ರಿಷಬ್ ಶೆಟ್ಟಿ ಅವರು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಕ್ರಾಂತಿ ಮಾಡಲು ಸಜ್ಜಾಗಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ಅವರ ಬೆಂಬಲ ಮತ್ತು ಮಾರ್ಗದರ್ಶನ ರಿಷಬ್ ಅವರ ಪಯಣಕ್ಕೆ ಮತ್ತಷ್ಟು ಶಕ್ತಿ ನೀಡಿದಂತಿದೆ. ಕಾಂತಾರ ಅಂಗಳಕ್ಕೆ ಕಿಚ್ಚ ಸುದೀಪ್ ಕೂಡ ಬರ್ತಾರಾ?

ಡಿವೈನ್ ಸ್ಟಾರ್ ಮತ್ತು ಅಭಿನಯ ಚಕ್ರವರ್ತಿಯ ‘ಮ್ಯಾಜಿಕಲ್’ ಮೀಟಿಂಗ್: ಕಿಚ್ಚನ ಅಂಗಳದಲ್ಲಿ ರಿಷಬ್ ಶೆಟ್ಟಿ ದಂಪತಿ! ಏನಿದು ಹೊಸ ಸಮಾಚಾರ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಂದನವನದಲ್ಲಿ ಈಗ ಎಲ್ಲಿ ನೋಡಿದರೂ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ (Rishab Shetty) ಅವರದ್ದೇ ಹವಾ! ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವ ರಿಷಬ್ ಶೆಟ್ಟಿ, ಬೆಂಗಳೂರಿಗೆ ಬಂದಾಗ ನಡೆದ ಒಂದು ವಿಶೇಷ ಭೇಟಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅದೇನು ಗೊತ್ತಾ? ಕನ್ನಡ ಚಿತ್ರರಂಗದ ‘ಬಾದ್‌ಶಾ’ ಕಿಚ್ಚ ಸುದೀಪ್ (Kichcha Sudeep) ಮತ್ತು ರಿಷಬ್ ಶೆಟ್ಟಿ ಅವರ ಅಪರೂಪದ ಭೇಟಿಯ ಕ್ಷಣ!

ಕಿಚ್ಚನ ಆತಿಥ್ಯಕ್ಕೆ ಫಿದಾ ಆದ ರಿಷಬ್ ಶೆಟ್ಟಿ ದಂಪತಿ

ಬಹಳ ಕಾಲದ ಗ್ಯಾಪ್ ಬಳಿಕ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಅವರು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ರಿಷಬ್ ದಂಪತಿ, 'ಕಿಚ್ಚ ಸುದೀಪ್‌ ಸರ್, ಇಷ್ಟು ದೀರ್ಘಕಾಲದ ನಂತರ ನಿಮ್ಮನ್ನು ಮತ್ತೆ ಭೇಟಿಯಾದದ್ದು ತುಂಬಾ ಸಂತೋಷವಾಯಿತು. ನಿಮ್ಮ ಆತ್ಮೀಯ ಸ್ವಾಗತ ಮತ್ತು ಅದ್ಭುತ ಆತಿಥ್ಯಕ್ಕೆ ಧನ್ಯವಾದಗಳು. ಕಳೆದ ಹಲವು ವರ್ಷಗಳಿಂದ ನೀವು ನಮ್ಮ ಮೇಲೆ ತೋರುತ್ತಿರುವ ಪ್ರೀತಿ ಮತ್ತು ಗೌರವಕ್ಕೆ ನಾನು ಸದಾ ಋಣಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಈ ಮೂಲಕ ಸುದೀಪ್ ಮೇಲಿರುವ ತಮ್ಮ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಿಚ್ಚ ತೋರುತ್ತಿರುವ ಪ್ರೀತಿಯನ್ನು ಸ್ಮರಿಸಿರುವ ರಿಷಬ್ ಪೋಸ್ಟ್ ಈಗ ಫ್ಯಾನ್ಸ್ ಪಾಲಿಗೆ ಹಬ್ಬದಂತಿದೆ. ಈ ಅಧಿಕೃತ ಪೋಸ್ಟ್ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಅಕೌಂಟ್‌ನಿಂದ ಹೊರಬಂದಿದೆ. ಇದೀಗ ಮೀಡಿಯಾ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಈ ನ್ಯೂಸ್ ಸಖತ್ ವೈರಲ್ ಆಗುತ್ತಿದೆ.

ಫ್ಯಾನ್ಸ್ ಶುರುಮಾಡಿಕೊಮಡ್ರು ಹೊಸ ಲೆಕ್ಕಾಚಾರ!

