ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರ 40ನೇ ಹುಟ್ಟುಹಬ್ಬವನ್ನು ಪತಿ ವಿಘ್ನೇಶ್ ಶಿವನ್ ವಿಶಿಷ್ಟವಾಗಿ ಆಚರಿಸಿದ್ದಾರೆ. ಮನೆಯ ತುಂಬಾ ಇರುವ ಕುಟುಂಬದ ಫೋಟೋಗಳೊಂದಿಗೆ ಭಾವುಕ ಸಂದೇಶ ನೀಡಿದ್ದಾರೆ. ನಯನತಾರಾ ಅವರ ಸಿನಿಮಾ ಪಯಣ ಮತ್ತು ವೈಯಕ್ತಿಕ ಜೀವನದ ಸುಂದರ ಕ್ಷಣಗಳು ಇದರಲ್ಲಿವೆ.

ಲೇಡಿ ಸೂಪರ್‌ಸ್ಟಾರ್ ನಯನತಾರಾ ಬಗ್ಗೆ ಗೊತ್ತಿರದವರು ಇಲ್ಲ. ತಮ್ಮ ನಟನೆ ಮತ್ತು ಸೌಂದರ್ಯದಿಂದ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಗಳಿಸಿದ್ದಾರೆ. ಇವತ್ತು ಈ ಬ್ಯೂಟಿ ಕ್ವೀನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಮುದ್ದಿನ ಮಡದಿಯ ಬರ್ತಡೇಯನ್ನು ಪತಿ ವಿಘ್ನೇಶ್ ಶಿವನ್, ತುಂಬಾ ಸರ್ಪ್ರೈಸ್ ಆಗಿ ಆಚರಿಸಿದ್ದಾರೆ. ನಯನಾತಾರ ಅವರು ಇವತ್ತು ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ವಿಡಿಯೋ ಮೂಲಕ ಬಹಿರಂಗ

ನಿರ್ದೇಶಕ ವಿಘ್ನೇಶ್ ಶಿವನ್ ಅವರು ತುಂಬಾ ವಿಭಿನ್ನವಾಗಿ ಬರ್ತಡೇ ಆಚರಿಸಿದ್ದಾರೆ. ಮನೆಯ ತುಂಬಾ ಕುಟುಂಬದ ಫೋಟೋಗಳನ್ನ ಅಂಟಿಸಿದ್ದರು. ಈ ಬಗ್ಗೆ ವಿಘ್ನೇಶ್ ಶಿವನ್ ವಿಡಿಯೋ ಹಂಚಿಕೊಂಡಿದ್ದಾರೆ. ಆ ವಿಡಿಯೋಗೆ ಅವರನ್ನು ಒಟ್ಟಿಗೆ ತಂದ ಸಿನಿಮಾದ ರೋಮ್ಯಾಂಟಿಕ್ ಹಾಡಿಗೆ ಆ ವಿಡಿಯೋವನ್ನು ಸೆಟ್ ಮಾಡಲಾಗಿದೆ. ಅದಕ್ಕೆ ವಿಘ್ನೇಶ್ ಅವರು ತಮಿಳಿನಲ್ಲಿ ಭಾವನಾತ್ಮಕ ಸಂದೇಶವನ್ನೂ ಬರೆದಿದ್ದಾರೆ.

ಏನೆಂದು ಬರೆದಿದ್ದಾರೆ?

ಮತ್ತೊಮ್ಮೆ ಹುಟ್ಟಿದರೂ... ನೀನೇ ಬೇಕು... ಲವ್ ಯೂ ನನ್ನ ಜೀವ, ನನ್ನ ಜಗತ್ತು, ನನ್ನ ಚಿನ್ನ ನಯನತಾರಾ, ಹುಟ್ಟುಹಬ್ಬದ ಶುಭಾಶಯಗಳು ಎಂದು ತುಂಬಾ ಭಾವುಕರಾಗಿ ಬರೆದುಕೊಂಡಿದ್ದಾರೆ.

ವಿಘ್ನೇಶ್ ಶಿವನ್ ಬರೆದಿದ್ದ ಸಾಲುಗಳು ಅಭಿಮಾನಿಗಳ ಹೃದಯ ತಟ್ಟಿದವು. ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದಂತೆಯೇ ವಿಘ್ನೇಶ್ ಅವರು ತಮ್ಮ ಪೋಸ್ಟಿಗೆ ಮಾಡಬಹುದಾಗಿದ್ದ ಕಾಮೆಂಟ್ ಅಪ್ಷನ್ ಬ್ಲಾಕ್ ಮಾಡಿದ್ದಾರೆ.

