಿರೋ ನಟಿ ಕೃಷಿ ತಾಪಂಡ ನಟಿಸಿದ ಸಿನಿಮಾಗಳು ಇವು!
ವೈಶಾಖ್ ಸಾವಿನ ಸುದ್ದಿಯಲ್ಲಿ ನಂಟು ಹೊಂದಿರುವ ಕೃಷಿ ತಾಪಂಡ ಕನ್ನಡದ ಯಾವ ಸಿನಿಮಾದಲ್ಲಿ ನಟಿಸಿದ್ದರು ಎಂದು ಕೇಳುವವರ ಸಂಖ್ಯೆ ದೊಡ್ಡದಿದೆ. ಅವರಿಗೂ ಸೇರಿದಂತೆ ನಟಿ ಕೃಷಿ ತಾಪಂಡ ವೃತ್ತಿಜೀವನದ ಆರಂಭ, ನಟಿಸಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ, ನೋಡಿ..
Karnataka News Live 25 June 2026 ಕ್ಷಮೆ ಕೇಳಿದ್ರೂ ಆ ಮಾತು ಅಳಿಸಿ ಹೋಗಲ್ಲ!; ನಟಿ ರನ್ಯಾ ರಾವ್ ಕುರಿತ ಯತ್ನಾಳ್ ಅಶ್ಲೀಲ ಹೇಳಿಕೆಗೆ ಹೈಕೋರ್ಟ್ ತೀವ್ರ ತರಾಟೆ!
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಕ್ಷಮೆಯಿಂದ ತಪ್ಪನ್ನು ಅಳಿಸಲಾಗದು ಕೋರ್ಟ್ ಹೇಳಿದೆ.
Karnataka News Live 25 June 2026 Viashak Death - ವೈಶಾಖ್ ಪತ್ನಿ ಬಿಚ್ಚಿಟ್ಟ ಸ್ಫೋಟಕ ಸತ್ಯಗಳು- ಮಾತು ಬಿಟ್ಟಿದ್ದರು; ಮೆಸೇಜ್ ಮಾಡುತ್ತಿದ್ದರು; ನಿನ್ನೆ ಲಾಸ್ಟ್ ಮೆಸೇಜ್ ಇದು..!
ಸದ್ಯಕ್ಕೆ ಪೊಲೀಸರು ಮೇಘಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಈ 'ತ್ರಿಕೋನ ಪ್ರೇಮ ಕಥೆ' ಅಥವಾ 'ಕೌಟುಂಬಿಕ ಕಲಹ' ವೈಶಾಕ್ ಅವರನ್ನು ಸಾವಿನ ದವಡೆಗೆ ತಳ್ಳಿತೇ ಎಂಬ ಆಯಾಮದಲ್ಲಿ ತನಿಖೆ ಮುಂದುವರಿಸಿದ್ದಾರೆ. ಮದುವೆಯಾದ 14 ವರ್ಷದ ನಂತರ ವೈಶಾಖ್ ತೆಗೆದುಕೊಂಡ ಈ ನಿರ್ಧಾರ ಇಡೀ ಕುಟುಂಬವನ್ನು ಅನಾಥವಾಗಿಸಿದೆ.
Karnataka News Live 25 June 2026 ವೈಶಾಕ್ ಅಂತಿಮ ದರ್ಶನಕ್ಕೆ ಸ್ಮಶಾನಕ್ಕೆ ಓಡೋಡಿ ಬಂದ ನಟಿ ಕೃಷಿ ತಾಪಾಂಡ, ಮೃತದೇಹ ನೋಡಲು ಅವಕಾಶ ನೀಡದ ಕುಟುಂಬಸ್ಥರು
ನಟಿ ಕೃಷಿ ತಾಪಾಂಡ ಅವರ ಆಪ್ತ ಸ್ನೇಹಿತ ವೈಶಾಕ್ ಉಪಾಧ್ಯಾಯ (45) ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ಮೇಘಾ ನೀಡಿದ ದೂರಿನಲ್ಲಿ ನಟಿಯ ಹೆಸರನ್ನು ಉಲ್ಲೇಖಿಸಿದ್ದು, ಅಂತ್ಯಕ್ರಿಯೆ ವೇಳೆ ನಟಿಗೆ ಅಂತಿಮ ದರ್ಶನ ಪಡೆಯಲು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
Karnataka News Live 25 June 2026 ಕುಡ್ಲಕ್ಕೆ ಬಂದ ಕಿಂಗ್ ಖಾನ್.. ಮಂಗಳೂರಿನಲ್ಲಿ 'ಬಾದ್‌ಶಾ' ಶಾರುಖ್ ಹವಾ; ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ದಂಡು!
