12:13 AM (IST) Nov 16

Karnataka New Live 15 November 2025 ನಿಮ್ಮ ಮಗುವಿನ ಕಿವಿಗೆ ಎಣ್ಣೆ ಹಾಕಬೇಕೋ ಬೇಡವೋ? ವೈದ್ಯರ ಏನು ಹೇಳ್ತಾರೆ ಕೇಳಿ!

baby ear care tips: ಮಕ್ಕಳ ಕಿವಿಗೆ ಎಣ್ಣೆ ಹಾಕುವುದು ಹಳೆಯ ಸಂಪ್ರದಾಯವಾದರೂ, ಅದರ ಸುರಕ್ಷತೆಯ ಬಗ್ಗೆ ಅನೇಕರಿಗೆ ಗೊಂದಲವಿದೆ. ಚಿಕ್ಕ ಮಕ್ಕಳ ಕಿವಿಗೆ ಎಣ್ಣೆ ಹಾಕುವುದು ಸೂಕ್ತವೇ, ಯಾವ ವಯಸ್ಸಿನ ಮಕ್ಕಳಿಗೆ ಇದು ಅಪಾಯಕಾರಿ ಮತ್ತು ಎಣ್ಣೆ ಬಳಸುವಾಗ ಯಾವ ಮುನ್ನೆಚ್ಚರಿಕೆ ಬಗ್ಗೆ ಲೇಖನ ವಿವರಿಸುತ್ತದೆ.

Read Full Story
10:57 PM (IST) Nov 15

Karnataka New Live 15 November 2025 'ಮೂರು ಕೋಟಿಯೆಲ್ಲಾ ಖರ್ಚು ಮಾಡಿಲ್ಲ, ನನ್ನ ದುಡ್ಡನ್ನು ನಾನು ಸಂಪಾದಿಸಿದ್ದೇನೆ..' ಅರವಿಂದ್‌ ರೆಡ್ಡಿಗೆ ತಿರುಗೇಟು ಕೊಟ್ಟ ಬಿಗ್‌ಬಾಸ್‌ ಸ್ಪರ್ಧಿ

ಸ್ಯಾಂಡಲ್‌ವುಡ್ ನಟಿಯೊಬ್ಬರು ನಿರ್ಮಾಪಕ ಅರವಿಂದ್ ರೆಡ್ಡಿ ವಿರುದ್ಧ ಕಿರುಕುಳದ ಆರೋಪ ಮಾಡಿದ್ದು, ತಾವು ಲಿವ್-ಇನ್ ಸಂಬಂಧದಲ್ಲಿದ್ದಾಗ ಹಿಂಸೆ ನೀಡಿದ್ದಾರೆಂದು ದೂರಿದ್ದಾರೆ. ಐಸಿಯುನಲ್ಲಿದ್ದಾಗ ತನ್ನ ಬಟ್ಟೆ ಹರಿದು ಅರೆಬೆತ್ತಲೆ ಮಾಡಿದ್ದರು ಎಂದು ನಟಿ ಆರೋಪಿಸಿದ್ದಾರೆ.

Read Full Story
10:32 PM (IST) Nov 15

Karnataka New Live 15 November 2025 ನಂಜನಗೂಡು - ದರೋಡೆ ಮಾದರಿ ಕೊಲೆ ಯತ್ನ ಪ್ರಕರಣ, ಚಿಕಿತ್ಸೆ ಫಲಿಸದೇ ಗಂಡ ಸಾವು, ಜೈಲು ಸೇರಿದ ಹಂತಕಿ ಪತ್ನಿ!

ನಂಜನಗೂಡಿನಲ್ಲಿ ದರೋಡೆ ನಾಟಕವಾಡಿ ಗಂಡನ ಕೊಲೆಗೆ ಯತ್ನಿಸಿದ್ದ ಪ್ರಕರಣ ಹೊಸ ತಿರುವು ಪಡೆದಿದೆ. ಅಂದು ತೀವ್ರವಾಗಿ ಗಾಯಗೊಂಡಿದ್ದ ಪತಿ ರಾಜೇಂದ್ರ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸಂಗೀತಾ ಸೇರಿದಂತೆ ನಾಲ್ವರನ್ನ ಬಂಧಿಸಲಾಗಿದೆ.