ಈ ಫೋಟೋ ನೋಡಿದ ತಕ್ಷಣವೇ ನೆಟ್ಟಿಗರು ಸುಮ್ಮನೆ ಕುಳಿತಿರಲು ಸಾಧ್ಯವೇ? ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನೆಗಳ ಸುರಿಮಳೆಯೇ ಶುರುವಾಗಿದೆ. "ಕಾಂತಾರ-2 ನಲ್ಲಿ ಕಿಚ್ಚ ಸುದೀಪ್ ಅವರು ನಟಿಸುತ್ತಿದ್ದಾರಾ?" ಎಂಬುದು ಹಲವರ ಅಭಿಮತವಾದರೆ, "ಇಬ್ಬರು ದೈತ್ಯ ಪ್ರತಿಭೆಗಳು ಸೇರಿ ಒಂದು ಮಾಸ್ ಸಿನಿಮಾ ಮಾಡಿ" ಎನ್ನುವುದು ಬಹಳಷ್ಟು ಜನರ ಬೇಡಿಕೆ. ಈ ಭೇಟಿ ಕೇವಲ ಸೌಜನ್ಯದ ಭೇಟಿಯೋ ಅಥವಾ ಯಾವುದಾದರೂ ಹೊಸ ಪ್ರಾಜೆಕ್ಟ್‌ನ ಮುನ್ನುಡಿಯೋ ಎಂಬ ಕುತೂಹಲವೀಗ ಮನೆಮಾಡಿದೆ.

ರಿಷಬ್ ಶೆಟ್ಟಿ ಕೈಯಲ್ಲಿರುವ ‘ಬಿಗ್’ ಪ್ರಾಜೆಕ್ಟ್‌ಗಳು:

ಸದ್ಯ ರಿಷಬ್ ಶೆಟ್ಟಿ ಅವರು ಒಂದರ ಮೇಲೊಂದರಂತೆ ಬೃಹತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವು ಹೀಗಿವೆ..

ಜೈ ಹನುಮಾನ್: ಪ್ರಶಾಂತ್ ವರ್ಮ ನಿರ್ದೇಶನದ ಈ ಸಿನಿಮಾದಲ್ಲಿ ರಿಷಬ್ ಹನುಮಂತನಾಗಿ ಕಾಣಿಸಿಕೊಳ್ಳುತ್ತಿದ್ದು, ಇದರ ಚಿತ್ರೀಕರಣ ಈಗಾಗಲೇ ಅಬ್ಬರದಿಂದ ಸಾಗುತ್ತಿದೆ.

ಛತ್ರಪತಿ ಶಿವಾಜಿ ಬಯೋಪಿಕ್: ಈ ನಡುವೆ ಶಿವಾಜಿ ಬಯೋಪಿಕ್‌ನಿಂದ ರಿಷಬ್ ಹೊರಬಂದಿದ್ದಾರೆ ಎಂಬ ಗುಸುಗುಸು ಕೇಳಿಬಂದಿತ್ತು. ಆದರೆ ರಿಷಬ್ ಎಲ್ಲದಕ್ಕೂ ತೆರೆ ಎಳೆದಿದ್ದಾರೆ. 'ಜೈ ಹನುಮಾನ್' ಮುಗಿದ ತಕ್ಷಣ ಶಿವಾಜಿ ಮಹಾರಾಜರ ಕಥೆ ಶುರುವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂತಾರ - ಚಾಪ್ಟರ್ 1: ಪ್ರೇಕ್ಷಕರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುವ ಸಿನಿಮಾ ಎಂದರೆ ಅದು ‘ಕಾಂತಾರ ಪ್ರಿಕ್ವೆಲ್’. ಇದರ ಕೆಲಸಗಳು ಕೂಡ ಭರದಿಂದ ಸಾಗುತ್ತಿವೆ.

ಕಾಂತಾರ ಅಭಿಮಾನಿಗಳಿಗೆ ಗುಡ್ ನ್ಯೂಸ್:

ಬರಿ ನಟನೆಯಷ್ಟೇ ಅಲ್ಲದೆ, ರಿಷಬ್ ಈಗ ‘ಕಾಂತಾರ ಫ್ರಾಂಚೈಸಿ’ಯನ್ನು ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. 'ಕಾಂತಾರ: ಚಾಪ್ಟರ್ 1' ಆದ ಮೇಲೆ ಮತ್ತೊಂದು ಭಾಗದ ಸ್ಕ್ರಿಪ್ಟ್ ಕೆಲಸಗಳನ್ನು ಈಗಲೇ ಆರಂಭಿಸಿದ್ದಾರೆ. ತಮ್ಮ ಲೇಖಕರ ತಂಡದ ಜೊತೆ ಸೇರಿ ಕಥೆಯನ್ನು ಇನ್ನಷ್ಟು ರೋಚಕವಾಗಿ ರೂಪಿಸುತ್ತಿದ್ದಾರೆ.

ಒಟ್ಟಿನಲ್ಲಿ, ರಿಷಬ್ ಶೆಟ್ಟಿ ಅವರು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಕ್ರಾಂತಿ ಮಾಡಲು ಸಜ್ಜಾಗಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ಅವರ ಬೆಂಬಲ ಮತ್ತು ಮಾರ್ಗದರ್ಶನ ರಿಷಬ್ ಅವರ ಪಯಣಕ್ಕೆ ಮತ್ತಷ್ಟು ಶಕ್ತಿ ನೀಡಿದಂತಿದೆ. ಕಾಂತಾರ ಅಂಗಳಕ್ಕೆ ಕಿಚ್ಚ ಸುದೀಪ್ ಕೂಡ ಬರ್ತಾರಾ ಅನ್ನೋದನ್ನ ಕಾದು ನೋಡಬೇಕು!