- Home
- Entertainment
- TV Talk
- Bigg Boss: ಕಲರ್ಸ್ ವಾಹಿನಿ ವಿರುದ್ಧ ಗಂಭೀರ ಆರೋಪ ಮಾಡಿರೋ ಜಾಹ್ನವಿಗೆ ಸುದೀಪ್ ಏನ್ ಹೇಳಿದ್ರು ನೋಡಿ!
Bigg Boss: ಕಲರ್ಸ್ ವಾಹಿನಿ ವಿರುದ್ಧ ಗಂಭೀರ ಆರೋಪ ಮಾಡಿರೋ ಜಾಹ್ನವಿಗೆ ಸುದೀಪ್ ಏನ್ ಹೇಳಿದ್ರು ನೋಡಿ!
ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರನ್ನು ವಾಹಿನಿಯೇ ಉಳಿಸುತ್ತಿದೆ ಎಂದು ಜಾಹ್ನವಿ ಗಂಭೀರ ಆರೋಪ ಮಾಡಿದ್ದರು. ಈ ಆರೋಪದ ಬಗ್ಗೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಜಾಹ್ನವಿಯನ್ನು ನೇರವಾಗಿ ಪ್ರಶ್ನಿಸಿ, ಶೋ ನಿಯಮಗಳ ಬಗ್ಗೆ ಪಾಠ ಮಾಡಿದ್ದಾರೆ.

ಗಂಭೀರ ಆರೋಪ
ಬಿಗ್ಬಾಸ್ (Bigg Boss) ಮನೆಯಲ್ಲಿ, ಕಲರ್ಸ್ ಕನ್ನಡ ವಾಹಿನಿಯ ವಿರುದ್ಧ ಜಾಹ್ನವಿ ಗಂಭೀರ ಆರೋಪ ಮಾಡಿ ಮೊನ್ನೆಯಷ್ಟೇ ಹಲ್ಚಲ್ ಸೃಷ್ಟಿಸಿದ್ದರು. ಸ್ಪಂದನಾ ಸೋಮಣ್ಣ ಅವರು ವಾಹಿನಿಯ ವತಿಯಿಂದ ಬಂದವರು. ಅದಕ್ಕಾಗಿಯೇ ಅವರನ್ನು ಎಲಿಮಿನೇಟ್ ಮಾಡುತ್ತಿಲ್ಲ ಎನ್ನುವುದು ಜಾಹ್ನವಿ ಆರೋಪವಾಗಿತ್ತು.
ಚಾನೆಲ್ ಕಡೆಯವಳು
ಸ್ಪಂದನಾ ಅವರು ವೀಕ್ ಸ್ಪರ್ಧಿಯಾಗಿದ್ದರೂ ಚಾನೆಲ್ ಕಡೆಯವರು ಎನ್ನುವ ಕಾರಣಕ್ಕೆ ಆಕೆಯನ್ನು ಸೇವ್ ಮಾಡಲಾಗುತ್ತಿದೆ. ಅವಳಿಗೆ ಮಾತಾಡೋಕೆ ಬರಲ್ಲ. ಟಾಸ್ಕ್‌ನಲ್ಲೂ ಇಲ್ಲ. ಆದರೂ ಪ್ರತಿಬಾರಿ ಸೇವ್ ಆಗುತ್ತಿದ್ದಾಳೆ. ಅದಕ್ಕೆ ಕಾರಣ, ಆಕೆ ಚಾನೆಲ್ ಕಡೆಯವಳು. ಅದಕ್ಕಾಗಿ ಉಳಿಸಿಕೊಳ್ತಿದ್ದಾರೆ ಎಂದಿದ್ದರು.
ಸುದೀಪ್ ಕ್ಲಾಸ್
ಇದೀಗ ಈ ಬಗ್ಗೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಬೇರೆಯ ರೀತಿಯಲ್ಲಿ ಕಿಚ್ಚ ಸುದೀಪ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ಜಗಳದ ವಿಷಯವಾಗಿ ಚೇಂಜಿಂಗ್ ರೂಮ್ನಲ್ಲಿ ಮಾತನಾಡಿದ್ದ ಬಗ್ಗೆ ಸುದೀಪ್ ಪ್ರಶ್ನಿಸಿದ್ದಾರೆ. ಇದನ್ನು ಮಾತನಾಡಿದ್ದು ಹೌದು ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಚೇಂಜಿಂಗ್ ರೂಮ್ ಏಕೆ?
ಅದಕ್ಕೆ ಸುದೀಪ್ ಅವರು, ಚೇಂಜಿಂಗ್ ರೂಮ್ ಇರುವುದು ಏನಕ್ಕೆ ಎಂದು ಪ್ರಶ್ನಿಸಿದ್ದಾರೆ. ನಂಬಿಕೆಯಿಂದ ಒಂದು ಜಾಗ ಕೊಟ್ಟಾಗ ಅಲ್ಲಿ ಹೋಗಿ ಡಿಸ್ಕಷನ್ ಮಾಡೋದು ಓಕೆನಾ ಎಂದು ಪ್ರಶ್ನಿಸಿದ್ದಾರೆ.
ತಿಳಿವಳಿಕೆ ಇಲ್ವಾ?
ಕೊನೆಗೆ ನೇರವಾಗಿ ಜಾಹ್ನವಿ ಅವರಿಗೆ, ಇಂತಿಂಥವರು ವಾಹಿನಿ ಕಡೆಯಿಂದ ಬಂದವರು, ಅವರನ್ನು ಹೊರಕ್ಕೆ ಹಾಕಲ್ಲ ಎಂದಿದ್ದೀರಲ್ಲ, ಇಷ್ಟೆಲ್ಲಾ ತಿಳಿವಳಿಕೆ ಇರೋ ನೀವು ವಾಹಿನಿ ಮತ್ತು ಷೋ ಹಾಕಿರೋ ರೂಲ್ಸ್ ಬಗ್ಗೆ ಗೊತ್ತಿರಬೇಕಲ್ವಾ ಜಾಹ್ನವಿಯವರೇ ಎಂದು ಸುದೀಪ್ ಪ್ರಶ್ನಿಸಿದ್ದಾರೆ.
ಮ್ಯಾನುಪಲೇಷನ್ ಎನ್ನುತ್ತಾರೆ
ಅದಕ್ಕೆ ಜಾಹ್ನವಿ ಏನೋ ಕಾರಣ ಕೊಡಲು ಹೋದರು. ಆಗ ಸುದೀಪ್ ಅವರು, ವಿಷಯ ಡೈವರ್ಟ್ ಆಗ್ತಿದೆ. ಹೀಗೆ ಡೈವರ್ಟ್ ಆಗುವ ವಿಷಯಗಳಿಗೆ ಮ್ಯಾನುಪಲೇಷನ್ ಎನ್ನುತ್ತಾರೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