Read Full Story
10:26 PM (IST) Nov 15

Karnataka New Live 15 November 2025 'ಆಕೆಗೆ ಪೋರ್ಶೆ ಕಾರು, ಸೈಟು ಮನೆ ಎಲ್ಲಾ ಕೊಡಿಸಿದ್ದೇನೆ..' ಈಗ ಸುಮ್ಮನೆ ಆರೋಪ ಮಾಡ್ತಿದ್ದಾರೆ ಎಂದ ಅರವಿಂದ್‌ ರೆಡ್ಡಿ

ನಟಿ ಕೃಷಿ ತಾಪಂಡ ಅವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ನಿರ್ಮಾಪಕ ಅರವಿಂದ್ ವೆಂಕಟೇಶ್‌ ರೆಡ್ಡಿ ಅವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ, ತಾವು ಲಿವ್-ಇನ್ ಸಂಬಂಧದಲ್ಲಿದ್ದೆವು ಎಂದು ಅವರು ಆರೋಪಿಸಿದ್ದಾರೆ.

Read Full Story
09:21 PM (IST) Nov 15

Karnataka New Live 15 November 2025 ದಾವಣಗೆರೆಯಲ್ಲಿ ಸಾಹುಕಾರ; ಸಿಎಂ ಬದಲಾವಣೆ ಚರ್ಚೆಗೆ ತೆರೆ ಎಳೆದ ಜಾರಕಿಹೊಳಿ! ಹೇಳಿದ್ದೇನು?

ಸಚಿವ ಸತೀಶ್ ಜಾರಕಿಹೊಳಿ ದಾವಣಗೆರೆಗೆ ಭೇಟಿ ನೀಡಿ, ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಹಾರ ಚುನಾವಣಾ ಫಲಿತಾಂಶ ಕಾಂಗ್ರೆಸ್‌ಗೆ ಪಾಠವಾಗಿದ್ದು, ಕರ್ನಾಟಕದಲ್ಲಿ ಅಹಿಂದ ಸಂಘಟನೆಯನ್ನು ಬಲಪಡಿಸಲಾಗುವುದು ಎಂದು ಅವರು ಹೇಳಿದರು.
Read Full Story
09:15 PM (IST) Nov 15

Karnataka New Live 15 November 2025 ಅಂಗಡಿ ಎದುರಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಭೀಕರ ದಾಳಿ ಮಾಡಿ ಕಣ್ಣಗುಡ್ಡೆ ಕಿತ್ತು ಸಾಯಿಸಿದ ಬೀದಿ ನಾಯಿ!

ಉಳ್ಳಾಲದ ಕುಂಪಲದಲ್ಲಿ ಬೀದಿ ನಾಯಿಯೊಂದು ನಡೆಸಿದ ಭೀಕರ ದಾಳಿಗೆ ದಯಾನಂದ (54) ಎಂಬವರು ಮೃತಪಟ್ಟಿದ್ದಾರೆ. ನಸುಕಿನಲ್ಲಿ ವ್ಯಕ್ತಿಯನ್ನು ಅಟ್ಟಾಡಿಸಿ ಕೊಂದ ನಾಯಿಯು, ಮೃತದೇಹದ ಬಳಿ ರಕ್ತ ನೆಕ್ಕುತ್ತಾ ಕುಳಿತಿತ್ತು.
Read Full Story
08:19 PM (IST) Nov 15

Karnataka New Live 15 November 2025 ಕಾರವಾರ - ಆಕಷ್ಮಿಕ ಬೆಂಕಿ, ಒಂಟಿ ಜೀವನ ಸಾಗಿಸುತ್ತಿದ್ದ 70 ವರ್ಷದ ವೃದ್ಧೆ ಸಜೀವ ದಹನ!

ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹನುಮಾಪುರ ಗ್ರಾಮದಲ್ಲಿ, ಒಂಟಿಯಾಗಿ ವಾಸಿಸುತ್ತಿದ್ದ 70 ವರ್ಷದ ಫಕ್ಕೀರವ್ವ ರಾಮಣ್ಣ ಆಲೂರು ಎಂಬ ವೃದ್ಧೆ ಮನೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸಜೀವ ದಹನಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಸಾವು

Read Full Story
07:48 PM (IST) Nov 15

Karnataka New Live 15 November 2025 ಯುವಕರ ಮಧ್ಯೆ ಕುಳಿತಿದ್ದು ಮಹಿಳೆಯಲ್ಲ, ಶವ! ಮಧ್ಯರಾತ್ರಿ ಮೃತದೇಹ ಸಾಗಿಸಿದ್ದ ಆರೋಪಿಗಳು ಅರೆಸ್ಟ್

