ವಂಚನೆ ಮತ್ತು ಸ್ಪ್ಯಾಮ್ ಕರೆಗಳಿಗೆ ಬ್ರೇಕ್ ಹಾಕಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ, ಇತ್ತೀಚೆಗೆ ಮಾಧ್ಯಮಗಳಲ್ಲಿ 140 ಮತ್ತು 1600 ಸರಣಿಯ ನಂಬರ್‌ಗಳ ಬಗ್ಗೆ ಹರಡಿರುವ ಗೊಂದಲಗಳಿಗೆ ಟ್ರಾಯ್ ಇದೀಗ ಅಧಿಕೃತ ಸ್ಪಷ್ಟನೆ ನೀಡಿದೆ.
- Home
- News
- State
- Karnataka News Live: Cyber - ಮೊಬೈಲ್‌ನಲ್ಲಿ 140, 1600 ಇಂದ ಸ್ಟಾರ್ಟ್ ಆಗೋ ಕರೆ ಬರ್ತಿವೆಯಾ? ತಕ್ಷಣ ಅಲರ್ಟ್ ಆಗಿ, ಹೊಸ ರೂಲ್ಸ್ ಇಲ್ಲಿದೆ!
Karnataka News Live: Cyber - ಮೊಬೈಲ್‌ನಲ್ಲಿ 140, 1600 ಇಂದ ಸ್ಟಾರ್ಟ್ ಆಗೋ ಕರೆ ಬರ್ತಿವೆಯಾ? ತಕ್ಷಣ ಅಲರ್ಟ್ ಆಗಿ, ಹೊಸ ರೂಲ್ಸ್ ಇಲ್ಲಿದೆ!

ಅಯೋಧ್ಯೆಯಲ್ಲಿ ರಾಮ ಮಂದಿರ ಹುಂಡಿ ಕಳವು ಪ್ರಕರಣದ ಬೆನ್ನಲ್ಲೇ ಕರ್ನಾಟಕದಲ್ಲಿ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಅಂಥ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ‘ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಸಿಸಿಟೀವಿ ಅಳವಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ.‘ಹುಂಡಿ ಇರುವ ಸ್ಥಳ, ಹಣ ಎಣಿಕೆ ಸ್ಥಳ ಸೇರಿದಂತೆ ದೇವಸ್ಥಾನದ ಎಲ್ಲ ಭಾಗಗಳಲ್ಲಿ ಸಿಸಿಟಿವಿ ಹಾಕಲಾಗುತ್ತದೆ. ದೇಗುಲದ ಚಟುವಟಿಕೆಗಳ ಮೇಲೆ ದಿನದ 24 ಗಂಟೆ ನಿಗಾ ಇಡಲಾಗುತ್ತದೆ ಎಂದರು.
ಮತ್ತೊಂದು ಕಡೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆಗೆ ಬೆಳಗಾವಿ ಸಜ್ಜುಗೊಂಡಿದೆ. ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ಸಂಘದ ಉನ್ನತ ನಾಯಕತ್ವ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರಚಾರಕರು ಪಾಲ್ಗೊಳ್ಳಲಿದ್ದಾರೆ.
ಅನಗೋಳದ ಸಂತ ಮೀರಾ ಶಾಲೆ, ಶಾಸ್ತ್ರಿನಗರದಲ್ಲಿರುವ ಸಂಘದ ಕಚೇರಿ ಹಾಗೂ ಉದ್ಯಮಬಾಗದ ಫೌಂಡ್ರಿ ಕ್ಲಸ್ಟರ್ನಲ್ಲಿ ವಿವಿಧ ಹಂತದ ಸಭೆಗಳು ನಡೆಯಲಿವೆ. ಪ್ರಮುಖ ಚರ್ಚೆಗಳು ಸಂತ ಮೀರಾ ಶಾಲೆಯಲ್ಲೇ ನಡೆಯಲಿದ್ದು, ಸಭಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆಹ್ವಾನಿತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
Karnataka News Live Updates Cyber - ಮೊಬೈಲ್‌ನಲ್ಲಿ 140, 1600 ಇಂದ ಸ್ಟಾರ್ಟ್ ಆಗೋ ಕರೆ ಬರ್ತಿವೆಯಾ? ತಕ್ಷಣ ಅಲರ್ಟ್ ಆಗಿ, ಹೊಸ ರೂಲ್ಸ್ ಇಲ್ಲಿದೆ!
