11:44 PM (IST) Aug 22

Karnataka News Live 22nd August:Toxic Pre Release Event - ‘ನಾರ್ತ್‌-ಸೌತ್‌’ ಅಂತ ಕಿತ್ತಾಡೋದು ಬೇಡ - ತೆಲುಗು ನೆಲದಲ್ಲಿ ಯಶ್ ಹವಾ!

Toxic Pre Release Event: ಹೈದರಾಬಾದ್‌ನ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ನಡೆದ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ನೀಡಿದ ಭಾಷಣ ಇದೀಗ ಗಮನ ಸೆಳೆಯುತ್ತಿದೆ.

Read Full Story
11:39 PM (IST) Aug 22

Karnataka News Live 22nd August:ದೇಶದಲ್ಲಿ ಅತೀ ಹೆಚ್ಚು ಸಕ್ಕರೆ ತಯಾರಿಸುವ ರಾಜ್ಯ ಯಾವುದು? ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಹಬ್ಬಗಳ ಸೀಸನ್ ಆರಂಭಕ್ಕೂ ಮುನ್ನವೇ ದೇಶದಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ ಸುಮಾರು ₹17 ರಷ್ಟು ಏರಿಕೆಯಾಗಿದ್ದು, ಸಕ್ಕರೆ ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಹಾಗೂ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ.

Read Full Story
11:16 PM (IST) Aug 22

Karnataka News Live 22nd August:ಆರ್. ಚಂದ್ರು-ಡಾರ್ಲಿಂಗ್ ಕೃಷ್ಣ ಜೋಡಿಯ 'ಫಾದರ್' ಟೀಸರ್‌ಗೆ ಭಾರೀ ನಿರೀಕ್ಷೆ; ಆಗಸ್ಟ್ 25ರಂದು ಸಂಜೆ ಎಷ್ಟು ಗಂಟೆಗೆ, ಎಲ್ಲಿ ಬಿಡುಗಡೆ?!

'ತಾಜ್ ಮಹಲ್' ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಆರ್. ಚಂದ್ರು ಹಾಗೂ ‘ಲವ್ ಮಾಕ್ಟೇಲ್’ ಸರಣಿಯ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಡಾರ್ಲಿಂಗ್ ಕೃಷ್ಣ ಅವರ ಕಾಂಬಿನೇಷನ್ ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರವನ್ನು ರಾಜಮೋಹನ್ ನಿರ್ದೇಶಿಸಿದ್ದಾರೆ.

Read Full Story
10:59 PM (IST) Aug 22

Karnataka News Live 22nd August:ರೈಲಿನಲ್ಲಿ ಟೂತ್‌ಬ್ರಷ್ ಮಾರುವ ಈ ವ್ಯಾಪಾರಿಗೆ ಎಷ್ಟು ಭಾಷೆ ಬರುತ್ತೆ? ಗೆಸ್‌ ಮಾಡಿ, ನಿಮ್ಮ ಪ್ರಕಾರ ಎಷ್ಟು?

ರೈಲಿನಲ್ಲಿ ಟೂತ್‌ಬ್ರಷ್ ಮತ್ತು ಸಾಬೂನು ಮಾರಾಟ ಮಾಡುವ ರಾಜಸ್ಥಾನ ಮೂಲದ ವ್ಯಾಪಾರಿಯೊಬ್ಬರು ಇಂಗ್ಲಿಷ್ ಸೇರಿದಂತೆ ಬರೋಬ್ಬರಿ 18-19 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾವುದೇ ಕೋಚಿಂಗ್ ಪಡೆಯದೆ ಕೇವಲ ಪ್ರಯಾಣಿಕರ ಸಂಪರ್ಕ ಮತ್ತು ಕಲಿಯುವ ಹಂಬಲದಿಂದಲೇ ಸ್ವತಃ ಇಷ್ಟೊಂದು ಭಾಷೆಗಳನ್ನು ಕರಗತ ಮಾಡಿಕೊಂಡಿರುವ ಯುವಕನ ಪ್ರತಿಭೆಗೆ ನೆಟಿಜನ್ನರು ಮೆಚ್ಚುಗೆ ಸೂಚಿಸಿದ್ದಾರೆ.