ಕೊಡಗು-ಮೈಸೂರು ಗಡಿಯಲ್ಲಿ ಮಧ್ಯರಾತ್ರಿ ಅನುಮಾನಾಸ್ಪದ ಓಡಾಡುತ್ತಿದ್ದ ಕಾರನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆದಿದ್ದಾರೆ. ಕಾರಿನೊಳಗೆ ಇಬ್ಬರು ಯುವಕರ ನಡುವೆ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು,zಮೂವರು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಇದು ಆತ್ಮ೧ಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Read Full Story
06:37 PM (IST) Nov 15

Karnataka New Live 15 November 2025 Bigg Boss - ಕಲರ್ಸ್​ ವಾಹಿನಿ ವಿರುದ್ಧ ಗಂಭೀರ ಆರೋಪ ಮಾಡಿರೋ ಜಾಹ್ನವಿಗೆ ಸುದೀಪ್​ ಏನ್​ ಹೇಳಿದ್ರು ನೋಡಿ!

ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರನ್ನು ವಾಹಿನಿಯೇ ಉಳಿಸುತ್ತಿದೆ ಎಂದು ಜಾಹ್ನವಿ ಗಂಭೀರ ಆರೋಪ ಮಾಡಿದ್ದರು. ಈ ಆರೋಪದ ಬಗ್ಗೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಜಾಹ್ನವಿಯನ್ನು ನೇರವಾಗಿ ಪ್ರಶ್ನಿಸಿ, ಶೋ ನಿಯಮಗಳ ಬಗ್ಗೆ ಪಾಠ ಮಾಡಿದ್ದಾರೆ.

Read Full Story
06:31 PM (IST) Nov 15

Karnataka New Live 15 November 2025 ಬಿಹಾರ ಎನ್‌ಡಿಎ ಗೆಲುವು ಪರಿಣಾಮವಿಲ್ಲ, 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ - ಮುನಿಯಪ್ಪ ಭವಿಷ್ಯ

ಬಿಹಾರ ಚುನಾವಣೆಯಲ್ಲಿ ಬಿಜೆಪಿ ಹಣ ಕೊಟ್ಟು ಮತ ಖರೀದಿಸಿದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿದ್ದು, 2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
Read Full Story
06:02 PM (IST) Nov 15

Karnataka New Live 15 November 2025 ಆಯುರ್ವೇದದ ಮ್ಯಾಜಿಕ್​ ಚಹ! ಬೊಜ್ಜು ಕರಗುವ ಜೊತೆ ಹತ್ತು ಹಲವು ಉಪಯೋಗ- ಮಾಡುವುದು ತುಂಬಾ ಸುಲಭ

ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಿಸಲು ವ್ಯಾಯಾಮದ ಜೊತೆಗೆ ಆಯುರ್ವೇದದಲ್ಲಿ ಪರಿಹಾರವಿದೆ. ಜೀರಿಗೆ, ಕೊತ್ತಂಬರಿ ಮತ್ತು ಸೋಂಪು ಬಳಸಿ ತಯಾರಿಸಿದ ಈ ವಿಶೇಷ ಟೀ, ಜೀರ್ಣಕ್ರಿಯೆಯನ್ನು ಸುಧಾರಿಸಿ ಕೆಲವೇ ದಿನಗಳಲ್ಲಿ ಬೊಜ್ಜನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
Read Full Story
06:02 PM (IST) Nov 15

Karnataka New Live 15 November 2025 ಚಾಮರಾಜನಗರ - ಬುದ್ಧ ಪ್ರತಿಮೆ, ಅಂಬೇಡ್ಕರ್ ಭಾವಚಿತ್ರ ವಿರೂಪ ಪ್ರಕರಣದಲ್ಲಿ ನಿರಪರಾಧಿ ಬಂಧನ? ನಾಯಕ ಸಮುದಾಯ ಪ್ರತಿಭಟನೆ