Karnataka News Live Updates Rachita Ram- Sathish Ninasam - ಸತೀಶ್-ರಚಿತಾ ಟಿಪಿಕಲ್ ನಾಟಿ ಸ್ಟೈಲ್ ಅಯೋಗ್ಯ-2; 'ಅಣ್ಣಾ ಬಂದ್ರೆ' ಹಾಡು ಅದೆಷ್ಟು ಸ್ಪೆಷಲ್ ಗೊತ್ತಾ..?
ಅಯೋಗ್ಯ-2 ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಹೊಸ ಬರವಸೆ ಮೂಡಿಸಿದೆ. ಅದಕ್ಕೆ ಕಾರಣ ಸಿನಿಮಾದ ಹಾಡುಗಳು.. 2019ರಲ್ಲಿ ಬಂದ ಅಯೋಗ್ಯ ಸಿನಿಮಾದ ಹಾಡುಗಳು ದೊಡ್ಡ ಹಿಟ್ ಆಗಿದ್ವು. ಈಗ ಬಂದಿರೋ ಅಯೋಗ್ಯ-2 ಹಾಡುಗಳು ಸಹ ಹಿಟ್ ಲಿಸ್ಟ್ ಸೇರುತ್ತಿವೆ.
Karnataka News Live Updates Chicken Vs Mutton - ಮೈ ನೆನೆಯೋ ಮಳೆಗಾಲಕ್ಕೆ ಚಿಕನ್-ಮಟನ್ ಮಾಂಸದ ನಡುವೆ ಯಾವುದು ಬೆಸ್ಟ್?
ಆಹಾರದ ವಿಷಯಕ್ಕೆ ಬಂದಾಗ ವಿಶೇಷ ಮುನ್ನೆಚ್ಚರಿಕೆಗಳನ್ನು ಅಗತ್ಯವಾಗಿ ಪಾಲಿಸಬೇಕು. ಆದ್ದರಿಂದ ಈ ಮಳೆಗಾಲದಲ್ಲಿ ಸೇವನೆ ಮಾಡಲು ಚಿಕನ್ ಬೆಸ್ಟಾ ಅಥವಾ ಮಟನ್ ಬೆಸ್ಟಾ? ಇಲ್ಲಿದೆ ಸಂಪೂರ್ಣ ವಿವರ.
Karnataka News Live Updates ಗೊರಕೆ, ಸ್ನಾನ ಮಾಡಲ್ಲ, ರೀಲ್ಸ್ ಮಾಡ್ತಾಳೆ... ಡಿವೋರ್ಸ್ ಹೆಚ್ಚಾಗಲು 7 ಪ್ರಮುಖ ಕಾರಣಗಳಿವು
Relationship Issues: ವಿಚ್ಛೇದನ (Divorce) ಅನ್ನೋದು ಗಂಡ-ಹೆಂಡತಿ ಪರಸ್ಪರ ಒಪ್ಪಿಗೆಯಿಂದ ಅಥವಾ ಕೋರ್ಟ್ ಆದೇಶದ ಮೂಲಕ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸುವ ಕಾನೂನು ಪ್ರಕ್ರಿಯೆ.
Karnataka News Live Updates Gold - ಆ ರಾತ್ರಿಯ ವಿಚಿತ್ರ ಕನಸು! 12 ದಿನಗಳ ನಂತರ ತೆರೆದುಕೊಂಡಿತು ಆ ರಹಸ್ಯ ಕೋಟಿ ನಿಧಿ! ಹೇಗಿತ್ತು ಆ ವಿಚಿತ್ರ ರಹಸ್ಯ ಪಯಣ?
ಒಬ್ಬ ವ್ಯಕ್ತಿ ಚಿನ್ನದ ಗಟ್ಟಿ ಸಿಕ್ಕಂತೆ ಕನಸು ಕಂಡರು. ಆಶ್ಚರ್ಯಕರವಾಗಿ, 12 ದಿನಗಳ ನಂತರ ನಡೆದದ್ದು ಪವಾಡ. ಈ ಘಟನೆಯು ಅವರ ಕನಸನ್ನು ನನಸಾಗಿಸಿ, ಅವರ ಜೀವನವನ್ನೇ ಬದಲಾಯಿಸಿತು. ಆಗಿದ್ದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.
