Karnataka News Live: ಬೆಂಗಳೂರು ಜನರಿಗೆ ಮತ್ತೊಂದು ಬರೆ, ಆ.1 ರಿಂದ ಆಟೋ ಪ್ರಯಾಣದ ದರ ಹೆಚ್ಚಳ!

ಬೆಂಗಳೂರು: ಬೇಕರಿ, ಕಾಂಡಿಮೆಂಟ್ಸ್, ಜ್ಯೂಸ್, ಚಹಾ ಅಂಗಡಿ, ಹಣ್ಣು-ತರಕಾರಿ ಅಂಗಡಿ ಸೇರಿದಂತೆ ವಿವಿಧ ಮಾದರಿಯ ಸಣ್ಣ ಗಾತ್ರದ ವ್ಯಾಪಾರಿಗಳಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್ಟಿ ತೆರಿಗೆ ನೋಟಿಸ್ಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಗರ ದಲ್ಲಿನ ಅನೇಕ ವ್ಯಾಪಾರಿಗಳು ಯುಪಿಐ ಮೂಲಕ ಹಣ ಸ್ವೀಕರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಂಗಡಿಗಳಲ್ಲಿನ ಟೇಬಲ್ ಮೇಲೆ ರಾಜಾರೋಷವಾಗಿ ಕಾಣಿಸುತ್ತಿದ್ದ ಎರಡೂರು ಕ್ಯೂಆರ್ ಕೋಡ್ಗಳು ಕಳೆದ ಒಂದೆರೆಡು ದಿನಗಳಿಂದ ಮರೆಯಾಗುತ್ತಿವೆ. ಗೋಡೆಗೆ ಅಂಟಿಸಿದ್ದ ಕ್ಯೂಆರ್ ಕೋಡ್ಗಳನ್ನು ವ್ಯಾಪಾರಿಗಳು ಮರೆ ಮಾಡುತ್ತಿದ್ದಾರೆ. ಗ್ರಾಹಕರಿಂದ ನಗದನ್ನು ನಿರೀಕ್ಷೆ ಮಾಡುತ್ತಿದ್ದು, ಯುಪಿಐ ಪೇಮೆಂಟ್ ಮಾಡುತ್ತೇವೆ ಎನ್ನುವವರಿಗೆ ಮಾತ್ರ ಕ್ಯೂಆರ್ಕೋಡ್ ನೀಡುತ್ತಿದ್ದಾರೆ.
Karnataka news live 14th july 2025ಬೆಂಗಳೂರು ಜನರಿಗೆ ಮತ್ತೊಂದು ಬರೆ, ಆ.1 ರಿಂದ ಆಟೋ ಪ್ರಯಾಣದ ದರ ಹೆಚ್ಚಳ!
Karnataka news live 14th july 2025ಸಿಎಂ ಇಲ್ಲದೆ ಸಿಗಂದೂರು ಸೇತುವೆ ಲೋಕಾರ್ಪಣೆ, ಪ್ರಧಾನಿ ಮೋದಿಗೆ ದೂರು ನೀಡಿದ ಸಿದ್ಧರಾಮಯ್ಯ!
Karnataka news live 14th july 2025ಕಾಂಗ್ರೆಸ್ ಆರೋಪಕ್ಕೆ ಭಾರೀ ಹಿನ್ನಡೆ, ಪರಶುಮಾರಮ ಪ್ರತಿಮೆ ಫೈಬರ್‌ನದ್ದಲ್ಲ, ಹಿತ್ತಾಳೆಯದ್ದು!
ಕಾರ್ಕಳದ ಉಮಿಕಲ್ ಬೆಟ್ಟದ ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ಅಕ್ರಮದ ಆರೋಪದಡಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಪ್ರತಿಮೆಯನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
Karnataka news live 14th july 2025Mangaluru - ಎಂಆರ್‌ಪಿಎಲ್ ಗ್ಯಾಸ್ ಲೀಕ್‌ನಿಂದ ಇಬ್ಬರ ಸಾವು, 6 ಸಿಬ್ಬಂದಿ ಬಂಧನ
Karnataka news live 14th july 2025ಮೈಸೂರಿನಲ್ಲಿ 6 ತಿಂಗಳಲ್ಲಿ ಬರೋಬ್ಬರಿ 9,428 ನಾಯಿ ಕಡಿತ ಪ್ರಕರಣ ದಾಖಲು! ರೇಬಿಸ್ ಭೀತಿ
ಮೈಸೂರು ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಜನವರಿಯಿಂದ ಜೂನ್ ವರೆಗೆ 9,428 ಪ್ರಕರಣಗಳು ವರದಿಯಾಗಿದ್ದು, ಮಕ್ಕಳು, ಹದಿಹರೆಯದವರು ಮತ್ತು ವಯಸ್ಕರು ಸೇರಿದಂತೆ ಎಲ್ಲಾ ವಯೋಮಾನದವರೂ ಇದಕ್ಕೆ ತುತ್ತಾಗಿದ್ದಾರೆ.
