10:58 PM (IST) Sep 02

Karnataka News Live 2 September 2026 8th Pay Commission - ನೌಕರರಿಗೆ ಸಿಗಲಿದೆ ಭರ್ಜರಿ ಸುದ್ದಿ; ವೇತನ ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ 5 ಬಿಗ್ ಅಪ್‌ಡೇಟ್ಸ್!

ಕೇಂದ್ರ ಸರ್ಕಾರದ 8ನೇ ವೇತನ ಆಯೋಗದ ಜಾರಿಗೆ ಸಂಬಂಧಿಸಿದಂತೆ ಪ್ರಮುಖ ಚರ್ಚೆಗಳು ನಡೆಯುತ್ತಿದ್ದು, ಇದು ಜನವರಿ 1, 2026 ರಿಂದ ಅನ್ವಯವಾಗಲಿದೆ. ಫಿಟ್‌ಮೆಂಟ್ ಫ್ಯಾಕ್ಟರ್, ಮೂಲ ವೇತನ ಮತ್ತು ಪಿಂಚಣಿಯಲ್ಲಿ ಭಾರಿ ಏರಿಕೆಯ ನಿರೀಕ್ಷೆಯಿದ್ದು, ಆಯೋಗವು ದೇಶಾದ್ಯಂತ ನೌಕರರ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಹಾಗಾದರೆ ಪೇ ಮೆಂಟ್‌ ಎಷ್ಟು ಹೆಚ್ಚಾಗಲಿದೆ ಎನ್ನುವುದಕ್ಕೆ ಇಲ್ಲಿದೆ ಉತ್ತರ!

Read Full Story
10:56 PM (IST) Sep 02

Karnataka News Live 2 September 2026 ಡ್ರೈವ್‌ ಮಾಡುವಾಗ ಆನ್‌ಲೈನ್‌ ಮೀಟಿಂಗ್‌ನಲ್ಲಿರಬೇಡಿ - ಟೆಕ್ಕಿಗಳಿಗೆ ಬೆಂಗಳೂರು ಪೊಲೀಸ್‌ ವಾರ್ನಿಂಗ್‌

ಬೆಂಗಳೂರಿನ ಔಟರ್ ರಿಂಗ್ ರೋಡ್‌ನಲ್ಲಿನ ಟ್ರಾಫಿಕ್ ಜಾಮ್ ಕಡಿಮೆ ಮಾಡಲು, ಚಾಲನೆ ಮಾಡುವಾಗ ಆನ್‌ಲೈನ್ ಮೀಟಿಂಗ್‌ಗಳಲ್ಲಿ ಭಾಗವಹಿಸದಂತೆ ತಮ್ಮ ಉದ್ಯೋಗಿಗಳಿಗೆ ಸೂಚಿಸಲು ಸಂಚಾರ ಪೊಲೀಸರು ಐಟಿ ಕಂಪನಿಗಳಿಗೆ ಸಲಹೆ ನೀಡಿದ್ದಾರೆ.

Read Full Story
10:28 PM (IST) Sep 02

Karnataka News Live 2 September 2026 ಶಿವರಾಮ ಕಾರಂತ ಬಿಡಿಎ ಲೇಔಟ್‌ ಸೈಟ್‌ಗೆ ಮೊದಲ ದಿನವೇ ಭರ್ಜರಿ ಡಿಮಾಂಡ್‌

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ದಶಕದ ನಂತರ ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡುತ್ತಿದೆ. ಮೊದಲ ದಿನವೇ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ನಿವೇಶನಗಳ ಸಂಖ್ಯೆ, ದರ, ಅಳತೆ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ವಿವರ ಇಲ್ಲಿದೆ.

