Sanjay Kapur property dispute: ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರ ಸಾವಿನ ನಂತರ, ಅವರ ₹30,000 ಕೋಟಿ ಆಸ್ತಿಗಾಗಿ ಹಾಲಿ ಪತ್ನಿ ಪ್ರಿಯಾ ಸಚ್‌ದೇವ್ ಮತ್ತು ಮಾಜಿ ಪತ್ನಿ ಕರೀಷ್ಮಾ ಕಪೂರ್ ಮಕ್ಕಳ ನಡುವೆ ಕಾನೂನು ಹೋರಾಟ ದೆಹಲಿ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ.

ಕರೀಷ್ಮಾ ಕಪೂರ್ ಪುತ್ರಿಗೆ ಕೋರ್ಟ್‌ಗೆ ಹೇಳಿದ್ದೇನು?

ಕರೀಷ್ಮಾ ಕಪೂರ್ ಮಾಜಿ ಪತಿ ಹಾಗೂ ಉದ್ಯಮಿ ಸಂಜಯ್ ಕಪೂರ್ ಸಾವಿನ ನಂತರ ಅವರ ಆಸ್ತಿಗಾಗಿ ಅವರ ತಾಯಿ, ಇಬ್ಬರು ಪತ್ನಿಯರು ಹಾಗೂ ಮೂವರು ಮಕ್ಕಳ ಹೋರಾಟ ಕೋರ್ಟ್‌ನಲ್ಲಿ ಮುಂದುವರೆದಿದೆ. ಸಂಜಯ್ ಕಪೂರ್ ಅವರ 2ನೇ ಪತ್ನಿ ಸಂಜಯ್ ಕಪೂರ್ ಅವರ ಸಾವಿನ ನಂತರ ಅವರ ಆಸ್ತಿಯೆಲ್ಲಾ 2ನೇ ಪತ್ನಿ ಪ್ರಿಯಾ ಸಚ್‌ದೇವ್ ಕಪೂರ್ ಅವರಿಗೆ ಸೇರಿದೆ ಎಂದು ಸಂಜಯ್ ಕಪೂರ್ ಅವರು ವ್ಹೀಲ್ ಬರೆದಿದ್ದಾರೆ ಎಂದು ಹೇಳಿದ ನಂತರ ಇಬ್ಬರು ಪತ್ನಿಯರು ಹಾಗೂ ಮಕ್ಕಳು ಹಾಗೂ ಸಂಜಯ್ ಅವರ ತಾಯಿ ಕೋರ್ಟ್ ಮೆಟ್ಟಿಲೇರಿದ್ದು, ಪ್ರಿಯಾ ಅವರು ಪೋರ್ಜರಿ ವ್ಹೀಲ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಮೆಲೋಡ್ರಾಮಾ ಬೇಡ ಎಂದ ದೆಹಲಿ ಹೈಕೋರ್ಟ್:

ಈ ಪ್ರಕರಣದ ವಿಚಾರಣೆ ದೆಹಲಿ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದು, ಸಂಜಯ್ ಕಪೂರ್ ಹಾಗೂ ಕರೀಷ್ಮಾ ಕಪೂರ್ ಅವರ ಪುತ್ರಿ ಸಮೈರಾ ಅವರು ಪ್ರಕರಣದ ವಿಚಾರಣೆ ವೇಳೆ ತನ್ನ ಎರಡು ತಿಂಗಳ ಕಾಲೇಜು ಶುಲ್ಕವನ್ನು ತನ್ನ ದಿವಂಗತ ತಂದೆ ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರ ಎಸ್ಟೇಟ್‌ನಿಂದ ಪಾವತಿಸಿಲ್ಲ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಹೈಕೋರ್ಟ್, ಈ ಪ್ರಕರಣದ ಭಾಗಿದಾರರು ಮೆಲೋಡ್ರಾಮಾ ಮಾಡಬಾರದು(ಅತೀಯಾದ ನಾಟಕ ಮಾಡ್ಬೇಡಿ) ಎಂದು ಹೇಳಿದೆ.

ಅಮೆರಿಕಾದಲ್ಲಿ ಓದುತ್ತಿರುವ ಸಮೈರಾ ಕಪೂರ್:

ದಿವಂಗತ ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರಿಗೆ ಸೇರಿದ 30,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಕುರಿತಾದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಕರೀಷ್ಮಾ ಕಪೂರ್ ಅವರ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಅವರನ್ನು ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಪ್ರತಿನಿಧಿಸುತ್ತಿದ್ದಾರೆ. ಸಮೈರಾ ಅವರು ಅಮೆರಿಕಾದಲ್ಲಿ ಓದುತ್ತಿದ್ದು, ತಂದೆಯ ಆಸ್ತಿಗಾಗಿ ಅವರು ಅರ್ಜಿ ಸಲ್ಲಿಸಿದ ನಂತರ ಅವರ ಶಿಕ್ಷಣಕ್ಕಾಗಿ ಎರಡು ತಿಂಗಳ ವೆಚ್ಚವನ್ನು ದಿವಂಗತ ಕೈಗಾರಿಕೋದ್ಯಮಿ ಅವರ ಪತ್ನಿ ಪ್ರಿಯಾ ಕಪೂರ್ ಬಿಡುಗಡೆ ಮಾಡಿಲ್ಲ ಎಂದು ಅವರು ವಾದಿಸಿದರು. ಇದು ಸಂಜಯ್ ಕಪೂರ್ ಅವರ ಎಸ್ಟೇಟ್ ಪ್ರಸ್ತುತ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಪ್ರತಿಬಿಂಬ ಎಂದು ವಕೀಲ ಮಹೇಶ್ ಜೇಠ್ಮಲಾನಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾ ಕಪೂರ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ನಾಯರ್, ಈ ಹೇಳಿಕೆಯು ಕಟ್ಟುಕಥೆ ಮತ್ತು ಆಧಾರರಹಿತ ಎಂದರು. ಅವರು ಮಕ್ಕಳ ಅಗತ್ಯಗಳನ್ನು ನಿರಂತರವಾಗಿ ನೋಡಿಕೊಂಡಿದ್ದಾರೆ ಮತ್ತು ಶುಲ್ಕವನ್ನು ಈಗಾಗಲೇ ಪಾವತಿಸಲಾಗಿದೆ ಎಂದು ಹೇಳಿದರು. ಮಾಧ್ಯಮಗಳಲ್ಲಿ ವರದಿ ಆಗಬೇಕೆಂದೇ ಈ ವಿಚಾರವನ್ನು ಇವರು ನ್ಯಾಯಾಲಯದಲ್ಲಿ ಪ್ರಸ್ತಾಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಪ್ರಶ್ನೆ ಮತ್ತೆ ನನ್ನ ಬಳಿ ಬರಬಾರದು ಎಂದ ನ್ಯಾಯಾಧೀಶರು:

ಇಬ್ಬರು ವಕೀಲರ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ಪೀಠವು, ಇಂತಹ ಸಮಸ್ಯೆಗಳು ನ್ಯಾಯಾಲಯಕ್ಕೆ ಬರಬಾರದು ಎಂದು ಹೇಳಿದರು. ಪ್ರಿಯಾ ಕಪೂರ್ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಶೈಲ್ ಟ್ರೆಹಾನ್ ಅವರನ್ನು ಕರೆದು, ಇಂತಹ ಸಮಸ್ಯೆಗಳು ಇತ್ಯರ್ಥವಾಗುವಂತೆ ನೋಡಿಕೊಳ್ಳುವಂತೆ ಕೇಳಿದರು. ನಾನು ಇದಕ್ಕಾಗಿ 30 ಸೆಕೆಂಡುಗಳಿಗಿಂತ ಹೆಚ್ಚು ಸಮಯ ನೀಡಲು ಬಯಸುವುದಿಲ್ಲ. ಈ ಪ್ರಶ್ನೆ ಮತ್ತೆ ನನ್ನ ಬಳಿ ಬರಬಾರದು. ಈ ವಿಚಾರಣೆಯು ನಾಟಕೀಯವಾಗಿರಲು ನಾನು ಬಯಸುವುದಿಲ್ಲ. ನಾನು ಈ ಜವಾಬ್ದಾರಿಯನ್ನು ನಿಮ್ಮ ಮೇಲೆ (ಶೈಲ್ ಟ್ರೆಹಾನ್) ಹಾಕುತ್ತೇನೆ ಎಂದು ಅವರು ಹೇಳಿದರು.

ಲಂಡನ್‌ನಲ್ಲಿ ಪೋಲೋ ಆಡುತ್ತಿದ್ದಾಗ ಸಾವಿಗೀಡಾದ ಸಂಜಯ್ ಕಪೂರ್:

