LIVE NOW
Karnataka Latest News Live: ಧರ್ಮಸ್ಥಳದ ಸೌಜನ್ಯ ಪ್ರಕರಣ: ತಜ್ಞ ವೈದ್ಯರಿಂದ ಸ್ಥಳ ಪರಿಶೀಲನೆ

ಸಾರಾಂಶ
ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯ ಪ್ರಕರಣವನ್ನು ಎಸ್ಐಟಿ ಮರುತನಿಖೆ ನಡೆಸುತ್ತಿರುವ ಸಂಬಂಧ ಎಫ್.ಎಸ್.ಎಲ್ ವಿಭಾಗದ ತಜ್ಞ ವೈದ್ಯರ ತಂಡ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಸೌಜನ್ಯ ಪ್ರಕರಣದ ಮರುತನಿಖೆ ಸಂಬಂಧ ಎಸ್ಐಟಿ ಮುಖ್ಯಸ್ಥರಾದ ಚೇತನ್ ಸಿಂಗ್ ರಾಥೋಡ್ ಅವರು ಬೆಂಗಳೂರು, ಬೆಳಗಾವಿ, ಹಾವೇರಿಯ ನುರಿತ ಮೂವರು ಎಫ್ಎಸ್ಎಲ್ ವೈದ್ಯರ ನೇತೃತ್ವದಲ್ಲಿ ಮೆಡಿಕಲ್ ಬೋರ್ಡ್ ರಚನೆ ಮಾಡಲಾಗಿದ್ದು. ಮೆಡಿಕಲ್ ಬೋರ್ಡ್ ರಚನೆ ಮಾಡಿದ ಎಫ್.ಎಸ್.ಎಲ್ ವಿಭಾಗದ ಮೂವರು ತಜ್ಞ ವೈದ್ಯರ ತಂಡ ಸೌಜನ್ಯ ಶವ ಪತ್ತೆಯಾದ ಧರ್ಮಸ್ಥಳ ಗ್ರಾಮದ ಮಣ್ಣಸಂಕ ಸ್ಥಳಕ್ಕೆ ನ.17 ರಂದು ಸಂಜೆ 4 ಗಂಟೆಗೆ ಎಸ್ಐಟಿ ಅಧಿಕಾರಿಗಳ ಜೊತೆಯಲ್ಲಿ ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳ ಪರಿಶೀಲನೆ ನಡೆಸಿ ಬಳಿಕ ಸೌಜನ್ಯ ಶವ ಸಿಕ್ಕ ದಿನದ ಫೋಟೋ & ವಿಡಿಯೋ ಕೂಡ ಪರಿಶೀಲನೆ ನಡೆಸಿ ಕೊ*ಲೆ ಮಾಡಿದ ಜಾಗವನ್ನು ನಿಖರವಾಗಿ ಎಸ್ಐಟಿ ಅಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.