Karnataka news live 14th july 2025ಮಗಳ ಆತ್ಮಹತ್ಯೆಯ ನೋವು ಸಹಿಸದೇ ಅಮ್ಮ ಕೂಡ ನೇಣಿಗೆ ಶರಣು, ಒಂದೇ ದಿನ ಮನೆಯಲ್ಲಿ ಎರಡು ಶವ ಕಂಡ ಗಂಡ ಶಾಕ್!
Karnataka news live 14th july 2025ಸರೋಜಮ್ಮ ಹೋಗಿದ್ದು ಬೇಜಾರು, ಆದ್ರೆ ಸಂಕಷ್ಟಿ ದಿನ ಹೋಗಿದ್ದು ಖುಷಿ ಇದೆ - ಬ್ರಹ್ಮಾಂಡ ಗುರೂಜಿ
Karnataka news live 14th july 202524 ಗಂಟೆಯಲ್ಲಿ ಭಟ್ಕಳ ನಾಶ, ಕಣ್ಣನ್ ಹೆಸರಲ್ಲಿಈ-ಮೇಲ್ ಕಳಿಸಿದ್ದ ನಿತಿನ್ ಶರ್ಮಾ aka ಖಾಲಿದ್ ಬಂಧನ!
ಭಟ್ಕಳದಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ನಿತಿನ್ ಶರ್ಮಾ ಅಲಿಯಾಸ್ ಖಾಲಿದ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಹಲವು ರಾಜ್ಯಗಳಲ್ಲಿ ಇದೇ ರೀತಿಯ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.
Karnataka news live 14th july 2025ಹುಟ್ಟಿ ಬೆಳೆದ ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಸರೋಜಾದೇವಿ ಅಂತ್ಯಕ್ರಿಯೆ
ಬಹುಭಾಷಾ ನಟಿ ಡಾ. ಬಿ. ಸರೋಜಾದೇವಿಯವರ ಅಂತ್ಯಕ್ರಿಯೆ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ನೆರವೇರಲಿದೆ. ತಮ್ಮ ತವರೂರಿನಲ್ಲಿ ಮಾವಿನ ತೋಟದ ಪಕ್ಕದಲ್ಲಿರುವ ತಾಯಿಯ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನಡೆಸಲು ಕುಟುಂಬ ಚಿಂತನೆ ನಡೆಸಿದೆ.
Karnataka news live 14th july 2025ದೇವರು ಕೆಳಗೆ ಬರೋದು ಬೇಡ, ಡಿಕೆಶಿ ಅಧಿಕಾರ ನನಗೆ ಕೊಟ್ಟರೆ 1 ವರ್ಷದಲ್ಲಿ ಬೆಂಗಳೂರು ಸರಿ ಮಾಡ್ತೇನೆ! ತೇಜಸ್ವಿ ಸೂರ್ಯ
ಬೆಂಗಳೂರು ನಗರದ ಅಭಿವೃದ್ಧಿ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ, ಒಂದು ವರ್ಷದಲ್ಲಿ ನಗರವನ್ನು ಅಭಿವೃದ್ಧಿಪಡಿಸುವುದಾಗಿ ಸವಾಲು ಹಾಕಿದ್ದಾರೆ. ಬೆಂಗಳೂರು ಸುರಂಗ ರಸ್ತೆ ಯೋಜನೆಯ ವೆಚ್ಚದ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Karnataka news live 14th july 2025ನೀವ್ ಹೇಳೋದ್ ಹೇಳ್ತಾನೆ ಇರಿ, ನಾವ್ ಮಾಡೋದ್ ಮಾಡ್ತಾನೆ ಇರ್ತೀವಿ - ಚಾರ್ಮಾಡಿಯಲ್ಲಿ ಪ್ರವಾಸಿಗರ ಹುಚ್ಚಾಟ
Karnataka news live 14th july 2025ಬೆಂಗಳೂರಿನ ಸುರಂಗ ರಸ್ತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಂಬಂಧಿಕರಿಗೆ ಮಾತ್ರ ಉಪಯೋಗ; ತೇಜಸ್ವಿ ಸೂರ್ಯ
ಬೆಂಗಳೂರಿನಲ್ಲಿ 18,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುರಂಗ ಮಾರ್ಗವು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಈ ಯೋಜನೆಯು ಕೆಲವೇ ಕೋಟ್ಯಧಿಪತಿಗಳಿಗೆ ಮಾತ್ರ ಉಪಯೋಗವಾಗಲಿದ್ದು, ಜನರ ತೆರಿಗೆ ಹಣ ದುರುಪಯೋಗವಾಗುತ್ತಿದೆ
Karnataka news live 14th july 2025Chikmagalur Poultry Scam - ಕೋಳಿ ಕಂಪನಿಯಿಂದ ನೂರಾರು ರೈತರಿಗೆ ಮೋಸ!