Read Full Story
10:10 PM (IST) Sep 02

Karnataka News Live 2 September 2026 ಸಮೋಸಾಗೆ ಇಂಗ್ಲಿಷ್‌ನಲ್ಲಿ ಏನಂತಾರೆ? ಇರಾನ್‌ನಿಂದ ಭಾರತಕ್ಕೆ ಬಂದ ಈ ಖಾದ್ಯದ ರೋಚಕ ಜರ್ನಿ

ಸಮೋಸಾ ಭಾರತದಲ್ಲಿ ಸೃಷ್ಟಿಯಾಗಿರುವ ಖಾದ್ಯ ಅಲ್ಲವೇ ಅಲ್ಲ. ಅದು ಭಾರತಕ್ಕೆ ಬಂದಿರುವ ಹಿಂದೆ ರೋಚಕ ಜರ್ನಿಯೇ ಇದೆ. ಮೊದಲ ಬಾರಿಗೆ ಹೈದರಾಬಾದ್‌ಗೆ ಬಂದಿದ್ದ ಸಮೋಸಾ ಇಂದು ದೇಶದ ಗಲ್ಲಿಗಲ್ಲಿಯಲ್ಲೂ ತಿನ್ನಲು ಸಿಗುತ್ತಿದೆ. ಈ ಕುರಿತ ರೋಚಕ ಸ್ಟೋರಿ ಇಲ್ಲಿದೆ.

Read Full Story
09:12 PM (IST) Sep 02

Karnataka News Live 2 September 2026 'ಬೆಳಗಾವಿ, ಕಾರವಾರ, ನಿಪ್ಪಾಣಿ ನಮಗೆ ಸೇರಬೇಕು' ಮಹಾರಾಷ್ಟ್ರ ಸಲ್ಲಿಸಿದ ತ್ವರಿತ ವಿಚಾರಣೆ ಅರ್ಜಿಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು

ದಶಕಗಳಷ್ಟು ಹಳೆಯದಾದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳನ್ನು ತನಗೆ ಹಸ್ತಾಂತರಿಸಬೇಕೆಂದು ಮಹಾರಾಷ್ಟ್ರ ಸುಪ್ರೀಂ ಕೋರ್ಟ್‌ನಲ್ಲಿ ಶೀಘ್ರ ವಿಚಾರಣೆಗೆ ಮನವಿ ಮಾಡಿದೆ.

Read Full Story
08:26 PM (IST) Sep 02

Karnataka News Live 2 September 2026 ನಿಧಿಗಾಗಿ ಹೊರಟ ವಿಷ್ಣುವರ್ಧನ್‌ಗೆ ಸಿಕ್ಕಿದ್ದು ಪುನರ್ಜನ್ಮದ ರಹಸ್ಯ - ಏನಿದು ಸೇಡಿನ ರೋಚಕ ಕಥೆ!

ಸಾಹಸ ಸಿಂಹ ವಿಷ್ಣುವರ್ಧನ್ ಅವರ ‘ಬಂಗಾರದ ಜಿಂಕೆ’ ಸಿನಿಮಾ ಕೇವಲ ನಿಧಿ ಹುಡುಕಾಟದ ಕಥೆಯಲ್ಲ. ವಿಚಿತ್ರ ಕನಸು, ನಿಗೂಢ ಗುಹೆ, ಹಿಂದಿನ ಜನ್ಮದ ನೆನಪು, ಪ್ರೀತಿ ಮತ್ತು ವರ್ಷಗಳ ಹಿಂದಿನ ಕೊಲೆಯ ರಹಸ್ಯ-ಇವೆಲ್ಲವನ್ನೂ ಒಳಗೊಂಡಿರುವ 1980ರ ಈ ಕನ್ನಡ ಚಿತ್ರದ ಕುತೂಹಲಕಾರಿ ಕಥೆ ಇಲ್ಲಿದೆ.

Read Full Story
08:26 PM (IST) Sep 02

Karnataka News Live 2 September 2026 Bagalakote - ತರಗತಿಯಲ್ಲೇ ಕುಸಿದುಬಿದ್ದ ಶಾಲಾ ಮೇಲ್ಛಾವಣಿ; ಕೂದಲೆಳೆಯ ಅಂತರದಲ್ಲಿ ವಿದ್ಯಾರ್ಥಿಗಳು ಪಾರು!

ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ, ತರಗತಿ ನಡೆಯುತ್ತಿದ್ದ ವೇಳೆ ಮೇಲ್ಛಾವಣಿ ಕುಸಿದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದ ಬಗ್ಗೆ ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಅದೃಷ್ಟವಶಾತ್ ದೊಡ್ಡ ದುರಂತ ತಪ್ಪಿದೆ.

