ಮೈಸೂರು ಸಿಲ್ಕ್ ಸೀರೆ ಕೊಳ್ಳಲು ಬೆಳಗ್ಗೆ 5 ಗಂಟೆಯಿಂದ ಕ್ಯೂ ಏಕೆ? ಭಾರಿ ಬೇಡಿಕೆ ಹಿಂದಿನ ಕಾರಣ, ಮುಂಜಾನೆ 5 ಗಂಟೆಯಿಂದ ಮಹಿಳೆಯರ ಕ್ಯೂ ನಿಲ್ಲುತ್ತಿದ್ದಾರೆ. ಗ್ರಾಹಕರು ಸೀರೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಯಾಕೆ? ಅಷ್ಟೊಂದು ಬೇಡಿಕೆ ಸೃಷ್ಟಿಯಾಗಿದ್ದು ಹೇಗೆ?
- Home
- News
- State
- Karnataka News Live: ಮೈಸೂರು ಸಿಲ್ಕ್ ಸೀರೆ ಕೊಳ್ಳಲು ಬೆಳಗ್ಗೆ 5 ಗಂಟೆಯಿಂದ ಕ್ಯೂ ಏಕೆ? ಭಾರಿ ಬೇಡಿಕೆ ಹಿಂದಿನ ಕಾರಣ
Karnataka News Live: ಮೈಸೂರು ಸಿಲ್ಕ್ ಸೀರೆ ಕೊಳ್ಳಲು ಬೆಳಗ್ಗೆ 5 ಗಂಟೆಯಿಂದ ಕ್ಯೂ ಏಕೆ? ಭಾರಿ ಬೇಡಿಕೆ ಹಿಂದಿನ ಕಾರಣ

ಬಳ್ಳಾರಿಯಲ್ಲಿ ಪಡಿತರ ಅಕ್ಕಿಯನ್ನು ಕಳ್ಳಸಾಗಾಟ ಮಾಡುತ್ತಿದ್ದ ಅಡ್ಡೆ ಮೇಲೆ ತಡ ರಾತ್ರಿ ದಾಳಿ ಮಾಡಲಾಗಿದೆ. ಬಳ್ಳಾರಿ ಸಹಾಯಕ ಆಯುಕ್ತರಾದ ರಾಜೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಬಳ್ಳಾರಿ ನಗರದ ಪುಲ್ಲಯ್ಯ ಕಾಂಪೌಂಡ್ ಒಳ ಆವರಣದಲ್ಲಿ ಘಟನೆ ನಡೆದಿದೆ. ದಾಳಿ ವೇಳೆ ಗುಜರಾತ್ ಮೂಲದ ಲಾರಿಯಲ್ಲಿ ಕಳ್ಳ ಸಾಗಾಟ ಮಾಡುತ್ತಿದ್ದ 523 ಪಡಿತರ ಅಕ್ಕಿ ಚೀಲ ವಶಪಡಿಸಲಾಗಿದೆ. ಇತ್ತ ರಾಜ್ಯ ರಾಜಕಾರಣ ಮತ್ತೆ ರಂಗೇರುತ್ತಿದೆ. ದಾವೋಸ್ನಲ್ಲಿ ಡಿಕೆ ಶಿವಕುಮಾರ್, ಅಧಿಕಾರದ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಕೈಬಿಡಿಲ್ಲ ಎಂದಿದ್ದಾರೆ. ರಾಜ್ಯ ರಾಜಕರಾಣ ಹಾಗೂ ಪ್ರತಿ ಕ್ಷಣದ ಲೈವ್ ಅಪ್ಡೇಟ್ ಇಲ್ಲಿದೆ.
Karnataka News Live 23 January 2026:ಮೈಸೂರು ಸಿಲ್ಕ್ ಸೀರೆ ಕೊಳ್ಳಲು ಬೆಳಗ್ಗೆ 5 ಗಂಟೆಯಿಂದ ಕ್ಯೂ ಏಕೆ? ಭಾರಿ ಬೇಡಿಕೆ ಹಿಂದಿನ ಕಾರಣ
Karnataka News Live 23 January 2026:ವಿಶ್ವದಲ್ಲೇ ವಾಹನಗಳ ಸಂಚಾರ ದಟ್ಟಣೆಗೆ ಬೆಂಗಳೂರಿಗೆ ಎಷ್ಟನೆ ಸ್ಥಾನ ?
ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು, ಇದೀಗ ಸಂಚಾರ ದಟ್ಟಣೆಯಲ್ಲಿ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟಾಮ್‌ಟಾಮ್ ಸಂಚಾರ ಸೂಚ್ಯಂಕ ಬಿಡುಗಡೆ ಮಾಡಿರುವ ವರದಿಯಂತೆ ವಿಶ್ವದಲ್ಲಿ ಅತಿಹೆಚ್ಚಿನ ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.
Karnataka News Live 23 January 2026:ಮರ್ಯಾದಾ ಹತ್ಯೆ - ಯುವ ಜೋಡಿ ಕೊಂದು ದೇವಸ್ಥಾನದ ಬಳಿ ಹೂತ ಸಹೋದರರು
ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ಮರ್ಯಾದಾ ಹತ್ಯೆಯೊಂದು ನಡೆದಿದೆ. ಮನೆಯವರನ್ನು ವಿರೋಧಿಸಿ ಮದುವೆಯಾಗಿದ್ದ ಯುವ ಜೋಡಿಯನ್ನು ಯುವತಿಯ ಸಹೋದರರೇ ಕೊಂದು ಹೊಲದಲ್ಲಿ ಹೂತು ಹಾಕಿದ್ದಾರೆ.
Karnataka News Live 23 January 2026:ಕರ್ನಾಟಕಕ್ಕೆ ಲಕ್ಕಿಯಾದ ಲಕ್ಕುಂಡಿ, 7ನೇ ದಿನ ಉತ್ಖನನದಲ್ಲಿ ಲೋಹದ ಹಣತೆ,ಮೂಳೆ ಪತ್ತೆ
ಕರ್ನಾಟಕಕ್ಕೆ ಲಕ್ಕಿಯಾದ ಲಕ್ಕುಂಡಿ, 7ನೇ ದಿನವೂ ಉತ್ಖನನ ಮುಂದುವರಿದಿದೆ. ಈ ವೇಳೆ ಪ್ರಾಚೀನ ಇತಿಹಾಸದ ಕುರಹು ಮಾತ್ರವಲ್ಲ, ಕರ್ನಾಟಕದ ಗತವೈಭವ ಸಾರುವ ಹಲವು ವಸ್ತುಗಳು ಪತ್ತೆಯಾಗಿದೆ.
Karnataka News Live 23 January 2026:ರಾಜ್ಯದ ಬಡವರ ಪಡಿತರ ಅಕ್ಕಿ ಗುಜರಾತ್‌ಗೆ ಮಾರಾಟ
ಪಡಿತರ ಅಕ್ಕಿಯನ್ನು ಗುಜರಾತ್‌ಗೆ ಕಳ್ಳ ಸಾಗಾಣೆ ಮೂಲಕ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಬಳ್ಳಾರಿಯಲ್ಲಿ ದಾಳಿ ನಡೆದಿದೆ. ಸಣ್ಣ ವಾಹನ ದಿಂದ ದೊಡ್ಡ ಲಾರಿಗೆ ತುಂಬುವಾಗ ಬಳ್ಳಾರಿ ಸಹಾಯಕ ಆಯುಕ್ತ ರಾಜೇಶ್ ದಿಡೀರ್ ದಾಳಿ ನಡೆಸಿದ್ದಾರೆ. ದಾಳಿ ವೇಳೆ 523 ಚೀಲ ಅಕ್ಕಿ, ಒಂದು ದೊಡ್ಡ ಲಾರಿ, ಎರಡು ಪಿಕ್ ಅಪ್ ಆಟೋ , ಇಬ್ಬರು ಗುಜರಾತ್ ಮೂಲದ ಚಾಲಕರು, ಬಳ್ಳಾರಿ ಮೂಲದ ಒಬ್ಬ ಚಾಲಕ, 5 ಹಮಾಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಇನ್ನೂ ಒಬ್ಬ ಚಾಲಕ ಮತ್ತು 5 ಹಮಾಲಿಗಳು ಪರಾರಿಯಾಗಿದ್ದಾರೆ.