ಅಯೋಗ್ಯ-2 ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹೊಸ ಬರವಸೆ ಮೂಡಿಸಿದೆ. ಅದಕ್ಕೆ ಕಾರಣ ಸಿನಿಮಾದ ಹಾಡುಗಳು.. 2019ರಲ್ಲಿ ಬಂದ ಅಯೋಗ್ಯ ಸಿನಿಮಾದ ಹಾಡುಗಳು ದೊಡ್ಡ ಹಿಟ್ ಆಗಿದ್ವು. ಈಗ ಬಂದಿರೋ ಅಯೋಗ್ಯ-2 ಹಾಡುಗಳು ಸಹ ಹಿಟ್ ಲಿಸ್ಟ್ ಸೇರುತ್ತಿವೆ.

ಅಯೋಗ್ಯ-2 ಸಿನಿಮಾದ 'ಅಣ್ಣಾ ಬಂದ್ರೆ' ಸಾಂಗ್ ರಿಲೀಸ್; ಹೊಸ ಖದರ್​ನಲ್ಲಿ ನೀನಾಸಂ ಸತೀಶ್ ಮಸ್ತ್​ಡಾನ್ಸ್​..!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಯಾಂಡಲ್​ವುಡ್​ನಲ್ಲಿ ಮಂಡ್ಯ ನಾಟಿ ಸ್ಟೈಲ್​ಸಿನಿಮಾ ಸಿದ್ಧವಾಗಿದೆ. ಅದು ನೀನಾಸಂ ಸತೀಶ್ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್​ ಕಾಂಬಿನೇಷನ್​ನ ಅಯೋಗ್ಯ-2 ಸಿನಿಮಾ.. ಈಗ ಅಗಸ್ಟ್​ನಲ್ಲಿ ಧಮಾಕ ಮಾಡೋಕೆ ಸಜ್ಜಾಗಿರೋ ಅಯೋಗ್ಯ-2 ಮಸ್ತ್​ ಎನರ್ಜಿ ತುಂಬೋ ಸಾಂಗ್ ಒಂದು ರಿಲೀಸ್ ಆಗಿದೆ.

ಅಯೋಗ್ಯ-2 ಸಿನಿಮಾದ 'ಅಣ್ಣಾ ಬಂದ್ರೆ' ಸಾಂಗ್ ರಿಲೀಸ್.!

ಅಯೋಗ್ಯನ ಅಣ್ಣಮ್ಮಂದಿರ ಹಾಡು ಎಷ್ಟು ಸ್ಪೆಷಲ್ ಗೊತ್ತಾ..?

ಊರು ಅಂದ್ಮೇಲೆ ಅಲ್ಲೊಬ್ಬ ಅಯೋಗ್ಯ ಇದ್ದೇ ಇರ್ತಾನೆ. ಆ ಅಯೋಗ್ಯನ ಕಥೆಯನ್ನ ಏಳು ವರ್ಷದ ಹಿಂದೆ ನೋಡಿದ್ದಾಗಿದೆ. ಈಗ ಆ ಅಯೋಗ್ಯನನ್ನೂ ಮೀರಿಸೋ ಮತ್ತೊಬ್ಬ ಅಯೋಗ್ಯ ಹುಟ್ಟಿಕೊಂಡಿದ್ದಾನೆ. ಅದೇ ಅಯೋಗ್ಯ-2 ಸಿನಿಮಾ.. ಇದೀಗ ಅಯೋಗ್ಯ-2 ಸಿನಿಮಾದ ಅಣ್ಣ ಬಂದ್ರೆ ಹಾಡು ಬಿಡುಗಡೆ ಆಗಿದೆ..

ಹೌದು, ಅಯೋಗ್ಯ-2 ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹೊಸ ಬರವಸೆ ಮೂಡಿಸಿದೆ. ಅದಕ್ಕೆ ಕಾರಣ ಸಿನಿಮಾದ ಹಾಡುಗಳು.. 2019ರಲ್ಲಿ ಬಂದ ಅಯೋಗ್ಯ ಸಿನಿಮಾದ ಹಾಡುಗಳು ದೊಡ್ಡ ಹಿಟ್ ಆಗಿದ್ವು. ಈಗ ಬಂದಿರೋ ಅಯೋಗ್ಯ-2 ಹಾಡುಗಳು ಸಹ ಹಿಟ್ ಲಿಸ್ಟ್ ಸೇರುತ್ತಿವೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಸಖತ್ ಕಿತ್ ಕೊಡ್ತಾ ಇರೋ, ಇದ್ದಲ್ಲೇ ಡಾನ್ಸ್ ಮಾಡೋಕೆ ಹುರಿ ದುಂಬಿಸುತ್ತಿರೋ ಈ ಅಣ್ಣ ಬಂದ್ರೆ ಸಾಂಗ್..

ನೀನಾಸಂ ಸತೀಶ್ ಈ ಹಾಡಿನಲ್ಲಿ ಸಿಕ್ಕಾಪಟ್ಟೆ ಎನರ್ಜಿಟಿಕ್ ಆಗಿ ಡಾನ್ಸ್​ಮಾಡಿದ್ದಾರೆ. ಈ ಹಾಡಿನಲ್ಲಿ ಸತೀಶ್​ ಡಾನ್ಸ್​ಖದರ್ ಸಂಪೂರ್ಣ ಬದಲಾಗಿದೆ. ಪ್ರತಿಯೊಂದು ಸ್ಟೆಪ್ಸ್​ಡಾನ್ಸ್​ ನಂಬರ್ ಆಗಿ ಥ್ರಿಲ್ ಕೊಡುತ್ತಿದೆ. ಅರ್ಜುನ್ ಜನ್ಯ ಸಂಗೀತಾ, ಬಹದ್ದೂರ್ ಚೇತನ್ ಸಾಹಿತ್ಯ, ಆಂಟೋನಿ ದಾಸ್ ರ ಧ್ವನಿ ಮಿಕ್ಸ್ ಆಗಿ ಮಸ್ತ್​ಸಾಂಗ್ ಸೃಷ್ಟಿಯಾಗಿದೆ.

ಸತೀಶ್-ರಚಿತಾ ಜೋಡಿಯ ಟಿಪಿಕಲ್ ನಾಟಿ ಸ್ಟೈಲ್ ಅಯೋಗ್ಯ-2

ಅಯೋಗ್ಯ 2 ಅಪ್ಪಟ ಮಂಡ್ಯ ಮಂದ್ದೆಯಂತಾ ನಾಟಿ ಸ್ಟೈಲ್ ಸಿನಿಮಾ.. ರಚಿತಾ ಲುಕ್ಕು, ಸತೀಶ್​ಹಾಸ್ಯದ ರಂಗು ಈ ಸಿನಿಮಾದ ಹೈಲೆಟ್. ಈ ಬಾರಿ ನಿರ್ಮಾಪಕ ಮುನೇಗೌಡ ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಿರೋದು ಸಿನಿಮಾದ ಸ್ಯಾಂಪಲ್ಸ್​ನಲ್ಲೇ ಗೊತ್ತಾಗುತ್ತೆ. 100 ಡೇಸ್ ರನ್ನಿಂಗ್ ಸಕ್ಸಸ್​ಫುಲ್ ಅಯೋಗ್ಯ ಕೊಟ್ಟಿರೋ ಮಹೇಶ್ ಕುಮಾರ್,​ಈ ಬಾರಿ ಕೂಡ ಕಮಾಲ್ ಮಾಡೋ ಹಾಗೆ ಕಾಣುತ್ತಿದೆ. ಟೋಟಲಿ ಫ್ಯಾಮಿಲಿ ಎಂಟರ್‌ಟೈಂನ್‌ಮೆಂಟ್ ಅಯೋಗ್ಯ-2 ಅನ್ನೋ ನಿರೀಕ್ಷೆ ಹೆಚ್ಚಾಗಿದೆ.