Karnataka News Live Updates Ramayana - ಈ ದಿನದಂದು ರಾಮ-ರಾವಣರ ದರ್ಶನ - ಕಾಮಿಕ್-ಕಾನ್‌ನಲ್ಲಿ ಯಶ್-ರಣಬೀರ್ ಅಬ್ಬರ
Ramayana Movie: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ರಾಮಾಯಣ'ದ ನಿರ್ಮಾಪಕ ನಮಿತ್ ಮಲ್ಹೋತ್ರಾ, ಸ್ಯಾನ್ ಡಿಯಾಗೋ ಕಾಮಿಕ್-ಕಾನ್ 2026ರಲ್ಲಿ ಒಂದು ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದಾರೆ.
Karnataka News Live Updates ವರ್ಷಗಳಿಂದ ಪುತ್ತೂರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದ ಆರೋಪಿ 41 ಅರೆಸ್ಟ್ ವಾರಂಟ್‌ಗಳ ಬಳಿಕ ಬಂಧನ!
ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ, 41 ಬಂಧನ ವಾರೆಂಟ್‌ಗಳನ್ನು ಹೊಂದಿದ್ದ ಕೇರಳ ಮೂಲದ ಕುಖ್ಯಾತ ಆರೋಪಿ ನೆಲ್ಸನ್ ಸಿ.ವಿ.ಯನ್ನು ಪುತ್ತೂರು ನಗರ ಪೊಲೀಸರು ಕೇರಳದಲ್ಲಿ ಯಶಸ್ವಿಯಾಗಿ ಬಂಧಿಸಿದ್ದಾರೆ.
Karnataka News Live Updates Sudeep-Rishab Shetty - ಕಿಚ್ಚ ಸುದೀಪ್ ಭೇಟಿಯಾಗಿ ಖುಷಿ ಹಂಚಿಕೊಂಡ ರಿಷಬ್-ಪ್ರಗತಿ ದಂಪತಿ; 'ಏನೋ ಹೊಸ ವಿಷ್ಯ ಇರಬಹುದು' ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ಅವರು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಕ್ರಾಂತಿ ಮಾಡಲು ಸಜ್ಜಾಗಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ಅವರ ಬೆಂಬಲ ಮತ್ತು ಮಾರ್ಗದರ್ಶನ ರಿಷಬ್ ಅವರ ಪಯಣಕ್ಕೆ ಮತ್ತಷ್ಟು ಶಕ್ತಿ ನೀಡಿದಂತಿದೆ. ಕಾಂತಾರ ಅಂಗಳಕ್ಕೆ ಕಿಚ್ಚ ಸುದೀಪ್ ಕೂಡ ಬರ್ತಾರಾ?
Karnataka News Live Updates Supreme Court - ಸುಪ್ರೀಂನಲ್ಲಿ ಹೈಡ್ರಾಮಾ; ಕಡತ ಗಾಳಿಯಲ್ಲಿ ತೂರಿ; ನಾನೇ ನಿಮಗೆ ಆದೇಶಿಸುತ್ತೇನೆ ಎಂದು ನ್ಯಾಯಾಧೀಶರಿಗೆ ಧಮ್ಕಿ ಹಾಕಿದ ಭೂಪ! ಮುಂದೆ ನಡೆದಿದ್ದೇನು?
ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯೊಂದರ ವೇಳೆ, ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿದಾರರೊಬ್ಬರು ನ್ಯಾಯಪೀಠಕ್ಕೆ ಆದೇಶ ನೀಡಲು ಯತ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka News Live Updates 15 ನಿಮಿಷಗಳ ಬ್ರೇಕ್ ಮತ್ತು ಒಂದು ಕಪ್ ಚಹಾ! ಮಳೆಯಲ್ಲಿ ಬಂದ ಜೊಮ್ಯಾಟೊ ಬಾಯ್ ಗೆ ಗ್ರಾಹಕ ಕೊಟ್ಟ ಸರ್ಪ್ರೈಸ್ ಏನು ಗೊತ್ತಾ?
ಭಾರಿ ಮಳೆಯಲ್ಲಿ ನೆನೆಯುತ್ತಾ ಬಂದು ಆಹಾರ ತಲುಪಿಸಿದ ಜೊಮ್ಯಾಟೊ ರೈಡರ್‌ಗೆ ಗ್ರಾಹಕನೊಬ್ಬ ಬಿಸಿ ಚಹಾ ನೀಡಿ ಆತಿಥ್ಯ ನೀಡಿದ ಘಟನೆ ವೈರಲ್ ಆಗಿದೆ. "ಕೆಲಸ ಮಾಡದಿದ್ದರೆ ಮನೆಯವರ ಬೈಗುಳ ಕೇಳಬೇಕು" ಎಂದು ರೈಡರ್ ಹೇಳಿದ ಮಾತು ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಗಿಗ್ ಉದ್ಯೋಗಿಗಳು ಎದುರಿಸುವ ಕಠಿಣ ಸಾಮಾಜಿಕ ಮತ್ತು ಮಾನಸಿಕ ಒತ್ತಡವನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದೆ.
