- Home
- Entertainment
- Vaishak Death- Krishi Thapanda: ವೈಶಾಕ್ ಸಾವಿನ ಹಿನ್ನೆಲೆಯಲ್ಲಿ ಸುದ್ದಿಯಾಗಿರೋ ನಟಿ ಕೃಷಿ ತಾಪಂಡ ನಟಿಸಿದ ಸಿನಿಮಾಗಳು ಇವು!
Vaishak Death- Krishi Thapanda: ವೈಶಾಕ್ ಸಾವಿನ ಹಿನ್ನೆಲೆಯಲ್ಲಿ ಸುದ್ದಿಯಾಗಿರೋ ನಟಿ ಕೃಷಿ ತಾಪಂಡ ನಟಿಸಿದ ಸಿನಿಮಾಗಳು ಇವು!
ವೈಶಾಖ್ ಸಾವಿನ ಸುದ್ದಿಯಲ್ಲಿ ನಂಟು ಹೊಂದಿರುವ ಕೃಷಿ ತಾಪಂಡ ಕನ್ನಡದ ಯಾವ ಸಿನಿಮಾದಲ್ಲಿ ನಟಿಸಿದ್ದರು ಎಂದು ಕೇಳುವವರ ಸಂಖ್ಯೆ ದೊಡ್ಡದಿದೆ. ಅವರಿಗೂ ಸೇರಿದಂತೆ ನಟಿ ಕೃಷಿ ತಾಪಂಡ ವೃತ್ತಿಜೀವನದ ಆರಂಭ, ನಟಿಸಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ, ನೋಡಿ..

ಸದ್ಯ ಕನ್ನಡದ ಸಿನಿಮಾ ನಟಿ ಕೃಷಿ ತಾಪಂಡ ಅವರು ಸುದ್ದಿಯಲ್ಲಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ಉದ್ಯಮಿ ವೈಶಾಕ್ (Vaishak) ಅವರ ಆ*ತ್ಮಹತ್ಯೆ ಪ್ರಕರಣದಲ್ಲಿ ಈ ನಟಿ ಕೃಷಿ ತಾಪಂಡ (Krishi Tapanda) ಹೆಸರು ತಳುಕುಹಾಕಿಕೊಂಡಿದೆ. ನಿನ್ನೆ ರಾತ್ರಿ ಸಾಯುವ ಸಮಯದಲ್ಲಿ ಸೇರಿದಂತೆ ಇತ್ತೀಚೆಗೆ ವೈಶಾಖ್ ಅವರು ಚಿತ್ರನಟಿ ಕೃಷಿ ತಾಪಂಡರ ಅಪಾರ್ಟ್‌ಮೆಂಟ್‌ನಲ್ಲೇ ಇದ್ದರು ಎನ್ನಲಾಗಿದೆ. ವೈಶಾಖ್ ಸಾವಿನ ತನಿಖೆ ಬೇರೆಬೇರೆ ಆಯಾಮಗಳಲ್ಲಿ ನಡೆಯುತ್ತಿದೆ. ಆದರೆ, ಈ ಕೇಸ್‌ನಲ್ಲಿ ಕೇಳಿಬರುತ್ತಿರುವ ನಟಿ ಕೃಷಿ ತಾಪಂಡ ಬಗ್ಗೆ ಜನರಿಗೆ ಇನ್ನಿಲ್ಲದ ಕುತೂಹಲ ಸೃಷ್ಟಿಯಾಗಿದೆ.
ವೈಶಾಖ್ ಸಾವಿನ ಸುದ್ದಿಯಲ್ಲಿ ನಂಟು ಹೊಂದಿರುವ ಕೃಷಿ ತಾಪಂಡ ಕನ್ನಡದ ಯಾವ ಸಿನಿಮಾದಲ್ಲಿ ನಟಿಸಿದ್ದರು ಎಂದು ಕೇಳುವವರ ಸಂಖ್ಯೆ ದೊಡ್ಡದಿದೆ. ಅವರಿಗೂ ಸೇರಿದಂತೆ ನಟಿ ಕೃಷಿ ತಾಪಂಡ ವೃತ್ತಿಜೀವನದ ಆರಂಭ, ನಟಿಸಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ, ನೋಡಿ..
