ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹನುಮಾಪುರ ಗ್ರಾಮದಲ್ಲಿ, ಒಂಟಿಯಾಗಿ ವಾಸಿಸುತ್ತಿದ್ದ 70 ವರ್ಷದ ಫಕ್ಕೀರವ್ವ ರಾಮಣ್ಣ ಆಲೂರು ಎಂಬ ವೃದ್ಧೆ ಮನೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸಜೀವ ದಹನಗೊಂಡಿದ್ದಾರೆ.  ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಸಾವು

ಕಾರವಾರ, ನ(. 15): ಆಕಸ್ಮಿಕ ಬೆಂಕಿ ಅವಘಡದಿಂದ ಮನೆಯಲ್ಲಿದ್ದ ವೃದ್ಧ ಮಹಿಳೆ ದಾರುಣವಾಗಿ ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ನಡೆದಿದೆ.

ಫಕ್ಕೀರವ್ವ ರಾಮಣ್ಣ ಆಲೂರು (70), ಬೆಂಕಿಯಲ್ಲಿ ಸಜೀವ ದಹನಗೊಂಡು ಮೃತಪಟ್ಟಿರುವ ವೃದ್ಧೆ. ಮನೆಯಲ್ಲಿ ಸಂಬಂಧಿಕರು ಬಂಧು-ಬಳಗ ಯಾರೂ ಇಲ್ಲದೆ ಒಂಟಿಯಾಗಿ ಜೀವನ ನಡೆಸುತ್ತಿದ್ದ ವೃದ್ಧೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ.

ಆಕಸ್ಮಿಕ ಬೆಂಕಿಗೆ ಸಜೀವ ದಹನ:

ವೃದ್ಧೆ ಫಕ್ಕೀರವ್ವ ಅವರು ತಮ್ಮ ಮನೆಯಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಗಮನಕ್ಕೆ ಬಂದಿಲ್ಲ. ಮೈಮೇಲಿನ ಬಟ್ಟೆಗೆ ಹರಡಿ ವೃದ್ಧೆಯ ದೇಹ ಸಂಪೂರ್ಣವಾಗಿ ಸುಟ್ಟುಹೋಗಿದೆ. ಈ ಸಮಯದಲ್ಲಿ ಅವರು ಅರೆಜೀವದಲ್ಲಿದ್ದರು. ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ನಿಯಂತ್ರಣಕ್ಕೆ ಬಂದರೂ, ಫಕ್ಕೀರವ್ವ ಅವರ ದೇಹದ ಭಾಗ ಸಂಪೂರ್ಣ ಸುಟ್ಟುಹೋಗಿತ್ತು. 

ಚಿಕಿತ್ಸೆ ಫಲಿಸದೇ ಫಕೀರವ್ವ ಸಾವು

ತಕ್ಷಣ 108 ಆಂಬುಲೆನ್ಸ್ ಮೂಲಕ ಮುಂಡಗೋಡ ತಾಲೂಕು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಗಾಯಗಳ ತೀವ್ರತೆಯಿಂದಾಗಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ತುರ್ತು ವರ್ಗಾಯಿಸಲಾಯಿತು. ಅಲ್ಲೂ ಚಿಕಿತ್ಸೆ ಫಲಕಾರಿಯಾಗದೇ ಫಕ್ಕೀರವ್ವ ಮೃತಪಟ್ಟಿದ್ದಾರೆ.