Karnataka News Live Updates ಸರ್ವರ್ ಸಮಸ್ಯೆ, ಒಟಿಪಿ ವಿಳಂಬ - ಕಾಗದರಹಿತ ನೋಂದಣಿ ವ್ಯವಸ್ಥೆಗೆ ಸಾರ್ವಜನಿಕರ ಅಸಮಾಧಾನ
Paperless Registration: ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಆರೂ ನೋಂದಣಿ ಕಚೇರಿಗಳಲ್ಲಿ ಏಪ್ರಿಲ್ 30 ರಿಂದ ಕಾಗದರಹಿತ (Paperless) ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
Karnataka News Live Updates ಶಿವಣ್ಣಗಾಗಿ 'ಭೈರವನ ಕೊನೆ ಪಾಠ' ಕೈಬಿಟ್ಟೆ - ಕೊನೆಗೂ ಸತ್ಯ ಬಿಚ್ಚಿಟ್ಟ ನಿರ್ದೇಶಕ ಹೇಮಂತ್ ರಾವ್
'ಸಪ್ತ ಸಾಗರದಾಚೆ ಎಲ್ಲೊ' ಚಿತ್ರದ ಮೂಲಕ ದೇಶಾದ್ಯಂತ ಸಿನಿಪ್ರೇಮಿಗಳ ಗಮನ ಸೆಳೆದ ನಿರ್ದೇಶಕ ಹೇಮಂತ್ ರಾವ್ ಸದ್ಯ ಶಿವರಾಜ್‌ಕುಮಾರ್ ಅಭಿನಯದ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
Karnataka News Live Updates ಮುಂದಿನ ವರ್ಷ ಮತ್ಸ್ಯಪ್ರಿಯರಿಗೆ ಸಿಗೋದಿಲ್ಲ ಭೂತಾಯಿ/ಮತ್ತಿ ಮೀನು, ಬೆಚ್ಚಿ ಬೀಳಿಸುವ ವರದಿ ನೀಡಿದ CMFRI
ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಯ (CMFRI) ಪ್ರಕಾರ, 'ಎಲ್ ನಿನೊ' ಹವಾಮಾನ ವಿದ್ಯಮಾನದಿಂದಾಗಿ ಮುಂದಿನ ವರ್ಷ ಭೂತಾಯಿ ಮೀನಿನ ಲಭ್ಯತೆ ಗಣನೀಯವಾಗಿ ಕುಸಿಯಲಿದೆ. ಇದು ಕಡಲ ಮತ್ಸ್ಯೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಮೀನಿನ ಬೆಲೆ ಗಗನಕ್ಕೇರುವಂತೆ ಮಾಡಲಿದೆ.
Karnataka News Live Updates Viral News - ದಣಿದ ಭಕ್ತನಿಗೆ ಮರುಜೀವ ನೀಡಿದ ಯೋಧನ ಮಾತು; ಕಣ್ಣಾಲಿ ತುಂಬಿಸುವ ಅಮರನಾಥ ಯಾತ್ರೆಯ ವಿಡಿಯೋ ವೈರಲ್!
ಅಮರನಾಥ ಯಾತ್ರೆಯ ಕಠಿಣ ಹಾದಿಯಲ್ಲಿ ದಣಿದ ಯಾತ್ರಾರ್ಥಿಯೊಬ್ಬರಿಗೆ ಭಾರತೀಯ ಸೈನಿಕರೊಬ್ಬರು ಧೈರ್ಯ ತುಂಬುತ್ತಿರುವ ವಿಡಿಯೋ ವೈರಲ್ ಆಗಿದೆ. ಯೋಧನ ಮಾತು ಹೃದಯ ಮುಟ್ಟುವಂತಿದೆ. ಅಷ್ಟಕ್ಕೂ ಯೋಧ ಮಾಡಿದ್ದೇನು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Karnataka News Live Updates Aamir Khan - ಹೊಸ ಇನ್ನಿಂಗ್ಸ್ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಅಮೀರ್ ಖಾನ್
ಆಮೀರ್ ಖಾನ್ ಈ ಬಾರಿ ಕೈಹಾಕಿರುವುದು ಸಣ್ಣಪುಟ್ಟ ಕಥೆಗಲ್ಲ. 2023ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ, ಉತ್ತರಾಖಂಡದ ಸಿಲ್ಕ್ಯಾರ ಸುರಂಗದಲ್ಲಿ ನಡೆದ ರೋಚಕ ರಕ್ಷಣಾ ಕಾರ್ಯಾಚರಣೆಯನ್ನೇ ಬೆಳ್ಳಿತೆರೆಯ ಮೇಲೆ ತರಲು ಅವರು ಸಜ್ಜಾಗಿದ್ದಾರೆ.
