- Home
- Entertainment
- 'ಮುಗಿಲ್‌ಪೇಟೆ' ಬ್ಯೂಟಿ ಕಯಾದು ಯಶಸ್ಸಿನ ಸೀಕ್ರೆಟ್ ಇದೇನಾ? ಪ್ರತಿಪಾತ್ರಕ್ಕೂ ಮಾಡ್ತಾರಂತೆ ಈ ತಯಾರಿ!
'ಮುಗಿಲ್‌ಪೇಟೆ' ಬ್ಯೂಟಿ ಕಯಾದು ಯಶಸ್ಸಿನ ಸೀಕ್ರೆಟ್ ಇದೇನಾ? ಪ್ರತಿಪಾತ್ರಕ್ಕೂ ಮಾಡ್ತಾರಂತೆ ಈ ತಯಾರಿ!
ವಿಭಿನ್ನ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಬಂದಿರುವ ನಟಿ ಕಯಾದು ಲೋಹರ್, ಪ್ರತಿಯೊಂದು ಪಾತ್ರಕ್ಕೂ ಸಾಕಷ್ಟು ತಯಾರಿ ನಡೆಸಿಕೊಂಡೇ ಕ್ಯಾಮೆರಾ ಎದುರಿಸುವ ನಟಿಯರಲ್ಲಿ ಒಬ್ಬರು. ಹಾಗಾದರೆ ಅವರ ಬಗ್ಗೆ ನಿಮಗೆ ಗೊತ್ತಿರದ ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ.

ನೇಪಾಳಿ ಮೂಲದ ಕಯಾದು ಲೋಹರ್
ಕಯಾದು ಲೋಹರ್ ಅವರ ಮಾತೃಭಾಷೆ ನೇಪಾಳಿ. ಅಸ್ಸಾಂನಲ್ಲಿ ಹುಟ್ಟಿ ಬೆಳೆದ ಅವರು, ಬಳಿಕ ಪುಣೆಗೆ ಸ್ಥಳಾಂತರಗೊಂಡರು. ಅವರ ಕುಟುಂಬಕ್ಕೆ ನೇಪಾಳಿ ಮೂಲವಿದೆ.
‘ಫ್ರೆಶ್ ಫೇಸ್’ ಆಗಿ ಆಯ್ಕೆ!
ಕಯಾದು ಅವರ ಮಾಡೆಲಿಂಗ್ ಜರ್ನಿ ಕೂಡ ಕುತೂಹಲಕಾರಿಯಾಗಿದೆ. ಒಂದು ಸ್ಪರ್ಧೆಯಲ್ಲಿ ‘ಫ್ರೆಶ್ ಫೇಸ್’ ಆಗಿ ಆಯ್ಕೆಯಾದ ಬಳಿಕ ಅವರಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶಗಳು ಸಿಕ್ಕವು. ಅಲ್ಲಿಂದ ನಿಧಾನವಾಗಿ ಅವರ ಪಯಣ ಚಿತ್ರರಂಗದತ್ತ ತಿರುಗಿತು.
2021ರಲ್ಲಿ ಚಿತ್ರರಂಗಕ್ಕೆ ಎಂಟ್ರಿ
2021ರಲ್ಲಿ ಕನ್ನಡದ 'ಮುಗಿಲ್‌ಪೇಟೆ' ಸಿನಿಮಾದ ಮೂಲಕ ಕಯಾದು ಲೋಹರ್ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ದಕ್ಷಿಣ ಭಾರತದ ಸಿನಿಮಾಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಳ್ಳುತ್ತಾ ಬಂದಿದ್ದಾರೆ.
ಫಿಟ್ನೆಸ್‌ಗೂ ಭರ್ಜರಿ ಗಮನ
ಕಯಾದು ಅವರಿಗೆ ಫಿಟ್ ಆಗಿರುವುದು ಎಂದರೆ ತುಂಬಾ ಇಷ್ಟವಂತೆ. ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಈಜು ಮತ್ತು ನೃತ್ಯವನ್ನು ಅಭ್ಯಾಸ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.