ಕೃಷಿ ತಾಪಂಡ ಕನ್ನಡ ಚಿತ್ರರಂಗದ ನಟಿ ಮತ್ತು ಮಾಡೆಲ್. ಕೊಡಗಿನಲ್ಲಿ ಜನಿಸಿದ ಇವರು 'ಕಹಿ' (04 Nov 2016) ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. 2016 ರಲ್ಲಿ ತೆರೆಕಂಡ `ಅಕಿರ' (06 May 2016) ಚಿತ್ರದಿಂದ ಖ್ಯಾತಿ ಪಡೆದರು. ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ ಭಾಗವಹಿಸಿದ್ದರು.
ಬಳಿಕ ನಟಿ ಕೃಷಿ ತಾಪಂಡ ಅವರು 06 Jul 2018ರಲ್ಲಿ ತೆರೆಗೆ ಬಂದ 'ಕನ್ನಡಕ್ಕಾಗಿ ಒಂದನ್ನು ಒತ್ತಿ' 22 Nov 2019ರಲ್ಲಿ ತೆರೆಕಂಡ 'ಕಾಳಿದಾಸ ಕನ್ನಡ ಮೇಷ್ಟ್ರು', 10 Sep 2021ರಲ್ಲಿ ತೆರೆಕಂಡ 'ಲಂಕೆ', 10 Feb 2023ರಲ್ಲಿ ತೆರೆಗೆ ಬಂದ 'ರೂಪಾಯಿ' ಹಾಗೂ 31 Jan 2025 ಬಿಡುಗಡೆಯಾದ 'ಗಣ' ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ಉದ್ಯಮಿ ವೈಶಾಕ್ (Vaishak) ಅವರ ಆತ್ಮಹತ್ಯೆ ಪ್ರಕರಣ ಈಗ ಮತ್ತೊಂದು ಮಗ್ಗುಲಿಗೆ ತಿರುಗಿದೆ. ಈ ಘಟನೆ ಸಂಬಂಧ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ (UDR) ಪ್ರಕರಣ ದಾಖಲಾಗಿದ್ದು, ಮೃತ ವೈಶಾಕ್ ಅವರ ಪತ್ನಿ ಮೇಘಾ ಅವರು ನೀಡಿರುವ ದೂರು ಈಗ ಹಲವು ಸಂಚಲನಗಳನ್ನು ಸೃಷ್ಟಿಸಿದೆ. "ಗಂಡನ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ" ಎಂದು ದೂರು ನೀಡಿದ್ದಾರೆ.
ಆದರೆ, ದೂರಿನಲ್ಲಿ ಮೇಘಾ ಅವರು ನಟಿ ಕೃಷಿ ತಾಪಾಂಡ (Krishi Thapanda) ಅವರ ಬಗ್ಗೆ ನೇರವಾಗಿಯೇ ಉಲ್ಲೇಖಿಸಿದ್ದಾರೆ. "ನನ್ನ ಪತಿ ವೈಶಾಕ್‌ಗೆ ನಟಿ ಕೃಷಿ ಜೊತೆ ಅನೈತಿಕ ಸಂಬಂಧ ಇದೆ ಎಂದು ನಾನು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಬಂದ ಸುದ್ದಿಯನ್ನು ನೋಡಿ ತಿಳಿದುಕೊಂಡಿದ್ದೆ. ಈ ವಿಚಾರವಾಗಿ ನಾನು ಹಲವು ಬಾರಿ ಅವರ ಜೊತೆ ಜಗಳವಾಡಿದ್ದೆ. ಈ ಸಹವಾಸ ಬಿಡುವಂತೆ ಗೋಗರೆದಿದ್ದೆ. ಬಿಡುತ್ತೇನೆ ಎಂದು ಮಾತು ಕೊಟ್ಟಿದ್ದ ಅವರು, ಆ ಮಾತನ್ನು ಉಳಿಸಿಕೊಳ್ಳಲೇ ಇಲ್ಲ" ಎಂದು ಮೇಘಾ ಅಳಲು ತೋಡಿಕೊಂಡಿದ್ದಾರೆ.
ಮಾತು ಬಿಟ್ಟಿದ್ದರು, ಕೇವಲ ವಾಟ್ಸಪ್ ಮೆಸೇಜ್!
