- Home
- Viral News
- Wife Pushes Husband into River: 2025ರಲ್ಲಿ ಹೆಂಡತಿ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ; ರಾಜಿ ಪಂಚಾಯಿತಿ ಬೆನ್ನಲ್ಲೇ ಶಾಕಿಂಗ್ ನಿರ್ಧಾರ!
Wife Pushes Husband into River: 2025ರಲ್ಲಿ ಹೆಂಡತಿ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ; ರಾಜಿ ಪಂಚಾಯಿತಿ ಬೆನ್ನಲ್ಲೇ ಶಾಕಿಂಗ್ ನಿರ್ಧಾರ!
ರಾಯಚೂರಿನಲ್ಲಿ ಪತ್ನಿಯಿಂದ ನದಿಗೆ ತಳ್ಳಲ್ಪಟ್ಟ ಗಂಡ ತಾತಪ್ಪ, ಸ್ಥಳೀಯರ ಸಹಕಾರದಿಂದ ಪ್ರಾಣ ಉಳಿಸಿಕೊಂಡು ಬದುಕಿ ಬಂದಿದ್ದಾನೆ. ಇದೀಗ ಆತನನ್ನು 2025ರಲ್ಲಿ ಹೆಂಡತಿಯ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ ಎಂದು ಕರೆಯಲಾಗುತ್ತಿದೆ. ಹೆಂಡತಿಯ ಸಂಬಂಧದ ಕುರಿತು ದಿಟ್ಟ ನಿರ್ಧಾರ ಕೈಗೊಂಡಿದ್ದಾನೆ.

ರಾಯಚೂರು (ಜು.14): ಜುಲೈ 11ರಂದು ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಬಳಿ ಪತ್ನಿ ಗದ್ದೆಮ್ಮ ತನ್ನ ಪತಿ ತಾತಪ್ಪನನ್ನು ಕೃಷ್ಣ ನದಿಗೆ ತಳ್ಳಿದ ಘಟನೆಯು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಯನ್ನು ನೆಟ್ಟಿಗರು 2025ರಲ್ಲಿ ಹೆಂಡತಿ ಕೊಲೆ ಮಾಡಲು ಪ್ರಯತ್ನಿಸಿದರೂ ಬದುಕುಳಿದ ಏಕೈಕ ಗಂಡ ಎಂದು ವಿಶ್ಲೇಷಣೆ ಮಾಡಿದ್ದಾರೆ. ಆದರೆ, ಮನೆಯವರು ಈ ಘಟನೆಯ ಬಗ್ಗೆ ಗಂಡ-ಹೆಂಡತಿ ಕೂರಿಸಿ ರಾಜಿ ಪಂಚಾಯಿತಿ ನಡೆಸಿದ್ದಾರೆ. ಈ ವೇಳೆ ಗಂಡ ತಾತಪ್ಪ ನಿಗದಿತ ಷರತ್ತುಗಳೊಂದಿಗೆ ಹೆಂಡತಿ ಕುರಿತಾಗಿ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿದ್ದಾನೆ.
ಇದೀಗ ಸಂಧಾನ ಸಭೆಯ ಅಂತಿಮ ಮಾತುಕತೆಗಳು ತಾತಪ್ಪ ಹಾಗೂ ಪತ್ನಿ ಗದ್ದೆಮ್ಮ ಕುಟುಂಬಸ್ಥರು, ಗ್ರಾಮದ ಹಿರಿಯರ ಸಮ್ಮುಖದಲ್ಲಿ ನಡೆಸಲಾಯಿತು. ಈ ರಾಜಿ ಪಂಚಾಯಿತಿಯಲ್ಲಿ ಪತಿ ತಾತಪ್ಪ ತನ್ನ ಪತ್ನಿಯ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಘಟನೆ ಬಗ್ಗೆ ತಾತಪ್ಪನಿಂದ ಗ್ರಾಮೀಣ ಠಾಣೆ ಪೊಲೀಸರಿಗೂ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಪತಿ ತಾತಪ್ಪನ ತೀವ್ರ ಎಚ್ಚರಿಕೆ:
- ತಮ್ಮ ಪತ್ನಿಯೊಂದಿಗೆ ಮುಂದಿನ ಜೀವನ ನಡೆಸಲು ತಾತಪ್ಪ ಸ್ಪಷ್ಟವಾಗಿ ನಿರಾಕರಣೆ ಮಾಡಿದ್ದಾನೆ.