ಕಳೆದ ಜೂನ್‌ನಲ್ಲಿ ಲಂಡನ್‌ನಲ್ಲಿ ನಡೆದ ಪೋಲೊ ಪಂದ್ಯದ ವೇಳೆ ಸಂಜಯ್ ಕಪೂರ್ ಹಠಾತ್ ನಿಧನರಾದರು. ಸಂಜಯ್ ಕಪೂರ್ ಸಾವಿನ ನಂತರ ಆಸ್ತಿಯ ಸಂಪೂರ್ಣ ನಿಯಂತ್ರಣವನ್ನು ಪಡೆಯುವ ಪ್ರಯತ್ನದಲ್ಲಿ ಸಂಜಯ್ ಹಾಲಿ ಪತ್ನಿ ಪ್ರಿಯಾ ಕಪೂರ್ ಅವರು ಈ ವ್ಹೀಲ್ ಅನ್ನು ನಕಲಿ ಮಾಡಿದ್ದಾರೆ ಎಂದು ಸಮೈರಾ ಮತ್ತು ಕಿಯಾನ್ ಆರೋಪಿಸಿದ್ದಾರೆ. ಪ್ರಿಯಾ ಕಪೂರ್ ಅವರು ದುರಾಸೆಯ ಮಹಿಳೆ ಎಂದು ಆರೋಪಿಸಿದ ಕರೀಷ್ಮಾ ಮಕ್ಕಳು, ಆಕೆಯನ್ನು ನ್ಯಾಯಾಲಯದ ಮುಂದೆ ಸಿಂಡ್ರೆಲ್ಲಾಳ ಮಲತಾಯಿಗೆ ಹೋಲಿಸಿದ್ದಾರೆ.

ಮಾರ್ಚ್ 21,2025 ರಂದು ಬರೆಯಲಾಗಿದೆ ಎನ್ನಲಾದ ಈ ವ್ಹೀಲ್‌ನಲ್ಲಿ ಸಂಜಯ್ ಕಪೂರ್ ಅವರ ಸಂಪೂರ್ಣ ವೈಯಕ್ತಿಕ ಆಸ್ತಿಯನ್ನು ಪ್ರಿಯಾ ಸಚ್‌ದೇವ ಕಪೂರ್ ಅವರಿಗೆ ಬಿಟ್ಟು ಕೊಡಬೇಕು ಎಂದು ಹೇಳಲಾಗಿದೆ. ಅಂದರೆ ಸಂಜಯ್ ಸಾವಿಗೂ ಎರಡು ತಿಂಗಳ ಹಿಂದೆ ಬರೆಯಲಾಗಿದೆ ಎನ್ನಲಾದ ವ್ಹೀಲ್ ಇದು. ಆದರೆ ಈ ವ್ಹೀಲ್‌ನ ಕೊನೆಯದಾಗಿ ಬದಲಾಯಿಸಿದ ಸಮಯದ ಮುದ್ರೆಯು ಮಾರ್ಚ್ 17, 2025 ಎಂದು ತೋರಿಸುತ್ತದೆ. ವ್ಹೀಲ್‌ನಲ್ಲಿ ಮೂಲತಃ ಕಾರ್ಯನಿರ್ವಾಹಕ ಅಧಿಕಾರಿ ಇರಲಿಲ್ಲ ಮತ್ತು ಸೋನಾ ಕಾಮ್‌ಸ್ಟಾರ್‌ನ ಸಿಇಒ ವಿವೇಕ್ ಸಿಂಗ್ ಅವರನ್ನು ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇರಿಸಿಕೊಳ್ಳಲು ಸಂಜಯ್ ಏಕೆ ಯೋಜಿಸಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಹೈಕೋರ್ಟ್ ಪ್ರಿಯಾ ಕಪೂರ್ ಅವರಿಗೆ ಸಂಜಯ್ ಕಪೂರ್ ಅವರ ಆಸ್ತಿಗಳ ವಿವರವನ್ನು ನ್ಯಾಯಾಲಯಕ್ಕೆ ನೀಡುವಂತೆ ಕೇಳಿತ್ತು.ಈ ವೇಳೆ ಪ್ರಿಯಾ ಕಪೂರ್, ಕರೀಷ್ಮಾ ಕಪೂರ್ ಮಕ್ಕಳು ಈಗಾಗಲೇ ಕುಟುಂಬದ ಟ್ರಸ್ಟ್‌ನಿಂದ 1,900 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ ಅವರ 13 ವರ್ಷಗಳ ದಾಂಪತ್ಯ ಜೀವನ 2016 ರಲ್ಲಿ ಕೊನೆಗೊಂಡಿತು. ನಂತರ ಅವರು ಪ್ರಿಯಾ ಕಪೂರ್ ಅವರನ್ನು ವಿವಾಹವಾಗಿದ್ದರು.

ಇದನ್ನೂ ಓದಿ: ಲ್ಯಾಂಡ್ ರೋವರ್‌ನ ವೈರಲ್ ಸ್ಟಂಟ್ ಮರು ಸೃಷ್ಟಿಸಲು ಹೋಗಿ ಚೀನಿ ಆಟೋ ಮೇಕರ್ ಸಂಸ್ಥೆ ಎಡವಟ್ಟು: ವೀಡಿಯೋ
ಇದನ್ನೂ ಓದಿ: ಕೃಷಿ ಮೇಳದಲ್ಲಿ ರಾರಾಜಿಸಿದ ದೇಸಿ ಹಸುಗಳು: ಗಮನ ಸೆಳೆದ ಹಳ್ಳಿಕಾರ್‌, ದೇಸಿ ಗಿರ್‌, ಪುಂಗನೂರ್