ಅಜಿತ್ ಎದುರು ಈ ನಟಿ ನಟಿಸಬೇಕಿತ್ತು. ಆದರೆ ಆರಂಭದಲ್ಲಿ, ಪ್ರಸಿದ್ದ ನಟಿ ಸಮೀರಾ ರೆಡ್ಡಿ ಅವರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಲಾಯಿತು. ಅಲ್ಲಿ ಆದ ಸಮಸ್ಯೆ ಏನೆಂದರೆ, ಸಮೀರಾ ರೆಡ್ಡಿಿಗೆ ತಮಿಳು ಬರುತ್ತಿರಲಿಲ್ಲ, ನಿರ್ದೇಶಕರಿಗೆ ಹಿಂದಿ ಬರುತ್ತಿರಲಿಲ್ಲ. ಇದರಿಂದಾಗಿ ಮತ್ತೆ ಆ ಪಾತ್ರಕ್ಕೆ ಇವರೇ ಬಂದರು.
ಈ ನಟಿಯ ಲೇಟೆಸ್ಟ್ ಫೋಟೋ ನೋಡಿ ಫ್ಯಾನ್ಸ್ ಶಾಕ್!
Vasundhara Das: ಒಂದು ಕಾಲದಲ್ಲಿ ಅಭಿಮಾನಿಗಳು ಹುಚ್ಚರಂತೆ ಆರಾಧಿಸಿದ್ದ ಅನೇಕ ನಟಿಯರು ಈಗ ಗುರುತೇ ಸಿಗದಷ್ಟು ಬದಲಾಗಿದ್ದಾರೆ ಆ ಪಟ್ಟಿಯಲ್ಲಿ ಕನ್ನಡದಲ್ಲಿಯೂ ನಟಿಸಿದ್ದ ಭಾರತದ ಖ್ಯಾ ನಟಿಯೊಬ್ಬರು ಕೂಡ ಸೇರಿಕೊಂಡಿದ್ದಾರೆ. ಆ ಸ್ಟಾರ್ ನಟಿಯ ಇತ್ತೀಚೆನ ಪೋಟೋ ನೋಡಿ ಅಭಿಮಾನಿಗಳು ಸಖತ್ ಶಾಕ್ ಆಗಿದ್ದಾರೆ. ಹಾಗಿದ್ದರೆ ಆ ನಟಿ ಯಾರು?
ಆ ನಟಿ ಬೇರಾರೂ ಅಲ್ಲ.. ವಸುಂಧರಾ ದಾಸ್!
ಕೆಲವೇ ಕೆಲವು ತಮಿಳು ಚಿತ್ರಗಳಲ್ಲಿ ನಟಿಸಿದ್ದರೂ ಸಹ ನಟಿ ವಸುಂಧರಾ ದಾಸ್ ಅಭಿಮಾನಿಗಳಿಗೆ ಯಾವಾಗಲೂ ಅಚ್ಚುಮೆಚ್ಚಿನವರಾಗಿದ್ದಾರೆ. ಅವರು 2000 ರಲ್ಲಿ ಕಮಲ್ ನಟಿಸಿದ 'ಹೇ ರಾಮ್' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಕಮಲ್ ಜೊತೆ ನಟಿಸಿದ ವಸುಂಧರಾ ಅವರ ಮೊದಲ ಚಿತ್ರ ಸೂಪರ್ ಹಿಟ್ ಆಗಿತ್ತು. ಅವರ ಮೊದಲ ಚಿತ್ರದ ಯಶಸ್ಸಿನ ನಂತರ, ವಸುಂಧರಾ ಅವರಿಗೆ ಮತ್ತಷ್ಟು ಚಲನಚಿತ್ರಗಳ ಆಫರ್‌ಗಳು ಬಂದವು.
ಆಗ, ಆಫರ್ ಇರುವಾಗ ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ನಟಿಸಿರುವ ವಸುಂಧರಾ, ಹಿಂದಿಯಲ್ಲಿ ಸಹ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಸ್ಟಾರ್ ಅಜಿತ್ ಅವರ ವೃತ್ತಿಜೀವನದಲ್ಲಿ 'ಸಿಟಿಜನ್' ಬಹಳ ಮುಖ್ಯವಾದ ಚಿತ್ರವಾಗಿತ್ತು. ಈ ಚಿತ್ರವನ್ನು ಸರವಣ ಸುಬ್ಬಯ್ಯ ನಿರ್ದೇಶಿಸಿದ್ದಾರೆ. ಸಿಟಿಜನ್ ಚಿತ್ರದಲ್ಲಿ ಅಜಿತ್ ಎದುರು ವಸುಂಧರಾ ದಾಸ್ ನಟಿಸಬೇಕಿತ್ತು. ಆದರೆ ಆರಂಭದಲ್ಲಿ, ಪ್ರಸಿದ್ದ ನಟಿ ಸಮೀರಾ ರೆಡ್ಡಿ ಅವರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಲಾಯಿತು. ಅಲ್ಲಿ ಆದ ಸಮಸ್ಯೆ ಏನೆಂದರೆ, ಸಮೀರಾ ರೆಡ್ಡಿ ಅವರಿಗೆ ತಮಿಳು ಬರುತ್ತಿರಲಿಲ್ಲ, ನಿರ್ದೇಶಕರಿಗೆ ಹಿಂದಿ ಬರುತ್ತಿರಲಿಲ್ಲ. ಈ ಕಾರಣದಿಂದಾಗಿ, ಸಮೀರಾ ರೆಡ್ಡಿ ಅವರನ್ನು ಚಿತ್ರದಿಂದ ತೆಗೆದುಹಾಕಿ, ಆ ಜಾಗಕ್ಕೆ ವಸುಂಧರಾ ದಾಸ್ ಬಂದರು. ಆದರೆ ವಸುಂಧರಾಗೆ ಡಾನ್ಸ್ ಮಾಡುಲು ಬರುತ್ತಿರಲಿಲ್ಲ. ಆದರೂ ಸಿಟಿಜನ್ ಚಿತ್ರಕ್ಕಾಗಿ ಅವರು ಭಾರೀ ಕಷ್ಟಪಟ್ಟು ಸ್ಟೆಪ್ ಹಾಕಿದ್ದಾರೆ.
