ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಬಳಿ ಕಬ್ಬಿನ ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿಯಾಗಿ 21 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೆಲಸ ಮುಗಿಸಿ ತನ್ನ ಸ್ವಗ್ರಾಮ ಸಾತಿಹಾಳಕ್ಕೆ ಮರಳುತ್ತಿದ್ದಾಗ ಮಾರ್ಕಬ್ಬಿನಹಳ್ಳಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.

ವಿಜಯಪುರ (ಜ.23) ವಿಜಯಪುರ ಜಿಲ್ಲೆಯಲ್ಲಿ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಕಬ್ಬು ತುಂಬಿದ ಲಾರಿಗೆ ಬೈಕ್ ಡಿಕ್ಕಿಯಾದ ರಭಸಕ್ಕೆ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.

ಊರಿಗೆ ಮರಳುವಾಗ ಎದುರಾದ ಮೃತ್ಯು

ಸಾತಿಹಾಳ ಗ್ರಾಮದ ನಿವಾಸಿಯಾದ 21 ವರ್ಷದ ಯುವಕ ಹಣಮಂತ ಪಾಳ್ಯದ ಮೃತ ದುರ್ದೈವಿ. ಈತ ದೇವರಹಿಪ್ಪರಗಿ ಪಟ್ಟಣದಲ್ಲಿ ಕೆಲಸ ಮುಗಿಸಿಕೊಂಡು ತನ್ನ ಸ್ವಗ್ರಾಮವಾದ ಸಾತಿಹಾಳಕ್ಕೆ ಬೈಕ್‌ನಲ್ಲಿ ವಾಪಸ್ ಹೋಗುತ್ತಿದ್ದನು. ಈ ವೇಳೆ ವಿಧಿಯಾಟ ಬೇರೆಯೇ ಇತ್ತು.

ಇದನ್ನೂ ಓದಿ: ಮೃತ್ಯುಪಾಶವಾದ ಚಾರ್ಮಾಡಿ ಘಾಟ್: ಒಂದೇ ದಿನ ಮೂರು ಲಾರಿಗಳು ಪಲ್ಟಿ, ಹೆದ್ದಾರಿಯಲ್ಲಿ ನೂರಾರು ವಾಹನಗಳು ಲಾಕ್!

ಲಾರಿಗೆ ಬೈಕ್ ಡಿಕ್ಕಿ, ಸ್ಥಳದಲ್ಲೇ ಸಾವು

ಮಾರ್ಕಬ್ಬಿನಹಳ್ಳಿ ಕ್ರಾಸ್ ಬಳಿ ಚಲಿಸುತ್ತಿದ್ದ ಕಬ್ಬು ತುಂಬಿದ ಲಾರಿಗೆ ಹಣಮಂತ ಚಲಾಯಿಸುತ್ತಿದ್ದ ಬೈಕ್ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಣಮಂತನ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ತೀವ್ರ ರಕ್ತಸ್ರಾವವಾದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.