MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • 'ಅವನಿಗೆ ಗೋ ಬ್ಯಾಕ್ ಅಂತಿದ್ದೆ..' ಬಸವ ತಾಲಿಬಾನ್‌ಗಳೆಂಬ ಹೇಳಿಕೆಗೆ ಕನ್ಹೇರಿ ಸ್ವಾಮೀಜಿ ವಿರುದ್ಧ ಬಾಣೂರು ಚನ್ನಪ್ಪ ಕಿಡಿ!

'ಅವನಿಗೆ ಗೋ ಬ್ಯಾಕ್ ಅಂತಿದ್ದೆ..' ಬಸವ ತಾಲಿಬಾನ್‌ಗಳೆಂಬ ಹೇಳಿಕೆಗೆ ಕನ್ಹೇರಿ ಸ್ವಾಮೀಜಿ ವಿರುದ್ಧ ಬಾಣೂರು ಚನ್ನಪ್ಪ ಕಿಡಿ!

ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಚಿಕ್ಕಮಗಳೂರಿನಲ್ಲಿ ನಿವೃತ್ತ ಉಪನ್ಯಾಸಕ ಬಾಣೂರು ಚನ್ನಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

2 Min read
Author : Ravi Janekal
Published : Jun 25 2026, 12:32 PM IST
Share this Photo Gallery
  • FB
  • TW
  • Linkdin
  • Whatsapp
13
ಚಿಕ್ಕಮಗಳೂರಿನಲ್ಲಿ ಕನ್ನೇರಿ ಸ್ವಾಮೀಜಿ ವಿರುದ್ಧ ಆಕ್ರೋಶ
Image Credit : Asianet News

ಚಿಕ್ಕಮಗಳೂರಿನಲ್ಲಿ ಕನ್ನೇರಿ ಸ್ವಾಮೀಜಿ ವಿರುದ್ಧ ಆಕ್ರೋಶ

ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಚಿಕ್ಕಮಗಳೂರಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದ ವೇಳೆ ನಿವೃತ್ತ ಉಪನ್ಯಾಸಕ ಬಾಣೂರು ಚನ್ನಪ್ಪ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು.

ಅವನಿಗೆ 'ಗೋ ಬ್ಯಾಕ್' ಹೇಳ್ತಿದ್ದೆ ನನಗೆ ಸಿಗಲಿಲ್ಲ

ಮಾಧ್ಯಮಗಳೊಂದಿಗೆ ಮಾತನಾಡಿದ ಬಾಣೂರು ಚನ್ನಪ್ಪ, ಅವನಿಗೆ ಗೋ ಬ್ಯಾಕ್ ಅಂತ ಹೇಳಿದ್ದೆ. ಆದರೆ ಆತ ನನಗೆ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಸವಣ್ಣನ ಅನುಯಾಯಿಗಳ ನಡುವೆ ಬರಲು ಅವನಿಗೆ ಅಧಿಕಾರವಿಲ್ಲ ಎಂದು ಕಿಡಿಕಾರಿದ ಅವರು, 'ವಿಶ್ವಗುರು ಬಸವಣ್ಣನ ಅನುಯಾಯಿಗಳು ಇರುವ ಈ ನೆಲಕ್ಕೆ ಬಂದು ಧರ್ಮದ ವಿರುದ್ಧ ಅಪಪ್ರಚಾರ ಮಾಡುವ ಹಕ್ಕು ಯಾರಿಗೂ ಇಲ್ಲ. ಲಿಂಗಧಾರಿಗಳನ್ನು ದಾರಿ ತಪ್ಪಿಸಲು ಆತ ಇಲ್ಲಿಗೆ ಬಂದಿದ್ದಾನೆ' ಎಂದು ಆರೋಪಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಕೋಟಿ ಕೋಟಿ ಕೊಟ್ಟು ಬುಕ್ ಮಾಡಿದ್ದಾರೆ
Image Credit : Asianet News

ಕೋಟಿ ಕೋಟಿ ಕೊಟ್ಟು ಬುಕ್ ಮಾಡಿದ್ದಾರೆ

ಕನ್ನೇರಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಮಾಡಿದ ಚನ್ನಪ್ಪ, 'ಯಾವುದೋ ಸಂಘಟನೆಗೆ ಆತ ಗುಲಾಮನಾಗಿದ್ದಾನೆ. ಕೋಟಿ ಕೋಟಿ ರೂಪಾಯಿ ನೀಡಿ ಅವನನ್ನು ಬುಕ್ ಮಾಡಿದ್ದಾರೆ. ನಮ್ಮ ಗುರುಗಳನ್ನು ಅವಮಾನಿಸಲು ಇವನ್ಯಾರು? ಬಸವ ಅನುಯಾಯಿಗಳನ್ನ ತಾಲಿಬಾನ್‌ಗಳೆನ್ನುವ ಮೂಲಕ ಬಸವಣ್ಣ ಹಾಗೂ ಅವರ ಅನುಯಾಯಿಗಳಿಗೆ ಅವಮಾನ ಮಾಡಿದ್ದಾನೆ. ವಿಶ್ವಗುರು ಬಸವಣ್ಣನ ತತ್ವಗಳನ್ನು ಅನುಸರಿಸುವವರನ್ನು ತಾಲಿಬಾನ್ ಎಂದು ಕರೆಯುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾವಿ ತೊಟ್ಟ ಬಾಯಲ್ಲಿ ಇಂತಹ ಮಾತು ಬರಬಾರದು