- ಪತ್ನಿಯನ್ನು ಇನ್ನು ಮುಂದೆ ತವರು ಮನೆಯಲ್ಲಿಯೇ ಇಡಬೇಕು.
- ನನ್ನ ಜೊತೆಗೆ ಕಳಿಸಬಾರದು.
- ಮದುವೆ ಸಂಬಂಧ ಇನ್ನು ಮುಂದೆ ಮುಕ್ತವಾಗಬೇಕು.
- ನನಗೆ ಡಿವೋರ್ಸ್ ಮೂಲಕ ಹೆಂಡತಿಯಿಂದ ಮುಕ್ತಿ ಕೊಡಿಸಬೇಕು.
- ಪತ್ನಿಯನ್ನು ಕರೆದೊಯ್ಯಲು ಹೇಳಿದರೆ ಅಥವಾ ಒತ್ತಡ ತರುವಂತಿಲ್ಲ.
- ನನ್ನ ಜೊತೆಗೆ ಪತ್ನಿ ಕರೆದೊಯ್ಯುವಂತೆ ಹೇಳಿದರೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಗಂಡ ತಾತಪ್ಪ ತನ್ನ ನಿರ್ಧಾರ ತಿಳಿಸಿದ್ದಾನೆ.
ಈ ಘಟನೆ ಸಂಬಂಧಪಟ್ಟಂತೆ ಎರಡು ದಿನಗಳ ಕಾಲ ನಡೆದ ಸುಧೀರ್ಘ ಮಾತುಕತೆ ಹಾಗೂ ವೈಯಕ್ತಿಕ ಹಿರಿಯರ ಮಧ್ಯಸ್ತಿಕೆ ಬಳಿಕ ಗಂಡ ತಾತಪ್ಪ ಈ ನಿರ್ಧಾರಕ್ಕೆ ಬಂದಿದ್ದಾರೆ. ಇಡೀ ಘಟನೆ ಜಿಲ್ಲೆಯಲ್ಲಿ ಸತತ ಚರ್ಚೆಗೆ ಗ್ರಾಸವಾಗುತ್ತಿದ್ದು, ಈ ಪ್ರಕರಣದ ಪರಿಣಾಮವಾಗಿ ಕುಟುಂಬ ಬಾಂಧವ್ಯಗಳ ನಂಬಿಕೆ ಹಾಗೂ ಮಾನಸಿಕ ಆರೋಗ್ಯದ ಕುರಿತು ಗಂಭೀರ ಚಿಂತೆಗಳು ವ್ಯಕ್ತವಾಗುತ್ತಿವೆ.
ಈ ಘಟನೆಯ ಬಗ್ಗೆ ತಾತಪ್ಪ ನೀಡಿರುವ ಮಾಹಿತಿಯ ಆಧಾರದಲ್ಲಿ ರೈಚೂರಿನ ಗ್ರಾಮೀಣ ಪೊಲೀಸರು ಮುಂದಿನ ಹಂತದ ತನಿಖೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಕರಣ ರಾಜಿಯ ಮೂಲಕ ಮುಕ್ತಾಯವಾದರೂ, ಕಾನೂನು ಹೋರಾಟ ನಡೆಸಲು ತಾತಪ್ಪ ಸಜ್ಜು ಎಂದು ತಿಳಿದುಬಂದಿದೆ.