Read Full Story
10:49 PM (IST) Aug 22

Karnataka News Live 22nd August:ಆ ಸ್ಟಾರ್ ಹೀರೋ ರೇಂಜ್ ನೋಡಿ ತುಂಬಾ ಭಯವಾಗಿತ್ತು - ವಜ್ರಕಾಯ ಬೆಡಗಿ ನಭಾ ನಟೇಶ್ ಮಾತು ವೈರಲ್

ಹೀರೋಯಿನ್ ಆಗಿ ಚಿತ್ರರಂಗದಲ್ಲಿ ಮತ್ತಷ್ಟು ಬ್ಯುಸಿಯಾಗಲು ಪ್ರಯತ್ನಿಸುತ್ತಿರುವ ನಟಿ ನಭಾ ನಟೇಶ್, ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿನ ವಿಶೇಷ ಅನುಭವವೊಂದನ್ನು ಹಂಚಿಕೊಂಡಿದ್ದಾರೆ.

Read Full Story
10:20 PM (IST) Aug 22

Karnataka News Live 22nd August:Tragic Incident - ಐಫೋನ್ ದುರಂತಕ್ಕೆ ಬಿಗ್ ಟ್ವಿಸ್ಟ್ - ತನಿಖೆಯಲ್ಲಿ ವಿಡಿಯೋ ಬಹಿರಂಗ! ಕರಳು ಹಿಂಡುವಂತಿದೆ ಆ ತಾಯಿಯ ಅಂತಿಮ ಮಾತು!

ಹೊಸ ಐಫೋನ್‌ಗಾಗಿ ಬೆಟ್ಟದ ತುದಿಯಿಂದ ಜಿಗಿಯುವುದಾಗಿ ಬೆದರಿಸಿದ ಯುವಕನ ಹಠವು ಮಹಾ ದುರಂತಕ್ಕೆ ಕಾರಣವಾಗಿದೆ. ಮಗನನ್ನು ರಕ್ಷಿಸಲು ಹೋದ ಪೋಷಕರು ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದು, ಮಗನೊಂದಿಗೆ ಪ್ರಾಣ ಕಳೆದುಕೊಂಡರು. ಈ ಆಘಾತಕಾರಿ ಘಟನೆಯು ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡಿದೆ.
Read Full Story
09:44 PM (IST) Aug 22

Karnataka News Live 22nd August:'ಮುಗಿಲ್‌ಪೇಟೆ' ಬ್ಯೂಟಿ ಕಯಾದು ಯಶಸ್ಸಿನ ಸೀಕ್ರೆಟ್ ಇದೇನಾ? ಪ್ರತಿಪಾತ್ರಕ್ಕೂ ಮಾಡ್ತಾರಂತೆ ಈ ತಯಾರಿ!

ವಿಭಿನ್ನ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಬಂದಿರುವ ನಟಿ ಕಯಾದು ಲೋಹರ್, ಪ್ರತಿಯೊಂದು ಪಾತ್ರಕ್ಕೂ ಸಾಕಷ್ಟು ತಯಾರಿ ನಡೆಸಿಕೊಂಡೇ ಕ್ಯಾಮೆರಾ ಎದುರಿಸುವ ನಟಿಯರಲ್ಲಿ ಒಬ್ಬರು. ಹಾಗಾದರೆ ಅವರ ಬಗ್ಗೆ ನಿಮಗೆ ಗೊತ್ತಿರದ ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ.

Read Full Story
09:32 PM (IST) Aug 22

Karnataka News Live 22nd August:Niti Ayoga - ದೇಶದ 8.7 ಕೋಟಿ ಯುವಕರು ಏನು ಮಾಡುತ್ತಿದ್ದಾರೆ? ನೀತಿ ಆಯೋಗದ ವರದಿ ಬಿಚ್ಚಿಟ್ಟ ಶಾಕಿಂಗ್ ಸತ್ಯ!