ನಟಿಯ ಜೊತೆಗಿನ ಸ್ನೇಹದ ವಿಚಾರ ಮನೆಯಲ್ಲಿ ದೊಡ್ಡ ಮಟ್ಟದ ರಂಪಾಟಕ್ಕೆ ಕಾರಣವಾಗಿತ್ತು. ಪತ್ನಿ ಕೇಳಿದ ಪ್ರಶ್ನೆಗಳಿಂದ ಬೇಸತ್ತಿದ್ದ ವೈಶಾಕ್, ಇತ್ತೀಚೆಗೆ ಪತ್ನಿಯ ಜೊತೆ ಮಾತನಾಡುವುದನ್ನೇ ಬಿಟ್ಟಿದ್ದರು. ಏನೇ ಹೇಳಬೇಕಿದ್ದರೂ ಕೇವಲ ವಾಟ್ಸಾಪ್ (WhatsApp) ಮೂಲಕ ಮೆಸೇಜ್ ಮಾಡುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಅವರು ಮನೆಗೆ ಕೂಡ ಬಂದಿರಲಿಲ್ಲ ಎಂಬ ಆಘಾತಕಾರಿ ವಿಷಯವನ್ನು ಮೇಘಾ ಪೊಲೀಸರಿಗೆ ತಿಳಿಸಿದ್ದಾರೆ.
ಕೊನೆಯ ಸಂದೇಶ: ಮಗನ ಬಗ್ಗೆ ವಿಚಾರಿಸಿ ಉತ್ತರ ಪಡೆದಿದ್ದರು!
ನಿನ್ನೆ ರಾತ್ರಿ ಕೂಡ ವೈಶಾಕ್ ಅವರು ಪತ್ನಿ ಮೇಘಾಗೆ ವಾಟ್ಸಾಪ್ ಮಾಡಿದ್ದರು. "ಮಗ ಮನೆಗೆ ಬಂದನಾ?" ಎಂದು ಕೇಳಿದ್ದರು. ಅದಕ್ಕೆ ಮೇಘಾ "ಬಂದಿದ್ದಾನೆ" ಎಂದು ರಿಪ್ಲೈ ಕೂಡ ಮಾಡಿದ್ದರು. ಆದರೆ, ಅದೇ ಅವರ ಕೊನೆಯ ಸಂಭಾಷಣೆ ಆಗುತ್ತದೆ ಎಂದು ಮೇಘಾ ಅಂದುಕೊಂಡಿರಲಿಲ್ಲ. ರಾತ್ರಿ 11:30ರ ಸುಮಾರಿಗೆ ಪೊಲೀಸರಿಂದ ಬಂದ ಕರೆ ವೈಶಾಕ್ ಅವರ ಇಡೀ ಕುಟುಂಬವನ್ನು ಸ್ತಬ್ದಗೊಳಿಸಿತ್ತು.
ಘಟನಾ ಸ್ಥಳದಲ್ಲಿ ನಟಿ ಕೃಷಿ ಇರುವುದು ಕಂಡ ಪತ್ನಿ!
ವಿಷಯ ತಿಳಿದು ಮೇಘಾ ಮತ್ತು ಮಾವನವರು ಕೃಷಿ ತಾಪಾಂಡ ಅವರ ನಿವಾಸಕ್ಕೆ ಹೋದಾಗ, ವೈಶಾಕ್ ಅಲ್ಲಿ ಮೃತಪಟ್ಟಿದ್ದರು. ಬೆಡ್ ಮೇಲೆ ಅಂಗಾತ ಮಲಗಿದ್ದ ಸ್ಥಿತಿಯಲ್ಲಿ ಪತಿ ಇರುವುದನ್ನು ಕಂಡ ಪತ್ನಿ ಕಂಗಾಲಾಗಿದ್ದರು. ಆ ಸಮಯದಲ್ಲಿ ಘಟನಾ ಸ್ಥಳದಲ್ಲಿ ಪೊಲೀಸರ ಜೊತೆಗೆ ನಟಿ ಕೃಷಿ ಕೂಡ ಇರುವುದನ್ನು ಪತ್ನಿ ಗಮನಿಸಿದ್ದಾರೆ. 2010ರಲ್ಲಿ ಮದುವೆಯಾಗಿ 14 ವರ್ಷದ ಮಗನಿದ್ದರೂ, ವೈಶಾಖ್-ಮೇಘಾ ಸಂಸಾರದಲ್ಲಿ ನಟಿ ಕೃಷಿ ತಾಪಂಡ ಎಂಟ್ರಿ ಬಿರುಗಾಳಿ ಎಬ್ಬಿಸಿತ್ತು ಎಂಬುದು ವೈಶಾಕ್ ಪತ್ನಿ ಮೇಘಾ ಮಾತಿನಿಂದ ಸ್ಪಷ್ಟವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

