Bihar Poll Results Disappoint KN Rajanna: ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, ಉಚಿತ ಯೋಜನೆಗಳ ಲಾಭ ಪಡೆದ ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಿಹಾರದಲ್ಲಿ ಬಿಜೆಪಿ ಮಹಿಳೆಯರಿಗೆ ಹಣ ನೀಡಿ ಮನಗೆದ್ದು ಯಶಸ್ವಿಯಾಗಿದೆ ಎಂದರು.

ತುಮಕೂರು(ನ. 15): ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ರಾಜ್ಯದ ರಾಜಕೀಯ ವಲಯದಲ್ಲಿ ಚರ್ಚೆಗೆ ಗುರಿಯಾಗಿವೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭೂತಪೂರ್ವ ಗೆಲುವು, ಇನ್ನೊಂದೆಡೆ ಮಹಾಘಟಬಂಧನ ಹೀನಾಯ ಸೋಲು. ಈ ವಿಚಾರವಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳೆಯರು ಫ್ರೀ ತಗೊಂಡು ಬಿಜೆಪಿಗೆ ಮತ:

ಮಧುಗಿರಿಯಲ್ಲಿ ನಡೆದ ಆರ್‌ಟಿಒ ನೂತನ ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಣ್ಣ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮಹಿಳೆಯರು ಕಾಂಗ್ರೆಸ್‌ಗೆ ಮತ ನೀಡದ ಕಾರಣದಿಂದ ಹೆಚ್ಚಿನ ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ಫ್ರೀ ತಗೊಂಡ ಮಹಿಳೆಯರು ಮತ ಹಾಕಿದ್ದರೆ ನಾವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಿದ್ದೆವು. ಆದರೆ ಅವರು ಯಾರೂ ಲೋಕಸಭೆಯಲ್ಲಿ ಮತ ಹಾಕಿಲ್ಲ. 1-2 ಲಕ್ಷ ಸಂಬಳ ಪಡೆಯುವ ಹೆಣ್ಣು ಮಕ್ಕಳು ಪುಕ್ಕಟೆ ಬಸ್‌ಗಳಲ್ಲಿ ಓಡಾಡುತ್ತಾರೆ. ಆದರೆ ಮತದಾನದ ದಿನದಂದು ಕಾಂಗ್ರೆಸ್‌ಗೆ ಮತ ಹಾಕೋದಿಲ್ಲ ಬೇಸರ ವ್ಯಕ್ತಪಡಿಸಿದರು.

ಬಿಹಾರದಲ್ಲಿ ಬಿಜೆಪಿ ಯಶಸ್ಸಿಗೆ ಕಾರಣವೇನು?

ಬಿಹಾರದಲ್ಲಿ ಬಿಜೆಪಿಯ ಯಶಸ್ಸಿಗೆ ಕಾರಣವಾಗಿದ್ದು, ಹಿಂದೂ-ಮುಸ್ಲಿಂ ಧ್ರುವೀಕರಣ ಬಿಟ್ಟು ಮಹಿಳೆಯರು ಮತ್ತು ಯುವಕರು ಎಂಬ ತಂತ್ರ ಮಾಡಿದ್ದಾರೆ. ಅದಕ್ಕೆ ಅವರಿಗೆ ಮತ ಬಂದಿದೆ. ಮಹಿಳೆಯರಿಗೆ 10 ಸಾವಿರ ರೂಪಾಯಿ ಮೊದಲೇ ಕೊಟ್ಟು, ಅವರ ಮನಸ್ಸು ಗೆದ್ದಿದ್ದಾರೆ. ನಾವು ಇಂತಹ ತಂತ್ರ ಅಳವಡಿಸಿಕೊಳ್ಳುವಲ್ಲಿ ಸೋತಿದ್ದೇವೆ ಎಂದರು.