ನೀತಿ ಆಯೋಗದ ಇತ್ತೀಚಿನ ವರದಿಯ ಪ್ರಕಾರ, ದೇಶದ 8.7 ಕೋಟಿ ಯುವಕರು ಶಿಕ್ಷಣ, ಉದ್ಯೋಗ ಅಥವಾ ಯಾವುದೇ ಕೌಶಲ್ಯ ತರಬೇತಿಯಿಂದ ಹೊರಗುಳಿದಿದ್ದಾರೆ. ಹೆಚ್ಚುತ್ತಿರುವ ಶಿಕ್ಷಣದ ವೆಚ್ಚ ಮತ್ತು ಪ್ರಾಯೋಗಿಕ ಕೌಶಲ್ಯಗಳ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಆರ್ಥಿಕ ನೆರವು ಹಾಗೂ 'ಗಳಿಸುತ್ತಲೇ ಕಲಿಯಿರಿ' ಯೋಜನೆಗಳಂತಹ ಪರಿಹಾರಗಳನ್ನು ವರದಿ ಶಿಫಾರಸು ಮಾಡಿದೆ.

Read Full Story
09:01 PM (IST) Aug 22

Karnataka News Live 22nd August:ಉದ್ಯೋಗ ತೊರೆಯಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ಮೊದಲು ಈ ವಿಡಿಯೋ ಒಮ್ಮೆ ನೋಡಿ!

ಉದ್ಯೋಗದ ಬಗ್ಗೆ ಅಸಮಾಧಾನ, ಒತ್ತಡ, ಬೇಸರ ಕಾಡುವುದು ಸಹಜ. ಆದರೆ ಕೆಲಸಕ್ಕೆ ರಾಜೀನಾಮೆ ನೀಡುವ ಮುನ್ನ ಈಗಿನ ಉದ್ಯೋಗ ಮಾರುಕಟ್ಟೆಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಒಮ್ಮೆ ಅರ್ಥಮಾಡಿಕೊಳ್ಳುವುದು ಅಗತ್ಯ.

Read Full Story
08:13 PM (IST) Aug 22

Karnataka News Live 22nd August:ಗೋಲ್ಡನ್ ಸ್ಟಾರ್ ಗಣೇಶ್ ಸುಖಾಗಮನ ಬಯಸ್ತಾರಂತೆ ಸಲಗ ಬೆಡಗಿ - ಏನಿದು ಹೊಸ ವಿಷ್ಯ?

Golden Star Ganesh: ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೆ ಮತ್ತೊಂದು ಕುತೂಹಲಕಾರಿ ಸುದ್ದಿ. ಬಹುನಿರೀಕ್ಷಿತ ‘ತಮ್ಮ ಸುಖಾಗಮನ ಬಯಸುವ’ ಸಿನಿಮಾಗೆ ನಾಯಕಿಯಾಗಿ ನಟಿ ಸಂಜನಾ ಆನಂದ್ ಆಯ್ಕೆಯಾಗಿದ್ದಾರೆ.

Read Full Story
07:58 PM (IST) Aug 22

Karnataka News Live 22nd August:'Gen Z' ಮನಸ್ಸಿನಲ್ಲಿ ಯಾರಿಗೆ ಜಾಗ ; ಬಿಜೆಪಿಗೋ, ಕಾಂಗ್ರೆಸ್‌ಗೋ? ಇಲ್ಲಿದೆ ಅಸಲಿ ಲೆಕ್ಕಾಚಾರ!

ನೀಟ್ ಪತ್ರಿಕೆ ಸೋರಿಕೆ ಪ್ರತಿಭಟನೆಗಳು 'Gen Z' ಪೀಳಿಗೆಯ ರಾಜಕೀಯ ಜಾಗೃತಿಯನ್ನು ಅನಾವರಣಗೊಳಿಸಿವೆ. ಈ ಯುವ ಮತದಾರರನ್ನು ಸೆಳೆಯಲು, ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಸಾಂಪ್ರದಾಯಿಕ ಪ್ರಚಾರಗಳನ್ನು ಬದಿಗಿಟ್ಟು, ಡಿಜಿಟಲ್ ಮಾಧ್ಯಮ ಮತ್ತು ಕ್ಯಾಂಪಸ್ ಸಂವಾದಗಳಂತಹ ಹೊಸ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಆದರೆ ಅವರ ಒಲುವು ಯಾವುದರ ಕಡೆ ಎನ್ನುವುದರ ವಿವರ ಇಲ್ಲಿದೆ.