Read Full Story
07:45 PM (IST) Sep 02

Karnataka News Live 2 September 2026 ಹೆಂಡತಿ ಕಣ್ಣೆದುರೇ ನರಳಿ ನರಳಿ ಪ್ರಾಣಬಿಟ್ಟ ನವ ವಿವಾಹಿತ - ಬಿಎಂಟಿಸಿಗೆ ಮತ್ತೊಂದು ಬಲಿ

ಪ್ರೀತಿಸಿದ ಜೋಡಿಯೊಂದು ಜಸ್ಟ್ 8 ತಿಂಗಳ ಹಿಂದಷ್ಟೇ ಮದುವೆ ಆಗಿತ್ತು. ಮುದ್ದಾಗಿದ್ದ ಈ ಜೋಡಿ ಮೇಲೆ ಬಿಎಂಟಿಸಿ ಬಸ್ಸಿನ ವಕ್ರದಷ್ಟಿ ಬಿದ್ದು, ಇಬ್ಬರನ್ನೂ ಬೇರ್ಪಡಿಸಿದೆ. ಭೀಕರ ಅಪಘಾತದಲ್ಲಿ ಪತಿ ಪ್ರಾಣ ಕಳೆದುಕೊಂಡಿದ್ದು, ಪತ್ನಿ ಕಂಗಾಲಾಗಿದ್ದಾಳೆ.

Read Full Story
07:13 PM (IST) Sep 02

Karnataka News Live 2 September 2026 ಮಂಡ್ಯದಲ್ಲಿ ಹೃದಯ ವಿದ್ರಾವಕ ಘಟನೆ; ಹೃದಯಾಘಾತಕ್ಕೆ 9ನೇ ತರಗತಿ ಬಾಲಕ ಬಲಿ

ಬಿಸಿಯೂಟ ಮಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ 9ನೇ ತರಗತಿ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

Read Full Story
07:07 PM (IST) Sep 02

Karnataka News Live 2 September 2026 KPSC KAS ನೇಮಕಾತಿ 2026 - 319 ಗ್ರೂಪ್ ‘ಎ’ & ‘ಬಿ’ ಗೆಜೆಟೆಡ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಕರ್ನಾಟಕ ಲೋಕಸೇವಾ ಆಯೋಗವು (KPSC) 319 ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಈ ಮೂಲಕ, ಪದವೀಧರ ಅಭ್ಯರ್ಥಿಗಳಿಗೆ ರಾಜ್ಯ ಸಿವಿಲ್ ಸೇವೆಗಳ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಲಭಿಸಿದೆ.
Read Full Story
07:03 PM (IST) Sep 02

Karnataka News Live 2 September 2026 69 ಇನ್ಸ್‌ಪೆಕ್ಟರ್‌ಗಳಿಗೆ ಸ್ಥಳ ನಿಯುಕ್ತಿ, 18 ಡಿವೈಎಸ್‌ಪಿಗಳ ವರ್ಗಾವಣೆ ಮಾಡಿ ಪೊಲೀಸ್‌ ಇಲಾಖೆ ಆದೇಶ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಬೃಹತ್ ಮಟ್ಟದ ವರ್ಗಾವಣೆ ನಡೆದಿದ್ದು, 69 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು ಮತ್ತು 18 ಡಿವೈಎಸ್‌ಪಿ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

Read Full Story
07:02 PM (IST) Sep 02

Karnataka News Live 2 September 2026 41 ಲಕ್ಷ ಠೇವಣಿ ಇಟ್ಟರೂ ತೆರಿಗೆ ಸಲ್ಲಿಸದ ಬೆಂಗಳೂರು ವ್ಯಕ್ತಿ - ಕಾರಣ ಕೇಳಿ ಅಧಿಕಾರಿಗಳೇ ದಂಗು-ಮುಂದೇನಾಯ್ತು