Karnataka News Live Updates Bengaluru - ಪ್ಲೇಸ್ಕೂಲ್ ಟೀಚರ್‌ಗೆ ತಿಂಗಳಿಗೆ 6 ಸಾವಿರ ಸಂಬಳ, 'ಕಲಾಸಿಪಾಳ್ಯದ ಕೂಲಿ ಇದಕ್ಕಿಂತ ಹೆಚ್ಚು ದುಡೀತಾರೆ..' ಎಂದ ನೆಟ್ಟಿಗರು!
Karnataka News Live Updates ಹೀನಾಯ ಸೋಲಿಗೆ ಶ್ರೇಯಸ್ ತೀವ್ರ ಅಸಮಾಧಾನ; ತಂಡದ ಸೋಲಲು ಅವರು ಮಾಡಿದ ತಪ್ಪೆ ಕಾರಣ ಎಂದು ಪರೋಕ್ಷವಾಗಿ ಹೇಳಿದ ಅಯ್ಯರ್!
ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಟೀಂ ಇಂಡಿಯಾ ಸತತ ಸೋಲು ಕಂಡಿದೆ. ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ, ಆದರೂ ಇಂಗ್ಲೆಂಡ್‌ಗೆ ಭಾರತದ ಭಾರಮೊತ್ತ ಸುಲಭದ ತುತ್ತಾಯಿತು. ಈ ಹಿನ್ನೆಯಲ್ಲಿ ಶ್ರೇಯಸ್ ಸೋಲಿಗೆ ಅವರೇ ಕಾರಣ ಎಂದು ಅಸಮಾಧಾನಗೊಂಡಿದ್ದಾರೆ.
Karnataka News Live Updates Karavali ವಿವಾದ - ನೇರಪ್ರಸಾರದಲ್ಲಿ ಬಂದು ನಟ ಪ್ರಜ್ವಲ್ ಕುರಿತು ನಟಿ ಮೇಘನಾ ರಾಜ್ ಏನ್ ಹೇಳಿದ್ರು
Karnataka News Live Updates Karavali Controversy - ಕರಾವಳಿ 'ವಿವಾದ'ಕ್ಕೆ ಮತ್ತೊಂದು ಹೊಸ ತಿರುವು, ಮಾಧ್ಯಮ ಪ್ರಕಟಣೆ ನೀಡಿದ ನಿರ್ದೇಶಕ ಗುರುದತ್ ಗಾಣಿಗ!
ಪ್ರಜ್ವಲ್ ದೇವರಾಜ್ (Prajwal Devaraj) ಮುಖ್ಯ ಭೂಮಿಕೆಯ 'ಕರಾವಳಿ' (Karavali) ಚಿತ್ರದ ವಿವಾದ ದಿನದಿನಕ್ಕೂ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆಯುತ್ತಲೇ ಇದೆ. ಇದೀಗ ಕರಾವಳಿ ಚಿತ್ರೆದ ನಿರ್ದೇಶಕರಾಗಿರುವ ಗುರುದತ್ ಗಾಣಿಗ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಮುಂದೇನು?
Karnataka News Live Updates 70ರ ದಶಕಕ್ಕೆ ಮರಳಿದ ಹರ್ಷಿಕಾ ಪೂಣಚ್ಚ - ಡಾ. ರಾಜ್ ಹಾಡಿಗೆ ರೆಟ್ರೋ ಬೇಬಿ ಬಂಪ್ ಶೂಟ್
ನಟಿ ಹರ್ಷಿಕಾ ಪೂಣಚ್ಚ ಇದೀಗ ವಿಭಿನ್ನ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. 70ರ ದಶಕದ ವಿಂಟೇಜ್ ಸ್ಟೈಲ್‌ನಲ್ಲಿ ಡಾ.ರಾಜ್ ಹಾಡನ್ನು ರೀಕ್ರಿಯೇಟ್ ಮಾಡಿದ್ದಾರೆ. ಈ ಮೂಲಕ ಹೊಸ ಲುಕ್‌ನಲ್ಲಿ ಮಿಂಚಿದ್ದಾರೆ.