Read Full Story
07:50 PM (IST) Aug 22

Karnataka News Live 22nd August:ಗಂಟೆಗಟ್ಟಲೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡ್ತೀರಾ? ಕುತ್ತಿಗೆ, ಬೆನ್ನು ನೋವು ತಪ್ಪಿಸಲು ಈ ಟಿಪ್ಸ್ ಪಾಲಿಸಿ

Laptop Work: ದೀರ್ಘಕಾಲ ಲ್ಯಾಪ್‌ಟಾಪ್‌ನಲ್ಲಿ ಕೆಳಗೆ ನೋಡುತ್ತಾ ಕೆಲಸ ಮಾಡುವುದರಿಂದ ಕುತ್ತಿಗೆ, ಭುಜ ಮತ್ತು ಬೆನ್ನಿನ ಮೇಲ್ಭಾಗದಲ್ಲಿ ಒತ್ತಡ ಉಂಟಾಗಬಹುದು. ಸ್ಕ್ರೀನ್‌ ಅನ್ನು ಸರಿಯಾದ ಎತ್ತರದಲ್ಲಿ ಇಡುವುದು.

Read Full Story
06:16 PM (IST) Aug 22

Karnataka News Live 22nd August:ಆಕಾಶಪ್ಪಾ, ಟೈಂ ಇದ್ರೆ ನಮ್ಮೂರಿಗೆ ಬಂದು ಹೋಗ್ತೀಯೇನಪ್ಪಾ.. - ಕುಡಿವ ನೀರಿಗಾಗಿ ಮಹಿಳೆಯರ ಆರ್ತನಾದ!

Kolahalu Village: ರೊಚ್ಚಿಗೆದ್ದ ಜನರ ಮನ ತಣಿಸಲು ಎರಡು ಕೊಳವೆಬಾವಿ ಕೊರೆಯಿಸಿ ನೀರು ಪೂರೈಕೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಕುಡಿವ ನೀರಿನ ಅಭಾವದಿಂದ ಗ್ರಾಮ ಬಾಧಿತಗೊಂಡಿದೆ.

Read Full Story
05:45 PM (IST) Aug 22

Karnataka News Live 22nd August:ಒಂದೆಡೆ 4 ಲಕ್ಷದ ಚಿನ್ನ ಕಳೆದುಕೊಂಡ ಆತಂಕ, ಮತ್ತೊಂದೆಡೆ ಶಿಕ್ಷಕನ ಪ್ರಾಮಾಣಿಕತೆ - ಕೊನೆಗೆ ಸಿಕ್ಕಿತು ಸಂತಸದ ಸುದ್ದಿ

ತಿರುಮಲ ಬಂಗಾರದ ಅಂಗಡಿ ಮಾಲೀಕರಾದ ಸುಮಾ ವೆಂಕಟೇಶ್ ಅವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಆಭರಣ ಕೊಡಲು ಪರ್ಸ್ ನಲ್ಲಿ ಇಟ್ಟುಕೊಂಡು ಸ್ಕೂಟಿಯಲ್ಲಿ ಹೊರಟಿದ್ದರು.

Read Full Story
05:34 PM (IST) Aug 22

Karnataka News Live 22nd August:ಬೆಂಗಳೂರು ಐಐಎಂಬಿ ಹೊಸ ಹೆಜ್ಜೆ - ಶಿಕ್ಷಣ ಲೋಕದಲ್ಲಿ ಟಾಟಾ ಸಂಸ್ಥೆ ಜೊತೆಗೆ ಮೈತ್ರಿ, ಜಿಗಣಿ ಹೊಸ ಕಾಲೇಜು!

ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು (IIMB) ತನ್ನ ಪದವಿಪೂರ್ವ ಶಿಕ್ಷಣ ಕ್ಷೇತ್ರಕ್ಕೆ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದ್ದು, ಮೊದಲ ಬ್ಯಾಚ್‌ಗೆ ಅಭೂತಪೂರ್ವ ಬೇಡಿಕೆ ವ್ಯಕ್ತವಾಗಿದೆ. ಈ ಯಶಸ್ಸಿನ ಬೆನ್ನಲ್ಲೇ, ಟಾಟಾ ಟ್ರಸ್ಟ್ಸ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಈ ನೂತನ ಶಾಲೆಯನ್ನು 'ಐಐಎಂ ಬೆಂಗಳೂರು - ದೋರಾಬ್ಜಿ ಟಾಟಾ ಸ್ಕೂಲ್ ಆಫ್ ಅಂಡರ್‌ಗ್ರಾಜುಯೇಟ್ ಸ್ಟಡೀಸ್' ಎಂದು ಹೆಸರಿಸಲಾಗಿದೆ.

Read Full Story
05:06 PM (IST) Aug 22

Karnataka News Live 22nd August:ಗುರುವಾರ-ಶುಕ್ರವಾರದ ಬದಲು 'ಬುಧವಾರ' ರಿಲೀಸ್ ಆಗ್ತಿರೋದ್ಯಾಕೆ? ಯಶ್‌ 'ಟಾಕ್ಸಿಕ್' ಸೀಕ್ರೆಟ್ ಇರೋದೇ ಇದ್ರಲ್ಲಿ!

ಸಾಮಾನ್ಯವಾಗಿ ಸಿನಿಮಾಗಳು ಶುಕ್ರವಾರ ತೆರೆಕಾಣುತ್ತವೆ. ದೊಡ್ಡ ಸಿನಿಮಾಗಳಾದರೆ ಗುರುವಾರ ಪ್ರೀಮಿಯರ್ ಆಗುತ್ತವೆ. 'ಕೆಜಿಎಫ್-1' ಬಂದಿದ್ದು ಶುಕ್ರವಾರ, 'ಕೆಜಿಎಫ್-2' ಬಂದಿದ್ದು ಗುರುವಾರ. ಆದರೆ 'ಟಾಕ್ಸಿಕ್' ಸಿನಿಮಾ ಆಗಸ್ಟ್ 26, ಬುಧವಾರದಂದು ರಿಲೀಸ್ ಆಗುತ್ತಿದೆ. ಇದರ ಹಿಂದೆ ಇದೆ ಈ ಬಿಗ್ ಸೀಕ್ರೆಟ್!

Read Full Story
05:01 PM (IST) Aug 22

Karnataka News Live 22nd August:ಮಹಾಪ್ರಭು ಮೋದಿ ಸ್ವಶಕ್ತಿ ಮೇಲೆ ನಿಂತಿಲ್ಲ, ಪವನ್-ನಿತೀಶ್ ಆಸರೆ ಬೇಕು -ಪ್ರಕಾಶ್ ರಾಜ್ ಮತ್ತೆ ತೀವ್ರ ವಾಗ್ದಾಳಿ

ಕಲಬುರಗಿಯಲ್ಲಿ ನಡೆದ ಮಲ್ಲಿಕಾರ್ಜುನ ಖರ್ಗೆ ಅವರ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಕಾಶ್ ರಾಜ್ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಮಹಾಪ್ರಭು ಮೋದಿ ಇಂದು ತಮ್ಮ ಸ್ವಂತ ಶಕ್ತಿಯ ಮೇಲೆ ನಿಂತಿಲ್ಲ, ಅವರು ಪವನ್ ಕಲ್ಯಾಣ್ ಮತ್ತು ನಿತೀಶ್ ಕುಮಾರ್ ಅವರ ಆಸರೆಯ ಮೇಲೆ ನಿಂತಿದ್ದಾರೆ" ಎಂದು ಲೇವಡಿ ಮಾಡಿದರು.