ಜ್ಯೋತಿಗೌಡನಪುರದಲ್ಲಿ ಬುದ್ಧ ಪ್ರತಿಮೆ ದ್ವಂಸ ಮತ್ತು ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿದ ಪ್ರಕರಣದಲ್ಲಿ ಪೊಲೀಸರು ನಿರಪರಾಧಿಯನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ನಾಯಕ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿದೆ. ನೈಜ ಆರೋಪಿಗಳನ್ನು ಬಂಧಿಸಿ, ಬಂಧಿತ ಅಮಾಯಕನನ್ನು ಬಿಡುಗಡೆ ಮಾಡುವಂತೆ ಸಮುದಾಯ ಆಗ್ರಹಿಸಿದೆ.
Read Full Story
05:55 PM (IST) Nov 15

Karnataka New Live 15 November 2025 IPL 2026 - ಮಿನಿ ಹರಾಜಿಗೂ ಮುನ್ನ 2 ಕನ್ನಡಿಗರೂ ಸೇರಿ 8 ಆಟಗಾರರಿಗೆ ಗೇಟ್‌ಪಾಸ್ ಕೊಟ್ಟ ಆರ್‌ಸಿಬಿ!

ಐಪಿಎಲ್ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹತ್ವದ ಬದಲಾವಣೆ ಮಾಡಿದೆ. ತಂಡವು ಇಬ್ಬರು ಕನ್ನಡಿಗರಾದ ಮಯಾಂಕ್ ಅಗರ್‌ವಾಲ್ ಮತ್ತು ಮನೋಜ್‌ ಭಾಂಡಗೆ ಸೇರಿದಂತೆ ಒಟ್ಟು 8 ಆಟಗಾರರನ್ನು ಕೈಬಿಟ್ಟಿದೆ.

Read Full Story
05:32 PM (IST) Nov 15

Karnataka New Live 15 November 2025 ಕೋಲ್ಕತಾ ಟೆಸ್ಟ್‌ - ರವೀಂದ್ರ ಜಡೇಜಾ ದಾಳಿಗೆ ಹರಿಣಗಳ ಪಡೆ ಕಂಗಾಲು!

ಕೋಲ್ಕತಾದಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ನಲ್ಲಿ, ಭಾರತ 30 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿತು. ಎರಡನೇ ದಿನದಾಟದಂತ್ಯಕ್ಕೆ, ರವೀಂದ್ರ ಜಡೇಜಾ ಅವರ 4 ವಿಕೆಟ್‌ಗಳ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು 93 ರನ್‌ಗಳಿಗೆ 7 ವಿಕೆಟ್‌ಗೆ ಕಟ್ಟಿಹಾಕಿದೆ.

Read Full Story
05:13 PM (IST) Nov 15

Karnataka New Live 15 November 2025 Bigg Boss - ಕಿಚ್ಚನ ಕೋಪ ನೆತ್ತಿಗೆ ಏರಿಸಿದ್ರಾ ರಕ್ಷಿತಾ ಶೆಟ್ಟಿ? ಸುದೀಪ್ ಸಿಟ್ಟಿಗೆ ಪುಟ್ಟಿ ನಡುಕ!

ಬಿಗ್​ಬಾಸ್​ ಮನೆಯಲ್ಲಿ ತನ್ನದೇ ತಂಡದ ವಿರುದ್ಧ ಆಡಿದ ಆರೋಪ ರಕ್ಷಿತಾ ಶೆಟ್ಟಿ ಮೇಲಿದೆ. ಈ ವಾರದ ವೀಕೆಂಡ್​ನಲ್ಲಿ ನಿರೂಪಕ ಕಿಚ್ಚ ಸುದೀಪ್ ಈ ಬಗ್ಗೆ ಪ್ರಶ್ನಿಸಿದಾಗ, ರಕ್ಷಿತಾ ಮರುಪ್ರಶ್ನೆ ಹಾಕಿ ಸುದೀಪ್​ ಅವರ ಕೋಪಕ್ಕೆ ಗುರಿಯಾಗಿದ್ದಾರೆ. 

Read Full Story
05:06 PM (IST) Nov 15

Karnataka New Live 15 November 2025 ಮಹಿಳೆಯರು ಕಾಂಗ್ರೆಸ್‌ನಿಂದ ಫ್ರೀ ತಗೊಂಡು ಬಿಜೆಪಿಗೆ ಮತ ಹಾಕಿದ್ದಾರೆ - ರಾಜಣ್ಣ ಬೇಸರ

Bihar Poll Results Disappoint KN Rajanna: ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, ಉಚಿತ ಯೋಜನೆಗಳ ಲಾಭ ಪಡೆದ ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಿಹಾರದಲ್ಲಿ ಬಿಜೆಪಿ ಮಹಿಳೆಯರಿಗೆ ಹಣ ನೀಡಿ ಮನಗೆದ್ದು ಯಶಸ್ವಿಯಾಗಿದೆ ಎಂದರು.