ದೇಶಾದ್ಯಂತ ಸದ್ದು ಮಾಡಿದ್ದ ರಾಜಾ ರಘುವಂಶಿ ಹನಿಮೂನ್ ಸಾವು
ಇನ್ನು ಕಳೆದ ಆರು ತಿಂಗಳಿಂದ ದೇಶದಲ್ಲಿ ಹೆಂಡತಿಯೇ ಗಂಡನನ್ನು ಭೀಕರವಾಗಿ ಕೊಲೆ ಮಾಡಿದಂತಹ ಹಲವು ಪ್ರಕರಣಗಳು ವರದಿಯಾಗಿವೆ. ಉತ್ತರಾಖಂಡಕ್ಕೆ ಹನಿಮೂನ್‌ಗಗಿ ಕರೆದೊಯ್ದ ಗಂಡನನ್ನು ಭೀಕರವಾಗಿ ಕೊಲೆ ಮಾಡಲಾಗಿದ್ದ ರಾಜಾ ರಘುವಂಶಿ ಘಟನೆ ಇದೀ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
2025ರಲ್ಲಿ ಹೆಂಡತಿಯ ಕೊಲ್ಲುವ ಪ್ರಯತ್ನದಿಂದ ಬದುಕುಳಿದ ಏಕೈಕ ಗಂಡ:
ಇದರ ಬೆನ್ನಲ್ಲಿಯೇ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧೆಡೆ ಇಂತಹ ಘಟನೆಗಳು ವರದಿ ಆಗಿದ್ದವು. ಆದರೆ, 2025ರಲ್ಲಿ ಹೆಂಡತಿ ಗಂಡನನ್ನು ಕೊಲೆ ಮಾಡಲು ಪ್ರಯತ್ನಿಸಿದ ನಂತರವೂ ಬದುಕುಳಿದ ಏಕೈಕ ಗಂಡ ಎಂದರೆ ಅದು ರಾಯಚೂರಿನ ನವ ವಿವಾಹಿತ ತಾತಪ್ಪ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗಂಡನನ್ನು ನದಿಗೆ ತಳ್ಳಿ ಕೊಲೆ ಮಾಡಲು ಯತ್ನ-ಅದೃಷ್ಟವಶಾತ್ ಬದುಕುಳಿದ ಗಂಡ:
ರಾಯಚೂರು ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ನದಿಗೆ ಗುರ್ಜಾಪುರ ಬಳಿ ನಿರ್ಮಿಸಲಾದ ಸೇತುವೆ ಬಳಿ ನಿಂತು ಗಂಡ ತಾತಪ್ಪ ಪತ್ನಿಗೆ ಸೆಲ್ಫಿ ತೆಗೆದುಕೊಳ್ಳೋಣ ಎಂದು ಹೇಳಿದ್ದಾರೆ. ಆಗ ಪತ್ನಿ ಸೆಲ್ಫಿ ಬೇಡ ನೀವು ಕಂಬದ ಮೇಲೆ ನಿಂತುಕೊಳ್ಳಿ. ನಾನು ನಿಮ್ಮ ಫೋಟೋ ತೆಗೆಯುತ್ತೇನೆ ಎಂದು ಹೇಳಿ, ಅಪಾಯಕಾರಿ ಸ್ಥಳದಲ್ಲಿ ಗಂಡನನ್ನು ನಿಲ್ಲಿಸಿ ಫೋಟೋ ತೆಗೆಯಲು ಮುಂದಾಗಿದ್ದಾಳೆ.
ಆಗ ಹೆಂಡತಿಯೇ ಗಂಡನನ್ನು ಧುಮ್ಮಿಕ್ಕಿ ಹರಿಯುತ್ತಿದ್ದ ನದಿಗೆ ತಳ್ಳಿದ್ದಾಳೆ ಎಂದು ಸ್ವತಃ ಗಂಡನೇ ಆರೋಪಿಸಿದ್ದಾನೆ. ಆದರೆ, ನದಿಯಲ್ಲಿ ಕೊಚ್ಚಿಹೋದ ಗಂಡ ಈಜಿಕೊಂಡು ನಡುಗಡ್ಡೆಯ ಕಲ್ಲಿನ ಮೇಲೆ ನಿಂತುಕೊಂಡು ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ.
ಸ್ಥಳೀಯ ದಾರಿಹೋಕರು ನೋಡಿ ಆತನ ಸಹಾಯಕ್ಕೆ ಮುಂದಾಗಿದ್ದಾರೆ. ಪಿಕಪ್ ವಾಹನವೊಂದು ಬಂದಾಗ ಅದರಲ್ಲಿದ್ದ ಹಗ್ಗವನ್ನು ಯುವಕನಿಗೆ ಎಸೆದು ಆತನನ್ನು ಸ್ಥಳೀಯರು ಕಾಪಾಡಿದ್ದರು. ತುಂಬಿ ಹರಿಯುತ್ತಿದ್ದ ಹಾಗೂ ಮೊಸಳೆಗಳು ತುಂಬಿರುವ ನದಿಯ ನಡುಗಡ್ಡೆಯಿಂದ ಯುವ ಹಗ್ಗದ ಸಹಾಯದಿಂದ ಈಜಿಕೊಂಡು ಬಂದು ಸೇತುವೆಯ ಕಂಬವನ್ನು ಹಿಡಿದಿದ್ದಾನೆ. ನಂತರ ಆತನನ್ನು ಸ್ಥಳೀಯರು ಮೇಲಕ್ಕೆತ್ತಿಕೊಂಡು ಜೀವ ಉಳಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ಭಾರೀ ವೈರಲ್ ಆಗಿದೆ.