'ಆಯುಷ್' ಸಿನಿಮಾದ ನಿರ್ದೇಶಕ ಪುರುಷೋತ್ತಮ್ ಹಾಗೂ ಪ್ರಿಯಾಂಕಾ ಉಪೇಂದ್ರ ವಾದ-ವಿವಾದಗಳು ತಣ್ಣಗಾಗಿವೆ. ಈ ಸಮಸ್ಯೆ ಸೌಹಾರ್ದಯುತವಾಗಿ ಇತ್ಯರ್ಥವಾಗಿದೆ ಎಂಬ ಸುದ್ದಿಯನ್ನು ಘೋಷಿಸಲಾಗಿದೆ. ಅವರ ಮಧ್ಯೆ ಎದ್ದಿದ್ದ ಸಮಸ್ಯೆಗಳು, ಮನಸ್ತಾಪಗಳು ಎಲ್ಲವೂ ಬಗೆಹರಿದಿದ್ದು ಹೇಗೆ? ನೋಡಿ..

ಆಯುಷ್ ಸಿನಿಮಾ ವಿವಾದ ಅಂತ್ಯ, ಇತ್ಯರ್ಥವಾಗಿದ್ದು ಹೇಗೆ?

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಮಗನ 'ಆಯುಷ್' ಸಿನಿಮಾದ ವಿವಾದ ಗೊತ್ತೇ ಇದೆ. ಈ ಚಿತ್ರಕ್ಕೆ ನಿರ್ದೇಶಕರಾಗಿದ್ದ 'ಮೊದಲಾ ಸಲ' ಖ್ಯಾತಿಯ ಪುರುಷೋತ್ತಮ್ (Purushotham C) ಹಾಗೂ ಪ್ರಿಯಾಂಕಾ ಉಪೇಂದ್ರ (Priyanka Upendra) ಮಧ್ಯೆ ಈ ಸಿನಿಮಾದ ವಿವಾದ ಸೃಷ್ಟಿಯಾಗಿತ್ತು. ಇದೀಗ ಫಿಲಂ ಚೇಂಬರ್‌ ಮಧ್ಯಸ್ಥಿಕೆಯಲ್ಲಿ, ಪ್ರಿಯಾಂಕಾ ಉಪೇಂದ್ರ ಹಾಗೂ ಪುರುಷೋತ್ತಮ್ ಮಧ್ಯೆ ಇದ್ದ ವಿವಾದ ಸೌಹಾರ್ದಯುತವಾಗಿ ಬಗೆಹರಿದಿದೆ ಎನ್ನಲಾಗಿದೆ.

ಪುರುಷೋತ್ತಮ್-ಪ್ರಿಯಾಂಕಾ ಉಪೇಂದ್ರ ನಡುವಿನ ವಿವಾದಕ್ಕೆ ತೆರೆ

ಹೌದು, ಇದೀಗ ಫಿಲಂ ಚೇಂಬರ್ ಮಧ್ಯಸ್ಥಿಕೆಯಲ್ಲಿ 'ಆಯುಷ್' ಸಿನಿಮಾದ ನಿರ್ದೇಶಕ ಪುರುಷೋತ್ತಮ್ ಹಾಗೂ ಪ್ರಿಯಾಂಕಾ ಉಪೇಂದ್ರ ವಾದ-ವಿವಾದಗಳು ತಣ್ಣಗಾಗಿವೆ. ಈ ಸಮಸ್ಯೆ ಸೌಹಾರ್ದಯುತವಾಗಿ ಇತ್ಯರ್ಥವಾಗಿದೆ ಎಂಬ ಸುದ್ದಿಯನ್ನು ಘೋಷಿಸಲಾಗಿದೆ. ಅವರ ಮಧ್ಯೆ ಎದ್ದಿದ್ದ ಸಮಸ್ಯೆಗಳು, ಮನಸ್ತಾಪಗಳು ಎಲ್ಲದಕ್ಕೂ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಅವರು ಒಮ್ಮತದ ಪರಿಹಾರ ನೀಡಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಫಿಲಂ ಚೇಂಬರ್ ಅಂಗಸಂಸ್ಥೆಗಳಿಂದ ಸಿಕ್ಕ ಸಹಕಾರ, ಈ ವಿವಾದಕ್ಕೆ ಫುಲ್‌ಸ್ಟಾಪ್ ಇಡುವಲ್ಲಿ ಮುಖ್ಯಪಾತ್ರ ವಹಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಏನು ನಿರ್ಣಯ?

ಇನ್ಮುಂದೆ ಪುರುಷೋತ್ತಮ್ ಕಥೆಗೂ, ಅಭಿಷೇಕ್ ಕಥೆಗೂ ಯಾವುದೇ ಸಂಬಂಧವಿಲ್ಲ. ರೆಮ್ಯುನರೇಷನ್ ವಿಚಾರದಲ್ಲೂ ಕ್ಲಿಯರೆನ್ಸ್ ಸಿಕ್ಕಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ಈ ಸಿನಿಮಾಗೆ ಸಂಬಂಧಪಟ್ಟಂತೆ ಅಗ್ರಿಮೆಂಟ್ ಪಾಲನೆಗೆ ಸೂಚನೆ ನೀಡಲಾಗಿದೆ. ಇದಕ್ಕೂ ಮೊದಲು 'ಫಿಲಂ ಚೇಂಬರ್ ಮೂಲಕವೇ ಈ ಸಮಸ್ಯೆ ಬಗೆಹರಿದರೆ ಸೂಕ್ತ' ಎಂದು ಪ್ರಿಯಾಂಕಾ ಹೇಳಿದ್ದು, ಅದೀಗ ಜಾರಿಯಾಗಿದೆ ಎನ್ನಲಾಗಿದೆ.

ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿದಿದ್ದು, ಪ್ರಿಯಾಂಕಾ ಉಪೇಂದ್ರ ಬಳಿ ನಿರ್ದೇಶಕ ಪುರುಷೋತ್ತಮ್ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, ಕನ್ನಡದ ಖ್ಯಾತ ನಿರ್ದೇಶಕ, ನಟ ಉಪೇಂದ್ರ ಅವರ ಮಗ ಆಯುಷ್ ಮೊಟ್ಟಮೊದಲ ಸಿನಿಮಾದ ವಿವಾದ ಈಗ ತಣ್ಣಗಾಗಿದೆ, ಎಲ್ಲವೂ ಸುಖಾಂತ್ಯವಾಗಿದೆ, ಆಯುಷ್ ಸಿನಿಮಾ ವಿವಾದಕ್ಕೆ ಫಿಲಂ ಚೇಂಬರ್‌ನಲ್ಲಿ ಅಂತಿಮ ಪರಿಹಾರ ಸಿಕ್ಕಿದೆ ಎಂಬ ಮಾಹಿತಿ ಹೊರಬಂದಿದೆ.