ನಯನತಾರಾ ಹುಟ್ಟುಹಬ್ಬಕ್ಕೆ ವಿಘ್ನೇಶ್ ಶಿವನ್ ಫ್ಯಾಮಿಲಿ ನೆನಪುಗಳ ವಿಡಿಯೋ ಹಂಚಿಕೊಂಡರು. ನಯನತಾರಾ ಹುಟ್ಟುಹಬ್ಬದಂದು, ವಿಘ್ನೇಶ್ ಶಿವನ್ ಅವರು ತಮ್ಮ ಮನೆಯಲ್ಲಿ ಇಟ್ಟಿರುವ ಫೋಟೋಗಳ ವಿಡಿಯೋ ಒಂದನ್ನು ಹಂಚಿಕೊಂಡರು. ಆ ಫೋಟೋಗಳಲ್ಲಿ ದಂಪತಿಗಳ ಹಲವು ವೈಯಕ್ತಿಕ ಕ್ಷಣಗಳು ಸೆರೆಯಾಗಿವೆ. ಮದುವೆಗೂ ಮುನ್ನ ಅವರ ಜೊತೆಗಿನ ಸಮಯ ಮತ್ತು ಮಕ್ಕಳಾದ ಉಯಿರ್ ಹಾಗೂ ಉಲಗ್ ಜೊತೆಗಿನ ನೆನಪುಗಳು ಇದರಲ್ಲಿವೆ. ಪ್ರೇಮದಿಂದ ಹಿಡಿದು ಪೋಷಕರಾಗುವವರೆಗಿನ ಅವರ ಜೀವನದ ವಿವಿಧ ಹಂತಗಳನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಜೊತೆಗೆ 40ನೇ ಹುಟ್ಟುಹಬ್ಬಕ್ಕೆ ನೀಡಿದ್ದ 10 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಬ್ಲ್ಯಾಕ್ ಬ್ಯಾಡ್ಜ್ ಸ್ಪೆಕ್ಟರ್ ಕೂಡ ಆ ವಿಡಿಯೋ ನೆನಪಿಸಿದೆ. ಈ ಹಿಂದೆ ಮರ್ಸಿಡಿಸ್-ಬೆನ್ಜ್ ಮೇಬ್ಯಾಕ್ ಕಾರುಗಳನ್ನು ಸಹ ಉಡುಗೊರೆಯಾಗಿ ನೀಡಿದ್ದರು.

ನವೆಂಬರ್ 18, 1984 ರಂದು ಕರ್ನಾಟಕದಲ್ಲಿ ಜನಿಸಿದ ನಯನತಾರಾ 2003ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಅಂದಿನಿಂದ, ನಟಿ ಎಂದಿಗೂ ಹಿಂತಿರುಗಿ ನೋಡಲಿಲ್ಲ. 2003 ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ ಮನಸ್ಸಿನಕ್ಕರೆ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ 75 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಯನತಾರಾ 20 ವರ್ಷಗಳ ನಂತರ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ದಕ್ಷಿಣ ಭಾರತದ ಸೂಪರ್‌ಹಿಟ್ ಚಲನಚಿತ್ರ ನಿರ್ದೇಶಕ ಅಟ್ಲೀ ಅವರು ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದಲ್ಲಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದರು. 2023ರಲ್ಲಿ ಬಿಡುಗಡೆಯಾದ ಜವಾನ್ ವಿಶ್ವಾದ್ಯಂತ ₹1160 ಕೋಟಿ ಗಳಿಸಿತು. ನಯನತಾರಾ ಅವರ ಬಾಲಿವುಡ್ ಚೊಚ್ಚಲ ಚಿತ್ರ ಭರ್ಜರಿಯಾಗಿತ್ತು. ಈಗ, ಅವರು SVC63 ಚಿತ್ರದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಸದ್ದು ಮಾಡಲು ಸಿದ್ಧರಾಗಿದ್ದಾರೆ. ಇದು ಸಲ್ಮಾನ್ ಖಾನ್ ಅವರೊಂದಿಗಿನ ಅವರ ಮೊದಲ ಚಿತ್ರವೂ ಆಗಿದೆ..

View post on Instagram