Read Full Story
04:35 PM (IST) Aug 22

Karnataka News Live 22nd August:ಮಾವನ ಸಾವಿನ ಸುದ್ದಿ ಕೇಳಿಯೂ ಹೋಗಲಿಲ್ಲ - ವೈಯಕ್ತಿಕ ದುಃಖ ಬದಿಗಿಟ್ಟು ಕರ್ತವ್ಯದಲ್ಲಿ ಭಾಗಿಯಾದ ಕಮಿಷನರ್

ಖಾಕಿ ಎಂದರೆ ಕೇವಲ ಅಧಿಕಾರವಲ್ಲ, ಅದೊಂದು ಜವಾಬ್ದಾರಿ ಎಂಬುದನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮನೆಯಲ್ಲಿ ಸಾವಿನ ಸೂತಕವಿದ್ದರೂ, ವೈಯಕ್ತಿಕ ದುಃಖವನ್ನು ಬದಿಗಿಟ್ಟು ಸಾರ್ವಜನಿಕ ಶಾಂತಿ ಕಾಪಾಡಲು ಅವರು ರಸ್ತೆಗೆ ಇಳಿದಿರುವ ಘಟನೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Read Full Story
03:00 PM (IST) Aug 22

Karnataka News Live 22nd August:ಕೋಟಿ ಹಣ ವಂಚನೆ ಆರೋಪಕ್ಕೆ ಓಂ ಪ್ರಕಾಶ್ ರಾವ್ ಮೊದಲ ಪ್ರತಿಕ್ರಿಯೆ- 'ಹೌದು, ಹಣ ತೆಗೆದುಕೊಂಡಿರೋದು ನಿಜ'

ಅವರ ಜೊತೆ ಮಾತಿಗೆ ಮಾತು ಬೆಳೆದು ಚಿಕ್ಕ ಪುಟ್ಟ ವೈಮನಸ್ಯ ಆಗಿದೆ. ಅದಕ್ಕೆ ಅವರು ಈ ರೀತಿ ಆರೋಪ ಮಾಡುತ್ತಿದ್ದಾರೆ. ಸಿನಿಮಾ ನಿಧಾನ ಆಗಿದ್ದಕ್ಕೆ‌ ಈ ರೀತಿ ಜಗಳ ಆಗಿದೆ. ಧಮ್ಕಿ ಹಾಕೋಕೆ ನಾನೇನು ರೌಡಿನಾ..? ಇದು ಜಗಳ ಮಾಡಿ ಮಾತುಕತೆ ಮಾಡುವಂತದ್ದಲ್ಲ…

Read Full Story
02:57 PM (IST) Aug 22

Karnataka News Live 22nd August:ಐಫೋನ್ 18 ಪ್ರೊ ಮ್ಯಾಕ್ಸ್ ಬಿಡುಗಡೆಗೆ ಕೌಂಟ್‌ಡೌನ್ - ಬೆಲೆ, ಫೀಚರ್ಸ್ ಮತ್ತು ಅಪ್‌ಡೇಟ್‌ಗಳ ಕಂಪ್ಲೀಟ್ ವಿವರ!

ಆಪಲ್ ತನ್ನ ವಾರ್ಷಿಕ ಸೆಪ್ಟೆಂಬರ್ ಇವೆಂಟ್‌ನಲ್ಲಿ ಐಫೋನ್ 18 ಪ್ರೊ ಮ್ಯಾಕ್ಸ್ ಅನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಈ ಹೊಸ ಮಾದರಿಯು ಅತ್ಯಾಧುನಿಕ A20 ಪ್ರೊ ಚಿಪ್, 12GB RAM ಮತ್ತು ಸ್ಮಾರ್ಟ್‌ಫೋನ್ ಇತಿಹಾಸದಲ್ಲೇ ಮೊದಲ ಬಾರಿಗೆ 'ವೇರಿಯಬಲ್ ಅಪರ್ಚರ್' ಕ್ಯಾಮೆರಾ ತಂತ್ರಜ್ಞಾನವನ್ನು ಹೊಂದಿರಲಿದೆ. ಭಾರತದಲ್ಲಿ ಇದರ ಬೆಲೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.
Read Full Story