- Home
- Karnataka Districts
- ತುಂಗಭದ್ರಾ ಡ್ಯಾಂ 33 ಕ್ರಸ್ಟ್ ಗೇಟ್ ಲೋಕಾರ್ಪಣೆ: ಮೂರು ರಾಜ್ಯ, ಮೂವರು ಮುಖ್ಯಮಂತ್ರಿಗಳು, ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಕಾರ್ಯಕ್ರಮ!
ತುಂಗಭದ್ರಾ ಡ್ಯಾಂ 33 ಕ್ರಸ್ಟ್ ಗೇಟ್ ಲೋಕಾರ್ಪಣೆ: ಮೂರು ರಾಜ್ಯ, ಮೂವರು ಮುಖ್ಯಮಂತ್ರಿಗಳು, ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಕಾರ್ಯಕ್ರಮ!
ತುಂಗಭದ್ರಾ ಜಲಾಶಯ(TB Dam)ದ 33 ಗೇಟ್‌ಗಳ ಲೋಕಾರ್ಪಣೆ(Inauguration) ಕಾರ್ಯಕ್ರಮ ಇಂದು (ಜೂ.25,ಗುರುವಾರ) ಟಿಬಿ ಡ್ಯಾಂ(TB Dam) ಹಾಗೂ ಸಾರ್ವಜನಿಕ ಸಮಾರಂಭ ಮುನಿರಾಬಾದಿನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದ್ದು, ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.

TB Dam: ಟಿ ಬಿ ಡ್ಯಾಂ ಕ್ರಸ್ಟ್ ಗೇಟ್ ಗಳ ಉದ್ಘಾಟನೆ
ತುಂಗಭದ್ರಾ ಜಲಾಶಯ(TB Dam)ದ 33 ಗೇಟ್‌ಗಳ ಲೋಕಾರ್ಪಣೆ(Inauguration) ಕಾರ್ಯಕ್ರಮ ಇಂದು (ಜೂ.25,ಗುರುವಾರ) ಟಿಬಿ ಡ್ಯಾಂ(TB Dam) ಹಾಗೂ ಸಾರ್ವಜನಿಕ ಸಮಾರಂಭ ಮುನಿರಾಬಾದಿನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ನಿಮಿತ್ತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮದ ನಿಮಿತ್ತ ತುಂಗಭದ್ರಾ ಜಲಾಶಯವನ್ನು ಮದುವಣಗಿತ್ತಿಯಂತೆ ಅಲಂಕರಿಸಲಾಗಿದೆ. ಜಲಾಶಯ ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ರಾರಾಜಿಸುತ್ತಿದೆ.
ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿಯೇ ಗೇಟ್ ಲೋಕಾರ್ಪಣೆ ಕಾರ್ಯಕ್ರಮ ಎರಡನೇ ಅತಿ ದೊಡ್ಡ ಬೃಹತ್ ಕಾರ್ಯಕ್ರಮವಾಗಿದೆ. 1953ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ತುಂಗಭದ್ರಾ ಜಲಾಶಯವನ್ನು ಲೋಕಾರ್ಪಣೆ ಮಾಡಲು ಆಗಮಿಸಿದ್ದು ಮೊದಲ ಬೃಹತ್ ಕಾರ್ಯಕ್ರಮವಾಗಿತ್ತು
TB Dam: ಸಿಎಂ ಡಿಕೆ ಶಿವಕುಮಾರ್ ಅವರಿಂದ 33 ಗೇಟ್‌ಗಳ ಲೋಕಾರ್ಪಣೆ
ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿಯೇ ಗೇಟ್ ಲೋಕಾರ್ಪಣೆ ಕಾರ್ಯಕ್ರಮ ಎರಡನೇ ಅತಿ ದೊಡ್ಡ ಬೃಹತ್ ಕಾರ್ಯಕ್ರಮವಾಗಿದೆ. 1953ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ತುಂಗಭದ್ರಾ ಜಲಾಶಯವನ್ನು ಲೋಕಾರ್ಪಣೆ ಮಾಡಲು ಆಗಮಿಸಿದ್ದು ಮೊದಲ ಬೃಹತ್ ಕಾರ್ಯಕ್ರಮವಾಗಿತ್ತು
TB Dam: ಮೂವರು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ
ತುಂಗಭದ್ರಾ ಜಲಾಶಯದ ಮೇಲೆ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ ಮುಖ್ಯ ಮಂತ್ರಿಗಳು ತುಂಗಭದ್ರಾ ಮಾತೆಗೆ ಪೂಜೆ ಸಲ್ಲಿಸುವರು. ನಂತರ ನೂತನವಾಗಿ ನಿರ್ಮಿಸಿದ 33 ಗೇಟುಗಳನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಲೋಕಾರ್ಪಣೆ ಮಾಡುವರು. ನಂತರ ಮೂರು ರಾಜ್ಯದ ಮುಖ್ಯಮಂತ್ರಿಗಳು ರಸ್ತೆ ಮಾರ್ಗವಾಗಿ ಮುನಿರಾಬಾದಿಗೆ ಆಗಮಿಸಿ ಇಲ್ಲಿನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲ್ಲಿರುವ ಸಾರ್ವಜನಿಕ ಸಭೆಯಲ್ಲಿ ರೈತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಭಾರಿ ಪೊಲೀಸ್ ಬಂದೋಬಸ್ತ್ :
ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಮುನಿರಾಬಾದಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮುನಿರಾಬಾದ್‌ನಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮುನಿರಾಬಾದ್ ಆರಕ್ಷರ ಭದ್ರಕೋಟೆಯಾಗಿ ಪರಿಣಮಿಸಿದೆ.
ಟಿ ಬಿ ಡ್ಯಾಂ ಕ್ರಸ್ಟ್ ಗೇಟ್ ಗಳ ಉದ್ಘಾಟನೆಗೆ ಕೊಪ್ಪಳಕ್ಕೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೊಸಲಿಂಗಾಪೂರದ ಐ ಆರ್ ಬಿ ಕೇಂದ್ರಕ್ಕೆ ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸಿದರು. ಸ್ಥಳೀಯ ನಾಯಕರು ರೇವಂತ್ ರೆಡ್ಡಿಯನ್ನ ಸ್ವಾಗತಿಸಿದರು. ಈಗಾಗಲೇ ಸ್ಥಳಕ್ಕೆ ಆಮಿಸಿರುವ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಮತ್ತು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು,