ಮಂಗಳೂರಿನಲ್ಲಿ ಶಾರುಖ್ ಹವಾ ಜೋರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಿಂಗ್ ಖಾನ್ ಅವರ ಫೋಟೋಗಳು ಮತ್ತು ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಕರಾವಳಿ ಜನತೆಗೆ ಇದೊಂದು ಮರೆಯಲಾಗದ 'ಮೆಗಾ' ಸಂಜೆಯಾಗಲಿದೆ ಎನ್ನಲಾಗುತ್ತಿದೆ!
Karnataka News Live 25 June 2026 ಹೊಸ ತಲೆಮಾರಿನ ಉದ್ಯಮಗಳ 'ರಾಜಧಾನಿ' ನಮ್ಮ ಬೆಂಗಳೂರು!; ದೇಶದ ಟಾಪ್ 7 ಅತೀ ಕಿರಿಯ High-Value ಕಂಪನಿಗಳಿಗೆ ಸಿಲಿಕಾನ್ ಸಿಟಿ ಮನೆ!
'2025ರ ಬರ್ಗುಂಡಿ ಪ್ರೈವೇಟ್ ಹುರುನ್ ಇಂಡಿಯಾ 500' ಪಟ್ಟಿಯ ಪ್ರಕಾರ, ಬೆಂಗಳೂರು ಭಾರತದ ಅತ್ಯಂತ ಕಿರಿಯ ಮತ್ತು ಮೌಲ್ಯಯುತ ನವೋದ್ಯಮಗಳ ಕೇಂದ್ರವಾಗಿ ಹೊರಹೊಮ್ಮಿದೆ. ಸರ್ವಂ ಎಐ ಮತ್ತು ಜೆಪ್ಟೋ ಸೇರಿದಂತೆ 7 ಯುವ ಕಂಪನಿಗಳು ಇಲ್ಲಿ ನೆಲೆಸಿದೆ.
Karnataka News Live 25 June 2026 Bengaluru ಟೋಲ್ ಮುಕ್ತ ಹೆದ್ದಾರಿ - 631ಕೋಟಿ ವೆಚ್ಚ, 100ಮೀ ಅಗಲ, 10ಲೇನ್‌ಗಳ SM Krishna Road ಜೂ.27ಕ್ಕೆ ಲೋಕಾರ್ಪಣೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ 'ಮೇಜರ್ ಆರ್ಟೀರಿಯಲ್ ರಸ್ತೆ' ಜೂನ್ 27ರಂದು ಲೋಕಾರ್ಪಣೆಗೊಳ್ಳಲಿದೆ. 'ಎಸ್.ಎಂ.ಕೃಷ್ಣ ರಸ್ತೆ' ಎಂದು ನಾಮಕರಣಗೊಂಡಿರುವ ಈ ಟೋಲ್-ಮುಕ್ತ ಹೆದ್ದಾರಿಯು, ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯನ್ನು ಸಂಪರ್ಕಿಸಿ, ಸಂಚಾರ ದಟ್ಟಣೆ ಕಡಿಮೆಗೊಳಿಸುತ್ತದೆ
Karnataka News Live 25 June 2026 TB Dam inauguration - 'ನನಗೆ ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತಾಡ್ತಿದ್ದೆ..' ಕನ್ನಡದಲ್ಲೇ ಭಾಷಣ ಆರಂಭಿಸಿದ ಆಂಧ್ರ ಸಿಎಂ
Karnataka News Live 25 June 2026 ತವರಿನಿಂದ ಪತ್ನಿಯನ್ನು ಕರೆದೊಯ್ದ ಅಳಿಯನ ವಿರುದ್ಧವೇ ಕಿಡ್ನಾಪ್ ಕೇಸ್! ವಿಚಿತ್ರ ಪ್ರಕರಣಕ್ಕೆ ಹೈಕೋರ್ಟ್ ತಡೆ
Karnataka News Live 25 June 2026 ಕರ್ನಾಟಕ ಮಾವು ಬೆಳೆಗಾರರಿಗೆ ಸಹಾಯಧನ ಘೋಷಿಸಿದ ಕೇಂದ್ರ, ಜೋಶಿ ಮನವಿಗೆ ಸ್ಪಂದಿಸಿದ ಕೃಷಿ ಸಚಿವ
ಮಾವಿನ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಕರ್ನಾಟಕದ ರೈತರಿಗೆ ಕೇಂದ್ರ ಸರ್ಕಾರ ನೆರವು ನೀಡಿದೆ. ಸಚಿವ ಪ್ರಹ್ಲಾದ್ ಜೋಶಿ ಮಾಡಿದ್ದ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರು ಪ್ರತಿ ಕ್ವಿಂಟಾಲ್‌ಗೆ 1,750 ರೂಪಾಯಿ ಸಹಾಯಧನ ಘೋಷಿಸಿದ್ದಾರೆ.