Read Full Story
05:03 PM (IST) Nov 15

Karnataka New Live 15 November 2025 2 ತಿಂಗಳಿಂದ ಕಾಲೇಜು ಫೀಸು ಕಟ್ಟಿಲ್ಲ ಎಂದ ಕರೀಷ್ಮಾ ಕಪೂರ್ ಪುತ್ರಿಗೆ ದೆಹಲಿ ಕೋರ್ಟ್ ಹೇಳಿದ್ದೇನು?

Sanjay Kapur property dispute: ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರ ಸಾವಿನ ನಂತರ, ಅವರ ₹30,000 ಕೋಟಿ ಆಸ್ತಿಗಾಗಿ ಹಾಲಿ ಪತ್ನಿ ಪ್ರಿಯಾ ಸಚ್‌ದೇವ್ ಮತ್ತು ಮಾಜಿ ಪತ್ನಿ ಕರೀಷ್ಮಾ ಕಪೂರ್ ಮಕ್ಕಳ ನಡುವೆ ಕಾನೂನು ಹೋರಾಟ ದೆಹಲಿ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ.

Read Full Story
04:45 PM (IST) Nov 15

Karnataka New Live 15 November 2025 ನಾನು ಯಾವ ಸ್ಕೂಲ್ ಬಂದ್ ಮಾಡೋಲ್ಲ, ಯಾರೋ ತಲೆಹರಟೆ ಮಾಡ್ತಾರೆ - ಶಿಕ್ಷಣ ಸಚಿವ ಮಧು ಬಂಗಾರಪ್ಪ ಗರಂ

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೆಪಿಎಸ್‌ಸಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯ ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ 'ಬಾಯಿ ಮುಚ್ಚಿಕೊಳ್ಳಿ' ಎಂದು ಸೂಚಿಸಿರುವುದರಿಂದ ಆ ಬಗ್ಗೆ ಮಾತನಾಡುವುದಿಲ್ಲ ಎಂದರು.
Read Full Story
04:41 PM (IST) Nov 15

Karnataka New Live 15 November 2025 ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮತ್ತೆ ಆ ಆಕೃತಿ ಕಾಣಿಸಿಕೊಳ್ತಿದ್ಯಾ? ದೆವ್ವಕ್ಕೆ ಬೆಚ್ಚಿಬೀಳ್ತಿರೋ ಸಿಬ್ಬಂದಿ?

2020ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಳಿ ಸೀರೆಯ ದೆವ್ವ ಕಾಣಿಸಿಕೊಂಡಿದೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಪೈಲಟ್ ಮತ್ತು ಸಿಬ್ಬಂದಿ ರನ್‌ವೇ ಹಾಗೂ ಕಾರ್ಗೋ ಬಳಿ ಈ ಆಕೃತಿಯನ್ನು ನೋಡಿ ಭಯಭೀತರಾಗಿದ್ದರು. ಇದೀಗ ಈ ಘಟನೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Read Full Story
04:31 PM (IST) Nov 15

Karnataka New Live 15 November 2025 ಲವ್‌ OTP ಸಿನಿಮಾ ನೋಡಲು ಬರದ ಜನ, ಕಾರ್‌ನಲ್ಲೇ ಕಣ್ಣೀರಿಟ್ಟು ಇದು ಕೊನೆಯ ಸಿನಿಮಾ ಎಂದ ಹೀರೋ ಅನೀಶ್‌ ತೇಜೇಶ್ವರ್‌!

ನಟ ಅನೀಶ್ ತೇಜೇಶ್ವರ್ ಅವರ 'ಲವ್ ಒಟಿಪಿ' ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕರೂ ಪ್ರೇಕ್ಷಕರಿಲ್ಲ. ಇದರಿಂದ ಬೇಸರಗೊಂಡ ಅವರು, 14 ವರ್ಷಗಳ ಶ್ರಮಕ್ಕೆ ಬೆಲೆ ಸಿಗದಿದ್ದರೆ ಇದೇ ನನ್ನ ಕೊನೆಯ ಸಿನಿಮಾ ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
Read Full Story