Karnataka news live 14th july 2025ಶಕ್ತಿ ಯೋಜನೆ 500ನೇ ಕೋಟಿ ಮಹಿಳಾ ಪ್ರಯಾಣಿಕರಿಗೆ ಪಿಂಕ್ ಟಿಕೆಟ್ ಕೊಟ್ಟ ಸಿಎಂ ಸಿದ್ದರಾಮಯ್ಯ! ಇಲ್ಲಿದ್ದಾರೆ ನೋಡಿ ಮಹಿಳೆ!
Karnataka news live 14th july 2025ತಮಿಳುನಾಡಿನಲ್ಲಿ ನಟಿ ಬಿ.ಸರೋಜಾದೇವಿ ವಯ್ಯಾರದ ಗುಟ್ಟು ಬಿಚ್ಚಿಟ್ಟ ನವರಸನಾಯಕ ಜಗ್ಗೇಶ್!
ನಟಿ ಬಿ.ಸರೋಜಾ ದೇವಿ ಅವರ ನಿಧನಕ್ಕೆ ಜಗ್ಗೇಶ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಟಿ ಸರೋಜಾ ದೇವಿ ಕನ್ನಡ ಚಿತ್ರರಂಗಕ್ಕಿಂತ ತಮಿಳು ಸಿನಿಮಾದಲ್ಲಿಯೇ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಆದರೆ, ತಮಿಳುನಾಡಿನಲ್ಲಿ ಸರೋಜಾದೇವಿಯ ವೈಯ್ಯಾರದ ಬಗ್ಗೆ ಜನರ ಅಭಿಪ್ರಾಯ ಏನಿದೆ ಎಂಬುದನ್ನು ನಟ ಜಗ್ಗೇಶ್ ಹೇಳಿದ್ದಾರೆ.
Karnataka news live 14th july 2025ದೇಶದ ವಿಷಯ ಕೇಳಿದ್ರೆ ಉತ್ರ ಕೊಡಲ್ಲ, ಬಿಜೆಪಿಯವರಿಗೆ ಲೆಕ್ಕ-ಬುಕ್ಕ ಏನೂ ಇಲ್ಲ - ಸಂತೋಷ್ ಲಾಡ್ ಕಿಡಿ
Karnataka news live 14th july 2025ಕರ್ನಾಟಕದಲ್ಲಿ ಮತ್ತೆ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವ ಚಿಂತನೆ, ರಾಹುಲ್ ಗಾಂಧಿ ಪತ್ರ
Karnataka news live 14th july 20252025ರಲ್ಲಿ ಹೆಂಡತಿ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ; ರಾಜಿ ಪಂಚಾಯಿತಿ ಬೆನ್ನಲ್ಲೇ ಶಾಕಿಂಗ್ ನಿರ್ಧಾರ!
ರಾಯಚೂರಿನಲ್ಲಿ ಪತ್ನಿಯಿಂದ ನದಿಗೆ ತಳ್ಳಲ್ಪಟ್ಟ ಗಂಡ ತಾತಪ್ಪ, ಸ್ಥಳೀಯರ ಸಹಕಾರದಿಂದ ಪ್ರಾಣ ಉಳಿಸಿಕೊಂಡು ಬದುಕಿ ಬಂದಿದ್ದಾನೆ. ಇದೀಗ ಆತನನ್ನು 2025ರಲ್ಲಿ ಹೆಂಡತಿಯ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ ಎಂದು ಕರೆಯಲಾಗುತ್ತಿದೆ. ಹೆಂಡತಿಯ ಸಂಬಂಧದ ಕುರಿತು ದಿಟ್ಟ ನಿರ್ಧಾರ ಕೈಗೊಂಡಿದ್ದಾನೆ.
Karnataka news live 14th july 2025ಸ್ಟಾರ್ ನಟಿಯಾಗಿದ್ದಾಗಲೇ ಮದುವೆಯಾದ ಸರೋಜಾದೇವಿ, ವೈಯಕ್ತಿಕ ಜೀವನದ ದುಃಖದ ಸ್ಟೋರಿ
Karnataka news live 14th july 2025ಖ್ಯಾತ ಬಹುಭಾಷ ನಟಿ ಬಿ ಸರೋಜಾ ದೇವಿ ಇನ್ನಿಲ್ಲ
ಕನ್ನಡದ ಹಿರಿಯ ನಟಿ ಬಿ ಸರೋಜಾ ದೇವಿ ಇನ್ನಿಲ್ಲ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ 87 ವರ್ಷ ವಯಸ್ಸಾಗಿತ್ತು.