‘ಅಲ್ಲೂರಿ’ ಬಳಿಕ ‘ಡ್ರ್ಯಾಗನ್’ನಿಂದ ಗುರುತು
ತೆಲುಗಿನಲ್ಲಿ ‘ಅಲ್ಲೂರಿ’ ಸಿನಿಮಾದ ಮೂಲಕ ಪರಿಚಿತರಾದ ಕಯಾದು ಲೋಹರ್, ಬಳಿಕ ‘ಡ್ರ್ಯಾಗನ್’ ಸಿನಿಮಾದ ಮೂಲಕ ಟಾಲಿವುಡ್‌ನಲ್ಲಿ ಮತ್ತಷ್ಟು ಗಮನ ಸೆಳೆದರು. ಇದೀಗ ‘ಪ್ಯಾರಡೈಸ್’ ಸಿನಿಮಾದಲ್ಲಿನ ಸುಬ್ಬಲಕ್ಷ್ಮಿ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ.
ಪಾತ್ರಕ್ಕಾಗಿ ವರ್ಕ್‌ಶಾಪ್ ಕಡ್ಡಾಯ!
ಕಯಾದು ಲೋಹರ್ ಅವರ ನಟನೆಯ ಶೈಲಿಯಲ್ಲಿರುವ ವಿಶೇಷತೆ ಎಂದರೆ, ಪ್ರತಿ ಸಿನಿಮಾದ ಪಾತ್ರಕ್ಕಾಗಿ ಅವರು ಕಡ್ಡಾಯವಾಗಿ ವರ್ಕ್‌ಶಾಪ್ ಮಾಡಿಕೊಳ್ಳುತ್ತಾರೆ. ಪಾತ್ರದ ಬಗ್ಗೆ ಸಂಪೂರ್ಣ ನಂಬಿಕೆ ಮತ್ತು ಆತ್ಮವಿಶ್ವಾಸ ಬಂದ ಬಳಿಕವೇ ಸೆಟ್‌ಗೆ ಕಾಲಿಡುತ್ತಾರಂತೆ. ವಿಶೇಷವಾಗಿ ತಮಗೆ ತಿಳಿದಿಲ್ಲದ ಭಾಷೆಯಲ್ಲಿ ನಟಿಸುವಾಗ ಮತ್ತಷ್ಟು ಎಚ್ಚರಿಕೆ ವಹಿಸುತ್ತೇನೆ ಎಂದು ಕಯಾದು ಹೇಳಿದ್ದಾರೆ.
ಕಥೆಗಿಂತ ಮೊದಲು ಪಾತ್ರಕ್ಕೆ ಆದ್ಯತೆ
ಹೊಸ ಸಿನಿಮಾವೊಂದನ್ನು ಒಪ್ಪಿಕೊಳ್ಳುವ ಮುನ್ನ ಕಥೆಯಲ್ಲಿ ತಮ್ಮ ಪಾತ್ರದ ಮಹತ್ವ ಎಷ್ಟಿದೆ ಎಂಬುದನ್ನು ಕಯಾದು ಪ್ರಮುಖವಾಗಿ ಪರಿಗಣಿಸುತ್ತಾರಂತೆ. ತಮ್ಮ ಪಾತ್ರಕ್ಕೆ ಕಥೆಯಲ್ಲಿ ಉತ್ತಮ ಪ್ರಾಮುಖ್ಯತೆ ಇದ್ದರೆ, ಆ ಸಿನಿಮಾ ದೊಡ್ಡ ಬಜೆಟ್‌ನದ್ದೇ ಅಥವಾ ಸಣ್ಣ ಸಿನಿಮಾವೇ ಎಂಬುದನ್ನು ಲೆಕ್ಕ ಹಾಕುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪಾತ್ರಕ್ಕೆ ತೂಕವಿದ್ದರೆ ಸಿನಿಮಾ ಸಣ್ಣದಾದರೂ ಪರವಾಗಿಲ್ಲ...
ಇದೇ ಕಯಾದು ಲೋಹರ್ ಅವರ ಸಿನಿ ಆಯ್ಕೆಯ ಹಿಂದಿರುವ ಪ್ರಮುಖ ಸೂತ್ರ ಎನ್ನಬಹುದು. ‘ಪ್ಯಾರಡೈಸ್’ನಲ್ಲಿ ಸುಬ್ಬಲಕ್ಷ್ಮಿಯಾಗಿ ಅವರು ಹೇಗೆ ಮೋಡಿ ಮಾಡಲಿದ್ದಾರೆ ಎಂಬುದನ್ನು ನೋಡಲು ಇದೀಗ ಅಭಿಮಾನಿಗಳು ಕಾತರರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