ಬೆಂಗಳೂರಿನ ವ್ಯಕ್ತಿಯೊಬ್ಬರು 41 ಲಕ್ಷ ರೂಪಾಯಿ ಠೇವಣಿ ಇಟ್ಟರೂ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿರಲಿಲ್ಲ. ತನ್ನ ಖರ್ಚುಗಳನ್ನು ಹೆಂಡತಿ ಮತ್ತು ತಂದೆ ಭರಿಸುತ್ತಾರೆ ಎಂದು ವಿಚಿತ್ರ ಕಾರಣ ನೀಡಿದ್ದರು. ವೀಸಾಕ್ಕೆ ಅರ್ಜಿ ಸಲ್ಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಅವರು ಆದಾಯ ತೆರಿಗೆ ಇಲಾಖೆಯಿಂದ ದಂಡ ಹಾಗೂ ಕಾನೂನು ಕ್ರಮ ಎದುರಿಸುತ್ತಿದ್ದಾರೆ.
Read Full Story
06:02 PM (IST) Sep 02

Karnataka News Live 2 September 2026 Cricket - 9 ವರ್ಷವಾದರೂ ಮುರಿಯದ ವಿಶ್ವ ದಾಖಲೆ! ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಈ 5 ನಾಯಕರು ಇವರೆ!

ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಸಿಕ್ಸರ್‌ಗಳ ಮೂಲಕ ಛಾಪು ಮೂಡಿಸಿದ ಐದು ಪ್ರಸಿದ್ಧ ನಾಯಕರನ್ನು ಈ ಲೇಖನ ಪರಿಚಯಿಸುತ್ತದೆ. ಮಿಸ್ಬಾ-ಉಲ್-ಹಕ್, ಬ್ರೆಂಡನ್ ಮೆಕಲಮ್, ಎಂ.ಎಸ್. ಧೋನಿ, ಬ್ರಿಯಾನ್ ಲಾರಾ, ಮತ್ತು ಕ್ಲೈವ್ ಲಾಯ್ಡ್ ಅವರ ನಾಯಕತ್ವದ ಅವಧಿಯಲ್ಲಿನ ರನ್, ಸಿಕ್ಸರ್, ಮತ್ತು ಶತಕಗಳ ವಿವರವಾದ ವರದಿಯನ್ನು ಇಲ್ಲಿ ನೀಡಲಾಗಿದೆ.

Read Full Story
06:01 PM (IST) Sep 02

Karnataka News Live 2 September 2026 BCCI ಉನ್ನತ ಮಟ್ಟದ ಸಭೆ - 5 ಮುಖ್ಯ ಅಜೆಂಡಾ ಚರ್ಚೆ, ನಾಳೆಯೇ ರೋಹಿತ್ ಶರ್ಮಾ ಭವಿಷ್ಯ ನಿರ್ಧಾರ

ನಾಳೆ ಬಿಸಿಸಿಐ ಉನ್ನತ ಮಟ್ಟದ ಸಭೆ ನಡೆಸಲಿದೆ. ಈ ಸಭೆ ಬಳಿಕ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಬೇಸರದ ಸುದ್ದಿ ಹೊರ ಬೀಳುವ ಸಾಧ್ಯತೆ ಇದೆ. ಜೊತೆಗೆ ನಾಳಿನ ಸಭೆಯಲ್ಲಿ ಒಟ್ಟು ಐದು ಪ್ರಮುಖ ವಿಚಾರಗಳು ಚರ್ಚೆಗೆ ಬರಲಿವೆ.

Read Full Story
05:39 PM (IST) Sep 02

Karnataka News Live 2 September 2026 Namma Metro Pink Line - ಮೆಟ್ರೊ ಗುಲಾಬಿ ಮಾರ್ಗಕ್ಕೆ ಕೊನೆಗೂ ಮುಹೂರ್ತ ಫಿಕ್ಸ್​- ಎಲ್ಲೆಲ್ಲಿ ಸಂಪರ್ಕ

ಹಲವಾರು ಗಡುವುಗಳನ್ನು ಮೀರಿದ ನಮ್ಮ ಮೆಟ್ರೋದ ಗುಲಾಬಿ ಮಾರ್ಗದ (ಕಾಳೇನ ಅಗ್ರಹಾರ-ತಾವರೆಕೆರೆ) ಕಾಮಗಾರಿ ಪೂರ್ಣಗೊಂಡಿದೆ. ಕೇಂದ್ರ ಸರ್ಕಾರದಿಂದ ದಿನಾಂಕ ನಿಗದಿಯಾದ ತಕ್ಷಣ ಸಂಚಾರಕ್ಕೆ ಮುಕ್ತವಾಗಲಿದ್ದು, ಸೆಪ್ಟೆಂಬರ್‌ನಲ್ಲಿ ಉದ್ಘಾಟನೆಯಾಗುವ ನಿರೀಕ್ಷೆಯಿದೆ. ಆದರೆ, ನಿಲ್ದಾಣಗಳನ್ನು ತಲುಪಲು ಪಾದಚಾರಿ ಮೂಲಸೌಕರ್ಯದ ಕೊರತೆ ಒಂದು ಪ್ರಮುಖ ಸಮಸ್ಯೆಯಾಗಿದೆ.
Read Full Story
05:33 PM (IST) Sep 02