ಖಾವಿ ಧರಿಸಿದವರ ಬಾಯಿಂದ ಇಂತಹ ಕೆಟ್ಟ ಪದಗಳು ಬರಬಾರದು. ಸಮಾಜವನ್ನು ಒಡೆಯುವ ಬದಲು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದರು. ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದ ಹಿನ್ನೆಲೆ ಕುವೆಂಪು ಕಲಾಮಂದಿರದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು, ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

Related Articles

Related image1
ಬಸವತತ್ವದ ಅನುಯಾಯಿಗಳು ತಾಲಿಬಾನಿಗಳು, ಮತ್ತೊಮ್ಮೆ ವಿವಾದದಾತ್ಮಕ ಹೇಳಿಕೆ ಕೊಟ್ಟ ಕನ್ನೇರಿ ಶ್ರೀ!
Related image2
ಕೇಳದೇ ಇರೋರಿಗೆ ಬಿಟ್ಟಿ ಭಾಗ್ಯ ಕೊಡ್ತೀರಿ, ಎತ್ತುಗಳಿಗೆ ಯಾಕಿಲ್ಲ ಅನುದಾನ?- ಸರ್ಕಾರಕ್ಕೆ ಕನ್ನೇರಿ ಶ್ರೀ ನೇರ ಪ್ರಶ್ನೆ!
33
ಬೆಳಗಾವಿಯಲ್ಲೂ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಒತ್ತಾಯ
Image Credit : Asianet News

ಬೆಳಗಾವಿಯಲ್ಲೂ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಒತ್ತಾಯ

ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಜೂನ್ 28ರಂದು ಆಯೋಜಿಸಲು ಉದ್ದೇಶಿಸಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ, ಬಸವಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟಿಸಿ ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಉತ್ತರ ಕರ್ನಾಟಕದ ವಿವಿಧೆಡೆ ಬಸವಾದಿ ಶಿವಶರಣರ ಹಿಂದೂ ಸಮಾವೇಶ ಆಯೋಜಿಸಿ, ಲಿಂಗಾಯತ ಮಠಾಧೀಶರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಸಾಂವಿಧಾನಿಕ ಪದ ಬಳಸಿ ತೇಜೋವಧೆ ಮಾಡಿದ್ದಾರೆ. ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ, ಬಾಯಿ ಚಪಲತೆಯಿಂದ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಇದರಿಂದ ಬಸವ ಭಕ್ತರಿಗೆ ನೋವಾಗಿದೆ. ಈಗ ಮತ್ತೆ ಬಸವಕಲ್ಯಾಣದಲ್ಲಿ ಬಸವಾದಿ ಶರಣರ ಹೆಸರಲ್ಲಿ ಹಿಂದೂ ಸಮಾವೇಶ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಅನುಮತಿ ನೀಡಬಾರದು ಎಂದು ಪ್ರತಿಭಟನಾಕಾರು ಆಗ್ರಹಿಸಿದ್ದಾರೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಚಿಕ್ಕಮಗಳೂರು
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಮನೆಯಲ್ಲಿ ಕೃಷಿ ತಾಪಂಡ ಇರದ ವೇಳೆ ಬಂದ ಗೆಳೆಯ ಸಾವು, ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದ ನಟಿ ಹೋಗಿದ್ದೆಲ್ಲಿಗೆ?
Recommended image2
ಮುಸ್ಲಿಮರ ಓಲೈಕೆಗೆ ಕಾಂಗ್ರೆಸ್‌ನಿಂದ RSS ಟಾರ್ಗೆಟ್‌: ಶಾಸಕ ಆರಗ ಜ್ಞಾನೇಂದ್ರ
Recommended image3
ತುಂಗಭದ್ರಾ ಡ್ಯಾಂ 33 ಕ್ರಸ್ಟ್‌ ಗೇಟ್‌ ಲೋಕಾರ್ಪಣೆ: ಮೂರು ರಾಜ್ಯ, ಮೂವರು ಮುಖ್ಯಮಂತ್ರಿಗಳು, ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಕಾರ್ಯಕ್ರಮ!
Related Stories
Recommended image1
ಬಸವತತ್ವದ ಅನುಯಾಯಿಗಳು ತಾಲಿಬಾನಿಗಳು, ಮತ್ತೊಮ್ಮೆ ವಿವಾದದಾತ್ಮಕ ಹೇಳಿಕೆ ಕೊಟ್ಟ ಕನ್ನೇರಿ ಶ್ರೀ!
Recommended image2
ಕೇಳದೇ ಇರೋರಿಗೆ ಬಿಟ್ಟಿ ಭಾಗ್ಯ ಕೊಡ್ತೀರಿ, ಎತ್ತುಗಳಿಗೆ ಯಾಕಿಲ್ಲ ಅನುದಾನ?- ಸರ್ಕಾರಕ್ಕೆ ಕನ್ನೇರಿ ಶ್ರೀ ನೇರ ಪ್ರಶ್ನೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved