- Home
- Entertainment
- Sandalwood
- Karavali ವಿವಾದ: ನೇರಪ್ರಸಾರದಲ್ಲಿ ಬಂದು ನಟ ಪ್ರಜ್ವಲ್ ಕುರಿತು ನಟಿ ಮೇಘನಾ ರಾಜ್ ಏನ್ ಹೇಳಿದ್ರು
Karavali ವಿವಾದ: ನೇರಪ್ರಸಾರದಲ್ಲಿ ಬಂದು ನಟ ಪ್ರಜ್ವಲ್ ಕುರಿತು ನಟಿ ಮೇಘನಾ ರಾಜ್ ಏನ್ ಹೇಳಿದ್ರು
'ಕರಾವಳಿ' ಸಿನಿಮಾವು ಟ್ರೇಲರ್ ಬಿಡುಗಡೆಯ ನಂತರ ವಿವಾದಕ್ಕೆ ಸಿಲುಕಿದೆ. ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ನಟಿ ಮೇಘನಾ ರಾಜ್ ಅವರು ಪ್ರಜ್ವಲ್ ಬೆಂಬಲಕ್ಕೆ ನಿಂತು ಅವರ ಬದ್ಧತೆಯನ್ನು ಶ್ಲಾಘಿಸಿದ್ದಾರೆ.

ಕರಾವಳಿ ವಿವಾದ
'ಕರಾವಳಿ' ಸಿನಿಮಾ ಬಿಡುಗಡೆಯ ಮುನ್ನವೇ ವಿವಾದದ ಕೇಂದ್ರಬಿಂದುವಾಗಿದೆ. ಟ್ರೇಲರ್ ಬಿಡುಗಡೆಯ ನಂತರ ಚಿತ್ರದ ಸುತ್ತ ಹಲವು ಪ್ರಶ್ನೆಗಳು ಎದ್ದಿದ್ದು, ಅದರಲ್ಲೂ ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಅನುಪಸ್ಥಿತಿ ಮತ್ತು ಅವರ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಿರುವ ವಿಚಾರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರಜ್ವಲ ಪರ ನಟ-ನಟಿಯರು
ಇದರ ಬೆನ್ನಲ್ಲೇ ಇದಾಗಲೇ ಹಲವಾರು ನಟ-ನಟಿಯರು ಪ್ರಜ್ವಲ್ ದೇವರಾಜ್ (Prajwal Devraj) ಕುರಿತು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದು ನಟನ ಬೆಂಬಲವಾಗಿ ನಿಂತಿದ್ದಾರೆ. ಇದೀಗ ನಟಿ ಮೇಘನಾ ರಾಜ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬಂದು ಪ್ರಜ್ವಲ್ ಅವರು ಕುರಿತು ಮಾತನಾಡಿದ್ದಾರೆ.
ಮೇಘನಾ ರಾಜ್ ಏನಂದ್ರು?
ಪ್ರಜ್ವಲ್ ದೇವರಾಜ್ ಅವರನ್ನು ನಾನು 4-5ನೇ ವಯಸ್ಸಿನಿಂದ ನೋಡುತ್ತಾ ಬಂದವಳು. ಸಿನಿಮಾಕ್ಕೆ ಅವರ ಕಮಿಟ್ಮೆಂಟ್ ಎಷ್ಟು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಪ್ರತಿ ಸಿನಿಮಾಕ್ಕೂ ಅವರು ಅಷ್ಟೇ ಪ್ರೀತಿ ಕೊಡುತ್ತಲೇ ಬಂದವರು. ಅವರ ಇಡೀ ಫ್ಯಾಮಿಲಿ ಫಿಲ್ಮ್ ಫ್ಯಾಮಿಲಿ. ಅವರು ಪ್ರೊಡ್ಯೂಸರ್ ಕೂಡ. ಸಿನಿಮಾ ರಂಗದ ಕಷ್ಟಗಳನ್ನು ಹತ್ತಿರದಿಂದ ನೋಡಿದ್ದಾರೆ ಎಂದು ಮೇಘನಾ ರಾಜ್ ಹೇಳಿದ್ದಾರೆ.
ಈಗ್ಯಾಕೆ ಕಪ್ಪು ಚುಕ್ಕೆ?
ಕೆಲವರು ಅವರನ್ನು ಈಗೀಗ ನೋಡಿರಬಹುದು. ಆದರೆ ಎಷ್ಟೋ ಮಂದಿಗೆ ಅವರು ಹಲವು ದಶಕಗಳಿಂದಲೇ ಗೊತ್ತು. ಅವರು ಏನು, ಯಾವ ರೀತಿಯ ವ್ಯಕ್ತಿ, ಅವರ ಅಭಿವ್ಯಕ್ತಿತನ ಹೇಗಿದೆ ಎಲ್ಲವೂ ಗೊತ್ತಿದೆ. ಆದರೆ ಇಷ್ಟು ವರ್ಷ ಇಲ್ಲದ ಕಪ್ಪುಚುಕ್ಕೆ ಈಗ್ಯಾಕೆ ಎಂದು ನಟಿ ಬೇಸರದಿಂದ ಪ್ರಶ್ನಿಸಿದ್ದಾರೆ. ಅವರು ಎಂಥವರು ಎಂದು ನಿಮಗೆ ಹೊರಗಿನ ಯಾರೂ ಹೇಳಬೇಕಾಗಿಲ್ಲ ಅಲ್ಲವೆ, ಅವರ ಇಷ್ಟೂ ವರ್ಷಗಳ ಸಿನಿಮಾ ಜರ್ನಿ ನೋಡುತ್ತಾ ಬಂದಿದ್ದಾರೆ.ಸಿನಿಮಾ ಹೊರತಾಗಿಯೂ ಅವರು ತುಂಬಾ ಉತ್ತಮ, ಒಳ್ಳೆಯ ವ್ಯಕ್ತ. ಅವರು ಇದಾಗಲೇ ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರಿಗೆ ಇನ್ನುಮುಂದೆಯೂ ಇದೇ ರೀತಿ ಪ್ರೋತ್ಸಾಹದ ಅವಶ್ಯಕತೆ ಇದೆ ಎಂದು ನಟಿ ಮೇಘನಾ ಹೇಳಿದ್ದಾರೆ.
ಸಾಧನೆ ತುಂಬಾ ಇದೆ
ಕರಾವಳಿ ಸಿನಿಮಾ ಪ್ರಜ್ವಲ್ ಅವರದ್ದು. ಅದರಲ್ಲಿ ಅವರ ಸಾಧನೆ ತುಂಬಾ ಇದೆ. ಅವರು ಅದರ ಕಥೆ ಕೇಳುವ ಸಮಯದಲ್ಲಿ, ತತ್ಸಮ ತದ್ಭವ ಸಿನಿಮಾ ಜಸ್ಟ್ ಮುಗಿಸಿದ್ದರು. ಆ ಸಮಯದಲ್ಲಿ ಕರಾವಳಿಯ ಕಥೆ ಕೇಳಲು ನನ್ನನ್ನೂ ಕರೆದಿದ್ದರು. ಆ ಕಥೆಯನ್ನು ಕೇಳಿ ಅವರು ಸಿಕ್ಕಾಪಟ್ಟೆ ಎಕ್ಸೈಟ್ಮೆಂಟ್ ಆಗಿದ್ದರು. ಅಷ್ಟು ಖುಷಿ ಪಟ್ಟುಕೊಂಡಿದ್ದರು. ಅದು ಸಂಪೂರ್ಣ ಅವರ ಚಿತ್ರ ಎಂದಿದ್ದಾರೆ ಮೇಘನಾ ರಾಜ್.
ಕರಾವಳಿ ಅದ್ಭುತ ಸಿನಿಮಾ
ಕರಾವಳಿ ಅದ್ಭುತ ಸಿನಿಮಾ. ಯಾರು ಬಂದು ಏನೇ ಹೇಳಿದ್ರೂ ಇಲ್ಲಿಯವರೆಗೆ ಕಲಾಭಿಮಾನಿಗಳು ಅವರನ್ನು ಸಪೋರ್ಟ್ ಮಾಡುತ್ತಾ ಬಂದಿದ್ದೀರಿ. ಮುಂದೆಯೂ ಇದೇ ರೀತಿ ಸಪೋರ್ಟ್ ಇರಲಿ, ಅವರೊಬ್ಬರ ಅದ್ಭುತ ಕಲಾವಿದ. ಯಾರ ಮಾತನ್ನೂ ಕೇಳಬೇಡಿ. ಅವರ ಬಗ್ಗೆ ಇಷ್ಟು ವರ್ಷ ನೀವು ನೋಡಿದ ಆಧಾರದ ಮೇಲೆ ಅವರಿಗೆ ಸಪೋರ್ಟ್ ಮಾಡಿ ಎಂದು ನಟಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