'ಲಂಕೇಶ್ ಪತ್ರಿಕೆ' ಸಿನಿಮಾದಲ್ಲಿಯೂ ನಟಿಸಿದ್ದಾರೆ
ನಟಿ ವಸುಂಧರಾ ದಾಸ್ ಕನ್ನಡದ ಸ್ಟಾರ್ ನಟ ದರ್ಶನ್ ಅವರೊಂದಿಗೆ 'ಲಂಕೇಶ್ ಪತ್ರಿಕೆ' ಸಿನಿಮಾದಲ್ಲಿಯೂ ನಟಿಸಿದ್ದಾರೆ.. ಇದರಲ್ಲಿನ ಹಾಡುಗಳಲ್ಲಿ ಮುಖ್ಯವಾಗಿ 'ಎಂದೂ ಕಂಡ ಕನಸು.. ಅದು ನಿನ್ನ ಮನಸು..' ಸಾಂಗ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿತ್ತು.
ನಟಿ ಮಾತ್ರವಲ್ಲದೇ ವಸುಂಧರಾ ದಾಸ್ ಗಾಯಕಿಯಾಗಿಯೂ ಹೆಸರು ಮಾಡಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ಸಂಯೋಜನೆಯಲ್ಲಿ 'ಮುಧನ್' ಚಿತ್ರಕ್ಕಾಗಿ ಅವರು ಹಾಡಿದ್ದ 'ಶಕಲಕ' ಬೇಬಿ ಹಾಡು ಉತ್ತಮ ಪ್ರತಿಕ್ರಿಯೆ ಪಡೆಯಿತು. ಅದೇ ರೀತಿ, ತಮಿಳು ನಟ ವಿಜಯ್ ಅವರ 'ಖುಶಿ' ಚಿತ್ರದಲ್ಲಿ 'ಕಟ್ಟಿಪುಡಿ ಕಟ್ಟಿಪುಡಿ ದಾ', 'ಋತಮ್' ಚಿತ್ರದಲ್ಲಿ 'ಅಯ್ಯೋ ಪಥಿಕಿಚ್ಚು' ಹಾಡನ್ನು ಹಾಡಿದರು. ಹೀಗೆ, ವಸುಂಧರಾ ದಾಸ್ ಅವರು ಅನೇಕ ಹಿಟ್ ಹಾಡುಗಳನ್ನು ಹಾಡಿದ್ದಾರೆ.

2007 ರಲ್ಲಿ ಸಿನಿಮಾ ನಟನೆಯಿಂದ ನಿವೃತ್ತಿ
ಇಂಥ ನಟಿ ವಸುಂಧರಾ ದಾಸ್ ಅವರು 2007 ರಲ್ಲಿ ಸಿನಿಮಾ ನಟನೆಯಿಂದ ನಿವೃತ್ತರಾದರು. ಆ ಬಳಿಕ ವಸುಂಧರಾ ದಾಸ್ ಅವರಿಗೆ ಏನಾಯಿತು ಎಂದು ಅನೇಕರಿಗೆ ತಿಳಿದಿರಲಿಲ್ಲ. 'ಡ್ರಮ್ ಜಾಮ್' ಎಂಬ ಸಂಗೀತ ಬ್ಯಾಂಡ್ ನಡೆಸುತ್ತಿರುವ ವಸುಂಧರಾ ದಾಸ್ ಸಂಗೀತ ಕಚೇರಿಗಳನ್ನು ನಡೆಸುತ್ತಿದ್ದಾರೆ. ಸದ್ಯ ಗುರುತಿಸಲಾಗದಷ್ಟು ಬದಲಾಗಿರುವ ನಟಿ ವಸುಂಧರಾ ದಾಸ್ ಅವರ ಇತ್ತೀಚಿನ ಫೋಟೋಗಳು ನೋಡಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ, 'ಬದಲಾವಣೆ ಜಗದ ನಿಯಮ' ಎಂಬುದನ್ನು ಒಪ್ಪಿಕೊಂಡು ಅವರ ಅಭಿಮಾನಿಗಳು ಸಮಾಧಾನ ಮಾಡಿಕೊಳ್ಳುತ್ತಿದ್ದಾರಂತೆ.