Karnataka News Live 25 June 2026 ಸಾವಿಗೂ ಮುನ್ನ ಗೆಳತಿಗೆ ವೈಶಾಕ್ ಉಪಾಧ್ಯಾಯ ಕೊನೆ ಮೆಸೇಜ್ ಏನಾಗಿತ್ತು? ಕುಕ್ಕೆ ಸುಬ್ರಮಣ್ಯಕ್ಕೆ ಹೋಗೋಣ ಎಂದಿದ್ದ ನಟಿ ಕೃಷಿ ತಾಪಂಡ
ಉದ್ಯಮಿ ವೈಶಾಕ್ ಉಪಾಧ್ಯಾಯ, ನಟಿ ಕೃಷಿ ತಾಪಂಡ ಅವರ ಆರ್.ಆರ್. ನಗರದ ಫ್ಲಾಟ್‌ನಲ್ಲಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ 'ಬದುಕಲು ಇಷ್ಟವಿಲ್ಲ' ಎಂದು ವೈಶಾಕ್ ಕೃಷಿಗೆ ಸಂದೇಶ ಕಳುಹಿಸಿದ್ದು, ಕೌಟುಂಬಿಕ ಕಲಹ ಮತ್ತು ಹಿಂದಿನ ಕ್ರಿಮಿನಲ್ ಪ್ರಕರಣದಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂಬುದು ತಿಳಿದುಬಂದಿದೆ. ಈ ಘಟನೆ ನಡೆದಾಗ ಕೃಷಿ ಅವರು ಕ್ಷೇಮವನದಲ್ಲಿದ್ದರು.
Karnataka News Live 25 June 2026 ವೈಶಾಕ್‌ಗೆ ಮದುವೆ ಆಗಿ 14 ವರ್ಷದ ಮಗನಿದ್ದ; ಆದ್ರೂ ನಟಿ ಕೃಷಿ ತಾಪಾಂಡ ಮನೆಗೆ ಬರುತ್ತಿದ್ದನೇಕೆ? ಬಿಗ್ ಟ್ವಿಸ್ಟ್ ಕೊಟ್ಟ ಆ ಒಂದು ಸುಳಿವು!
ವೈಶಾಕ್ ಒಬ್ಬ ಯಶಸ್ವಿ ಉದ್ಯಮಿ. ಕಾರು, ಆಟೋಮೊಬೈಲ್ ಮತ್ತು ಗ್ಯಾರೇಜ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ ಮದುವೆಯಾಗಿ 15 ವರ್ಷಗಳಾಗಿತ್ತು. ಅಷ್ಟೇ ಅಲ್ಲದೆ, 14 ವರ್ಷದ ಒಬ್ಬ ಮಗನೂ ಇದ್ದಾನೆ. ಎಲ್ಲವೂ ಸರಿಯಾಗಿಯೇ ಇತ್ತು ಎನ್ನುವಾಗಲೇ ಹೀಗೇಕೆ ಆಯ್ತು?
Karnataka News Live 25 June 2026 'ಅವನಿಗೆ ಗೋ ಬ್ಯಾಕ್ ಅಂತಿದ್ದೆ..' ಬಸವ ತಾಲಿಬಾನ್‌ಗಳೆಂಬ ಹೇಳಿಕೆಗೆ ಕನ್ಹೇರಿ ಸ್ವಾಮೀಜಿ ವಿರುದ್ಧ ಬಾಣೂರು ಚನ್ನಪ್ಪ ಕಿಡಿ!
ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಚಿಕ್ಕಮಗಳೂರಿನಲ್ಲಿ ನಿವೃತ್ತ ಉಪನ್ಯಾಸಕ ಬಾಣೂರು ಚನ್ನಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
Karnataka News Live 25 June 2026 ಮನೆಯಲ್ಲಿ ಕೃಷಿ ತಾಪಂಡ ಇರದ ವೇಳೆ ಬಂದ ಗೆಳೆಯ ಸಾವು, ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದ ನಟಿ ಹೋಗಿದ್ದೆಲ್ಲಿಗೆ?
Karnataka News Live 25 June 2026 ಮುಸ್ಲಿಮರ ಓಲೈಕೆಗೆ ಕಾಂಗ್ರೆಸ್‌ನಿಂದ RSS ಟಾರ್ಗೆಟ್ - ಶಾಸಕ ಆರಗ ಜ್ಞಾನೇಂದ್ರ
Karnataka News Live 25 June 2026 ಕೃಷಿ ತಾಪಂಡ ಬದುಕಿನಲ್ಲಿ ಏನಾಗುತ್ತಿದೆ? ಬದುಕಲು ಬಿಡಿ ಎಂದು ಕಣ್ಣೀರಿಟ್ಟಿದ್ದ ನಟಿಗೆ ಗೆಳೆಯನ ಸಾವಿನ ಶಾಕ್
ನಟಿ ಕೃಷಿ ತಾಪಂಡ ಮನೆಯಲ್ಲಿ ಲೀವ್ ಇನ್ ಗೆಳೆಯ ವೈಶಾಖ್ ದುರಂತ ಅಂತ್ಯ ಕಂಡ ಘಟನೆ ಇದೀಗ ನಟಿ ಬದುಕಿಗೆ ಮತ್ತೊಂದು ಶಾಕ್ ಕೊಟ್ಟಿದೆ. ನನ್ನನ್ನು ಬದುಕಲು ಬಿಡಿ ಎಂದು ಕಣ್ಣೀರಿಟ್ಟಿದ್ದ ನಟಿ ಬದುಕಲ್ಲಿ ಏನಾಗುತ್ತಿದೆ?
Karnataka News Live 25 June 2026 ತುಂಗಭದ್ರಾ ಡ್ಯಾಂ 33 ಕ್ರಸ್ಟ್ ಗೇಟ್ ಲೋಕಾರ್ಪಣೆ - ಮೂರು ರಾಜ್ಯ, ಮೂವರು ಮುಖ್ಯಮಂತ್ರಿಗಳು, ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಕಾರ್ಯಕ್ರಮ!
ತುಂಗಭದ್ರಾ ಜಲಾಶಯ(TB Dam)ದ 33 ಗೇಟ್‌ಗಳ ಲೋಕಾರ್ಪಣೆ(Inauguration) ಕಾರ್ಯಕ್ರಮ ಇಂದು (ಜೂ.25,ಗುರುವಾರ) ಟಿಬಿ ಡ್ಯಾಂ(TB Dam) ಹಾಗೂ ಸಾರ್ವಜನಿಕ ಸಮಾರಂಭ ಮುನಿರಾಬಾದಿನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದ್ದು, ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.
Karnataka News Live 25 June 2026 ಚಿನ್ನದ ಬೆಲೆಯಲ್ಲಿ ಇಂದು ಮತ್ತೊಮ್ಮೆ ಮಹಾ ಪತನ; 10 ಗ್ರಾಮ್ Gold Rate 2,780 ರುಪಾಯಿ ಕುಸಿತ! ಬೆಳ್ಳಿ ಇನ್ನಷ್ಟು ಅಗ್ಗ
Gold Rate Today ಆಷಾಢ ಮಾಸ ಹತ್ತಿರವಾಗುತ್ತಿರುವ ಹೊತ್ತಿನಲ್ಲೇ ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ ಮಹಾ ಕುಸಿತ ಮುಂದುವರೆದಿದೆ. ಇದೀಗ ಸತತ ಮೂರನೇ ದಿನವೂ ಚಿನ್ನದ ಬೆಲೆಯಲ್ಲಿ ಮಹಾ ಕುಸಿತವಾಗಿದೆ. ಬೆಂಗಳೂರಿನಲ್ಲಿ ಜೂನ್ 25ರಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.