Karnataka News Live 2 September 2026 ತುಮಕೂರು ಬ್ರೇಕಿಂಗ್ - ಮಧುಗಿರಿ-ತಿರುಪತಿ ನೂತನ ಬಸ್‌ ಸೇವೆ ಆರಂಭ, ಟೈಮಿಂಗ್ಸ್ ಹೀಗಿದೆ

ಇದುವರೆಗೆ ತಿರುಪತಿಗೆ ಹೋಗಲು ಮಧುಗಿರಿ ಭಾಗದ ಜನರು ಖಾಸಗಿ ವಾಹನ ಅಥವಾ ಬೇರೆ ಊರುಗಳ ಬಸ್‌ಗಳನ್ನು ಅವಲಂಬಿಸಬೇಕಿತ್ತು. ಈಗ ನೇರ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ದೊರೆತಿರುವುದರಿಂದ ಮಧ್ಯಮ ವರ್ಗದ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ ತಿಮ್ಮಪ್ಪನ ದರ್ಶನ ಪಡೆಯಲು ಬಹಳ ಅನುಕೂಲವಾಗಲಿದೆ.

Read Full Story
05:29 PM (IST) Sep 02

Karnataka News Live 2 September 2026 ಸ್ವಿಗ್ಗಿ-ಝೊಮಾಟೊ ಕಮಿಷನ್ ಕಾಟಕ್ಕೆ ಕ್ಲೌಡ್ ಕಿಚನ್ ಕ್ಲೋಸ್, ₹4 ಲಕ್ಷ ನಷ್ಟ ಈಗ ₹2 ಕೋಟಿ ಗಳಿಸ್ತಿರೋ ಬೆಂಗಳೂರು ಜೋಡಿ!

ಬೆಂಗಳೂರಿನ ಉದ್ಯಮಿಗಳಾದ ಕುಶಾಲ್ ರೆಡ್ಡಿ ಮತ್ತು ಚಾಹಕ್ ಜೈನ್, ಕ್ಲೌಡ್ ಕಿಚನ್‌ನಲ್ಲಿ ₹4 ಲಕ್ಷ ನಷ್ಟ ಅನುಭವಿಸಿದರು. ನಂತರ, ಅವರು 'ಕ್ರೀಡ್' ಎಂಬ ಫ್ರೈಡ್-ಫುಡ್ ಟ್ರಕ್ ಆರಂಭಿಸಿ, ಇನ್‌ಸ್ಟಾಗ್ರಾಮ್ ಮಾರ್ಕೆಟಿಂಗ್ ಮೂಲಕ ಕೇವಲ 10 ತಿಂಗಳಲ್ಲಿ ₹2 ಕೋಟಿ ಆದಾಯ ಗಳಿಸಿ ಯಶಸ್ವಿಯಾದರು. ಈ ಕಥೆಯು ಅವರ ವ್ಯಾಪಾರ ಮಾದರಿಯ ಬದಲಾವಣೆ ಮತ್ತು ಸಾಮಾಜಿಕ ಜಾಲತಾಣದ ಶಕ್ತಿಯನ್ನು ವಿವರಿಸುತ್ತದೆ.
Read Full Story
05:11 PM (IST) Sep 02

Karnataka News Live 2 September 2026 Gadaga - ಮಧ್ಯರಾತ್ರಿ, ಬಸ್‌ನಲ್ಲಿ ಸಿಕ್ತು ಕಂತೆ ಕಂತೆ ನೋಟು; ಮಾಲೀಕರಿಗೆ ಹಣ ಹಿಂದಿರುಗಿಸಿ ಸಾರಿಗೆ ಸಿಬ್ಬಂದಿ ಪ್ರಮಾಣಿಕತೆ

ಗದಗದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಶಾಂತಾರಾಮ್ ಶೆಟ್ಟಿ ಎಂಬುವವರು ಬಸ್‌ನಲ್ಲಿ 1.10 ಲಕ್ಷ ರೂ. ಇದ್ದ ಬ್ಯಾಗ್ ಮರೆತಿದ್ದರು. ಬಸ್ ನಿರ್ವಾಹಕ ಮತ್ತು ಚಾಲಕನ ಪ್ರಾಮಾಣಿಕತೆಯಿಂದ, ಹಣವನ್ನು ಸುರಕ್ಷಿತವಾಗಿ ಗದಗ ಡಿಪೋ ಸಿಬ್ಬಂದಿಗೆ ತಲುಪಿಸಿ, ನಂತರ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಮೂಲ ಮಾಲೀಕರಿಗೆ ಹಿಂತಿರುಗಿಸಲಾಯಿತು.
Read Full Story
05:09 PM (IST) Sep 02

Karnataka News Live 2 September 2026 2026ರಲ್ಲಿ 2000% ಲಾಭ ತಂದುಕೊಟ್ಟ ಭಾರತದ ಸಿನಿಮಾವಿದು..! 2 ಕೋಟಿ ಬಜೆಟ್‌ನ ಸಿನಿಮಾ ಮುಂದೆ ಧುರಂಧರ್-2, ಟಾಕ್ಸಿಕ್ ರೆಕಾರ್ಡ್ ನುಚ್ಚುನೂರು

2026ರಲ್ಲಿ ಬಿಡುಗಡೆಯಾದ 'ಹನುಮಾನ್ ಅಂಶ' ಎಂಬ ಆಧ್ಯಾತ್ಮಿಕ ಚಿತ್ರ, ಯಾವುದೇ ಸ್ಟಾರ್ ನಟರಿಲ್ಲದೆ, ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ ಈ ಸಿನಿಮಾ, ಬಾಯಿಮಾತಿನ ಪ್ರಚಾರದಿಂದಲೇ ಬಂಡವಾಳದ 20 ಪಟ್ಟು ಹೆಚ್ಚು ಗಳಿಸಿ, 'ಧುರಂಧರ್ 2' ನಂತಹ ದೊಡ್ಡ ಚಿತ್ರಗಳನ್ನು ಮೀರಿಸಿ ಅತಿದೊಡ್ಡ ಯಶಸ್ಸು ಸಾಧಿಸಿದೆ.
Read Full Story
05:00 PM (IST) Sep 02

Karnataka News Live 2 September 2026 Cricket - ವರ್ಲ್ಡ್‌ಕಪ್‌ಗಾಗಿ ಬಲವಂತದ ಅಬಾರ್ಷನ್, ಇನ್‌ಫ್ಲುಯೆನ್ಸರ್ ಜೊತೆ 2ನೇ ಮದುವೆ? ಬೀದಿಗೆ ಬಂದ ಸ್ಟಾರ್‌ ಸ್ಟಾರ್ ಕ್ರಿಕೆಟರ್ ಖಾಸಗಿ ಬದುಕು!

ಸ್ಟಾರ್ ಕ್ರಿಕೆಟಿಗ ತಮ್ಮ ಇಬ್ಬರು ಪತ್ನಿಯರ ನಡುವಿನ ಕೌಟುಂಬಿಕ ಕಲಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲ ಪತ್ನಿ ಬಲವಂತದ ಗರ್ಭಪಾತ ಮತ್ತು ವಂಚನೆಯ ಗಂಭೀರ ಆರೋಪಗಳನ್ನು ಮಾಡಿದರೆ, ಎರಡನೇ ಪತ್ನಿ ಈ ಆರೋಪಗಳನ್ನು ಅಲ್ಲಗಳೆದು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಆರೋಪ-ಪ್ರತ್ಯಾರೋಪಗಳಿಂದ ಆ ಕ್ರಿಕೆಟರ್‌ ಖಾಸಗಿ ಬದುಕು ಬೀದಿಗೆ ಬಂದಿದೆ.

Read Full Story